NEWS DATE: 08--04--2019

NEWS DATE: 08--04--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS DATE: 08--04--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS DATE: 08--04--2019
ಲಿಂಕ್ : NEWS DATE: 08--04--2019

ಓದಿ


NEWS DATE: 08--04--2019

 ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ:  ಚುನಾವಣಾ ಸ್ಪರ್ಧಾ ಕಣದಲ್ಲಿ 12 ಅಭ್ಯರ್ಥಿಗಳು  
 ಕಲಬುರಗಿ, ಏ.8.(ಕ.ವಾ)-ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರಕ್ಕೆ 2019ರ ಏಪ್ರಿಲ್ 23ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಏಪ್ರಿಲ್ 8 ಸೋಮವಾರದಂದು 7 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಸ್ವೀಕೃತವಾದ 19 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಒಟ್ಟು 12 ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ. 

ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ. 

 ಕ್ರ.ಸಂ. ಅಭ್ಯರ್ಥಿ ಹೆಸರು                     ಪಕ್ಷ
01 ಉಮೇಶ ಗೋಪಾಲದೇವ ಜಾಧವ ಭಾರತೀಯ ಜನತಾ ಪಾರ್ಟಿ
02 ಮಲ್ಲಿಕಾರ್ಜುನ ಮಾಪಣ್ಣ ಖರ್ಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
03 ವಾಸುದೇವರಾವ ಭೀಮರಾವ ಬಹುಜನ ಸಮಾಜ ಪಾರ್ಟಿ
04 ದತ್ತಪ್ಪ ಕೃಷ್ಣಪ್ಪ ರಾಷ್ಟ್ರೀಯ ಸಮಾಜ ಪಕ್ಷ
05 ರಾಜಕುಮಾರ ಗೋಪಿನಾಥ ಭಾರತೀಯ ಬಹುಜನ ಕ್ರಾಂತಿ ದಳ
06 ಲಂಬಾಣಿ ಮಹೇಶ ಈಶ್ವರ ನಾಯಕ ಉತ್ತಮ ಪ್ರಜಾಕೀಯ ಪಕ್ಷ
07 ವಿಜಯ ಗೋವಿಂದ ಜಾಧವ ಸರ್ವ ಜನತಾ ಪಕ್ಷ
08 ಶರಣಬಸಪ್ಪ ಮಲ್ಲಿಕಾಜಪ್ಪ ಎಸ್‍ಯುಸಿಐ(ಸಿ)
09 ಶಂಕರ ಲಿಂಬಾಜಿ  ಭಾರತೀಯ ಪೀಪಲ್ಸ್ ಪಕ್ಷ
10 ಜಿ. ತಿಮ್ಮಾರಾಜು ಗಂಗಪ್ಪ ಪಕ್ಷೇತರ 
11 ಡಾ. ಎಂ.ಪಿ. ದಾರಕೇಶ್ವರಯ್ಯಾ ಪಕ್ಷೇತರ 
12 ರಮೇಶ ಭೀಮಸಿಂಗ್ ಪಕ್ಷೇತರ 

ನಾಮಪತ್ರ ಹಿಂದಕ್ಕೆ ಪಡೆದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ. 

ಕ್ರ.ಸಂ. ಅಭ್ಯರ್ಥಿ ಹೆಸರು ಪಕ್ಷ
01 ಗುರುಶಾಂತ ಮಲ್ಲಪ್ಪ ಪಟ್ಟೇದಾರ ಭರಿಪ ಬಹುಜನ ಮಹಾಸಂಘ 
02 ಜಗನ್ನಾಥ ಮನ್ನು ಪಕ್ಷೇತರ 
03 ರಾಮು ಚತ್ರು ಪಕ್ಷೇತರ 
04 ವಿಠ್ಠಲ ಡಾಕು ಜಾಧವ ಪಕ್ಷೇತರ 
05 ವಿಶ್ವೇಶ್ವರಯ್ಯ ತುಳಜಾರಾಮ  ಭೋವಿ ಪಕ್ಷೇತರ 
06 ಶಶಿಧರ ಬಸವರಾಜ ಪಕ್ಷೇತರ 
07 ಹಣಮಂತರಾಮ ಭೀಮಾ ನಾಯ್ಕ ಎಂ.ಬಿ. ಪಕ್ಷೇತರ 

ಖಣದಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಟಿಜಿಟಲ್ ಮೊಬೈಲ್ ಪ್ಲಾನಿಟೋರಿಯಂ
ಸೌರ ಮಂಡಲದಲ್ಲಿ ತಾರೆಗಳು ಕಂಡು ಪುಳಕಿತರಾದ ಶಾಲಾಮಕ್ಕಳು
ಕಲಬುರಗಿ,ಏ.08.(ಕ.ವಾ.)- ಇಲ್ಲಿ ತಾರೆಗಳ ಲೋಕವೇ ಸೃಷ್ಟಿಯಾಗಿತ್ತು. ಹೌದು, ಸಾಕ್ಷಿಯಾಗಿದ್ದು ಕಲಬುರಗಿ ತಾಲೂಕಿನ ಖಣದಾಳ ಸರ್ಕಾರಿ ಪ್ರೌಢಶಾಲೆ. ಡಿಜಿಟಲ್ 3ಡಿ ಸಂಚಾರಿ ತಾರಾಲಯದಲ್ಲಿ ನಕ್ಷತ್ರಗಳು, ಗ್ರಹಗಳು ಸೇರಿದಂತೆ ಸೌರಮಂಡಲವನ್ನು ಶಾಲಾ ಮಕ್ಕಳು ಕಣ್ತುಂಬಿಕೊಂಡರು.  
ವರ್ಣಾಜ್ ಟೆಕ್ನಾಲಜೀಸ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸಂಸ್ಥೆ ಹಾಗೂ ಸರ್ಕಾರಿ ಪ್ರೌಢಶಾಲೆ, ಖಣದಾಳ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ತಾರೆ ಜಮೀನ್ ಪರ್” ಎಂಬ ಪ್ರದರ್ಶನಕ್ಕೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಸುಬೋಧ ಯಾದವ್ ಅವರು ಚಾಲನೆ ನೀಡಿದರು. ಸ್ವತ: ಸುಬೋಧ್ ಯಾದವ್ ಅವರೇ ಶಾಲಾ ಮಕ್ಕಳ ಜೊತೆ, ಕೊನೆಯವರೆಗೂ ಕುಳಿತು ವೀಕ್ಷಿಸಿದರು. 5 ಮೀಟರ್ ಡೋಮ್ ನೊಳಗೆ ಫಿಶ್ ಲೆನ್ಸ್  ಮೂಲಕ ಇಡೀ ತಾರಾಲೋಕವೋ  ಕಣ್ಮುಂದೆ ಹಾದು ಹೋಯ್ತು. 
 ತಾರೆಗಳÀ ಹುಟ್ಟು-ಸಾವು, ಅವುಗಳಿಂದಾಗುವ ಪರಿಣಾಮ ಮುಂತಾವುಗಳನ್ನು ವಿದ್ಯಾರ್ಥಿಗಳ ಪಠ್ಯಕ್ಕೆ ಪೂರಕವಾದ ಮಾಹಿತಿಯ ಬಗ್ಗೆ ಬೆಳಕು ಚೆಲ್ಲಿತು. ಅದರಲ್ಲೂ ಅಸ್ಟ್ರೋ ಬಸ್ ನಲ್ಲಿ ಕುಟುಂಬವೊಂದು ತಾರಾಮಂಡಲ ಪ್ರವಾಸ ಹೋಗುವ ಪರಿಕಲ್ಪನೆ ಸೊಗಸಾಗಿದೆ. ಇದರಲ್ಲಿ ಪುಟ್ಟ ಬಾಲಕಿಯೊಬ್ಬಳು ನಕ್ಷತ್ರ, ಗ್ರಹಗಳು, ಏಲಿಯನ್ಸ್  ಬಗ್ಗೆ ಕುತೂಹಲದಿಂದ ಕೇಳುವ ಪ್ರಶ್ನೆಗಳು ನಾವೇ ಕೇಳಿದಂತಿದ್ದವು. ಒಟ್ಟಾರೆ, 30 ನಿಮಿಷದಲ್ಲಿ ಸಂಚಾರಿ ತಾರಾಲಯ, ನೋಡುಗರಿಗೆ ಇಡೀ ಸೌರಮಂಡಲವನ್ನ ಪರಿಚಯ ಮಾಡಿಸಿತು.
ತಾರಾಲಯ ವೀಕ್ಷಣೆ ನಂತರ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್ ಅವರು ವಿದ್ಯಾರ್ಥಿನಿಯರ ಬುದ್ಧಿಮತ್ತತೆ ಪರೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ತಮ್ಮ-ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. “ನಮ್ಮ ಪಠ್ಯಕ್ಕೆ ಪೂರಕವಾಗಿರುವ ಡಿಜಿಟಲ್ ಮೊಬೈಲ್ ಪ್ಲಾನಿಟೋರಿಯಂ ಪರಿಕಲ್ಪನೆ ಅದ್ಭುತವಾಗಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬಂದರೆ, ನಮಗೆ ಇನ್ನಷ್ಟು ನೆರವಾಗಲಿದೆ” ಎಂಬ ಮಾತು ಎಲ್ಲಾ ಮಕ್ಕಳದ್ದಾಗಿತ್ತು. 
  ಸಂಚಾರಿ ತಾರಾಲಯ ಕೇವಲ ತಾಲೂಕು ಕೇಂದ್ರಗಳಿಗಷ್ಟೆ ಸೀಮಿತವಾಗಿಸದೆ, ಹಳ್ಳಿಹಳ್ಳಿಗಳ ಶಾಲೆಗಳಿಗೂ ಸಂಚರಿಸುವಂತಾಗಬೇಕು. ಕೇವಲ ಸರ್ಕಾರಿ ಶಾಲೆಗಳಿಗಲ್ಲದೆ, ಅನುದಾನಿತ ಎಲ್ಲಾ ಶಾಲೆಗಳಲ್ಲೂ ಸಂಚಾರಿ ತಾರಾಲಯ ವೀಕ್ಷಿಸುವ ಅವಕಾಶ ಕಲ್ಪಿಸಬೇಕೆಂದು ಪ್ರಾದೇಶಿಕ ಆಯುಕ್ತರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವರ್ಣಾಜ್ ಟೆಕ್ನಾಲಜೀಸ್‍ನ ಸಿಇಓ ದಿನೇಶ್ ಬಾಡಂಗಡಿ ಅವರು, ಭೂಮಿ ಮೇಲೆ ಇರುವ ಮಕ್ಕಳೇ ನಕ್ಷತ್ರಗಳು. ಮಕ್ಕಳಿಗೆ ದೊಡ್ಡ ಕನಸು ಬಿತ್ತಲು ಪೂರಕ, ಈ ಪ್ರದರ್ಶನ ಎಂದು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ 8 ರಿಂದ 10ನೇ ತರಗತಿವರೆಗಿನ ನಾಲ್ಕೂವರೆ ಲಕ್ಷ ಮಕ್ಕಳಿಗೆ ಸಂಚಾರಿ ತಾರಾಲಯದ ಮೂಲಕ ಸೌರಮಂಡಲವನ್ನು ಪರಿಚಯ ಮಾಡಿಕೊಡಲಾಗಿದೆ.  ಸ್ಟೆಮ್ ( ಸೈನ್ಸ್, ಟೆಕ್ನಾಲಜಿ, ಇಂಜಿಯರಿಂಗ್ ಹಾಗೂ ಮ್ಯಾಥಮೆಟಿಕ್ಸ್) ಸಂಬಂಧಿಸಿದ ಕೋರ್ಸ್‍ಗಳಿಗೆ ಈ ತಾರಾಲಯ ವೀಕ್ಷಣೆಯಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತಾಲಯದ ನಿರ್ದೇಶಕ ಟಿ. ನಾರಾಯಣಗೌಡ, ಡಿಡಿಪಿಐ ಶಾಂತಗೌಡ ಪಾಟೀಲ್, ಜಿಲ್ಲಾ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನಾಧಿಕಾರಿ ಸಿ.ಎನ್. ಲಕ್ಷೀನಾರಾಯಣ, ಹೆಚ್‍ಕೆಆರ್‍ಡಿಬಿಯ ಶಿಕ್ಷಣ ಸಲಹೆಗಾರ ಎನ್.ಬಿ.ಪಾಟೀಲ್, ವರ್ಣಾಜ್ ಟೆಕ್ನಾಲಜೀಸ್‍ನ ನಿರ್ದೇಶಕರಾದ ಸರ್ವಮಂಗಳಾ ಆರ್. ಪಾಟೀಲ್, ತಾರಾಲಯ ಯೋಜನಾ ನಿರ್ದೇಶಕ ವೀರೇಶ್ ಹಂಚನಾಳ್, ಶಾಲೆಯ ಮುಖ್ಯ ಗುರುಗಳಾದ ದಿನಕರ್ ಬಿ. ಮುಲಗೆ ಮುಂತಾದವರು ಹಾಜರಿದ್ದರು. 
ಎಂ.ಸಿ.ಎಂ.ಸಿ. ಸಮಿತಿಗೆ ಸಾಮಾನ್ಯ ವೀಕ್ಷಕರ ಭೇಟಿ
ಕಲಬುರಗಿ,ಏ.08.(ಕ.ವಾ.)-ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ “ಕಾಸಿಗಾಗಿ ಸುದ್ದಿ” ಮೇಲೆ ನಿಗಾ ಇಡಲು ವಾರ್ತಾ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಕೊಠಡಿಗೆ ಕಲಬುರಗಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಬ್ರಿಟೀಷಚಂದ್ರ ಬರ್ಮನ್ ಸೋಮವಾರ ಭೇಟಿ ನೀಡಿ ಸಮಿತಿಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.
 ದಿನಪತ್ರಿಕೆಗಳು ಹಾಗೂ ಸ್ಥಳೀಯ ಕೇಬಲ್ ವಾಹಿನಿ ವೀಕ್ಷಣೆ ಮಾಡಿದ ಸಾಮಾನ್ಯ ವೀಕ್ಷಕರು ಸಮಿತಿಯ ಕಾರ್ಯಚಟುವಟಿಕೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅವರಿಂದ ಅಗತ್ಯ ಮಾಹಿತಿ ಪಡೆದರು.
ದಿನಪತ್ರಿಕೆ ಹಾಗೂ ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಯಾವುದೇ ಕಾಸಿಗಾಗಿ ಸುದ್ದಿ ಪ್ರಕಟ ಅಥವಾ ಪ್ರಸಾರಗೊಂಡರೆ ಕೂಡಲೆ ಚುನಾವಣಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಬೇಕು. ಇದಲ್ಲದೆ ಸಾಮಾಜಿಕ ಜಾಲತಾಣಗಳು ಹಾಗೂ ರೇಡಿಯೋಗಳಲ್ಲಿ  ಬರುವ ಸುದ್ದಿಗಳ ಮೇಲೆಯೂ ಸಹ ನಿಗಾವಹಿಸಬೇಕೆಂದು ಎಂ.ಸಿ.ಎಂ.ಸಿ. ಸಮಿತಿ ಸದ್ಯಸರಿಗೆ ನಿರ್ದೇಶನ ನೀಡಿದರು.
ಪತ್ರಿಕೆಗಳ ವೀಕ್ಷಣೆ, ಸ್ಥಳೀಯ ಕೇಬಲ್ ವಾಹಿನಿ ವೀಕ್ಷಣೆ, ಸಾಮಾಜಿಕ ಜಾಲತಾಣಗಳ ಹಾಗೂ ರೇಡಿಯೋ ಆಲಿಸುತ್ತಿರುವ ಸಿಬ್ಬಂದಿಗಳು ಯಾವುದೇ ಸಂಶಾಯಸ್ಪದ ಸುದ್ದಿ ಪ್ರಕಟಗೊಂಡಲ್ಲಿ ಅದನ್ನು ಎಂ.ಸಿ.ಎಂ.ಸಿ. ಸಮಿತಿಯ ಗಮನಕ್ಕೆ ತರಬೇಕೆಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಸಾಮಾನ್ಯ ವೀಕ್ಷಕರ ಲೈಸನ್ ಅಧಿಕಾರಿ ಬಾಲರಾಜ ಸೇರಿದಂತೆ ಇನ್ನೀತರರು ಇದ್ದರು.
ಲೋಕಸಭಾ ಚುನಾವಣೆ:
ಚುನಾವಣೆಗೆ ಸಂಬಂಧಿಸಿದಂತೆ ಸಾಮಾನ್ಯ ವೀಕ್ಷಕರಿಂದ ದೂರು ಸ್ವೀಕಾರ
 ಕಲಬುರಗಿ, ಏ.8. (ಕ.ವಾ)-ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗವು 05-ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರಕ್ಕೆ ಪಶ್ಚಿಮ ಬಂಗಾಳದ ಐ.ಎ.ಎಸ್. ಅಧಿಕಾರಿ ಬ್ರಿಟೀಷಚಂದ್ರ ಬರ್ಮನ್ ಅವರನ್ನು ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಿದೆ. ಸಾರ್ವಜನಿಕರು ಚುನಾವಣೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಕೆಳಕಂಡ ನಿಗದಿಪಡಿಸಿದ ಸಮಯದಂದು ಇವರನ್ನು ಭೇಟಿಯಾಗಿ  ದೂರು ಸಲ್ಲಿಸಬಹುದಾಗಿದೆ ಎಂದು ಕಲಬುರಗಿ ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.     
ಸಾಮಾನ್ಯ ವೀಕ್ಷಕ ಬ್ರಿಟೀಷಚಂದ್ರ ಬರ್ಮನ್ ಅವರು ಕಲಬುರಗಿ ನಗರದ ಹಳೆಯ ಐವಾನ್ ಶಾಹಿ ಅತಿಥಿ ಗೃಹದ ರೂಮ ನಂ. 4 ರಲ್ಲಿ  ತಂಗಿದ್ದು, ಅವರ ಮೊಬೈಲ್ ಸಂಖ್ಯೆ 7338134578ಗೆ ಇರುತ್ತದೆ. ಚುನಾವಣಾ ಸಂಬಂಧಿಸಿದ ದೂರುಗಳಿಗಾಗಿ ಪ್ರತಿದಿನ ಸಂಜೆ 6 ರಿಂದ 7 ಗಂಟೆಯವರೆಗೆ ಇವರನ್ನು ಭೇಟಿಯಾಗಿ ಸಾರ್ವಜನಿಕರು  ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. 

ಏಪ್ರಿಲ್ 11ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ
ಕಲಬುರಗಿ, ಏ.8. (ಕ.ವಾ)-ಕಲಬುರಗಿ ವೃತ್ತದ ವ್ಯಾಪ್ತಿಯಲ್ಲಿ ಬರುವ ನಗರ ಉಪವಿಭಾಗ-1, 2, 3 ಹಾಗೂ 4ಕ್ಕೆ ಸಂಬಂಧಿಸಿದ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಕಲಬುರಗಿ ಜೆಸ್ಕಾಂ ಅಧೀಕ್ಷಕ ಅಭಿಯಂತರವರ ಅಧ್ಯಕ್ಷತೆಯಲ್ಲಿ 2019ರ ಏಪ್ರಿಲ್ 11 ರಂದು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.   
ನಗರ ಉಪವಿಭಾಗ-1 ಮತ್ತು 3ಕ್ಕೆ ಸಂಬಂಧಿಸಿದಂತೆ ಇದೇ ಏಪ್ರಲ್ 11 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಹಾಗೂ ನಗರ ಉಪವಿಭಾಗ-2 ಹಾಗೂ 4ಕ್ಕೆ ಸಂಬಂಧಿಸಿದಂತೆ ಅಂದು ಬೆಳಿಗ್ಗೆ  11.30 ರಿಂದ ಮಧ್ಯಾಹ್ನ  1.30 ಗಂಟೆಯವರೆಗೆ ಕಲಬುರಗಿ ನಗರದ ಸುಪರ ಮಾರ್ಕೇಟ್‍ನಲ್ಲಿರುವ ಜೆಸ್ಕಾಂ ನಗರ ವಿಭಾಗದ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ. ಈ ಗ್ರಾಹಕರ ಸಂವಾದ ಸಭೆಯಲ್ಲಿ ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ತಿಳಿಸಿದ್ದಾರೆ.  
ಏಪ್ರಿಲ್ 9ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಏ.08.(ಕ.ವಾ.)-ಜೆಸ್ಕಾಂ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ 11.ಕೆ.ವಿ.  ಎಂ.ಎಸ್.ಕೆ. ಮಿಲ್,  ಶಾಂತಿನಗರ, ಗಣೇಶನಗರ ಫೀಡರಗಳ ವ್ಯಾಪ್ತಿಯಲ್ಲಿ ಜಿ.ಐ.ಎಸ್. ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ 11ಕೆವಿ. ಗಣೇಶನಗರ, ಜೇವರ್ಗಿ ಕಾಲೋನಿ, ದೇವಿ ನಗರ ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಏಪ್ರಿಲ್ 9ರಂದು   ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸದರಿ ಫೀಡರಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      
ಎಂ.ಎಸ್.ಕೆ. ಮಿಲ್ ಫೀಡರ್: ಮಿಸ್ಬಾ ನಗರ, ಇಕ್ಬಾಲ್ ಕಾಲೋನಿ, ಹುಸೇನ್ ಗಾರ್ಡನ್, ಕೃಷ್ಟ ಮಿನರಲï್ಸ , ನ್ಯೂ ರಾಘವೇಂದ್ರ ಕಾಲೋನಿ, ಖಾನಿ ಏರಿಯಾ,  ಮಹ್ಮದಿ ಚೌಕ್, ಕೆ.ಬಿ.ಎನ್. ಹುಸೇನ್ ಕೋಲ್ಡ್‍ಸ್ಟೋರೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 
 ಶಾಂತಿನಗರ ಫೀಡರ್: ಎಂ.ಎಸ್.ಕೆ. ಮಿಲ್ ಗೇಟ್, ಅಶೋಕ ನಗರ, ಶಾಂತಿನಗರ, ವಿದ್ಯಾನಗರ, ಕೆ.ಹೆಚ್.ಬಿ. ಕಾಂಪ್ಲೇಕ್ಸ್, ಪೊಲೀಸ್ ಕ್ವಾರ್ಟರ್ಸ್, ಕೆ.ಎಸ್.ಆರ್.ಟಿ.ಸಿ.ಕ್ವಾರ್ಟರ್ಸ್, ಬೋರಾಬಾಯಿ ನಗರ, ಬಸವ ನಗರ, ಹೀರಾ ನಗರ, ಹೀರಾಪೂರ, ಭೀಮ ನಗರ, ಮಿಸ್ಬಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 

ಗಣೇಶ ನಗರ ಫೀಡರ್: ಎಂ.ಬಿ. ನಗರ, ಬಾಖರ್ ಪಂಕ್ಷನ್ ಹಾಲ್, ಆದರ್ಶ ನಗರ ಮತ್ತು ಬಂದೇ ನವಾಜ್ ಕಾಲೋನಿ, ಕೆ.ಹೆಚ್.ಬಿ. ಲೇಔಟ್, ಗಣೇಶ ನಗರ, ಮನ್ಸೂಬ್‍ದಾರ ಲೇಔಟ್, ಆದರ್ಶ ನಗರ ನ್ಯೂ ಜಿ.ಡಿ.ಎ., ಮೇಹತಾ ಲೇಔಟ್, ವೀರೆಂದ್ರ ಪಾಟೀಲ ಬಡವಾಣೆ, ನೇತಾ ಲೇಔಟ್, ಕೆ.ಎನ್.ಝಡ್ ಪಂಕ್ಷನ್ ಹಾಲ್, ಬಸವೇಶ್ವರ ಕಾಲೋನಿ, ಪ್ರಗತಿ ಕಾಲೋನಿ, ರೈನ್ ಹಿಲ್ಸ್ ವೀರೆಂದ್ರ ಪಾಟೀಲ್ ಬಡವಾಣೆ, ಬಾರೆ ಹಿಲ್ಸ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಜೇವರ್ಗಿ ಕಾಲೋನಿ ಫೀಡರ್: ಅಂಬಿಕಾ ನಗರ, ಪಿ ಆ್ಯಂಡ್ ಟಿ ಕ್ವಾರ್ಟರ್ಸ್, ಜೀವನ ಪ್ರಕಾಶ ಶಾಲೆ, ಕಾರ್ಪೋರೇಶನ್ ಲೇಔಟ್, ನ್ಯೂ ಮಾಕಾ ಲೇಔಟ್, ಪವಾರ ಲೇಔಟ್, ಶ್ರೀನಗರ, ಸಂತೋಷ ಕಾಲೋನಿ, ವರ್ಗಿಸ್ ಅಪಾರ್ಟ್‍ಮೆಂಟ್, ಉದನೂರ ರಸ್ತೆ, ಮಾಣಿಕಪ್ರಭು ಕಾಲೋನಿ, ವೀರಭದ್ರೇಶ್ವರ ಕಾಲೋನಿ, ಬಿದ್ದಾಪುರ ಕಾಲೋನಿ, ಹೈಕೋರ್ಟ, ಸಿರಸಗಿ ಮಡ್ಡಿ.
 ದೇವಿನಗರ ಫೀಡರ್À: ದೇವಿ ನಗರ, ಸಂತೋಷ ಕಾಲೋನಿ, ಖಾದ್ರಿ ಚೌಕ್, ನಬಿ ಕಾಲೋನಿ, ಚಿಂಚೋಳಿ ಲೇಔಟ್, ಜಾಫರಾಬಾದ್, ಪ್ರಭುದೇವ ನಗರ, ಮಾಳೇವಾಡಿ, ಜೆ.ಆರ್. ನಗರ, ಶೇಖ್ ನಗರ, ವಿಶ್ವರಾಧ್ಯ ಕಾಲೋನಿ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅದೇ ರೀತಿ ಜೆಸ್ಕಾಂ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ  33ಕೆ.ವಿ. ಸಲಗರ ಮತ್ತು 11 ಕೆ.ವಿ. ಮಹಾಗಾಂವ ಮಾರ್ಗದ ಮೇಲೆ 33ಕೆ.ವಿ. ಕಮಲಾಪುರ ಮಾರ್ಗ ಜೋಡಿಸುವ ಕಾರ್ಯಕೈಗೊಂಡಿರುವ ಪ್ರಯುಕ್ತ   2019ರ ಏಪ್ರಿಲ್ 9ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೆಳಕಂಡ ವಿತರಣಾ ಕೇಂದ್ರದ ಫೀಡರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      
33/11ಕೆ.ವಿ. ಸಲಗರ ವಿತರಣಾ ಕೇಂದ್ರ:  ಅಂಬಲಗಾ, ವಿ.ಕೆ. ಸಲಗರ, ಬೆಳಮಗಿ, ಕರಹರಿ, ಮುದ್ದಡಗಾ ಫೀಡರಗಳು. 110/33/11 ಕೆ.ವಿ. ಮಹಾಗಾಂವ ವಿತರಣಾ ಕೇಂದ್ರ: ಎಫ್-1 ಕುರಕೋಟಾ ಎನ್‍ಜೆವಾಯ್, ಎಫ್-7 ಬಬಲಾದ ಐಪಿ ಹಾಗೂ ಎಫ್.8 ಮಹಾಗಾಂವ ಐಪಿ ಫೀಡರಗಳು.  



ಹೀಗಾಗಿ ಲೇಖನಗಳು NEWS DATE: 08--04--2019

ಎಲ್ಲಾ ಲೇಖನಗಳು ಆಗಿದೆ NEWS DATE: 08--04--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS DATE: 08--04--2019 ಲಿಂಕ್ ವಿಳಾಸ https://dekalungi.blogspot.com/2019/04/news-date-08-04-2019.html

Subscribe to receive free email updates:

0 Response to "NEWS DATE: 08--04--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ