ಶೀರ್ಷಿಕೆ : News Date: 9--4--2019
ಲಿಂಕ್ : News Date: 9--4--2019
News Date: 9--4--2019
ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಿ
*********************************************************
ಆರ್. ವೆಂಕಟೇಶಕುಮಾರ್
***********************
ಕಲಬುರಗಿ,ಏ.09.(ಕ.ವಾ.)-ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಹಾಗಾಗಿ ಯಾವುದೇ ಕುಡಿಯುವ ನೀರಿನ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್‍ಕುಮಾರ್ ಅವರು ಸೂಚಿಸಿದ್ದಾರೆ.
ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಕರೆದಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕುಡಿಯುವ ನೀರಿನ ಸಂಬಂಧದ ಕೆಲಸಗಳನ್ನು ವಾರಗಟ್ಟಲೆ ಕಾಲ ತೆಗೆದುಕೊಳ್ಳದೆ, ನಾಲ್ಕೈದು ತಾಸಿನಲ್ಲಿ ಮುಗಿಸಬೇಕು. ಕುಡಿಯುವ ನೀರಿನ ತುರ್ತು ಕೆಲಸಗಳಿಗೆ ಲಿಖಿತ ಆದೇಶಗಳಿಗೆ ಕಾಯದೆ, ತುರ್ತಾಗಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಅವರು ತಿಳಿಸಿದರು.
ಕಲಬುರಗಿ ನಗರದಲ್ಲಿ ತೀವ್ರ ನೀರಿನ ಆಭಾವವಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಕಲಬುರಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ 5 ಟ್ಯಾಂಕರ್‍ಗಳ ಮೂಲಕ ದಿನಕ್ಕೆ ಮೂರು ಬಾರಿ ವಿತರಣೆ ಮಾಡುವ ನೀರನ್ನು ಒಂದೊಂದು ಟ್ಯಾಂಕರ್ ಮೂಲಕ 5 ಬಾರಿ ಪೂರೈಸಲು ಕ್ರಮವಹಿಸಬೇಕು ಎಂದ ಅವರು, ಹೆಚ್ಚುವರಿ ಡ್ರೈವರ್‍ಗಳನ್ನು ನೇಮಿಸಬೇಕು ಅಥವಾ ಹೆಚ್ಚುವರಿ ಕೆಲಸದ ಅವಧಿಯ ವೇತನ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು. ಹಾಗೆಯೇ ಇನ್ನೂ ಹೆಚ್ಚಿನ ಸಂಖ್ಯೆಯ ಟ್ಯಾಂಕರ್‍ಗಳನ್ನು ಟೆಂಡರ್ ಮೂಲಕ ಪಡೆದು ನೀರು ಪೂರೈಕೆ ಮಾಡಬೇಕು ಎಂದು ಸೂಚಿಸಿದರು.
ಕಲಬುರಗಿ ಮಹಾನಗರಕ್ಕೆ ನೀರು ಪೂರೈಸುವ ಕೋಟನೂರು ಯಂತ್ರಗಾರದಲ್ಲಿ ಕೆಟ್ಟು ಹೋಗಿರುವ ಸ್ಟಾಟರ್‍ನ್ನು ತಕ್ಷಣ ಸರಿಪಡಿಸಬೇಕು ಎಂದು ತಿಳಿಸಿದ ಅವರು ಮೇಜರ್ ಪೈಪ್ ಲಿಕೇಜ್, ಬೋರವೇಲ್ ನಿರ್ವಹಣೆ ಮುಂತಾದ ದುರಸ್ತಿ ಕಾರ್ಯಗಳಿಗೆ ಹಣ ಬೇಕಿದ್ದಲ್ಲಿ ಕಲಬುರಗಿ ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಅವರು, ಪ್ರಸ್ತಾವನೆ ಸಲ್ಲಿಸಿದರೆ, ಕÀೂಡಲೇ ಹಣ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ನಾಳೆಯೇ ಪ್ರಸ್ತಾವನೆ ಸಲ್ಲಿಸಿ ಎಂದು ಕಲಬುರಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಬೆಣ್ಣೆತೋರಾ ಜಲಾಶಯ, ಅಮರ್ಜಾ, ಭೀಮಾ ಬ್ಯಾರೇಜ್ ಮುಂತಾದ ಬ್ಯಾರೇಜ್‍ಗಳ ನೀರಿನ ಮಟ್ಟದ ವಿವರ ಪಡೆದ ಜಿಲ್ಲಾಧಿಕಾರಿಗಳು, ಜಲಾಶಯ ಹಾಗೂ ಬ್ಯಾರೇಜಿಗಳಲ್ಲಿರುವ ನೀರಿನ ಮಟ್ಟದ ಬಗ್ಗೆ ಮಾಹಿತಿ ಇರಬೇಕು. ಹಾಗೆಯೇ ಆಯಾ ಪುರಸಭೆ ಮುಖ್ಯ ಅಧಿಕಾರಿಗಳು ತಮ್ಮ ನಗರ-ಪಟ್ಟಣಗಳಿಗೆ ಎಷ್ಟು ನೀರು ಬೇಕು ಎಂಬ ನಿಖರ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು. ಮೊದಲೇ ಮಾಹಿತಿ ಸಂಗ್ರಹಿಸಿದರೆ ಕುಡಿಯುವ ನೀರಿನ ನಿರ್ವಹಣೆ ಸುಲಭವಾಗಲಿದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಾಡಿ ಮತ್ತು ಶಹಾಬಾದ ಪಟ್ಟಣಗಳಿಗೆ ಕುಡಿಯುವ ನೀರಿನ ಪೂರೈಕೆ ಬಗ್ಗೆ ವಿಚಾರಿಸಲಾಗಿ ಇನ್ನೂ 15 ದಿನಗಳ ಕಾಲ ಪೂರೈಸಲು ನೀರಿನ ಸಂಗ್ರಹವಿದೆ. ಅಷ್ಟರೊಳಗೆ ಬೆಣ್ಣೆತೋರಾ ಜಲಾಶಯದಿಂದ ನೀರು ಬಿಡುಗಡೆ ಆಗಬೇಕಿದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸೇಡಂ ಪಟ್ಟಣದ ಕುಡಿಯುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದ ಜಿಲ್ಲಾಧಿಕಾರಿಗಳು ಕೇವಲ 2-3 ದಿನಗಳಿಗೆ ಸಾಕಾಗುವಷ್ಟು ನೀರಿನ ಸಂಗ್ರಹವಿದೆ ಎಂದು ಹೇಳಿದಾಗ ಜಿಲ್ಲಾಧಿಕಾರಿಗಳು ಇಂಜಿನೀಯರನ್ನು ತರಾಟೆಗೆ ತೆಗೆದುಕೊಂಡರು. ಮುನ್ನೆಚ್ಚರಿಕೆಗಾಗಿ ಮುಂಚೆಯೇ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು. ಹಾಗೆಯೇ ಆಳಂದ, ಅಫಜಲಪುರ ಸೇರಿದಂತೆ ಎಲ್ಲ ಪಟ್ಟಣಗಳ ಕುಡಿಯುವ ನೀರಿನ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪುರಸಭೆ ಇನ್ನು ಮುಂತಾದ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಏಪ್ರಿಲ್ 10ರಂದು ಸರಳವಾಗಿ ದೇವರ ದಾಸಿಮಯ್ಯ ಜಯಂತ್ಯೋತ್ಸ ಆಚರಣೆ
******************************************************************
ಕಲಬುರಗಿ,ಏ.09.(ಕ.ವಾ.)-ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ದೇವರ ದಾಸಿಮಯ್ಯನವರ ಜಯಂತಿಯನ್ನು ಬುಧವಾರ ಏಪ್ರಿಲ್ 10ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಅವರು ತಿಳಿಸಿದ್ದಾರೆ.

ಭಗೀರಥ ಮಹರ್ಷಿ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಣಯ
*****************************************************************
ಕಲಬುರಗಿ,ಏ.09.(ಕ.ವಾ.)-ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಭಗೀರಥ ಮಹರ್ಷಿ ಜಯಂತಿಯನ್ನು ಇದೇ ಏಪ್ರಿಲ್ 22 ರಂದು ಕಲಬುರಗಿ ಜಿಲ್ಲೆಯಾದ್ಯಂತ ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯು ನಿರ್ಣಯ ಕೈಗೊಂಡಿತು.
ಅಂದು ಬೆಳ್ಳಿಗೆ 11 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಅತಿಥಿ ಗಣ್ಯರಿಂದ ಸರಳವಾಗಿ ಪೂಜೆ ನೆರವೇರಿಸುವ ಮೂಲಕ ಜಯಂತಿ ಆಚರಿಸಲಾಗುವುದು. ಜಯಂತಿ ದಿನದಂದು ಜಿಲ್ಲಾಡಳಿತದಿಂದ ಯಾವುದೇ ಮೆರವಣಿಗೆ ಕಾರ್ಯಕ್ರಮ ಇರುವುದಿಲ್ಲ. ಸಮಾಜದಿಂದ ಮೆರವಣಿಗೆ ಮಾಡಲು ಬಯಸಿದಲ್ಲಿ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಆಡಳಿತದಿಂದ ಸಹ ಸರಳವಾಗಿ ಭಗೀರಥ ಮಹರ್ಷಿ ಜಯಂತಿ ಆಚರಣೆಗೆ ಸುತ್ತೋಲೆ ಹೊರಡಿಸಬೇಕು. ವೇದಿಕೆ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಸ್ವಚ್ಛತೆಯ ಕಾಪಾಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಕಾಶ ಚಿಂಚೋಳಿಕರ ನಿರ್ದೇಶನ ನೀಡಿದರು. ಸಭೆಯಲ್ಲಿ ಭಾಗವಹಿಸಿದ ಭಗೀರಥ ಮಹರ್ಷಿ ಸಮಾಜದ ಮುಖಂಡರು ಜಯಂತಿ ಯಶಸ್ಸಿಗೆ ಅಗತ್ಯ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಉಪ್ಪಾರ ಸಮಾಜದ ಮುಖಂಡರಾದ ಮಹಾದೇವಪ್ಪ ಉಪ್ಪಾರ, ವಿ.ಸಿ.ನಿರುಡಗಿ, ಹಣಮಂತ ಕಡಗಂಚಿ, ಪ್ರಕಾಶ ಗಾಜರೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತಿರಿದ್ದರು.

ಶ್ರೀ ಭಗವಾನ ಮಹಾವೀರ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಣಯ
*************************************************************************
ಕಲಬುರಗಿ,ಏ.09.(ಕ.ವಾ.)-ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶ್ರೀ ಭಗವಾನ ಮಹಾವೀರ ಜಯಂತಿಯನ್ನು ಇದೇ ಏಪ್ರಿಲ್ 17ರಂದು ಕಲಬುರಗಿ ಜಿಲ್ಲೆಯಾದ್ಯಂತ ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯು ನಿರ್ಣಯ ಕೈಗೊಂಡಿತು.

ಅಂದು ಸಾಯಂಕಾಲ 6 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶ್ರೀ ಭಗವಾನ ಮಹಾವೀರರ ಭಾವಚಿತ್ರಕ್ಕೆ ಅತಿಥಿ ಗಣ್ಯರಿಂದ ಸರಳವಾಗಿ ಪೂಜೆ ನೆರವೇರಿಸುವ ಮೂಲಕ ಜಯಂತಿ ಆಚರಿಸಲಾಗುವುದು. ಜಯಂತಿ ದಿನದಂದು ಜಿಲ್ಲಾಡಳಿತದಿಂದ ಯಾವುದೇ ಮೆರವಣಿಗೆ ಕಾರ್ಯಕ್ರಮ ಇರುವುದಿಲ್ಲ. ಸಮಾಜದಿಂದ ಮೆರವಣಿಗೆ ಮಾಡಲು ಬಯಸಿದಲ್ಲಿ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಆಡಳಿತದಿಂದ ಸಹ ಸರಳವಾಗಿ ಶ್ರೀ ಭಗವಾನ ಮಹಾವೀರವರ ಜಯಂತಿ ಆಚರಣೆಗೆ ಸುತ್ತೋಲೆ ಹೊರಡಿಸಬೇಕು. ವೇದಿಕೆ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಸ್ವಚ್ಛತೆಯ ಕಾಪಾಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ನಿರ್ದೇಶನ ನೀಡಿದರು. ಸಭೆಯಲ್ಲಿ ಭಾಗವಹಿಸಿದ ಶ್ರೀ ಭಗವಾನ ಮಹಾವೀರ ಸಮಾಜದ ಮುಖಂಡರು ಜಯಂತಿ ಯಶಸ್ಸಿಗೆ ಅಗತ್ಯ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಶ್ರೀ ಭಗವಾನ ಮಹಾವೀರ ಸಮಾಜದ ಮುಖಂಡರಾದ ಚಂದ್ರಮೋಹನ ಶಾ, ಪ್ರೀತಮ್ ಮೆಹ್ತಾ, ನಾಗನಾಥ ಸಿಂಧೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತಿರಿದ್ದರು.

ಮಾಜಿ ಸೈನಿಕರು ಬ್ಯಾಂಕ್ ಖಾತೆ ವಿವರ ಸಲ್ಲಿಕೆಗೆ ಸೂಚನೆ
**************************************************
ಕಲಬುರಗಿ,ಏ.9.(ಕ.ವಾ)-ಕಲಬುರಗಿ ಜಿಲ್ಲೆಯ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ಕಲಬುರಗಿಯ ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯದಲ್ಲಿ ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಬ್ಯಾಂಕ್ ಖಾತೆಯ ವಿವರವನ್ನು ಸಂಬಂಧಪಟ್ಟ ಅಭಿಲೇಖಾಯಗಳಿಗೆ ಕಳುಹಿಸಿಕೊಡಲು ಅನುಕೂಲವಾಗುವಂತೆ ಮಾಜಿ ಸೈನಿಕರು, ಅವಲಂಬಿತರು ಕಲಬುರಗಿ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದಿಂದ ನಿಗದಿತ ನಮೂನೆಯನ್ನು ಪಡೆದು ಭರ್ತಿ ಮಾಡಿ ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ:
*******************************************************
ಕೇಂದ್ರಗಳ ಸುತ್ತಮುತ್ತಲೂ ನಿಷೇಧಾಜ್ಞೆ
**********************************
ಕಲಬುರಗಿ,ಏ.9.(ಕ.ವಾ)-ಕಳೆದ 2019ರ ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಇದೇ ಏಪ್ರಿಲ್ 10 ರಿಂದ 22ರವರೆಗೆ ಕಲಬುರಗಿ ನಗರದ ಒಟ್ಟು 10 ಕೇಂದ್ರಗಳಲ್ಲಿ ನಡೆಯಲಿದೆ. ಮೌಲ್ಯಮಾಪನ ಕಾರ್ಯವನ್ನು ಸುಗಮವಾಗಿ ನಡೆಸಲು ಮೌಲ್ಯಮಾಪನ ಕೇಂದ್ರಗಳ ಸುತ್ತಮುತ್ತಲೂ 200 ಮೀ. ಪ್ರದೇಶವನ್ನು ನಿಷೇಧಿತ ಪ್ರವೇಶವೆಂದು ಘೋಷಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಮೌಲ್ಯಮಾಪನ ಕೇಂದ್ರಗಳಿಂದಲೇ ಆನ್‍ಲೈನ್ ಎಂಟ್ರಿ ಮೂಲಕ ನೇರವಾಗಿ ಪರೀಕ್ಷಾ ಮಂಡಳಿಗೆ ರವಾನೆಯಾಗಲಿದೆ. ಮೌಲ್ಯಮಾಪನ ಕೇಂದ್ರಗಳ ವಿವರ ಇಂತಿದೆ. ಕಲಬುರಗಿ ನಗರದ ಜಿಲ್ಲಾ ಕೋರ್ಟ್ ಹತ್ತಿರದ ಎಸ್.ಆರ್.ಎನ್. ಮೆಹ್ತಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ದರ್ಗಾ ರಸ್ತೆಯಲ್ಲಿರುವ ಪ್ರಜ್ಞಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಳೇಯ ಜೇವರ್ಗಿ ರಸ್ತೆ ಪಿ ಆಂಡ್ ಟಿ ಕಾಲೋನಿಯ ನವಜೀವನ ನಗರದ ಶಕೈನ್ಹ ಬ್ಯಾಪಿಸ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಆನಂದ ಹೊಟೇಲ್ ಹತ್ತಿರದ ಸೇಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಇಂದಿರಾ ನಗರ ಸೇಂಟ್ ಜೋಸೆಫ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆಯಲ್ಲಿ ಮೌಲ್ಯಮಾಪನ ಕಾರ್ಯ ನಡೆಯಲಿದೆ.
ಕಲಬುರಗಿ ವಿದ್ಯಾನಗರದ ಶ್ರೀ ಶರಣ ಬಸವೇಶ್ವರ ಪಬ್ಲಿಕ್ ಪ್ರೌಢಶಾಲೆ, ದರಿಯಾಪುರ ಬಡಾವಣೆಯ ಜಿ.ಡಿ.ಎ. ಕಾಲೋನಿಯ ಕಾಯಕ ಫೌಂಡೇಶನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಟಿ.ವಿ. ಸ್ಟೇಶನ್ ಹಿಂದುಗಡೆಯಿರುವ ಶ್ರೀ ಗುರು ಸಂಗಮೇಶ್ವರ ಕಾನ್ವೆಂಟ್ (ಎಸ್‍ಜಿಎಸ್. ಕಾನ್ವೆಂಟ್)ದಲ್ಲಿ, ಬ್ರಹ್ಮಪೂರದ ನೂತನ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಟಿ.ವಿ. ಸ್ಟೇಶನ್ ಹಿಂದುಗಡೆಯಿರುವ ಶ್ರೀ ದಾಮೋದರ ರಘೋಜಿ ಮೇಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮೌಲ್ಯಮಾಪನ ಕಾರ್ಯ ನಡೆಯಲಿದೆ.

ಏಪ್ರಿಲ್ 10ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**********************************************
ಕಲಬುರಗಿ,ಏ.9.(ಕ.ವಾ)-ಜೆಸ್ಕಾಂ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ವ್ಯಾಪ್ತಿಯಲ್ಲಿ 110/33/11ಕೆ.ವಿ. ಕಪನೂರ ಉಪ ವಿತರಣಾ ಕೇಂದ್ರದ ಆವರಣದಲ್ಲಿ ಡಿ.ಪಿ. ಸೆಟ್ ಸರಿಪಡಿಸುವ ಕಾರ್ಯಕೈಗೊಂಡಿರುವ ಪ್ರಯುಕ್ತ 2019ರ ಏಪ್ರಿಲ್ 10ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕೆಳಕಂಡ ವಿತರಣಾ ಕೇಂದ್ರದ ಫೀಡರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
110 ಕೆ.ವಿ. ಕಪನೂರ ಉಪ ವಿತರಣಾ ಕೇಂದ್ರ: ಎಫ್-4 ಬೇಲೂರ ಫೀಡರ್ ವ್ಯಾಪ್ತಿಗೆ ಬರುವ ಬೇಲೂರ್ ಇಂಡಸ್ಟ್ರೀಸ್ ಮತ್ತು ಸಿದ್ಧಾರೂಡ ಕಾಲೋನಿ ಫೀಡರ ವ್ಯಾಪ್ತಿಯ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

************************************************
ಕಲಬುರಗಿ,ಏ.08.(ಕ.ವಾ.)-ಜೆಸ್ಕಾಂ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ನಗರದ ವಿಭಾಗದ ವ್ಯಾಪ್ತಿಯಲ್ಲಿ ಬರುವ 11ಕೆ.ವಿ. ರಾಮಮಂದಿರ, 11ಕೆ.ವಿ. ಸಿನಿಮಾ ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಏಪ್ರಿಲ್ 10ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ. ರಾಮಮಂದಿರ ಫೀಡರ್: ಸಿ.ಬಿ.ಐ. ಕಾಲೋನಿ, ಸದಾಶಿವ ನಗರ, ನವಜೀವನ ಸೊಸೈಟಿ ,ಕಲ್ಮಣಕರ್ ಲೇಔಟ್, ರಾಮ ಮಂದಿರ, ಕರುಣೇಶ್ವರ ನಗರ, ನವಣಿ ಲೇಔಟ್, ಸಂಗಮೇಶ್ವರ ಲೇಔಟ್, ದೇವಾ ನಗರ, ಓಜಾ ಕಾಲೋನಿ, ವಿವೇಕಾನಂದ ಕಾಲೋನಿ, ಲಕ್ಷ್ಮೀನಾರಾಯಣ ಲೇಔಟ್, ಶಿವಶಕ್ತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಸಿನಿಮಾ ಫೀಡರ್: ಸುಪರ ಮಾರ್ಕೇಟ್, ಶಹಾ ಬಜಾರ್ ಜಿ.ಡಿ.ಎ., ಕಟಗರಪುರ, ಪ್ರಕಾಶ ಟಾಕೀಸ್, ಲೋಹಾರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬಜಾರ್, ಮಹಾಲಕ್ಷ್ಮೀ ಲೇಔಟ್, ಕಿರಾಣ ಬಜಾರ್, ಮಾರವಾಡಿ ಗಲ್ಲಿ, ಚೌಕ್ ಪೊಲೀಸ್ ಸ್ಟೇಷನ್, ಫೋರ್ಟ್ ರಸ್ತೆ, ಬಾಂಡಾ ಬಜಾರ್, ಸರಸ್ವತಿ ಗೋದಾಮು, ಪುಟಾಣಿಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಅಭ್ಯರ್ಥಿಗಳಿಗೆ ನೀತಿ ಸಂಹಿತೆಯ ಕೈಪಿಡಿ, ಸೂಚನಾ ಪತ್ರಗಳ ವಿತರಣೆ
*************************************************************
ಬಹಿರಂಗ ಸಭೆ-ಸಮಾರಂಭಗಳಿಗೆ ಅನುಮತಿ ಕಡ್ಡಾಯ
**********************************************
ಆರ್. ವೆಂಕಟೇಶಕುಮಾರ್
************************
ಕಲಬುರಗಿ,ಏ.09.(ಕ.ವಾ.)-ಪ್ರಸಕ್ತ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅನುಮತಿಯಿಲ್ಲದೇ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಬಹಿರಂಗ ಸಭೆ-ಸಮಾರಂಭ, ಕಾರ್ಯಕ್ರಮ, ಮೆರವಣಿಗೆ ಮುಂತಾದವುಗಳನ್ನು ಗಳನ್ನು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅಭ್ಯರ್ಥಿಗಳಿಗೆ ಕೈಪಿಡಿ, ವಹಿ ನಮೂನೆ ಹಾಗೂ ಇತರ ಸೂಚನಾ ಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಅಭ್ಯರ್ಥಿಗಳು ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಂದ ಬಹಿರಂಗ ಸಭೆ-ಸಮಾರಂಭ, ಮೆರವಣಿಗೆ ಕುರಿತು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕಾರ್ಯಕ್ರಮಗಳು ನಡೆಯುವ ದಿನದಂದು ಸ್ಥಳಕ್ಕೆ ವಿಡಿಯೋ ಕಣ್ಗಾವಲು ತಂಡ ಎಲ್ಲ ವಿಡಿಯೋ ಚಿತ್ರೀಕರಿಸಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಿದೆ ಎಂದು ವಿವರಿಸಿದರು.
ಒಂದು ವೇಳೆ ಅನುಮತಿ ಪಡೆಯದೇ ಸಭೆ-ಸಮಾರಂಭ ಮುಂತಾದವುಗಳನ್ನು ಮಾಡುವ ಅಭ್ಯರ್ಥಿಗಳ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಚಾರಕ್ಕೆ ಬಳಸುವ ವಾಹನಗಳನ್ನು ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಹಾಗಾದಲ್ಲಿ ಇಡೀ ಕ್ಷೇತ್ರದಲ್ಲಿ ಈ ವಾಹನ ಓಡಾಡಬಹುದು. ಒಂದು ವೇಳೆ ತಾವು ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದರೆ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ವಾಹನ ಸಂಚರಿಸಬೇಕು ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗುಲಬರ್ಗಾ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಬ್ರಿಟೀಷಚಂದ್ರ ಬರ್ಮನ್ ಅವರು ಮಾತನಾಡಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಸಹಕರಿಸಬೇಕೆಂದು ಕೋರಿದರು.
ತಾವು ಕಲಬುರಗಿ ನಗರದ ಹಳೆಯ ಐವಾನ್ ಶಾಹಿ ಅತಿಥಿ ಗೃಹದ ರೂಮ ನಂ. 4 ರಲ್ಲಿ ತಂಗಿದ್ದು, ಚುನಾವಣೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಮೊಬೈಲ್ ಸಂಖ್ಯೆ 7338134578 ಅಥವಾ ಪ್ರತಿದಿನ ಸಂಜೆ 6 ರಿಂದ 7 ಗಂಟೆಯವರೆಗೆ ಖುದ್ದಾಗಿ ಭೇಟಿಯಾಗಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಪೊಲೀಸ್ ವೀಕ್ಷಕ ಡಾ. ರಾಜಶ್ರೀ ಸಿಂಗ್ ಅವರು ಮಾತನಾಡಿ, ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ತಮ್ಮ ಕರ್ತವ್ಯ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದೆಂದು ರಾಜಕೀಯ ಮುಖಂಡರಿಗೆ ತಿಳಿಸಿದರು. ಶಾಂತಿ, ಸೌಹಾರ್ಧತೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು. ಕಾನೂನು ಸುವ್ಯವಸ್ಥೆ ಸೇರಿದಂತೆ ಮತ್ತಿತರ ಯಾವುದೇ ದೂರುಗಳಿದ್ದಲ್ಲಿ ತಮ್ಮ ಮೊಬೈಲ್ ಸಂಖ್ಯೆ 88619 11181ಗೆ ಸಂಪರ್ಕಿಸಬೇಕೆಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ನಮೂನೆ-7 (ಪ್ರತಿನಿಧಿಸುವ ಅಭ್ಯರ್ಥಿಗಳ ಪಟ್ಟಿ), ಅಭ್ಯರ್ಥಿಗಳ ಕೈಪಿಡಿ, ಚುನಾವಣಾ ವೆಚ್ಚ ಮೇಲ್ವಿಚಾರಣಾ ಕೈಪಿಡಿ, ಪೋಲಿಂಗ್ ಏಜೆಂಟರ ಕೈಪಿಡಿ, ಕೌಟಿಂಗ್ ಏಜೆಂಟರ ಕೈಪಿಡಿ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ಮಾದರಿ ನೀತಿ ಸಂಹಿತೆ ಮಾರ್ಗಸೂಚಿ, ಖರ್ಚು ವೆಚ್ಚದ ದರಪಟ್ಟಿ, ಸ್ಟ್ರಾಂಗ್ ರೂಂ ಮತ್ತು ಕೌಟಿಂಗ್ ಕೇಂದ್ರಗಳ ಮಾಹಿತಿ ಕುರಿತ ಮುಂತಾದ ಕೈಪಿಡಿಗಳನ್ನು ವಿತರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ, ವೀಕ್ಷಕರ ಲೈಸನ್ ಅಧಿಕಾರಿಗಳು ಮತ್ತಿತರ ಇದ್ದರು.

ಹೀಗಾಗಿ ಲೇಖನಗಳು News Date: 9--4--2019
ಎಲ್ಲಾ ಲೇಖನಗಳು ಆಗಿದೆ News Date: 9--4--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 9--4--2019 ಲಿಂಕ್ ವಿಳಾಸ https://dekalungi.blogspot.com/2019/04/news-date-9-4-2019.html
0 Response to "News Date: 9--4--2019"
ಕಾಮೆಂಟ್ ಪೋಸ್ಟ್ ಮಾಡಿ