ಶೀರ್ಷಿಕೆ : ಒಂದು ಬೊಗಸೆ ಪ್ರೀತಿ - 12
ಲಿಂಕ್ : ಒಂದು ಬೊಗಸೆ ಪ್ರೀತಿ - 12
ಒಂದು ಬೊಗಸೆ ಪ್ರೀತಿ - 12
ಡಾ. ಅಶೋಕ್. ಕೆ. ಆರ್.
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
“ಓ! ಹಂಗಾದ್ರೆ ನಿನ್ದೂ ಲವ್ ಮ್ಯಾರೇಜಾ”‘ಹೇಳೋದು ಕಷ್ಟ. ರಾಜೀವ್ ನನ್ನನ್ನು ಮುಂಚಿನಿಂದ ಇಷ್ಟಪಟ್ಟಿದ್ದರು. ಹೈಸ್ಕೂಲು ಮುಗಿಸುವವರೆಗೆ ಅವರ ಮನೆ ನಮ್ಮ ಮನೆ ಅಕ್ಕಪಕ್ಕವೇ ಇತ್ತು. ಅವರು ನಮ್ಮ ಮನೆಗೆ ಆಟವಾಡಲು ಬರುತ್ತಿದ್ದರು, ನಾನು ಅಲ್ಲಿಗೆ ಹೋಗುತ್ತಿದ್ದೆ. ನಾನು ಒಂಭತ್ತನೇ ತರಗತಿಯಲ್ಲಿದೆ ಅನ್ನಿಸುತ್ತೆ. ಕೇರಮ್ ಆಡುತ್ತಿದ್ದಾಗ ‘ಧರಣಿ ಐ ಲವ್ ಯೂ’ ಎಂದುಬಿಟ್ಟಿದ್ದರು. ‘ಏ ಹೋಗೋ’ ಎಂದುತ್ತರಿಸಿ ಎದ್ದುಬಂದಿದ್ದೆ. ಪಿಯುಸಿಗೆ ಬರುವಷ್ಟರಲ್ಲಿ ಸ್ವಂತ ಮನೆಗೆ ಬಂದುಬಿಟ್ಟಿದ್ದೊ. ನಂತರ ರಾಜೀವ್ ಹೆಚ್ಚಾಗಿ ಸಿಗುತ್ತಿರಲಿಲ್ಲ. ಮದುವೆ ನಿಶ್ಚಯವಾಗುವವರೆಗೆ’
“ಇದರಲ್ಲೇನು ಒರಟುತನವಿದೆ?”
‘ಒರಟುತನ ಇರುವುದು ಇದರಲ್ಲಲ್ಲ. ನಾನು ಪ್ರೀತಿಸಿದ್ದು ರಾಜೀವನನ್ನೂ ಅಲ್ಲ’
“ಮತ್ತೆ”
‘ನಾನು ಪ್ರೀತಿಸಿದ ಹುಡುಗನ ಹೆಸರು ಪುರುಷೋತ್ತಮ್ ಅಂತ’ ಅತ್ತ ಕಡೆಯಿಂದ ಹತ್ತು ನಿಮಿಷವಾದರೂ ಏನೂ ಪ್ರತಿಕ್ರಿಯೆ ಬರಲಿಲ್ಲ. ‘ಏನಾಯ್ತು’ ಎಂದು ಕಳುಹಿಸಿದ ಮೆಸೇಜಿಗೂ ರಿಪ್ಲೈ ಬರಲಿಲ್ಲ. ಮಲಗಿಬಿಟ್ಟನೇನೋ ಎಂದುಕೊಂಡೆ. ಇಪ್ಪತ್ತು ನಿಮಿಷದ ನಂತರ “ಸಾರಿ” ಎಂದು ಮೆಸೇಜು ಕಳುಹಿಸಿದ.
‘ಸಾಗರ್ ಸಾರಿ ಕೇಳೋದಾ?!! ಯಾಕಪ್ಪ!!’
“ನಿನಗೊಂದು ಸುಳ್ಳು ಹೇಳಿಬಿಟ್ಟಿದ್ದೆ ಇಷ್ಟು ದಿನ”
‘ಏನು ಸುಳ್ಳು’
“ನೀನು ‘ನನ್ನ ಬಗ್ಗೆ ಏನ್ ಗೊತ್ತಿತ್ತು’ ಅಂತ ಕೇಳಿದಾಗಲೆಲ್ಲ ಏನೂ ಗೊತ್ತಿರಲಿಲ್ಲ ಎಂದೇ ಹೇಳುತ್ತಿದ್ದೆ. ನನಗೆ ನಿನ್ನ ಲವ್ ಸ್ಟೋರಿ ಬಗ್ಗೆ ಗೊತ್ತಿತ್ತು. ಅವನ ಹೆಸರು ಪುರುಷೋತ್ತಮ್ ಅಂತಾನೂ ಗೊತ್ತಿತ್ತು. ನೀನೀಗ ಮದುವೆಯಾಗಿರೋದು ಬೇರೆಯವರನ್ನು. ಹಾಗಾಗಿ ಆ ಹಳೆಯ ವಿಷಯವನ್ನೆಲ್ಲ ಯಾಕೆ ಕೆದಕಬೇಕು ಎಂದುಕೊಂಡು ಸುಮ್ಮನಿದ್ದೆ”
‘ಹ್ಹ ಹ್ಹ. ಅದರಲ್ಲೇನಿದೆ. ನನಗೆ ಅಷ್ಟು ದಿನದಿಂದ ಅದೇ ಅನುಮಾನವಿತ್ತು. ನಿನ್ನ ಫ್ರೆಂಡ್ಸ್ ಸರ್ಕಲ್ಲಿನಲ್ಲಿ ನನ್ನ ಜೊತೆ ಪಿಯುಸಿ ಓದಿದವರೂ ಇದ್ದರು. ಅವರಿಗಂತೂ ನನ್ನ ಲವ್ ಸ್ಟೋರಿ ಗೊತ್ತಿತ್ತು. ಅವರ ಮೂಲಕ ನಿನಗೂ ಗೊತ್ತಾಗಿರಬೇಕಲ್ಲ ಎನ್ನಿಸುತ್ತಿತ್ತು. ನೀನೇ ಏನು ಬಾಯಿಬಿಟ್ಟು ಹೇಳದೇ ಹೋಗಿದ್ದರಿಂದ ಸುಮ್ಮನಾಗಿದ್ದೆ. ಏನೇನು ಗೊತ್ತಿತ್ತು’
“ಫಸ್ಟ್ ಪಿಯುಸಿಯಿಂದಾನೇ ಇಬ್ರೂ ಲವ್ ಮಾಡ್ತಿದ್ರಂತೆ. ಇವಳು ಮೆಡಿಕಲ್ಲಿಗೆ ಸೇರಿದ್ಲು. ಅವನು ಬಿಎಗೆ ಸೇರಿದ. ‘ಪರ್ವಾಗಿಲ್ಲ ಮಗ ಮೆಡಿಕಲ್ಲಿಗೆ ಸೇರಿದ ಮೇಲೂ ಅವನನ್ನೇ ಲವ್ ಮಾಡ್ತಾವ್ಳೆ’ ಅಂತ ಹೊಗಳಿಕೊಳ್ತಿದ್ದೋ ಯಾವಾಗಾದ್ರೂ ನಿನ್ನ ವಿಷಯ ಬಂದಾಗ”
‘ಓ ಅಷ್ಟೆಲ್ಲ ಮಾತಾಡ್ತಿದ್ರಾ?’
“ಅಲ್ವಾ ಮತ್ತೆ. ಆ ಕಾರಣಕ್ಕೇ ನಿನ್ನ ಕಂಡರೆ ನಮ್ಮಲ್ಲೆಲ್ಲ ಒಂದು ಗೌರವ ಇತ್ತು. ವರ್ಷಕ್ಕೊಂದರಂತೆ ಬಾಯ್ ಫ್ರೆಂಡು ಗರ್ಲ್ ಫ್ರೆಂಡು ಬದಲಿಸುವವರ ನಡುವೆ ನೀನು ವಿಭಿನ್ನವಾಗಿ ಕಂಡಿದ್ದೆ. ನಿನ್ನ ಫೇಸ್ ಬುಕ್ ಪ್ರೊಫೈಲಿನಲ್ಲಿ ಧರಣಿ ರಾಜೀವ್ ಅಂತ ನೋಡಿದಾಗಲೇ ಅಚ್ಚರಿಯಾಗಿತ್ತು. ಏನಿದು ಇವರ ಪ್ರೀತಿಯೂ ಮದುವೆಯಲ್ಲಿ ಕೊನೆಯಾಗಲಿಲ್ಲವಾ ಅಂತ ಸ್ವಲ್ಪ ಬೇಸರವೂ ಆಗಿತ್ತು. ಮದುವೆ ಮುರಿಯೋದಿಕ್ಕೆ ಸಾವಿರ ಕಾರಣಗಳಿರುತ್ತವೆ ಬಿಡು ಎಂದುಕೊಂಡಿದ್ದೆ”
‘ಇದನ್ನೆಲ್ಲಾ ಇಷ್ಟು ದಿನ ಹೇಳಲೇ ಇಲ್ಲ’
“ನೀನಿಷ್ಟೊಂದು ಹತ್ತಿರದ ಗೆಳತಿಯಾಗ್ತಿ ಅಂತ ನನಗೇನು ಕನಸು ಬಿದ್ದಿತ್ತ”
‘ಒರಟ ನೀನು’
“ಅದು ಹೌದು. ಏನೋ ನೀವಿಬ್ರೂ ಮದುವೆಯಾಗಿದ್ರೆ ಆದರ್ಶ ಪ್ರೇಮ ಎಂದು ಇತರರಿಗೆ ತೋರಿಸಬಹುದಿತ್ತು”
‘ನಾವಿಬ್ರು ಮದುವೆಯಾಗಿದ್ರೆ ನಾನು ನಿನ್ನ ಸ್ನೇಹಿತೆಯಾಗೋದು ಬದಿಗಿರಲಿ ಮೊಬೈಲ್ ಕೂಡ ಉಪಯೋಗಿಸಲು ಆಗುತ್ತಿರಲಿಲ್ಲವೇನೋ’
“ಯಾಕೆ?”
‘ತುಂಬ ದೊಡ್ಡ ಕತೆ ಕಣೋ. ಮೆಸೇಜು ಮಾಡೋಕೆ ಆಗಲ್ಲ. ಫೋನ್ ಮಾಡೇ ಹೇಳಬೇಕು’
“ಆಗ್ಲೇ ಹನ್ನೆರಡಾಗಿದೆ. ನಾಳೆ ಬೆಳಿಗ್ಗೆ ನನಗೆ ಸ್ವಲ್ಪ ಕೆಲಸಗಳಿವೆ. ರಾತ್ರಿ ನೀನು ಫ್ರೀ ಇದ್ದರೆ ಮಾತನಾಡೋಣ”
‘ಸರಿ ಕಣೋ. ರಾತ್ರಿ ಮನೆಗೆ ಬರೋದು ಎಂಟೂವರೆಯಾಗುತ್ತೆ. ಊಟ ಗೀಟ ಮಾಡಿ ಹತ್ತರ ನಂತರ ಫೋನ್ ಮಾಡ್ತೀನಿ’
“ಸರಿ ಕಣೇ. ಧರು ಒಂದು ಮಾತು ಹೇಳಲಾ” ಇದೇ ಮೊದಲ ಬಾರಿಗೆ ಅವನು ಧರು ಎಂದು ಕರೆದಿದ್ದ ನನ್ನನ್ನು!
‘ಹೇಳೋ ಸಾಗರ್’
“ನನಗೆ ಆ ಪುರುಷೋತ್ತಮ್ ಮತ್ತು ರಾಜೀವ್ ಇಬ್ಬರ ಮೇಲೂ ಜೆಲಸಿಯಾಗ್ತಿದೆ”
‘ಮ್. I missed you ಕಣೋ’ ಎಂದು ಮೆಸೇಜಿಸಿದವಳಿಗೆ ಅವನದಕ್ಕೆ ಉತ್ತರಿಸುತ್ತಾನೋ ಇಲ್ಲವೋ ಕೋಪಗೊಳ್ಳುತ್ತಾನೋ ಹೇಗೋ ಎಂದು ಭಯವಾಯಿತು.
“I missed you too ಧರು” ಎಂದು ತಕ್ಷಣವೇ ಬಂದ ಮೆಸೇಜು ನೋಡಿ ಚೂರು ನಿರಾಳವಾಯಿತು. ರಿಪ್ಲೈ ಮಾಡಬೇಕೆನ್ನಿಸಲಿಲ್ಲ. ಮನಸ್ಸಿಗೇನೋ ನಿರಾಳಭಾವ. ಐದು ನಿಮಿಷಕ್ಕೆ ನಿದ್ರೆ ಮಾಡಿಬಿಟ್ಟೆ.
ಮುಂದುವರೆಯುವುದು....
ಹೀಗಾಗಿ ಲೇಖನಗಳು ಒಂದು ಬೊಗಸೆ ಪ್ರೀತಿ - 12
ಎಲ್ಲಾ ಲೇಖನಗಳು ಆಗಿದೆ ಒಂದು ಬೊಗಸೆ ಪ್ರೀತಿ - 12 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಒಂದು ಬೊಗಸೆ ಪ್ರೀತಿ - 12 ಲಿಂಕ್ ವಿಳಾಸ https://dekalungi.blogspot.com/2019/04/12.html
0 Response to "ಒಂದು ಬೊಗಸೆ ಪ್ರೀತಿ - 12"
ಕಾಮೆಂಟ್ ಪೋಸ್ಟ್ ಮಾಡಿ