ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ

ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ
ಲಿಂಕ್ : ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ

ಓದಿ


ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ


ಕೊಪ್ಪಳ ಜೂ. 06 (ಕರ್ನಾಟಕ ವಾರ್ತೆ): ಕೊಪ್ಪಳ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಸ್ವಯಂ ಉದ್ಯೋಗ ಕಲ್ಪಿಸಲು ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ (ಸಿಎಂಇಜಿಪಿ) ಅಡಿಯಲ್ಲಿ ಆಸಕ್ತ ಗ್ರಾಮೀಣ ಪ್ರದೇಶದ ನಿರುದ್ಯೋಗಿ ವಿದ್ಯಾವಂತ ಯುವಕ/ ಯುವತಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
    ಯೋಜನೆಯ ಗರಿಷ್ಟ ಮಿತಿ (ತಯಾರಿಕಾ ಮತ್ತು ಸೇವಾ ಚಟುವಟಿಕೆಗಳಿಗೆ) ರೂ. 10 ಲಕ್ಷಗಳವರೆಗೆ ಇರುತ್ತದೆ.  ಅರ್ಜಿ ಸಲ್ಲಿಸಲು 8ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.  ಸಾಮಾನ್ಯ ವರ್ಗದ ಯುವಕ/ ಯುವತಿಯರು 18 ರಿಂದ 35 ವರ್ಷ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದವರ್ಗ/ ಅಲ್ಪಸಂಖ್ಯಾತರು/ ವಿಕಲಚೇತನ/ ಮಾಜಿ ಸೈನಿಕ/ ಮಹಿಳೆಯರು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ವಿಶೇಷ ವಿದ್ಯಾರ್ಹತೆಗಳಾದ ವೃತ್ತಿ ತರಬೇತಿ, ಐಟಿಐ, ಡಿಪ್ಲೋಮೊ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.  ಸ್ವಂತ ಬಂಡವಾಳ ಮಿತಿಯನ್ನು ಸಾಮಾನ್ಯ ವರ್ಗಕ್ಕೆ ಕನಿಷ್ಟ ಶೇ.10 ರಷ್ಟು ಭಾಗ, ಶೇ.25 ರಷ್ಟು ಭಾಗವು (ರೂ. 2.50 ಲಕ್ಷಗಳಿಗೆ ಮಿತಿ) ಸಹಾಯಧನ.  ಸ್ವಂತ ಬಂಡವಾಳ ಮಿತಿಯನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದವರ್ಗ/ ಅಲ್ಪಸಂಖ್ಯಾತರು/ ವಿಕಲಚೇತನ/ ಮಾಜಿ ಸೈನಿಕ/ ಮಹಿಳೆಯರಿಗೆ ಯೋಜನಾ ವೆಚ್ಚದ ಶೇ.05 ರಷ್ಟು ಭಾಗ, ಶೇ.35 ರಷ್ಟು ಭಾಗವು (ರೂ. 3.50 ಲಕ್ಷಗಳಿಗೆ ಮಿತಿ) ಸಹಾಯಧನವಾಗಿದೆ.  ಈ ಯೋಜನೆಯು ಹೊಸ ಘಟಕಗಳಿಗೆ ಮಾತ್ರ ಲಭ್ಯವಿರುತ್ತದೆ.   
    ಅರ್ಜಿ ಸಲ್ಲಿಸಲು ಜೂ. 30 ಕೊನೆಯ ದಿನವಾಗಿದ್ದು, ಆಸಕ್ತರು ವೆಬ್‍ಸೈಟ್  http://cmegp.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿಯ ದ್ವಿ-ಪ್ರತಿಗಳನ್ನು ನಿಗದಿತ ದಾಖಲಾತಿಗಳೊಂದಿಗೆ ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ, ಇವರ ಕಛೇರಿಗೆ ಬ್ಯಾಂಕ್ ಶಿಫಾರಸ್ಸಿಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಮೊಬೈಲ್ ಸಂಖ್ಯೆ-9480825631, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಥಮ ದರ್ಜೆ ಸಹಾಯಕರ ಮೊ.ಸಂ-7795142631 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/06/blog-post_84.html

Subscribe to receive free email updates:

0 Response to "ಸ್ವಯಂ ಉದ್ಯೋಗ : ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ