News and Photo Date: 16-03-2019

News and Photo Date: 16-03-2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date: 16-03-2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date: 16-03-2019
ಲಿಂಕ್ : News and Photo Date: 16-03-2019

ಓದಿ


News and Photo Date: 16-03-2019

ಅಕ್ರಮ ಹಣ ಸಿಕ್ಕಲ್ಲಿ ವಶಕ್ಕೆ ಪಡೆದು ಕೇಸ್ ದಾಖಲಿಸಿ
********************************************
-ಆರ್.ವೆಂಕಟೇಶ ಕುಮಾರ
************************
ಕಲಬುರಗಿ,ಮಾ.16.(ಕ.ವಾ.)-ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಕುರುಡ ಕಾಂಚಾಣ ಹರಿದಾಡುವ ಸಂಭವವಿದ್ದು, ದಾಖಲೆವಿಲ್ಲದ ಅಕ್ರಮ ಹಣ ಕಂಡು ಬಂದಲ್ಲಿ ಕೂಡಲೆ ಅದನ್ನು ವಶಕ್ಕೆ ಪಡೆದು ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಎಸ್.ಎಸ್.ಟಿ. ತಂಡಗಳಿಗೆ ಖಡಕ್ ಸೂಚನೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿಗಳು, ಅಬಕಾರಿ, ವಾಣಿಜ್ಯ, ಆದಾಯ ತೆರಿಗೆ ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಯಾವುದೆ ವ್ಯಕ್ತಿ 50 ಸಾವಿರ ರೂ. ವರೆಗೆ ಹಣ ವೈಯಕ್ತಿಕವಾಗಿ ಇಟ್ಟುಕೊಂಡಿದಲ್ಲಿ ಅದಕ್ಕೆ ಅಭ್ಯಂತರವಿಲ್ಲ. 50 ಸಾವಿರ ರೂ. ಮೇಲ್ಪಟ್ಟು 10 ಲಕ್ಷ ರೂ. ವರೆಗೆ ಹಣವಿದ್ದಲ್ಲಿ ಅದಕ್ಕೆ ಸೂಕ್ತ ದಾಖಲಾತಿಗಳಿದ್ದರೆ ಪರವಾಗಿಲ್ಲವಾದರು ಸಂಶಾಯಸ್ಪದ ಹಣ ಕಂಡುಬಂದಲ್ಲಿ ಅದನ್ನು ವಶಕ್ಕೆ ಪಡೆದು ಜಿಲ್ಲಾ ಖಜಾನೆಗೆ ಸಲ್ಲಿಸಬೇಕು ಎಂದರು.
10 ಲಕ್ಷ ರೂ. ಮೇಲ್ಟಟ್ಟು ಹಣ ಪತ್ತೆಯಾದಲ್ಲಿ ದಾಖಲೆ ಇರಲಿ, ಇಲ್ಲದಿರಲಿ ಕೂಡಲೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಬೇಕು. ದಾಖಲೆ ಇಲ್ಲದ ಹಣವಾದಲ್ಲಿ ಅದನ್ನು ಸಹ ವಶಕ್ಕೆ ಪಡೆದು ಮುಂದಿನ ಕ್ರಮ ವಹಿಸಬೇಕು. ಇನ್ನು ವಸತಿ ಪ್ರದೇಶಗಳಲ್ಲಿ ಸಾರ್ವಜನಿಕ ಮನೆಯೊಂದರಲ್ಲಿ ಅಕ್ರಮ ಹಣ ಇರುವ ಬಗ್ಗೆ ಖಾತ್ರಿಯಾದಲ್ಲಿ ಎಸ್.ಎಸ್.ಟಿ., ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸಹಾಯಕ ಚುನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ರವಾನಿಸಿದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವರು ಎಂದ ಅವರು ಅಕ್ರಮ ಹಣ ಹರಿದಾಡುವುದನ್ನು ಸಂಪೂರ್ಣವಾಗಿ ತಡೆಯಲು ಸಹಾಯಕ ಚುನಾವಣಾಧಿಕಾರಿಗಳು ತಮ್ಮ ಗುಪ್ತಚರ ಮಾಹಿತಿಯನ್ನು ಬಲಪಡಿಸಿಕೊಳ್ಳಬೇಕು ಎಂದರು.
ಒಂದು ಲಕ್ಷ ಮೇಲ್ಪಟ್ಟ ನಗದು ವ್ಯವಹಾರ ಹಾಗೂ 10 ಲಕ್ಷ ರೂ. ಮೇಲ್ಪಟ್ಟ ಎಲ್ಲಾ ರೀತಿಯ ವ್ಯವಹಾರಗಳನ್ನು ಬ್ಯಾಂಕುಗಳು ರಾಜ್ಯ ಚುನಾವಣಾ ಮುಖ್ಯಾಧಿಕಾರಿಗಳಿಗಲ್ಲದೆ ಜಿಲ್ಲಾ ಚುನಾವಣಾಧಿಕಾರಿಗಳಿಗೂ ಮಾಹಿತಿ ನೀಡಬೇಕು. ಚುನಾವಣಾ ವರ್ಷ ಇದಾಗಿರುವುದರಿಂದ ಜಿಲ್ಲೆಯ ಎಲ್ಲಾ ವಾಣಿಜ್ಯ, ಸಹಕಾರ ಹಾಗೂ ಖಾಸಗಿ ಬ್ಯಾಂಕುಗಳಿಗೆ ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದರು.
ಅಕ್ರಮ ಮದ್ಯ ಸಾಗಾಣಿಕೆಗೆ ಬ್ರೆಕ್ ಹಾಕಲು ಜಿಲ್ಲೆಯ ಮಿರಿಯಾಣ, ಕುಂಚಾವರಂ, ರಿಬ್ಬನಪಲ್ಲಿ ಅಂತರಾಜ್ಯ ಗಡಿ ಚೆಕ್ ಪೋಸ್ಟ್ ಸೇರಿದಂತೆ 9 ಕಡೆ ಅಬಕಾರಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಇಲ್ಲಿ ಅಬಕಾರಿ ಗಾರ್ಡ್‍ಗಳು 24 ತಾಸು ಕಾರ್ಯಾಚರಣೆ ನಡೆಸಲಿದ್ದಾರೆ. ಪ್ರತಿ ಚೆಕ್ ಪೋಸ್ಟ್‍ನಲಿ ಸಿ.ಸಿ.ಟಿವಿ. ಅಳವಡಿಸಲಾಗಿದೆ. ಅಕ್ರಮ ಮದ್ಯ ನಿಗ್ರಹಣೆಗೆ 11 ತಂಡ ರಚನೆ ಮಾಡಿದೆ. ಸಾರ್ವಜನಿಕರಿಂದ ದೂರು ಸ್ವೀಕರಿಸಲು 8 ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಕಳೆದ ವರ್ಷದ ಇದೇ ಅವಧಿಯನ್ನು ಹೋಲಿಸಿದಾಗ ಈಗಿನ ಮಾರಾಟದ ಪ್ರತಿಶತ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ಅಬಕಾರಿ ತಂಡಗಳು ಮಾಹಿತಿ ಕಲೆ ಹಾಕಬೇಕು ಎಂದರು.
ಪೆಟ್ರೋಲ್ ಬಂಕ್ ಮೇಲೂ ನಿಗಾ:- ಸಾರ್ವಜನಿಕ ಸಭೆ-ಸಮಾರಂಭ ಹಾಗೂ ಬೈಕ್ ರ್ಯಾಲಿ ಆಯೋಜನೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೂಪನ್ ಮೂಲಕ ಉಚಿತವಾಗಿ ಪೆಟ್ರೋಲ್, ಡೀಸೆಲ್ ನೀಡುವ ಸಂಭವಿವದ್ದು, ಇದರ ಮೇಲೆ ಆಹಾರ, ನಾಗರಿಕ ಸರಬರಾಜು ಮತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತೀವ್ರ ನಿಗಾ ವಹಿಸಲು ನಿರ್ದೇಶನ ನೀಡಲಾಗುವುದು ಎಂದರು.
ಉಡುಗರೆಗಳ ಮೇಲೆಯೂ ಕಣ್ಣಿಡಿ:- ಚುನಾವಣೆ ಸಂದರ್ಭ ಇದಾಗಿರುವುದರಿಂದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರನ್ನು ಹಂಚಲೆಂದೆ ಸಾಮಾನ್ಯವಾಗಿ ಉಡುಗರೆಗಳನ್ನು ನೀಡುತ್ತಾರೆ. ಇದಕ್ಕೆಲ್ಲ ಅವಕಾಶ ನೀಡಬಾರದು. ಎಸ್.ಎಸ್.ಟಿ. ತಂಡ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂತಹ ಉಡುಗರೆಗಳ ಮೇಲೆ 24 ತಾಸು ಕಣ್ಣಿಟ್ಟು ವಶಕ್ಕೆ ಪಡೆಯಿರಿ ಎಂದರು.
ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಹಾಗೂ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಡಾ.ಪಿ.ರಾಜಾ ಮಾತನಾಡಿ ಚೆಕ್ ಪೋಸ್ಟ್‍ಗಳಲ್ಲಿ ಆಯಾ ಇಲಾಖೆಗಳ ತಂಡಗಳು ತಮ್ಮ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾತ್ರ ತಪಾಸಣೆ ಮಾಡದೆ, ಅಕ್ರಮ ಹಾಗೂ ಸಂಶಯದ ರೀತಿಯಲ್ಲಿ ಅಥವಾ ಚುನಾವಣೆಗೆ ಸಂಬಂಧಿಸಿದ ಆಯಾ ಪಕ್ಷ ಅಥವಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಏನಾದರು ದಾಖಲೆಗಳಿದ್ದಲ್ಲಿ ಅದನ್ನು ಸಹ ವಶಕ್ಕೆ ಪಡೆಯಬೇಕು ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಐ.ಎ.ಎಸ್.ಪ್ರೋಬೇಷನರ್ ಅಧಿಕಾರಿ ಸ್ನೇಹಲ ಸುಧಾಕರ ಲೋಖಂಡೆ ಸೇರಿದಂತೆ ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳು, ಅಬಕಾರಿ, ವಾಣಿಜ್ಯ, ಬ್ಯಾಂಕರ್ಸ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದ್ದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ: ವೀಡಿಯೋ ವೀಕ್ಷಣಾ ತಂಡ ರಚನೆ
***************************************************************
ಕಲಬುರಗಿ.ಮಾ.16.(ಕ.ವಾ.)-ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಆದೇಶದಂತೆ ಚುನಾವಣೆಯಲ್ಲಿ ಸ್ಪರ್ಧಿಸತಕ್ಕಂತಹ ಅಭ್ಯರ್ಥಿಗಳ ಸಾರ್ವಜನಿಕ ಸಭೆ-ಸಮಾರಂಭಗಳ ಬಗ್ಗೆ ಚಿತ್ರೀಕರಿಸಿ ವಿಡಿಯೋ ಸರ್ವಿಲೆಂಸ್ ತಂಡ ಸಲ್ಲಿಸುವ ಸಿ.ಡಿ.ಗಳನ್ನು ವೀಕ್ಷಿಸಿ ಖರ್ಚು ವೆಚ್ಚಗಳ ವಿವರಗಳನ್ನು ಕಾಲಕಾಲಕ್ಕೆ ಲೆಕ್ಕಪತ್ರ ಪರಿಶೀಲನಾ ಸಮಿತಿಗೆ ನೀಡಲು ತ್ರಿಸದಸ್ಯವುಳ್ಳ ವೀಡಿಯೋ ವೀಕ್ಷಣಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ನೇಮಕ ಮಾಡಲಾದ ವೀಡಿಯೋ ಚಿತ್ರೀಕರಣ ತಂಡದ ಮುಖ್ಯಸ್ಥರ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ: ಅಫಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧೀಕ್ಷಕ ರಾಜು ದೇಶಪಾಂಡೆ ಮೊಬೈಲ್ 891492068. 35-ಜೇವರ್ಗಿ ವಿಧಾನಸಭಾ ಕ್ಷೇತ್ರ: ಜೇವರ್ಗಿ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಅಶೋಕ ನಾಯಕ ಮೊಬೈಲ್ ಸಂಖ್ಯೆ 9448219322. 40-ಚಿತ್ತಾಪುರ ವಿಧಾನಸಭಾ ಕ್ಷೇತ್ರ:-ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಮೊಬೈಲ್ ಸಂಖ್ಯೆ 9973153251. 41-ಸೇಡಂ ವಿಧಾನಸಭಾ ಕ್ಷೇತ್ರ: ಸೇಡಂ ತೋಟಗಾರಿಕಾ ಅಧಿಕಾರಿ ರಮೇಶ ಗುಡಸುಲ್ ಮೊಬೈಲ್ ಸಂಖ್ಯೆ 7406504120.42-ಚಿಂಚೋಳಿ ವಿಧಾನಸಭಾ ಕ್ಷೇತ್ರ: ಚಿಂಚೋಳಿ ತಾಲೂಕಾ ಬಿ.ಸಿ.ಎಂ. ಅಧಿಕಾರಿ ಶರಣಬಸಪ್ಪ ಮೊಬೈಲ್ ಸಂಖ್ಯೆ 9148070022.43-ಗುಲಬರ್ಗಾ (ಗ್ರಾಮೀಣ) ವಿಧಾನಸಭಾ ಕ್ಷೇತ್ರ:-ಕಲಬುರಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಹುಲ್‍ಕುಮಾರ ಭಾವಿದೊಡ್ಡಿ ಮೊಬೈಲ್ ಸಂಖ್ಯೆ 9972045458. 44-ಗುಲಬರ್ಗಾ (ದಕ್ಷಿಣ) ವಿಧಾನಸಭಾ ಕ್ಷೇತ್ರ:-ಕಲಬುರಗಿ ವಕ್ಫ್ ಅಧಿಕಾರಿ ಹಜರತ್ ಅಲಿ ನದಾಫ ಮೊಬೈಲ್ ಸಂಖ್ಯೆ 9449848582. 45-ಗುಲಬರ್ಗಾ (ಉತ್ತರ) ವಿಧಾನಸಭಾ ಕ್ಷೇತ್ರ:-ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಮೊಬೈಲ್ ಸಂಖ್ಯೆ 9449985479.46-ಆಳಂದ ವಿಧಾನಸಭಾ ಕ್ಷೇತ್ರ:-ಆಳಂದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಜಯ ರೆಡ್ಡಿ ಮೊಬೈಲ್ ಸಂಖ್ಯೆ 9480695209
.
ಸಹಾಯಕ ಖರ್ಚು ವೆಚ್ಚ ವೀಕ್ಷಕರ ನೇಮಕ
************************************
ಕಲಬುರಗಿ.ಮಾ.16.(ಕ.ವಾ.)-ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಚುನಾವಣೆ 2019ರ ಹಿನ್ನೆಲೆಯಲ್ಲಿ ಕಲಬುರಗಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಖರ್ಚು ವೆಚ್ಚ ವೀಕ್ಷಕರನ್ನು ನೇಮಕ ಮಾಡಿ ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿಗಳಾದ ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ: ಪಿ.ಎಂ.ಜಿ.ಎಸ್.ವೈ. ಕಲಬುರಗಿ ವಿಭಾಗದ ಲೆಕ್ಕ ಅಧೀಕ್ಷಕ ಶಿವರಾಜ ಪಾಟೀಲ ಮೊಬೈಲ್ ಸಂಖ್ಯೆ 9902567991. 35-ಜೇವರ್ಗಿ ವಿಧಾನಸಭಾ ಕ್ಷೇತ್ರ: ಕಲಬುರಗಿ ಲೋಕಲ್ ಅಡಿಟ್ ಸರ್ಕಲ್‍ನ ಜಂಟಿ ನಿರ್ದೇಶಕರ ಕಚೇರಿಯ ಅಡೀಟ್ ಆಫೀಸರ್ ರಾಜಕುಮಾರ ಅವರ ಮೊಬೈಲ್ ಸಂಖ್ಯೆ 7624808486. 40-ಚಿತ್ತಾಪುರ ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಷಿಯಲ್ ಟ್ಯಾಕ್ಸ್ ಆಫೀಸಿನ ಅಸಿಸ್ಟಂಟ್ ಕಮೀಶನರ್ ಶರಣಗೌಡ ಪಾಟೀಲ ಇವರ ಮೊಬೈಲ್ ಸಂಖ್ಯೆ 9901315286. 41-ಸೇಡಂ ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಶಿಯಲ್ ಟ್ಯಾಕ್ಸ್ ಆಫೀಸಿನ ಸಿ.ಟಿ.ಓ. ಕಲ್ಯಾಣರಾವ ಬಿರಾದಾರ ಇವರ ಮೊಬೈಲ್ ಸಂಖ್ಯೆ 9448752193. 42-ಚಿಂಚೋಳಿ ವಿಧಾನಸಭಾ ಕ್ಷೇತ್ರ: ಕಲಬುರಗಿ ಲೋಕಲ್ ಆಡಿಟ್ ಸರ್ಕಲ್‍ನ ಅಡೀಟ್ ಆಫೀಸರ್ ಶ್ರೀಪಾದ ಭಟ್ ಜೋಶಿ ಇವರ ಮೊಬೈಲ್ ಸಂಖ್ಯೆ 9972369431 ಇರುತ್ತದೆ.
43-ಗುಲಬರ್ಗಾ (ಗ್ರಾಮೀಣ) ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಶಿಯಲ್ ಟ್ಯಾಕ್ಸ್ ಆಫೀಸರ್ ಬಾಬು ಇವರ ಮೊಬೈಲ್ ಸಂಖ್ಯೆ 9448649510. 44-ಗುಲಬರ್ಗಾ (ದಕ್ಷಿಣ) ವಿಧಾನಸಭಾ ಕ್ಷೇತ್ರ: ಕಲಬುರಗಿ ಲೋಕಲ್ ಅಡಿಟ್ ಸರ್ಕಲ್ ಆಫೀಸಿನ ಜಂಟಿ ನಿರ್ದೇಶಕರಾದ ಭಾರತಿ ಜ್ಯೋತಿ ಇವರ ಮೊಬೈಲ್ ಸಂಖ್ಯೆ 9901666873. 45-ಗುಲಬರ್ಗಾ (ಉತ್ತರ) ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಶಿಯಲ್ ಟ್ಯಾಕ್ಸ್ ಕಚೇರಿಯ ಅಡಿಟ್ ಸಿ.ಟಿ.ಓ. ಕೃಷ್ಣಾ ಕುಲಕರ್ಣಿ ಇವರ ಮೊಬೈಲ್ ಸಂಖ್ಯೆ 9448505300. 46-ಆಳಂದ ವಿಧಾನಸಭಾ ಕ್ಷೇತ್ರ: ಕಲಬುರಗಿ ಕಮರ್ಶಿಯಲ್ ಟ್ಯಾಕ್ಸ್ ಕಚೇರಿಯ ಅಕೌಂಟ್ ಎಲ್.ವಿ.ಓ. ಮಹ್ಮದ್ ವಹೀದ್ ಇವರ ಮೊಬೈಲ್ ಸಂಖ್ಯೆ 9480005854.
ಇಲಾಖೆಯಿಂದ ಸಿಗುವ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಿ
**********************************************************
ಕಲಬುರಗಿ,ಮಾ.16.(ಕ.ವಾ)-ರಾಜ್ಯ ಮಹಿಳಾ ನಿಲಯಲ್ಲಿನ ಮಹಿಳಾ ನಿವಾಸಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆದು ಮುಂದೆ ಬರಬೇಕೆಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರು ತಿಳಿಸಿದರು.
ಅವರು ಇತ್ತೀಚೆಗೆ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಅಂತರರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ಪಾಪಮ್ಮ ಮಾತನಾಡಿ, ಇಂದು ಮಹಿಳೆಯು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದು, ಒಳ್ಳೆಯ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗೆ ಸೇರಬೇಕೆಂದರು. ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಮೀರಾ ಪಂಡಿತ ಹಾಗೂ ಎ.ಎಸ್.ಐ. ಯಶೋಧಾ ಕಟಕೆ ಮಾತನಾಡಿದರು.
ನ್ಯಾಯವಾದಿ ಅನುಸೂಯ ಶಿಲವಂತ ಅವರು ಮಹಿಳೆಯರ ಸಬಲೀಕರಣ ಕುರಿತು ಮಾತನಾಡಿದರು. ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಡಾ. ವಿಜಯಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶಿವಶರಣಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಭೀಮರಾಯ ಕಣ್ಣೂರು, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಶರಣ ಸಿರಸಗಿ, ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ನಾಗಮಣಿ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಶಿಲ್ಪಾ ಎಸ್. ಹಿರೇಮಠ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಹಾಗೂ ಸಂಸ್ಥೆಯ ನಿವಾಸಿಗಳು ಉಪಸ್ಥಿತರಿದ್ದರು.
ಮಾರ್ಚ್ 17ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**********************************************
ಕಲಬುರಗಿ.ಮಾ.16.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ದಿಂದ 33ಕೆ.ವಿ. ಜಿ.ಆಯ್.ಎಸ್. ಸ್ಟೇಶನ್ ಕಾರ್ಯಕೈಗೊಂಡಿರುವ ಪ್ರಯುಕ್ತ 11ಕೆ.ವಿ. ಶರಣನಗರ, ಗಣೇಶನಗರ ಹಾಗೂ ಜಿ.ಜಿ.ಹೆಚ್. ಫೀಡರಗಳ ವ್ಯಾಪ್ತಿಗಳಲ್ಲಿ ಇದೇ ಮಾರ್ಚ್ 17ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ. ಶರಣನಗರ ಫೀಡರ್: ಸುಂದರ ನಗರ, ಬಾಪು ನಗರ, ಬಾಬ್‍ಹೌಸ್, ಬಿಗ್ ಬಜಾರ, ಅಥರ್ ಕಂಪೌಂಡ್, ಎಸ್.ಟಿ.ಬಿ.ಟಿ. ಆಫೀಸ್, ರುಕಮ್ ಕಾಲೇಜ್, ಗಾಜಿಪೂರ, ವಿದ್ಯಾನಗರ, ಜಿಲ್ಲಾ ಪಂಚಾಯತ ಸಭಾಂಗಣ, ತಿರಂದಾಸ, ಭೀಮ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 11 ಕೆ.ವಿ. ಗಣೇಶ ನಗರ ಫೀಡರ್: ಭಾಕರ್ ಫಂಶನ್ ಹಾಲ್, ಶಿವಮಂದಿರ ಏರಿಯಾ, ಬಂದೇ ನವಾಜ್ ಕಾಲೋನಿ, ಪಟೇಲ್ ಹೋಟಲ್ ಏರಿಯಾ ಕನ್ನಡ ಕಾನ್ವೆಂಟ್ ಏರಿಯಾ, ಬ್ರಹ್ಮಕುಮಾರಿ ಏರಿಯಾ ಗೃಹಗಳು ಹಾಗೂ ಸುತ್ತಮುತ್ತಲ್ಲಿನ ಪ್ರದೇಶಗಳು. 11 ಕೆ.ವಿ. ಜಿ.ಜಿ.ಹೆಚ್. ಫೀಡರ್À: ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಜಯದೇವ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೇ, ಎಂ.ಆರ್ ಎಂ.ಸಿ. ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಕುಡಸಿ ಜಹÀನಾರಾ ಅವರಿಗೆ ಪಿಹೆಚ್.ಡಿ.
************************************
ಕಲಬುರಗಿ,ಮಾ.16.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಬಯೋಟೆಕ್ನಾಲಾಜಿ ವಿಷಯದಲ್ಲಿ ಕುಡಸಿ ಜಹನಾರಾ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಚಂದ್ರಕಾಂತ ಕೆಳಮನಿ ಆರ್. ಅವರ ಮಾರ್ಗದರ್ಶನದಲ್ಲಿ “ಐಸೋಲೇಶನ್ ಆ್ಯಂಡ್ ಮೊಲೆಕ್ಯೂಲರ್ ಚಾರಕ್ಟರೈಜೇಶನ್ ಆಫ್ ಎಂಡಿಆರ್ ಇ.ಕೊಲಿ ಫ್ರಾಮ್ ಕ್ಲಿನಿಕಲ್ ಸ್ಯಾಂಪಲ್ಸ್. ಆ್ಯಂಡ್ ಈಟಿಸ್ ಬಯೋ ಕಂಪ್ಯೂಟೇಶನಲ್ ಅನಾಲೈಸೆಸ್” (ISಔಐಂಖಿIಔಓ ಂಓಆ ಒಔಐಇಅUಐಂಖ ಅಊಂಖಂಅಖಿಇಖIZಂಖಿIಔಓ ಔಈ ಒಆಖ ಇ.ಅಔಐI ಈಖಔಒ ಅಐIಓIಅಂಐ SಂಒPಐಇS. ಂಓಆ IಖಿS ಃIಔ ಅಔಒPUಖಿಂಖಿIಔಓಂಐ ಂಓಂಐಙSIS) ಕುರಿತು ಕುಡಸಿ ಜಹನಾರಾ ಅವರು ಪ್ರಬಂಧವನ್ನು ಮಂಡಿಸಿದ್ದರು.
ಮಾರ್ಚ್ 21 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ: ಪಾರದರ್ಶಕ ಪರೀಕ್ಷೆ ನಡೆಸಿ
*******************************************************************
ಕಲಬುರಗಿ,ಮಾ.16.(ಕ.ವಾ.)-ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯು ಬರುವ ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ ಕಲಬುರಗಿ ಜಿಲ್ಲೆಯ ಒಟ್ಟು 133 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಅಕ್ರಮಕ್ಕೆ ಯಾವುದೇ ಅವಕಾಶ ನೀಡದೆ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು. ಅಕ್ರಮ ಕಂಡುಬಂದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನೆ ನೇರವಾಗಿ ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು.
ಅವರು ಶನಿವಾರ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 24080 ಗಂಡು, 18681 ಹೆಣ್ಣು ಸೇರಿದಂತೆ ಒಟ್ಟು 42,761 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 1650 ಖಾಸಗಿ ಅಭ್ಯರ್ಥಿಗಳು ಸಹ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.
ಒಟ್ಟು 133 ಪರೀಕ್ಷಾ ಕೇಂದ್ರಗಳ ಪೈಕಿ 17 ಸೂಕ್ಷ್ಮ, 5 ಅತೀ ಸೂಕ್ಷ್ಮ ಹಾಗೂ 111 ಸಾಮಾನ್ಯ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. ಪರೀಕ್ಷೆ ಸೂಸೂತ್ರವಾಗಿ ನಡೆಯಲು ಪ್ರತಿ ಕೇಂದ್ರಕ್ಕೆ ಸ್ಥಾನಿಕ ಜಾಗೃತ ದಳ ರಚಿಸಲಾಗಿದೆ. ಇದಲ್ಲದೆ 66 ಜನರನ್ನು ವೀಕ್ಷಕರನ್ನಾಗಿ, 47 ಜನರನ್ನು ರೂಟ್ ಅಧಿಕಾರಿಗಳನ್ನಾಗಿ ಹಾಗೂ ಡಿ.ಡಿ.ಪಿ.ಐ ಹಂತದಲಿ 4 ವಿಚಕ್ಷಣ ದಳಗಳು ಸಹ ಪರೀಕ್ಷೆಗಳ ಮೇಲೆ ನಿಗಾ ಇಡಲಿವೆ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಕೊಠಡಿ ಹಾಗೂ ಆಯ್ದ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ವಿಶೇಷವಾಗಿ ಪತ್ರಿಕೆ ತೆರೆಯುವಾಗ ಹಾಗೂ ಪರೀಕ್ಷೆ ನಂತರ ಪ್ಯಾಂಕಿಂಗ್ ಮಾಡುವ ಕಾರ್ಯವನ್ನು ಸಿ.ಸಿ.ಟಿ.ವಿ.ಯಲ್ಲಿ ದಾಖಲಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳು, ವಿಶೇಷವಾಗಿ ಕೊಠಡಿ ಮೇಲ್ವಿಚಾರಕರು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದ ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ತಡೆಯಲು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ತಪಾಸಣಾ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಅಗತ್ಯ ಬಂದೋಬಸ್ತ್‍ಗಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ಮತ್ತು ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಅಕ್ರಮ ಘಟನೆಗಳು ನಡೆಯದಂತೆ ಅಧೀಕ್ಷಕರು ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು.
ಝರಾಕ್ಸ್, ಪುಸ್ತಕ ಮಳಿಗೆಗಳು ಬಂದ್:- ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಜಿರಾಕ್ಸ್, ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಸಿ.ಆರ್.ಪಿ.ಸಿ. 144 ಕಲಂ ರನ್ವಯ ನಿಷೇಧಿತ ಪ್ರವೇಶವೆಂದು ಆದೇಶ ಹೊರಡಿಸಲಾಗುವುದು.
ಮೊಬೈಲ್ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ವಾಚ್ ಕ್ಯಾಲ್ಕುಲೇಟರ್, ಪಠ್ಯ ಪುಸ್ತಕ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಅವರು ಪರೀಕ್ಷೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದಲ್ಲದೆ ಈ ಬಾರಿ ಬಿಸಿಲಿನ ತಾಪಮಾನ ಅಧಿಕವಾಗಿರುವ ಕಾರಣ ಮಕ್ಕಳ ಆರೋಗ್ಯ ದೃಷ್ಠಿಯಿಂದ ಮುನ್ನೆಚರಿಕೆವಾಗಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ವೈದ್ಯ ಸಿಬ್ಬಂದಿಯನ್ನು ಸಹ ನೇಮಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಐ.ಎ.ಎಸ್.ಪ್ರೊಬೇಷನರ್ಸ್ ಸ್ನೇಹಲ ಸುಧಾಕರ ಲೋಖಂಡೆ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತಾಲಯ ಕಚೇರಿಯ ಸಹ ನಿರ್ದೇಶಕ ವಿಜಯಕುಮಾರ, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಅಧೀಕ್ಷಕರು, ವೀಕ್ಷಕರು, ರೂಟ್ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಯುವ ಸ್ಪಂದನ ಕೇಂದ್ರದಿಂದ ಜೀವನ ಕೌಶಲ್ಯ ತರಬೇತಿ ಶಿಬಿರ
ಕಲಬುರಗಿ,ಮಾ.16.(ಕ.ವಾ.)-ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಸ್ಪಂದನ ಕೇಂದ್ರದಿಂದ ಇತ್ತೀಚೆಗೆ ಏಳು ದಿನಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಹಾಗೂ ಆರಂಭ ಸೇವಾ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಜೀವನಕೌಶಲ್ಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿ ಶಿಬಿರದಲ್ಲಿ ಆರಂಭ ಸೇವಾ ಸಂಸ್ಥೆ ನಿರ್ದೇಶಕ ದೇವರಾಜ ಕನ್ನಡಗಿ ಜೀವನ ಕೌಶಲ್ಯಕ್ಕೆ ಸಂಬಂಧಿಸಿದಂತೆ ಸಂವಹನೆ, ಒತ್ತಡ ನಿವಾರಣೆ, ನಿರ್ಧಾರ ಕೈಗೊಳ್ಳುವುದು, ಸ್ವ ಅರಿವು, ಅಂತರವ್ಯಕ್ತಿ ಸಂಬಂಧದ ಕೌಶಲ್ಯ, ಸೃಜನಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹರಿಸುವುದು, ನಿರ್ಧಾರ ತೆಗೆದುಕೊಳ್ಳುವುದು, ಸಹಾನುಭೂತಿ ಕುರಿತ ವಿಷಯಗಳನ್ನು ಚಟುವಟಿಕೆಗಳ ಮುಖಾಂತರ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ತರಬೇತಿ ಶಿಬಿರದಲ್ಲಿ ಕಲಬುರಗಿ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮೀ ಎಲ್.ಕೆ., ಉಪನ್ಯಾಸಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಶ್ರೀಗೋವಿಂದ, ಯುವ ಸಮಾಲೋಚಕ ನಿಂಗಪ್ಪಾ ಆರ್ ವಾಲಿ, ಪುಣೆ ಸಮ್ಯಕ್ ಆಸ್ಪತ್ರೆ ಮನೋಶಾಸ್ತ್ರಜ್ಞ ಸಾಹೆಬಣ್ಣಾ ದೊಡ್ಡಮನಿ ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.








ಹೀಗಾಗಿ ಲೇಖನಗಳು News and Photo Date: 16-03-2019

ಎಲ್ಲಾ ಲೇಖನಗಳು ಆಗಿದೆ News and Photo Date: 16-03-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 16-03-2019 ಲಿಂಕ್ ವಿಳಾಸ https://dekalungi.blogspot.com/2019/03/news-and-photo-date-16-03-2019.html

Subscribe to receive free email updates:

0 Response to "News and Photo Date: 16-03-2019"

ಕಾಮೆಂಟ್‌‌ ಪೋಸ್ಟ್‌ ಮಾಡಿ