ಶೀರ್ಷಿಕೆ : ಪರಿಭ್ರಮಣ
ಲಿಂಕ್ : ಪರಿಭ್ರಮಣ
ಪರಿಭ್ರಮಣ
ಹರ್ಷಿತಾ ಕೆ.ಟಿ
ನನ್ನೆಲ್ಲಾ ಕವನಗಳೂ
ಬರೀ ಅವನ ಸುತ್ತಲ್ಲೇ ಸುತ್ತುವವು
ಭ್ರಮಿತ ಜೇನುಹುಳುಗಳಂತೆ
ಕಣ್ಣಂಚು ನೀರು ಕಚ್ಚುವಂತೆ
ಮನಬಿಚ್ಚಿ ನಕ್ಕಿದ್ದು
ಕನ್ನಡಕದ ಮರೆಯಲ್ಲಿ
ಕಂಬನಿಯೆರಡ ಒರೆಸಿದ್ದು
ಚಂದಿರನತ್ತ ಬೊಟ್ಟು ಮಾಡಿ
ಬೆಳದಿಂಗಳ ತುತ್ತು ಉಣಿಸಿದ್ದು
ಹಸಿವಿಲ್ಲವೆಂದು ತಟ್ಟೆ ಮುಂದೆ
ಬೋರಲಾಗಿ ಮಲಗಿದ್ದು
ಎಷ್ಟೇ ನಿದ್ರಿಸಿದರೂ
ಸಾಲಲಿಲ್ಲವೆಂಬ ಧೋರಣೆ
ಮೊದಲೇ ಸುಂಕ ಕಟ್ಟಿ
ಕನಸು ಕಾಣುವ ಅವನ ವಾಡಿಕೆ
ಒಂದೇ ಎರಡೇ
ಲೆಕ್ಕ ವಿಲ್ಲದೆ ಮೊಳೆವ
ಹುಚ್ಚು ಅಣಬೆಯಂತೆ
ಹುಟ್ಟುತ್ತಲೇ ಇರುತ್ತವೆ
ಅವನ ಬಗ್ಗೆ ಗೀಚಲು
ರಸ ಪ್ರಸಂಗಗಳು
ಹೀಗಾಗಿ ಲೇಖನಗಳು ಪರಿಭ್ರಮಣ
ಎಲ್ಲಾ ಲೇಖನಗಳು ಆಗಿದೆ ಪರಿಭ್ರಮಣ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪರಿಭ್ರಮಣ ಲಿಂಕ್ ವಿಳಾಸ https://dekalungi.blogspot.com/2019/03/blog-post_14.html
0 Response to "ಪರಿಭ್ರಮಣ"
ಕಾಮೆಂಟ್ ಪೋಸ್ಟ್ ಮಾಡಿ