ಶೀರ್ಷಿಕೆ : ಮುಗಿದ ಕಥೆ
ಲಿಂಕ್ : ಮುಗಿದ ಕಥೆ
ಮುಗಿದ ಕಥೆ
ಹರ್ಷಿತಾ ಕೆ.ಟಿ
ಏನೋ ಸಾಲುತ್ತಿಲ್ಲ
ಆದರೂ ಏನೂ ಬೇಕೆನಿಸುತ್ತಿಲ್ಲ
ತೀರಾ ಖಾಲಿಯಾಗಿದೆ ಮನವು
ಆದರೂ ಏನೋ ಭಾರವೆನಿಸಿದಂತೆ
ನನ್ನೆಲ್ಲಾ ನೋವುಗಳು ಮಾಗಿರಬೇಕು
ಕಣ್ಣಂಚೂ ಕಟ್ಟೆಯೊಡೆಯುತ್ತಿದೆ ಗಳಿಗೆಗೊಮ್ಮೆ
ಏನಾಗಿದೆ ನಿನಗೆ ಎಂದು
ಹುಬ್ಬೇರಿಸಿದಾಗಲೆಲ್ಲಾ ಅವನು
ನೀನೇ ಕಾರಣ ಎಲ್ಲದಕ್ಕೂ
ಎಂದು ಕುತ್ತಿಗೆ ಪಟ್ಟಿ ಹಿಡಿದು
ಚೀರಿ ಹೇಳಬೇಕೆನಿಸಿತು
ಅವನ ಕಣ್ಣಲ್ಲಿ ದಿಟ್ಟಿಸಿ
ನಾವು ಕಟ್ಟಿದ ಕನಸುಗಳು ಈಗೆಲ್ಲಿ
ಎಂದು ಕೇಳಬೇಕೆನಿಸಿತು
ನಾವು ಎಂಬ ಪದದಿಂದ
ಅವನು ಎಂದೋ
ಮೈಲುಗಟ್ಟಲೆ ಮುಂದೆ ಸಾಗಿದ್ದ
ನಾನಾದರೋ ಇನ್ನೂ
ಅವನು ಕಟ್ಟಿಕೊಟ್ಟಿದ್ದ ಸಂಬಂಧದ
ಸುತ್ತಲೇ ಗಸ್ತು ಸುತ್ತುತ್ತಿರುವೆ
ಅವನೇ ಕೆಣಕಿ
ಕಿಚ್ಚು ಕಚ್ಚಿಸಿದ
ಭಾವನೆಗಳು ನನ್ನವು
ಇಂದು ಅವನೇ ಗುರುತಿಸುತ್ತಿಲ್ಲ
ಇನ್ನು ವ್ಯರ್ಥವೆನಿಸಿತು ಅವನೆದುರು
ಮತ್ತದೇ ಭಾವನೆಗಳ ಪ್ರದರ್ಶನ
ಮತ್ತದೇ ಅಂಗಲಾಚುವ ಅಸಹಾಯಕತೆ
ಇತ್ತ ಧೈರ್ಯವೂ ಸಾಲಲಿಲ್ಲ
ಯಾಕೊ ಮನಸ್ಸು ಸರಿ ಇಲ್ಲ
ಎಂದು ಚುಟುಕಾಗಿ
ಉತ್ತರಿಸಿ ಸುಮ್ಮನಾದೆ
ಆದರೆ ಸುಮ್ಮನಾಗುತ್ತಿಲ್ಲ
ಕೆನ್ನೆಗಳ ಮೇಲೆ
ಹರಿಯುತ್ತಲೇ ಇದೆ ಕಣ್ಣೀರು
ಹರ್ಷಿತಾರವರ ಮತ್ತಷ್ಟು ಕವಿತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಹೀಗಾಗಿ ಲೇಖನಗಳು ಮುಗಿದ ಕಥೆ
ಎಲ್ಲಾ ಲೇಖನಗಳು ಆಗಿದೆ ಮುಗಿದ ಕಥೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮುಗಿದ ಕಥೆ ಲಿಂಕ್ ವಿಳಾಸ https://dekalungi.blogspot.com/2019/03/blog-post_16.html
0 Response to "ಮುಗಿದ ಕಥೆ"
ಕಾಮೆಂಟ್ ಪೋಸ್ಟ್ ಮಾಡಿ