ಶೀರ್ಷಿಕೆ : News Date: 14-3-2019
ಲಿಂಕ್ : News Date: 14-3-2019
News Date: 14-3-2019
ಗುಲಬರ್ಗಾ ವಿಶ್ವವಿದ್ಯಾಲಯದ 37ನೇ ವಾರ್ಷಿಕ ಘಟಿಕೋತ್ಸವ
*******************************************************
ಕಲಬುರಗಿ,ಮಾ.14.(ಕ.ವಾ)-ಗುಲಬರ್ಗಾ ವಿಶ್ವವಿದ್ಯಾಲಯದ 37ನೇ ವಾರ್ಷಿಕ ಘಟಿಕೋತ್ಸವವು ಶುಕ್ರವಾರ ಮಾರ್ಚ್ 15 ರಂದು ಬೆಳಿಗ್ಗೆ 11 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿನ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಜರುಗಲಿದೆ.
ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ವಜುಭಾಯ್ ರೂಡಾಭಾಯ್ ವಾಲಾ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಜಿ.ಟಿ. ದೇವೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಸಿಎಫ್‍ಟಿಆರ್‍ಐ ಮಾಜಿ ನಿರ್ದೇಶಕರು, ಅಂತರರಾಷ್ಟ್ರೀಯ ಪೌಷ್ಟಿಕ ವಿಜ್ಞಾನ ಒಕ್ಕೂಟ (ಐಯುಎನ್‍ಎಸ್) ಮತ್ತು ವೈಜ್ಞಾನಿಕ ಕೌನ್ಸಿಲ್ ಉಪಾಧ್ಯಕ್ಷರು ಹಾಗೂ ಮೈಸೂರಿನ ಅಂತರರಾಷ್ಟ್ರೀಯ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಒಕ್ಕೂಟದ ಅಧ್ಯಕ್ಷರಾದ ಪದ್ಮಶ್ರೀ ಡಾ. ವಿ. ಪ್ರಕಾಶ ಘಟಿಕೋತ್ಸವ ಭಾಷಣ ಮಾಡುವರು.

ಮಾರ್ಚ್ 15ರಂದು ಎ.ಸಿ.ಬಿ. ಅಧಿಕಾರಿಗಳಿಂದ ಜನಸಂಪರ್ಕ ಸಭೆ
*********************************************************
ಕಲಬುರಗಿ,ಮಾ.14.(ಕ.ವಾ)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಅಧಿಕಾರಿಗಳು ಇದೇ ಮಾರ್ಚ್ 15ರಂದು ಕಲಬುರಗಿ ಜಿಲ್ಲೆಯ ಕೆಳಕಂಡ ತಾಲೂಕುಗಳಿಗೆ ಭೇಟಿ ನೀಡಿ ಕಲಬುರಗಿ ಎಸಿಬಿ ಪೊಲೀಸ್ ಠಾಣಾ ಮಟ್ಟದ ಜನಸಂಪರ್ಕ ಸಭೆಗಳನ್ನು ನಡೆಸಲಿದ್ದಾರೆ ಎ.ಸಿ.ಬಿ. ಪೊಲೀಸ್ ಠಾಣೆಯ ಅರಕ್ಷಕ ಉಪಾಧೀಕ್ಷಕರಾದ ಸುಧಾ ಆದಿ ಅವರು ತಿಳಿಸಿದ್ದಾರೆ.
ಕಲಬುರಗಿ ಎ.ಸಿ.ಬಿ. ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಕಷ್ಣಪ್ಪ ಕಲ್ಲದೇವರು (ಮೊಬೈಲ್ ಸಂಖ್ಯೆ 9480806310) ಅವರು ಮಾರ್ಚ್ 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಫಜಲಪುರ ತಾಲೂಕಿನ ಆತನೂರ ನಾಡ ಕಚೇರಿ ಸಭಾಂಗಣದಲ್ಲಿ ಹಾಗೂ ಅಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಅಫಜಲಪುರ ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸುವರು. ಅದೇ ರೀತಿ ಕಲಬುರಗಿ ಎ.ಸಿ.ಬಿ. ಠಾಣೆಯ ಆರಕ್ಷಕ ಉಪಾಧೀಕ್ಷಕರಾದ ಸುಧಾ ಆದಿ (ಮೊಬೈಲ್ ಸಂಖ್ಯೆ 9480806240) ಹಾಗೂ ಪೊಲೀಸ್ ಇನ್ಸ್‍ಪೆಕ್ಟರ್ ಮಹ್ಮದ ಇಸ್ಮಾಯಿಲ್ (ಮೊಬೈಲ್ ಸಂಖ್ಯೆ 9480806309) ಅಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಚಿತ್ತಾಪುರ ತಾಲೂಕು ಪ್ರವಾಸ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸುವರು.

ಎಸ್.ಆರ್. ಇಂಟರ್ ನ್ಯಾಷನಲ್ ಶಾಲೆಯಲ್ಲಿ
*************************************
ಮಾಜಿ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ
***********************************
ಕಲಬುರಗಿ,ಮಾ.14.(ಕ.ವಾ.)-ಭಾರತೀಯ ಸೇನೆಗಳಾದ (ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳಲ್ಲಿ) ಸೇವೆ ಸಲ್ಲಿಸಿ ಬಿಡುಗಡೆಗೊಂಡಿರುವ/ ನಿವೃತ್ತಿ ಹೊಂದಿರುವ ಕಲಬುರಗಿ ಜಿಲ್ಲೆಯ ಮಾಜಿ ಸೈನಿಕರ ಒಂದು ಮಗುವಿಗೆ (ಮಕ್ಕಳು ಮತ್ತು ಮೊಮ್ಮಕ್ಕಳಿಗೆ) ಕಲಬುರಗಿ ಎಸ್.ಆರ್. ಇಂಟರ್ ನ್ಯಾಷನಲ್ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇಚ್ಛೆಯುಳ್ಳ ಮಾಜಿ ಸೈನಿಕರು ಎಸ್.ಆರ್. ಇಂಟರ್ ನ್ಯಾಷನಲ್ ಶಾಲೆ, # 151, ಭಾಗ್ಯವಂತಿ ನಗರ, ಮುಕ್ತಾ ಸಿನಿಮಾ ಹಾಲ್ ಹತ್ತಿರ, ಹೊಸ ಜೇವರ್ಗಿ ರೋಡ ಕಲಬುರಗಿ-585105ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಹೈಕೋರ್ಟ್ ಪೀಠದ ನ್ಯಾಯಮೂರ್ತಿಗಳಿಗೆ
************************************
ವಿದ್ಯುನ್ಮಾನ ಮತಯಂತ್ರ ಕಾರ್ಯನಿರ್ವಹಣೆ ಮಾಹಿತಿ
***********************************************
ಕಲಬುರಗಿ,ಮಾ.14(ಕ.ವಾ.)-ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಭಜಂತ್ರಿ, ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಪಿ.ಜಿ.ಎಂ. ಪಾಟೀಲ್ ಅವರಿಗೆ ಗುರುವಾರ ಕಲಬುರಗಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಯಂತ್ರಗಳ ಕಾರ್ಯ ನಿರ್ವಹಿಸುವ ಬಗ್ಗೆ ಮಾಹಿತಿ ನೀಡಲಾಯಿತು.
ವಿದ್ಯುನ್ಮಾನ ಮತಯಂತ್ರವು ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯುನಿಟ್ ಒಳಗೊಂಡಿದೆ. ಬ್ಯಾಲೆಟ್ ಯುನಿಟ್‍ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಹಾಗೂ ನೋಟಾ ಮತವನ್ನು ಅಳವಡಿಸಲಾಗಿರುತ್ತದೆ. ಕಂಟ್ರೋಲ್ ಯೂನಿಟ್‍ನಲ್ಲಿ ಅಭ್ಯರ್ಥಿಗಳಿಗೆ ಚಲಾಯಿಸಲಾಗುವ ಮತಗಳು ದಾಖಲಾಗುತ್ತವೆ ಜೊತೆಗೆ ಚುನಾವಣೆ ಪ್ರಾರಂಭವಾದ ಸಮಯ ಹಾಗೂ ಹಾಗೂ ಮುಕ್ತಾಯವಾದ ಸಮಯ ಕೂಡ ದಾಖಲಿಸಬಹುದಾಗಿದೆ ಎಂದು ವಿವರಿಸಲಾಯಿತು.
ಮತದಾರರು ಅಭ್ಯರ್ಥಿಗಳಿಗೆ ಬ್ಯಾಲೆಟ್ ಯುನಿಟ್ ನಿಂದ ಮತ ಚಲಾಯಿಸಿದಾಗ ವಿವಿಪ್ಯಾಟ್‍ನಲ್ಲಿ ಅಭ್ಯರ್ಥಿಯ ಹೆಸರು, ಪಕ್ಷದ ಚಿಹ್ನೆಯ ವಿವರಗಳು ಮುದ್ರಿತಗೊಂಡು 7 ಸೆಕೆಂಡುಗಳ ಕಾಲ ಪ್ರದರ್ಶಿಸಲ್ಪಡುತ್ತದೆ. ಇದರಿಂದ ಮತದಾರರು ತಾವು ಚಲಾಯಿಸಿದ ಮತ ತಮ್ಮ ಅಭ್ಯರ್ಥಿಯ ಖಾತೆಗೆ ಜಮೆ ಆಗಿದೆ ಎಂದು ದೃಢೀಕರಿಸಬಹುದು. ವಿವಿಪ್ಯಾಟ್‍ನಲ್ಲಿ ರಸೀದಿ ತುಂಡರಿಸಿ ಬಿದ್ದ ತಕ್ಷಣ ಕಂಟ್ರೋಲ್ ಯುನಿಟ್‍ನಲ್ಲಿ ಮತ ದಾಖಲಾಗುತ್ತದೆ. ಈ ಯಂತ್ರಗಳು ನಂಬಿಕೆಗೆ ಅರ್ಹವಾಗಿದ್ದು, ಮತದಾನದ ಗೌಪ್ಯತೆ ಕಾಪಾಡುವಲ್ಲಿ ಯಶಸ್ವಿಯಾಗಿವೆ ಎಂದು ವಿವರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟನ ಕಲಬುರಗಿ ಪೀಠದ ಅಸಿಸ್ಟೆಂಟ್ ರಿಜಿಸ್ಟ್ರಾರ್ ಜನರಲ್ ಕೆ.ಬಿ.ಅಸೂದೆÉ, ರಜಿಸ್ಟ್ರಾರ್ ಶ್ರೀನಿವಾಸ್ ಸುವರ್ಣ, ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ.ಪಿ., ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್, ಕಲಬುರಗಿ ಸಹಾಯಕ ಆಯುಕ್ತ ರಾಹುಲ್ ತುಕಾರಾಮ ಪಾಂಡ್ವೆ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಶಿಷ್ಠಾಚಾರ ತಹಸೀಲ್ದಾರ್ ಪ್ರಕಾಶ್ ಚಿಂಚೋಳಿಕರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಾರ್ಚ್ 15 ರಂದು ಗುಲಬರ್ಗಾ ವಿಶ್ವವಿದ್ಯಾಲಯದ 37ನೇ ಘಟಿಕೋತ್ಸವ:
****************************************************************
ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ
********************************************
ಕಲಬುರಗಿ,ಮಾ.14.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ 37ನೇ ಘಟಿಕೋತ್ಸವವು ಇದೇ ಮಾರ್ಚ್ 15 ರಂದು ನಡೆಯಲಿದ್ದು, ಅಂದು ಮೂವರು ಸಾಧಕರನ್ನು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಗುಲಬರ್ಗಾ ವಿಶ್ವದ್ಯಾಲಯದ ಕುಲಪತಿ ಪ್ರೋ.ಎಸ್.ಆರ್ ನಿರಂಜನ ಹೇಳಿದರು.
ಅವರು ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ರಾಧಾಕೃಷ್ಣ ಸಭಾಂಗಣದಲ್ಲಿ ಘಟಿಕೋತ್ಸವದ ಕುರಿತು ವಿವರ ನೀಡಲು ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬೀದರ ಜಿಲ್ಲೆಯ ಚಿದಂಬರ ಆಶ್ರಮದ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಹಾಗೂ ಪಂಡಿತ ವೀರಭದ್ರಪ್ಪ ಗಾದಗೆ ಅವರನ್ನು ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಗುವುದು. ಘಟಿಕೋತ್ಸವಕ್ಕೆ ಮುಖ್ಯ ಭಾಷಣಕಾರರಾಗಿ ಸಿಎಫ್‍ಟಿಆರ್‍ಐ ಮಾಜಿ ನಿರ್ದೇಶಕ ಪದ್ಮಶ್ರೀ ಪುರಸ್ಕøತ ಡಾ.ವಿ.ಪ್ರಕಾಶ ಆಗಮಿಸಲಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ ಒಟ್ಟಾರೆ 29183 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು. ಇದರಲ್ಲಿ 13,907 ಪುರುಷ ಹಾಗೂ 15,276 ಮಹಿಳಾ ವಿದ್ಯಾರ್ಥಿಗಳಿದ್ದಾರೆ. 76 ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಅರ್ಹರಾಗಿದ್ದು, 237 ವಿದ್ಯಾರ್ಥಿಗಳು ಪಿ.ಹೆಚ್.ಡಿ ಪದವಿ ಪಡೆಯಲಿದ್ದಾರೆ. 9 ವಿದ್ಯಾರ್ಥಿಗಳು ನಗದು ಬಹುಮಾನಕ್ಕೆ ಅರ್ಹರಿದ್ದರೆ, 28861 ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.
ಚಿನ್ನದ ಪದಕ ವಿಜೇತರಲ್ಲಿ ಅತಿ ಹೆಚ್ಚು 08 ಚಿನ್ನದ ಪದಕಗಳಿಗೆ ಭಾಜನರಾಗುವ ಮೂಲಕ ಕನ್ನಡ ಅಧ್ಯಯನ ವಿಭಾಗದ ವಿಧ್ಯಾರ್ಥಿನಿ ಶೈಲಾಜಾ ಶರಣಗೌಡ ಮತ್ತು ಮ್ಯಾನೇಜಮೆಂಟ್ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಅಂಕಿತಾ ಅವರು ಚಿನ್ನದ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ ಎಂದ ಕುಲಪತಿ ಪ್ರೋ ಎಸ್.ಆರ್.ನಿರಂಜನ ಘಟಿಕೋತ್ಸವದ ಯಶಸ್ವಿಗೆ ಒಟ್ಟು 18 ಸಮಿತಿಗಳನ್ನು ರಚಿಸಲಾಗಿದ್ದು, ಘಟಿಕೋತ್ಸವದ ಸಂಭ್ರಮಕ್ಕೆ ವಿಶ್ವವಿದ್ಯಾಲಯ ಸಜ್ಜಾಗಿದೆ ಎಂದರು.
ತಮ್ಮ ಅವಧಿಯಲ್ಲಿ ಮೌಲ್ಯಾಧಾರಿತ ಪಿ.ಹೆಚ್.ಡಿ. ಪದವಿ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿರುವ ಕಾರಣ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಪಿ.ಹೆಚ್.ಡಿ. ಪದವಿ ಪಡೆದಿರುವ ಸಂಖ್ಯೆ ಕಡಿಮೆಯಾಗಿದೆ. ಇದು ಮುಂದೆ ಇನ್ನು ಕಡಿಮೆಯಾದಲಿದೆ. ವಿಶ್ವವಿದ್ಯಾಲಯದ ಆರ್ಥಿಕ ಸುಧಾರಣೆಗೂ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಕೇವಲ 15 ದಿನಗಳಲ್ಲಿಯೆ ಕಾಲೇಜುಗಳಿಂದ 8 ಕೋಟಿ ರೂ. ವಿಶ್ವವಿದ್ಯಾಲಯ ಶುಲ್ಕ ವಸೂಲು ಮಾಡಲಾಗಿದೆ. ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿ ವೇತನಕ್ಕೆ ಮಾತ್ರ ಸರ್ಕಾರ ಅನುದಾನ ನೀಡುತ್ತಿದ್ದು, ಉಳಿದೆಲ್ಲ ಚಟುವಟಿಕೆಗಳಿಗೆ ಕಾಲೇಜುಗಳು ನೀಡುವ ಪರೀಕ್ಷಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕವನ್ನೆ ಅವಲಂಭಿಸಿದ್ದೇವೆ. ವಿಶ್ವವಿದ್ಯಾಲಯದಲ್ಲಿ ಭೌತಿಕ, ಡಿಜಿಟಲ್, ಬೌದ್ಧಿಕ ಗುಣಮಟ್ಟ ಇನ್ನಷ್ಟು ಉತ್ತಮಗೊಳಿಸಬೇಕಾದಲ್ಲಿ ಹೈ.ಕ.ಪ್ರದೇಶಾಭಿವೃದ್ಧಿ ಮಂಡಳಿಯಿಂದ ಉನ್ನತ ಶಿಕ್ಷಣಕ್ಕೆ ಶೇ.40ರಷ್ಟು ಅನುದಾನ ಮೀಸಲಿರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಸೋಮಶೇಖರ್, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎಂ.ಮದರಿ, ಹಣಕಾಸು ಅಧಿಕಾರಿ ಪ್ರೋ.ಲಕ್ಷ್ಮಣ ರಾಜನಾಳಕರ ಸೇರಿದಂತೆ ವಿವಿಧ ಅಧ್ಯಯನ ವಿಭಾಗದ ಮುಖ್ಯಸ್ಥರು ಇದ್ದರು.

ಹೀಗಾಗಿ ಲೇಖನಗಳು News Date: 14-3-2019
ಎಲ್ಲಾ ಲೇಖನಗಳು ಆಗಿದೆ News Date: 14-3-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 14-3-2019 ಲಿಂಕ್ ವಿಳಾಸ https://dekalungi.blogspot.com/2019/03/news-date-14-3-2019.html
0 Response to "News Date: 14-3-2019"
ಕಾಮೆಂಟ್ ಪೋಸ್ಟ್ ಮಾಡಿ