ಶೀರ್ಷಿಕೆ : News and Photos Date: 11--02--2019
ಲಿಂಕ್ : News and Photos Date: 11--02--2019
News and Photos Date: 11--02--2019
ವಿದ್ಯಾರ್ಥಿಗಳು ಒತ್ತಡಕ್ಕೊಳಗಾಗದೇ ಧೈರ್ಯದಿಂದ ಪರೀಕ್ಷೆ ಎದುರಿಸಲು ಸಲಹೆ
********************************************************************
ಕಲಬುರಗಿ,ಫೆ.11.(ಕ.ವಾ.)-ವಾರ್ಷಿಕ ಪರೀಕ್ಷೆಗಳಿಗೆ 10ನೇ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಬಳಲದೇ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ಸೋಮವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ ಭವನದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಾಲಾ ನೌಕರರ ಸಂಘ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕಲಬುರಗಿ ಜಿಲ್ಲೆಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಹಾಗೂ ಪರೀಕ್ಷಾ ಭಯ ನಿವಾರಣೆಗಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು 8, 9ನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಿದ ಹಾಗೆ ಭಯವಿಲ್ಲದೇ 10ನೇ ತರಗತಿಯ ಪರೀಕ್ಷೆಗಳನ್ನು ಸಹ ಎದುರಿಸಬೇಕು. ಮಾನಸಿಕ ಒತ್ತಡವೇ ಕಡಿಮೆ ಅಂಕ ಪಡೆಯಲು ಹಾಗೂ ಅನುತ್ತೀರ್ಣರಾಗಲು ಕಾರಣವಾಗಿದೆ. ವರ್ಷವಿಡೀ ಓದಿರುವ ವಿಷಯವನ್ನು ಪರೀಕ್ಷೆಯಲ್ಲಿ ಅಚ್ಚುಕಟ್ಟಾಗಿ ಬರೆಯಬೇಕು. ಪರೀಕ್ಷಾ ಸಮಯದಲ್ಲಿ ಗಲಿಬಿಲಿಗೊಳ್ಳದೇ ಮನಸ್ಸನ್ನು ಕೇಂದ್ರೀಕರಿಸಿ ಬರುವ ಉತ್ತರಗಳನ್ನು ಮೊದಲು ಬರೆದು ಬರದಂತಹ ಪ್ರಶ್ನೆಗಳಿಗೆ ನಿಧಾನವಾಗಿ ಆಲೋಚಿಸಿ ಬರೆದಲ್ಲಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದರು.
ಪರೀಕ್ಷೆಗಳು ನಾನಾ ವಿಧವಾದ ರೀತಿಯಲ್ಲಿರುತ್ತವೆ. ಇವುಗಳಿಗೆ ಸಿದ್ಧವಾಗಬೇಕಾದರೆ ಧನಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೀವನ 10ನೇ ತರಗತಿಯ ಅಂಕಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಬೇಕಾದರೆ ಧನಾತ್ಮಕ ಮನೋಭಾವ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ದಿನಪತ್ರಿಕೆಗಳನ್ನು ಓದುವ ರೂಢಿ ಬೆಳೆಸಿಕೊಳ್ಳಬೇಕು. ದಿನಪತ್ರಿಕೆಗಳು ಓದುವುದರಿಂದ ಸಾಮಾನ್ಯ ಜ್ಞಾನ ಹಾಗೂ ದಿನನಿತ್ಯದ ಆಗುಹೋಗುಗಳ ಜ್ಞಾನ ಹೆಚ್ಚಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವಿಧ್ಯೆ ಹಾಗೂ ಜ್ಞಾನವು ಯಾವುದೇ ಜಾತಿ, ಜನಾಂಗ, ಭಾಗಕ್ಕೆ ಸೀಮಿತವಾಗಿಲ್ಲ. ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರತಿಭೆಗಳು ಸಹ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಶಿಕ್ಷಕರು ಪ್ರತಿದಿನ ಮಕ್ಕಳೊಂದಿಗೆ ಸಮಾಲೋಚಿಸಿ ಹದಿಹರೆಯದಲ್ಲಿರುವ ತೊಂದರೆಗಳನ್ನು ನಿವಾರಿಸಲು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್.ನಿರಂಜನ್ ಮಾತನಾಡಿ, ಇಂದಿನ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ತುಂಬಾ ಅವಶ್ಯಕವಾಗಿದೆ. ಕಾರಣ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಶಕ್ತರನ್ನಾಗಿಸಬೇಕು. ಮಕ್ಕಳು ಭಯವಿಲ್ಲದೇ ಎಲ್ಲ ವಿಷಯಗಳನ್ನು ಮಾತನಾಡುವುದನ್ನು ಕಲಿಸಬೇಕು. ಇದಕ್ಕಾಗಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಬೇಕು. ವಿದ್ಯಾರ್ಥಿಗಳು ನಕಲು ಮಾಡದೇ ತಮ್ಮ ಸ್ವಂತಿಕೆಯನ್ನು ಪ್ರದರ್ಶಿಸಿ ಜೀವನದಲ್ಲಿ ಯಶಸ್ವಿಯಾಗಬೇಕು. ಇದಕ್ಕಾಗಿ ಕಠಿಣ ಪರಿಶ್ರಮ ಹಾಗೂ ಓದು ಮುಖ್ಯವಾಗಿದೆ. ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಹೆಚ್ಚಿಸಿ ದೇಶದ ತಂತ್ರಜ್ಞಾನ ಹಾಗೂ ದೇಶಕ್ಕಿರುವ ಸವಾಲುಗಳನ್ನು ನಿಭಾಯಿಸುವಲ್ಲಿ ತೊಡಗಲು ಪ್ರೇರೇಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ ರಾಜಾ, ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಸ್.ಪಿ. ಮೇಲಕೇರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೆಹಬೂಬ ಪಾಶಾ ಕಾರಟಗಿ, ಬೆಳ್ತÀಂಗಡಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಯಾಕೂಬ್ ಕೊಯ್ಯಾರು, ಕ್ರೈಸ್ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವೈ. ಬೆಟ್ಟದೂರ ಮತ್ತಿತರರು ಪಾಲ್ಗೊಂಡಿದ್ದರು.

ವೈದ್ಯರು ಮರಣ ಪ್ರಮಾಣಪತ್ರದಲ್ಲಿ ಮರಣಕ್ಕೆ ನಿಖರ ಕಾರಣ ನಮೂದಿಸಲು ಸಲಹೆ
***********************************************************************
ಕಲಬುರಗಿ,ಫೆ.11.(ಕ.ವಾ.)-ವೈದ್ಯಾಧಿಕಾರಿಗಳು ಶವ ಪರೀಕ್ಷೆ ಕೈಗೊಂಡು ಮರಣ ಪ್ರಮಾಣಪತ್ರ ನೀಡುವಾಗ ನಿಖರವಾಗಿ ಮರಣದ ಕಾರಣಗಳನ್ನು ನಮೂದಿಸಬೇಕು. ಇದರ ಆಧಾರದ ಮೇಲೆ ಮರಣ ಹೊಂದಿದವರಿಗೆ ಸರ್ಕಾರದ ಸೌಲಭ್ಯ ನೀಡುವುದು ಅವಲಂಬಿತವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸಲಹೆ ನೀಡಿದರು.
ಅವರು ಸೋಮವಾರ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಿಂದ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ ಬರೆಯುವ ಕುರಿತು ಎರಡು ದಿನಗಳ ಕಾಲ ವೈದ್ಯರಿಗಾಗಿ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗೀಯ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕೆಲವು ವೈದ್ಯರು ತಮ್ಮ ಶವ ಪರೀಕ್ಷೆ ವರದಿಯಲ್ಲಿ ನಿಖರವಾಗಿ ಮರಣದ ಕಾರಣ ನಮೂದಿಸುತ್ತಾರೆ. ಆದರೆ ಕೆಲವರು ಸ್ಪಷ್ಟ ಕಾರಣ ತಿಳಿಸದೇ ಗೊಂದಲಕ್ಕೆ ಎಡೆ ಮಾಡುತ್ತಾರೆ. ಈ ರೀತಿ ಮುಂದಿನ ದಿನಗಳಲ್ಲಿ ಆಗದಂತೆ ನೋಡಿಕೊಳ್ಳಲು ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಸಂಖ್ಯಾ ಸಂಗ್ರಹಣಾ ಇಲಾಖೆಯು ಮರಣದ ಜೊತೆಗೆ ಎಲ್ಲ ಮಾಹಿತಿ ಹಾಗೂ ಅಂಕಿ-ಸಂಖ್ಯೆಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಇದರ ಆಧಾರದ ಮೇಲೆ ಸರ್ಕಾರವು ಅವಶ್ಯಕ ಯೋಜನೆಗಳನ್ನು ರೂಪಿಸುತ್ತಾರೆ. ಕಾರಣ ಸರ್ಕಾರಕ್ಕೆ ಸಲ್ಲಿಸುವ ಅಂಕಿ-ಸಂಖ್ಯೆಗಳ ಡಾಟಾ ಬೇಸ್ ಸರಿಯಾಗಿರಬೇಕು. ಇಂದು ತಂತ್ರಜ್ಞಾನ ಎಷ್ಟೇ ಬೆಳೆದರೂ ಸಹ ನಿಖರವಾದ ಅಂಕಿ-ಸಂಖ್ಯೆಗಳನ್ನು ಹಾಗೂ ಮಾಹಿತಿಯನ್ನು ಸಂಗ್ರಹಿಸುವುದು ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ ಆರ್.ಸಿ.ಹೆಚ್. ಪೋರ್ಟಲ್ ಎಂಬ ನೂತನ ಸಾಫ್ಟವೇರ್ ಅಭಿವೃದ್ಧಿಯಾಗಿದ್ದು, ಇದರಲ್ಲಿ ತಾಯಿ ಮತ್ತು ಮಗುವಿನ ಎಲ್ಲ ವಿವರಗಳನ್ನು ನಮೂದಿಸಬೇಕಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ತಾಯಿ ಮರಣ ಹಾಗೂ ಶಿಶು ಮರಣ ಪ್ರಮಾಣ ಮತ್ತು ಕಾರಣಗಳನ್ನು ತಿಳಿಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಮ್ಸ್ ನಿರ್ದೇಶಕ ಉಮೇಶ ಎಸ್.ಆರ್. ಮಾತನಾಡಿ, ರೋಗಿಗಳು ಆಸ್ಪತ್ರೆಯಲ್ಲಿ ಅಥವಾ ಹೊರಗಡೆ ಮರಣ ಹೊಂದಿದ್ದಲ್ಲಿ ಅವರ ಪೂರ್ವ ಇತಿಹಾಸವನ್ನು ಅಧ್ಯಯನ ಮಾಡಬೇಕು. ಅವರಿಗಿರುವ ಚಟಗಳು, ರೋಗಗಳ ಆಧಾರದ ಮೇಲೆ ಹಾಗೂ ಶವ ಪರೀಕ್ಷೆಯಿಂದ ದೊರೆಯುವ ಮಾಹಿತಿಗಳ ಆಧಾರದ ಮೇಲೆ ಮರಣಕ್ಕೆ ನಿಖರವಾದ ಕಾರಣಗಳನ್ನು ತಿಳಿಸಲು ಸಾಧ್ಯವಾಗುತ್ತದೆ. ಮರಣ ಪ್ರಮಾಣಪತ್ರ ನೀಡುವಾಗ ವರದಿಯಲ್ಲಿ ನಿಖರವಾಗಿ ಮರಣದ ಕಾರಣಗಳನ್ನು ನಮೂದಿಸಿದರೆ ಎಲ್ಲರಿಗೂ ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ ಪ್ರಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಿಂದ ಸ್ವೀಕೃತವಾಗುವ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರಗಳ ಮಾಹಿತಿಯನ್ನು ಕ್ರೋಢೀಕರಿಸಿ ವಾರ್ಷಿಕ ವರದಿಯನ್ನು ಪ್ರಕಟಿಸಲಾಗುತ್ತದೆ. ಪ್ರತಿ ಮರಣಕ್ಕೆ ಸಂಬಂಧಿಸಿದಂತೆ ಮರಣ ಕಾರಣ ಮಾಹಿತಿಯ ಅಂಕಿ ಅಂಶಗಳ ಮಾಹಿತಿಯು ಸಾರ್ವಜನಿಕರ ಆರೋಗ್ಯ ಯೋಜಕರಿಗೆ, ಆಡಳಿತಗಾರರಿಗೆ ಹಾಗೂ ವೈದ್ಯಕೀಯ ಪ್ರವೃತ್ತರರಿಗೆ, ಸಂಶೋಧಕರಿಗೆ ಉಪಯುಕ್ತವಾಗುತ್ತದೆ. ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರದಲ್ಲಿ ವೈದ್ಯರು ಮರಣ ಕಾರಣದ ನಿರ್ದಿಷ್ಟ ಕಾಯಿಲೆಯನ್ನು ದಾಖಲಿಸದೇ ಇರುವುದರಿಂದ ಜಿಲ್ಲೆಯಲ್ಲಾಗುವ ಮರಣಗಳು ಮತ್ತು ಅದರ ಕಾರಣಗಳ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗುವುದು. ಅಲ್ಲದೇ ಮರಣಕ್ಕೆ ಕಾರಣವಾದ ರೋಗಕ್ಕೆ ಚಿಕಿತ್ಸೆಗಾಗಿ ಸಂಶೋಧನೆ ಕೈಗೊಳ್ಳಲು ಅನುಕೂಲವಾಗುವುದು. ಕಲಬುರಗಿ ವಿಭಾಗದ ಆರು ಜಿಲ್ಲೆಗಳ ಒಟ್ಟು 150 ವೈದ್ಯರುಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದ್ದು, ಇಂದು ಬೀದರ, ಕಲಬುರಗಿ ಹಾಗೂ ರಾಯಚೂರ ಜಿಲ್ಲೆಗಳ 75 ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಾಧವರಾವ ಕೆ. ಪಾಟೀಲ, ವೈದ್ಯರುಗಳಾದ ಡಾ. ಮಲ್ಲೇಶ, ಡಾ. ದೀಪಕ ಮತ್ತಿತರರು ಪಾಲ್ಗೊಂಡಿದ್ದರು.

ಜೆಸ್ಕಾಂ ಅಧಿಕಾರಿಗಳು ಪ್ರತಿ ತಿಂಗಳು
*********************************
ಗ್ರಾಹಕರ ಕುಂದುಕೊರತೆ ಸಭೆ ನಡೆಸಲು ಆಯೋಗ ಸೂಚನೆ
****************************************************
ಕಲಬುರಗಿ,ಫೆ.11.(ಕ.ವಾ.)-ಜೆಸ್ಕಾಂ ಅಧಿಕಾರಿಗಳು ಪತ್ರಿ ತಿಂಗಳಿಗೊಮ್ಮೆ ಗ್ರಾಹಕರ ಕೊಂದು ಕೊರತೆಯ ಸಭೆ ಕರೆದು ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಪ್ರತಿ ತಿಂಗಳು ಕೈಗೊಂಡ ಗ್ರಾಹಕರ ಸಭೆಯ ಮಾಹಿತಿಯನ್ನು ವೆಬ್ ಸೈಟ್‍ನಲ್ಲಿ ದಾಖಲಿಸಬೇಕೆಂದು ಕರ್ನಾಟಕ ವಿದ್ಯಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೀನಾ ಅವರು ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗದಲ್ಲಿ ಆಯೋಜಿಸಿದ ಕಲಬುರಗಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ 2017-18ನೇ ಸಾಲಿನ ಕಾರ್ಯನಿರ್ವಹಣೆ ಪರಿಶೀಲನೆ ಹಾಗೂ 2019-20ನೇ ಅವಧಿಯ ಕಂದಾಯ ಬೇಡಿಕೆ ಮತ್ತು ದರ ಪರಿಷ್ಕರಣೆ ಕುರಿತು ಸಾರ್ವಜನಿಕ ಅಹವಾಲುಗಳ ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರು ಸರಬರಾಜು ಮಂಡಳಿಯಿಂದ ಜೆಸ್ಕಾಂಗೆ ಬರಬೇಕಾಗಿರುವ 2 ಕೋಟಿ ರೂ.ಗಳು ಬಾಕಿ ಹಣವನ್ನು ಜೆಸ್ಕಾಂ ಅಧಿಕಾರಿಗಳು ಕೂಡಲೇ ಪಡೆಯಬೇಕು ಎಂದು ಸೂಚಿಸಿದರು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್. ರಾಗಪ್ರೀಯ ಮಾತನಾಡಿ, ಜೆಸ್ಕಾಂನಲ್ಲಿ 2019-20ನೇ ಸಾಲಿಗಾಗಿ ನಿರೀಕ್ಷಿಸುತ್ತಿರುವ 968.41 ಕೋಟಿ ರೂ.ಗಳ ಕಂದಾಯ ಕೊರತೆಯನ್ನು ಸರಿಪಡಿಸಲು ವಿದ್ಯಚ್ಛಕ್ತಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರಾವರಿ ಪಂಪ್‍ಸೆಟ್‍ಗಳು ಹಾಗೂ ಐಟಿ ಇಂಡಸ್ಟ್ರೀಗಳ ಗ್ರಾಹಕರನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಗ್ರಾಹಕರಿಂದ ಪ್ರತಿ ಯೂನಿಟ್‍ಗೆ 98ಪೈಸೆ ದರ ಹೆಚ್ಚಳ, ನೀರಾವರಿ ಪಂಪ್‍ಸೆಟ್‍ಗಳಿಂದ 1.35 ರೂ., ಐಟಿ ಇಂಡಸ್ಟ್ರೀಗಳಿಂದ 85 ಪೈಸೆ ದರಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಗ್ರಾಹಕರ ಸ್ನೇಹಿ ಉಪಕ್ರಮಗಳು, ಸುಧಾರಣೆ ಕೆಲಸಗಳು ಹಾಗೂ ಗ್ರಾಹಕರಿಗೆ ಒದಗಿಸುವ ಸೇವೆಗಳ ಗುಣಮಟ್ಟ ಸುಧಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹಾನಿ ತಡೆಯಲು ಅವಶ್ಯಕ ಕಡೆಗಳಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಸಲಾಗಿದೆ. ಸಮಗ್ರ ಇಂಧನ ಅಭಿವೃದ್ದಿ ಯೋಜನೆಯಡಿಯಲ್ಲಿ 158 ಸರ್ಕಾರಿ ಮತ್ತು ನಿಗಮದ ಕಚೇರಿಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. 11.75 ಲಕ್ಷ ಎಲ್.ಇ.ಡಿ. ದೀಪಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಪರಿವರ್ತಕಗಳ ದುರಸ್ತಿಗಾಗಿ 28 ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಅಧಿಕಾರಿಗಳು ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ವಿದ್ಯುಚ್ಛಕ್ತಿ ದರ ಹೆಚ್ಚಳ ಮಾಡಬಾರದು. ನಿರಂತರ ಜ್ಯೋತಿ ಯೋಜನೆ ಸರಿಯಾದ ರೀತಿಯಲ್ಲಿ ವಿದ್ಯುಚ್ಛಕ್ತಿ ಗ್ರಾಹಕರಿಗೆ ತಲುಪುತ್ತಿಲ್ಲ. ಜೆಸ್ಕಾಂನಿಂದ ಉಚಿತ ಸಹಾಯವಾಣಿ ಸಂಖ್ಯೆಗೆ ವಿದ್ಯುತ ನಿಲುಗಡೆಯಾದಾಗ ಕರೆ ಮಾಡಿದ್ದಲ್ಲಿ ಯಾರು ಸ್ವೀಕರಿಸುವುದಿಲ್ಲ. ಬೇರೆ ಬೇರೆ ಅನ್ಯ ಮಾರ್ಗಗಳಿಂದ ವಿದ್ಯುತ ಸೋರಿಕೆ ಆಗುವುದನ್ನು ಜೆಸ್ಕಾಂ ಅಧಿಕಾರಿಗಳು ತಡೆಯಬೇಕು. ವಿದ್ಯುತ ವ್ಯತ್ಯಯದ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕೆಟ್ಟು ಹೋಗಿರುವ ಟ್ರಾನ್ಸ್‍ಫಾರ್ಮರ್‍ಗಳನ್ನು ಬದಲಿಸಿ ಹೊಸ ಟ್ರಾನ್ಸ್‍ಫಾರ್ಮರ್‍ಗಳನ್ನು ಅಳವಡಿಸಬೇಕು ಎಂದು ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಕರ್ನಾಟಕ ವಿದ್ಯಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯ ಎಚ್.ಡಿ ಅರುಣ್ ಕುಮಾರ, ಎಚ್.ಎಂ ಮಂಜುನಾಥ, ಜೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಹೀರಾಸಿಂಗ್, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿ ಡಾ.ಪಾಂಡುರಂಗ ಬಿ.ನಾಯಕ, ಜಿ.ಕಲ್ಪನಾ, ಸಲಹಾ ಸಮಿತಿ ಸದಸ್ಯ ದೀಪಕ್ ಗಾಲಾ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿದ್ಯುತ್ ಗ್ರಾಹಕರಾದ ಅಪ್ಪರಾವ್, ಜಗದೇಶ, ಶಾಂತಗೌಡರು, ಭೀಮ್ ಶೇಖರ್, ಬಸ್ವಂತರಾವ, ಸಿದ್ದು ಸುಬೇದಾರ್, ಕಲ್ಯಾಣರಾವ, ಸುಭಾಷ ಚಂದ್ರ, ಉಮಾಪತಿ, ಚಂದ್ರಶೇಖರ ಸೇರಿದಂತೆ ಮತ್ತಿತರು ಅಹವಾಲುಗಳನ್ನು ಸಲ್ಲಿಸಿದರು.

ಫೆಬ್ರವರಿ 12ರಂದು ಶ್ರೀ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ
****************************************************************
ಕಲಬುರಗಿ,ಫೆ.11.(ಕ.ವಾ.)-ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಮಂಗಳವಾರ ಫೆಬ್ರವರಿ 12ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶ್ರೀ ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅಧÀ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ ಹಾಗೂ ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಡಾ|| ಅಜಯಸಿಂಗ್, ಎಮ್.ವಾಯ್. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಬಿ. ಮತ್ತಿಮೂಡ, ಖನೀಜ್ ಫಾತೀಮಾ ಹಾಗೂ ಸುಭಾಷ ಗುತ್ತೇದಾರ್ ವಿಶೇಷ ಆಹ್ವಾನಿತರಾಗಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ್ ಖರ್ಬಿಕರ್, ಕಲಬುರಗಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನರಸಿಂಹರಾವ್ ಆರ್.ಮೋತಕಪಲ್ಲಿ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಕಲಬುರಗಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ನಾಗಪ್ಪ ಟಿ. ಗೋಗಿ ಅವರು ವಿಶೇಷ ಉಪನ್ಯಾಸ ನೀಡುವರು.
ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪ್ರಾರಂಭವಾಗಿ ಡಾ. ಎಸ್.ಎಂ.ಪಂಡಿತ ರಂಗಮಂದಿರವರೆಗೆ ಶ್ರೀ ಸವಿತಾ ಮಹರ್ಷಿ ಅವರ ಭಾವಚಿತ್ರ ಮತ್ತು ವಿವಿಧ ಕಲಾ ಜಾನಪದ ಕಲಾ ತಂಡದ ಭವ್ಯ ಮೆರವಣಿಗೆ ಜರುಗುವುದು.

ಫೆಬ್ರವರಿ 15ರಂದು ಸಂತ ಶ್ರೀ ಸೇವಾಲಾಲರವರ ಜಯಂತ್ಯೋತ್ಸವ ಕಾರ್ಯಕ್ರಮ
**********************************************************************
ಕಲಬುರಗಿ,ಫೆ.11.(ಕ.ವಾ.)-ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಂತ ಶ್ರೀ ಸೇವಾಲಾಲ ಮಹಾರಾಜರವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಶುಕ್ರವಾರ ಫೆಬ್ರವರಿ 15ರಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂತ ಶ್ರೀ ಸೇವಾಲಾಲ ಮಹಾರಾಜ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಹಾರಾಷ್ಟ್ರ ಪೊಹರಾದೇವಿಯ ಡಾ. ಪರಮ ಪೂಜ್ಯ ರಾಮ್‍ರಾವ್ ಮಹಾರಾಜರು ದಿವ್ಯ ಸಾನಿಧ್ಯ ಹಾಗೂ ಬೆಡಸೂರ ಶ್ರೀ ಪೂಜ್ಯ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಮುಗುಳನಾಗಾಂವ ಶ್ರೀ ಪೂಜ್ಯ ಜೇಮಸಿಂಗ್ ಮಹಾರಾಜರು ಹಾಗೂ ಗೊಬ್ಬೂರವಾಡಿಯ ಶ್ರೀ ಪೂಜ್ಯ ಬಿಳಿರಾಮ ಮಹಾರಾಜರು ಹಾಗೂ ಕೆಸರಟಗಿ ಸುಕ್ಷೇತ್ರದ ಶ್ರೀ ಭಾಗ್ಯವಂತಿದೇವಿ ವರಪುತ್ರಿ ಮಾತಾ ಲತಾದೇವಿ ಅವರು ದಿವ್ಯ ಸಾನಿಧ್ಯವಹಿಸುವರು.
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅಧÀ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಡಾ|| ಅಜಯಸಿಂಗ್, ಎಮ್.ವಾಯ್. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಬಿ. ಮತ್ತಿಮೂಡ, ಖನೀಜ್ ಫಾತೀಮಾ ಹಾಗೂ ಸುಭಾಷ ಗುತ್ತೇದಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ್ ಖರ್ಬಿಕರ್, ಮಾಜಿ ಸಚಿವರು ಹಾಗೂ ಸಂತ ಶ್ರೀ ಸೇವಾಲಾಲ ಜಯಂತ್ಯೋತ್ಸವ ಸಮಿತಿ ಜಿಲ್ಲಾಧ್ಯಕ್ಷ ರೇವು ನಾಯಕ್ ಬೆಳಮಗಿ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಕಲಬುರಗಿ ನ್ಯಾಯವಾದಿ ಸುಭಾಷ್ ರಾಠೋಡ ಅವರು ವಿಶೇಷ ಉಪನ್ಯಾಸ ನೀಡುವರು.
ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ನಗರದ ನೆಹರು ಬಾಲವಿಕಾಸ ಮಂದಿರದಿಂದ ಪ್ರಾರಂಭವಾಗಿ ಸುಪರ ಮಾರ್ಕೇಟ್ ಮಾರ್ಗವಾಗಿ ಜಗತ್ ಮೂಲಕ ಡಾ. ಎಸ್.ಎಂ.ಪಂಡಿತ ರಂಗಮಂದಿರವರೆಗೆ ಸಂತ ಶ್ರೀ ಸೇವಾಲಾಲರವರ ಭಾವಚಿತ್ರ ಮತ್ತು ವಿವಿಧ ಕಲಾ ಜಾನಪದ ಕಲಾ ತಂಡದ ಭವ್ಯ ಮೆರವಣಿಗೆ ಜರುಗುವುದು.

ಫೆಬ್ರವರಿ 12ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಫೆ.11.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಉಪ ವಿತರಣಾ ಕೇಂದ್ರದಿಂದ 33/11 ಕೆ.ವಿ. ಹಡಗಿಲ್ ಹಾರೂತಿ ಕೇಂದ್ರದಲ್ಲಿ ಹೈಕೋರ್ಟ್ 33/11 ಕೆ.ವಿ. ಜಿಆಯ್ ಸಬ್ ಸ್ಟೇಶನ್ ಲೈನ್‍ನಲ್ಲಿ ಕಾರ್ಯಕೈಗೊಂಡಿರುವ ಪ್ರಯುಕ್ತ 2019ರ ಫೆಬ್ರವರಿ 12ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸದರಿ ಉಪವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಹಡಗಿಲ್ ಹಾರೂತಿ ವಿತರಣಾ ಕೇಂದ್ರ: ಎಫ್-5 ಶರಣ ಶಿರಸಗಿ ಎನ್‍ಜೆವಾಯ್ ಹಾಗೂ ಎಫ್-6 ಬಬಲಾದ ಐಪಿ.

ಹೀಗಾಗಿ ಲೇಖನಗಳು News and Photos Date: 11--02--2019
ಎಲ್ಲಾ ಲೇಖನಗಳು ಆಗಿದೆ News and Photos Date: 11--02--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photos Date: 11--02--2019 ಲಿಂಕ್ ವಿಳಾಸ https://dekalungi.blogspot.com/2019/02/news-and-photos-date-11-02-2019.html

0 Response to "News and Photos Date: 11--02--2019"
ಕಾಮೆಂಟ್ ಪೋಸ್ಟ್ ಮಾಡಿ