ಶೀರ್ಷಿಕೆ : ಮತ್ತೆ ಮತ್ತೆ ಬೇಕೆನಿಸುತ್ತದೆ
ಲಿಂಕ್ : ಮತ್ತೆ ಮತ್ತೆ ಬೇಕೆನಿಸುತ್ತದೆ
ಮತ್ತೆ ಮತ್ತೆ ಬೇಕೆನಿಸುತ್ತದೆ
ಪ್ರವೀಣಕುಮಾರ್ ಗೋಣಿ
ಸುಖಾಸುಮ್ಮನೆ ಕಾಲವಲ್ಲದ
ಕಾಲದೊಳಗೆ ಸುರಿದು
ಸುಮ್ಮನಾಗುವ ಮಳೆಯಂತೆ
ವಿನಾಕಾರಣ ಕಂಗಳೊದ್ದೆಯಾಗುವಾಗ
ನಿನ್ನ ಅಂಗೈಯ ಬಿಸಿಯನ್ನ ಕೆನ್ನೆ ಬಯಸುತ್ತದೆ .
ಜಿಗಿ ಜಿಗಿಯೆನಿಸುವ ನಗರವೆನ್ನುವ
ನಾಗಾಲೋಟದ ಜಾತ್ರೆಯು
ಸಾಕೆನಿಸಿ ಒಬ್ಬಂಟಿಯಾಗಿ
ತಿರುಗಿ ಬರಲು ದಾರಿಯೇ ಇರದ
ದುರ್ಗಮ ಕಾಡೊಳಗೆ ಕಳೆದುಹೋಗಿಬಿಡಬೇಕೆನ್ನುವ
ಕಾಂಕ್ಷೆ ಕಾಡಿದಾಗಲೆಲ್ಲ ನನ್ನಯ
ಕಿರುಬೆರಳು ನಿನ್ನ ಹಸ್ತದ ಕೊಂಡಿಗೆ ಕಾತರಿಸುತ್ತದೆ .
ಹುಲ್ಲು ಹಾಸಿನ ಮೇಲೆ ಬೆನ್ನ ಚೆಲ್ಲಿಸುಖಾಸುಮ್ಮನೆ ಕಾಲವಲ್ಲದ
ಕಾಲದೊಳಗೆ ಸುರಿದು
ಸುಮ್ಮನಾಗುವ ಮಳೆಯಂತೆ
ವಿನಾಕಾರಣ ಕಂಗಳೊದ್ದೆಯಾಗುವಾಗ
ನಿನ್ನ ಅಂಗೈಯ ಬಿಸಿಯನ್ನ ಕೆನ್ನೆ ಬಯಸುತ್ತದೆ .
ಜಿಗಿ ಜಿಗಿಯೆನಿಸುವ ನಗರವೆನ್ನುವ
ನಾಗಾಲೋಟದ ಜಾತ್ರೆಯು
ಸಾಕೆನಿಸಿ ಒಬ್ಬಂಟಿಯಾಗಿ
ತಿರುಗಿ ಬರಲು ದಾರಿಯೇ ಇರದ
ದುರ್ಗಮ ಕಾಡೊಳಗೆ ಕಳೆದುಹೋಗಿಬಿಡಬೇಕೆನ್ನುವ
ಕಾಂಕ್ಷೆ ಕಾಡಿದಾಗಲೆಲ್ಲ ನನ್ನಯ
ಕಿರುಬೆರಳು ನಿನ್ನ ಹಸ್ತದ ಕೊಂಡಿಗೆ ಕಾತರಿಸುತ್ತದೆ .
ತಾಕುವ ತಂಗಾಳಿಗೆ ಎದೆಯೊಡ್ಡಿ
ಕಣ್ಣು ತೆರೆದಷ್ಟು ವಿಶಾಲವಾದ
ಆಗಸಕ್ಕೆ ಹೃದಯವನ್ನರ್ಪಿಸಿ
ದಂಡಿಯಾಗಿ ಮಿನುಗುವ
ನಕ್ಷತ್ರಗುಚ್ಛಗಳನ್ನ ಎಣಿಸುತ್ತ ರಾತ್ರಿ
ಕಳೆದುಬಿಡಬೇಕೆನ್ನುವ ತವಕ ಕಾಡಿದಾಗಲೆಲ್ಲ
ಪಕ್ಕದಲ್ಲಿ ನಿನ್ನ ಬಿಸಿಯುಸಿರಿನ ಪುಳಕಕ್ಕೆ
ಮನಸು ಹಾತೊರೆದು ಹಣ್ಣಾಗಿ ಹೋಗುತ್ತದೆ .
ಪ್ರವೀಣಕುಮಾರ್ ಗೋಣಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಹೀಗಾಗಿ ಲೇಖನಗಳು ಮತ್ತೆ ಮತ್ತೆ ಬೇಕೆನಿಸುತ್ತದೆ
ಎಲ್ಲಾ ಲೇಖನಗಳು ಆಗಿದೆ ಮತ್ತೆ ಮತ್ತೆ ಬೇಕೆನಿಸುತ್ತದೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮತ್ತೆ ಮತ್ತೆ ಬೇಕೆನಿಸುತ್ತದೆ ಲಿಂಕ್ ವಿಳಾಸ https://dekalungi.blogspot.com/2019/02/blog-post_11.html
0 Response to "ಮತ್ತೆ ಮತ್ತೆ ಬೇಕೆನಿಸುತ್ತದೆ"
ಕಾಮೆಂಟ್ ಪೋಸ್ಟ್ ಮಾಡಿ