ಶೀರ್ಷಿಕೆ : ಅದೆಷ್ಟೋ ಸಲ !
ಲಿಂಕ್ : ಅದೆಷ್ಟೋ ಸಲ !
ಅದೆಷ್ಟೋ ಸಲ !
ಪ್ರವೀಣಕುಮಾರ್ ಗೋಣಿ
ನಿಗಿ ನಿಗಿ ನಿಡುಸೊಯ್ಯುವ
ಸಂಕಟಕ್ಕೆ ಮೌನವೊಂದೇ
ಸಾಂತ್ವನದ ಸಾನಿಧ್ಯ
ಕೊಡುವಾಗ ಮತ್ಯಾಕೆ
ಬೇಕಾಗಿತು ಮಾತಿನಾ ಗೊಡವೆ ?
ಎದೆಯ ಹೊಲದ ಮೇಲೆ
ನರಳಿಕೆಯ ಗರಿಕೆಯೇ
ಪೊಗಸ್ತಾಗಿ ಹಬ್ಬಿರಲು
ಹರುಷದ ಹೂವರಳಿಸುವ
ಕಾಯಕವದು ಅದೆಷ್ಟು ಯಾತನೆಯದು
ಬಲ್ಲವರಷ್ಟೇ ಬಲ್ಲರು !
ಮಗ್ಗುಲು ಬದಲಿಸುವ
ಬದುಕಿಗಾಗೇ ಕಾಯ್ದು
ಕುಳಿತವನ ಹೃದಯದ
ಸಹನದೆದುರು ಮತ್ತೊಂದು
ತಾಳ್ಮೆ ಇರಲಾರದೇನೋ ?
ಭಯ ಅರಳಿಸುವ
ಬವಣೆಗಳ ಮರೆಯುತ್ತ
ಅಭಯ ಚಾಚುವ
ಅಗೋಚರ ಹಸ್ತಗಳ ಹುಡುಕುತ್ತ
ಸಾಗುವ ಹಾದಿಯೇ
ಬದುಕು ಎನಿಸಿಬಿಡುವುದು ಅದೆಷ್ಟೋ ಸಲ !
ಪ್ರವೀಣಕುಮಾರ್ ಗೋಣಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಹೀಗಾಗಿ ಲೇಖನಗಳು ಅದೆಷ್ಟೋ ಸಲ !
ಎಲ್ಲಾ ಲೇಖನಗಳು ಆಗಿದೆ ಅದೆಷ್ಟೋ ಸಲ ! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅದೆಷ್ಟೋ ಸಲ ! ಲಿಂಕ್ ವಿಳಾಸ https://dekalungi.blogspot.com/2019/01/blog-post.html
0 Response to "ಅದೆಷ್ಟೋ ಸಲ !"
ಕಾಮೆಂಟ್ ಪೋಸ್ಟ್ ಮಾಡಿ