ಶೀರ್ಷಿಕೆ : News Date: 05--01--2019
ಲಿಂಕ್ : News Date: 05--01--2019
News Date: 05--01--2019
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪ್ರವಾಸ
*********************************************
ಕಲಬುರಗಿ,ಜ.05.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಡಾ. ಜಯಮಾಲ ಅವರು ಹೈದ್ರಾಬಾದ್‍ದಿಂದ ರಸ್ತೆ ಮೂಲಕ ಇದೇ ಜನವರಿ 6ರಂದು ಮಧ್ಯಾಹ್ನ 12.40 ಗಂಟೆಗೆ ಕಲಬುರಗಿಗೆ ಆಗಮಸುವರು.
ನಂತರ ಅಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿ ಸೇಡಂ ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾದ ಅಖಿಲ ಕರ್ನಾಟಕ ಹೇಮರಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ನಂತರ ಸಂಜೆ 5 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.

ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
*******************************************
ಕಲಬುರಗಿ,ಜ.05.(ಕ.ವಾ.)-ಅತ್ಯುನ್ನತ ಸೇವೆಗೈದ/ಸಾಧನೆಗೈದ, ಸರ್ಕಾರದ ಕೆಲಸದಲ್ಲಿ ವಿನೂತನ ಪದ್ಧತಿ, ನಾಗರಿಕ ಸ್ನೇಹಿ, ಗುಣಾತ್ಮಕ, ಭ್ರಷ್ಟಾಚಾರ ರಹಿತ ಮತ್ತು ಚಲನಶೀಲ ಆಡಳಿತ ನೀಡಿದ ಆರು ಜನ ಅರ್ಹ ರಾಜ್ಯ ಸರ್ಕಾರಿ ನೌಕರರಿಂದ 2018-19ನೇ ಸಾಲಿನ “ಸರ್ವೋತ್ತಮ ಸೇವಾ ಪ್ರಶಸ್ತಿ”ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶ ದಿನಾಂಕ: 08-08-2018ರನ್ವಯ ಪ್ರತಿ ವರ್ಷ ಜನವರಿ 26ರಂದು ಪ್ರಶಸ್ತಿ ನೀಡಲಾಗುವುದು. ಇದರಲ್ಲಿ ಪತ್ರಾಂಕಿತ ವೃಂದ-Iರಲ್ಲಿ ಇಬ್ಬರನ್ನು, ಪತ್ರಾಂಕಿತ ವೃಂದ-IIರಲ್ಲಿ ಇಬ್ಬರನ್ನು ಹಾಗೂ ಗ್ರೂಪ್ ‘ಸಿ’ ರಲ್ಲಿ ಇಬ್ಬರನ್ನು ಈ ಸಂಬಂಧ ಸರ್ಕಾರವು ನಿಗಪಡಿಸಿದ ಮಾನದಂಡಗಳಿಗನುಗುಣವಾಗಿ ಅರ್ಹ ನೌಕರರು ತಮ್ಮ ನಾಮ ನಿರ್ದೇಶನಗಳನ್ನು ನಿಗದಿತ ನಮೂನೆ-2ರಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ 2019ರ ಜನವರಿ 19ರ ಸಂಜೆ 5.30 ಗಂಟೆಯೊಳಗಾಗಿ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಎ.ಸಿ.ಬಿ. ಅಧಿಕಾರಿಗಳಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ
**********************************************************
ಕಲಬುರಗಿ,ಜ.05.(ಕ.ವಾ)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ, ಚಿತ್ತಾಪುರ, ಆಳಂದ, ಅಫಜಲಪುರ, ಜೇವರ್ಗಿ, ಕಾಳಗಿ, ಯಡ್ರಾಮಿ, ಕಲಬುರಗಿ, ಕಮಲಾಪುರಗಳಲ್ಲಿ ಜನವರಿ ಮಾಹೆಯಲ್ಲಿ ಈ ಕೆಳಕಂಡ ದಿನಾಂಕಗಳಂದು ಪ್ರತಿದಿನ ಬೆಳಗಿನ 11 ರಿಂದ ಸಂಜೆ 4 ಗಂಟೆಯವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಡಿ.ಎಸ್.ಪಿ. ಯವರಾದ ವಿರೇಶ ಅವರು ತಿಳಿಸಿದ್ದಾರೆ.
ಕಲಬುರಗಿ ಎ.ಸಿ.ಬಿ. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಹ್ಮದ್ ಇಸ್ಮಾಯಿಲ್ ಅವರು ಜನವರಿ 7ರಂದು ಚಿಂಚೋಳಿ ತಾಲೂಕು ಪ್ರವಾಸಿ ಮಂದಿರದಲ್ಲಿ, ಜನವರಿ 9ರಂದು ಸೇಡಂ ತಾಲೂಕು ಪ್ರವಾಸಿ ಮಂದಿರದಲ್ಲಿ, ಜನವರಿ 11ರಂದು ಆಳಂದ ತಾಲೂಕು ಪ್ರವಾಸಿ ಮಂದಿರದಲ್ಲಿ, ಜನವರಿ 17ರಂದು ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ, ಜನವರಿ 19ರಂದು ಕಲಬುರಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಅವರ ಮೊಬೈಲ್ ಸಂಖ್ಯೆ 9480806309 ಇರುತ್ತದೆ.

ಕಲಬುರಗಿ ಎ.ಸಿ.ಬಿ. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ ಕಲ್ಲದೇವರು ಅವರು ಜನವರಿ 10ರಂದು ಚಿತ್ತಾಪುರ ತಾಲೂಕು ಪ್ರವಾಸಿ ಮಂದಿರದಲ್ಲಿ, ಜನವರಿ 14ರಂದು ಅಫಜಲಪುರ ತಾಲೂಕು ಪ್ರವಾಸಿ ಮಂದಿರದಲ್ಲಿ, ಜನವರಿ 16ರಂದು ಜೇವರ್ಗಿ ತಾಲೂಕು ಪ್ರವಾಸಿ ಮಂದಿರದಲ್ಲಿ, ಜನವರಿ 18ರಂದು ಯಡ್ರಾಮಿ ತಾಲೂಕು ಪ್ರವಾಸಿ ಮಂದಿರದಲ್ಲಿ, ಜನವರಿ 21ರಂದು ಕಮಲಾಪುರ ತಾಲೂಕು ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಅವರ ಮೊಬೈಲ್ ಸಂ. 9480806310 ಇರುತ್ತದೆ.
ಜನವರಿ 19ರಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ
**************************************************
ಕಲಬುರಗಿ,ಜ.05.(ಕ.ವಾ)-ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ 14ನೇ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯು ಇದೇ ಜನವರಿ 19 ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿಯ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜರುಗಲಿದೆ.
ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪ್ರತಿನಿಧಿ ಅಧಿಕಾರಿಗಳನ್ನು ಸಭೆಗೆ ಕಳುಹಿಸದೇ ತಾವು ಈ ಸಭೆಗೆ ಖುದ್ದಾಗಿ ಹಾಜರಾಗಬೇಕು. ಯಾವುದೇ ಇಲಾಖೆಯ ಅಧಿಕಾರಿಗಳು ರಜೆ ಮೇಲೆ ಅಥವಾ ಸಭೆಗೆ ತೆರಳಬೇಕಾದ್ದಲ್ಲಿ ಅಧ್ಯಕ್ಷರ ಅನುಮತಿ ಪಡೆದುಕೊಂಡು ಹೋಗಬೇಕೆಂದು ಅವರು ಅವರು ಸೂಚಿಸಿದ್ದಾರೆ.
ಅದೇ ರೀತಿ ಈ ಹಿಂದೆ 2018ರ ಡಿಸೆಂಬರ್ 22 ರಂದು ನಿಗದಿಪಡಿಸಲಾಗಿದ್ದ 14ನೇ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತೆಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಅವರು ತಿಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ
********************************
ರಾಗಿ-ಬಿಳಿಜೋಳ ಖರೀದಿಗಾಗಿ ಕಲಬುರಗಿ ತಾಲೂಕಿನಲ್ಲಿ
*************************************************
ಒಂದು ಖರೀದಿ ಕೇಂದ್ರ ಸ್ಥಾಪನೆ
***************************
ಕಲಬುರಗಿ.ಜ.05.(ಕ.ವಾ.)-ಪ್ರಸಕ್ತ 2018-19ನೇ ಸಾಲಿನ ಮುಂಗಾರು (ಖಾರೀಫ್) ಋತುವಿನಲ್ಲಿ ಕಲಬುರಗಿ ತಾಲೂಕಿನ ರೈತರು ಬೆಳೆದ ರಾಗಿ ಮತ್ತು ಬಿಳಿಜೋಳವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ರಾಗಿ ಮತ್ತು ಬಿಳಿ ಜೋಳವನ್ನು ಖರೀದಿಗಾಗಿ ಕಲಬುರಗಿ ತಾಲೂಕಿಗೆ ಸಂಬಂಧಿಸಿದಂತೆ ಕಲಬುರಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ.) ದಲ್ಲಿ ಒಂದು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಲಬುರಗಿ ತಹಶೀಲ್ದಾರ ಅಶೋಕ ಹಿರೋಳೆ ಅವರು ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಉತ್ತಮ ಗುಣಮಟ್ಟದ ರಾಗಿಯನ್ನು ಪ್ರತಿ ಕ್ವಿಂಟಲ್‍ಗೆ 2897 ರೂ. ಗಳಂತೆ ಹಾಗೂ ಬಿಳಿಜೋಳ ಪ್ರತಿ ಕ್ವಿಂಟಲ್‍ಗೆ 2450 ರೂ.ಗಳ ದರವನ್ನು ನಿಗದಿಪಡಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ 2019ರ ಜನವರಿ 15ರವರೆಗೆ ರೈತರ ನೋಂದಣಿ ಮಾಡಲಾಗುವುದು. ರೈತರಿಂದ 2019ರ ಜನವರಿ 1 ರಿಂದ ಮಾರ್ಚ್ 31ರವರೆಗೆ ರಾಗಿ ಮತ್ತು ಬಿಳಿಜೋಳವನ್ನು ಖರೀದಿಸಲಾಗುವುದು. ಪ್ರತಿಯೊಬ್ಬ ರೈತರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಮತ್ತು ಬಿಳಿಜೋಳ (ಮಾಲ್ದಂಡಿ) ಮಾರಾಟ ಮಾಡಲು ಖರೀದಿ ಕೇಂದ್ರಗಳಲ್ಲಿ ಮೊದಲು ನೊಂದಾಯಿಸಿಕೊಳ್ಳಬೇಕು.
ನೊಂದಾಯಿಸಿಕೊಂಡ ಸಣ್ಣ ಮತ್ತು ಅತೀ ಸಣ್ಣ ಪ್ರತಿ ಒಬ್ಬ ರೈತರಿಂದ ಮಾತ್ರ ಗರಿಷ್ಠ 75 ಕ್ವಿಂಟಾಲ್ ರಾಗಿ ಮತ್ತು ಪ್ರತಿ ಒಬ್ಬ ರೈತರಿಂದ ಪ್ರತಿ ಎಕರೆಗೆ 06 ಕ್ವಿಂಟಲ್ ಬಿಳಿಜೋಳ (ಮಾಲ್ದಂಡಿ) ವನ್ನು 2019ರ ಮಾರ್ಚ್ 31ರವರೆಗೆ ಖರೀದಿಸಲಾಗುವುದು. ರೈತರು ಸರಬರಾಜು ಮಾಡುವ ರಾಗಿ ಮತ್ತು ಬಿಳಿಜೋಳ (ಮಾಲ್ದಂಡಿ) ಗುಣಮಟ್ಟವನ್ನು ಗುಣಮಟ್ಟ ಪರಿವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುವುದು. ರೈತರಿಂದ ಖರೀದಿಸುವ ರಾಗಿ ಮತ್ತು ಬಿಳಿಜೋಳ (ಮಾಲ್ದಂಡಿ) ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಆರ್.ಟಿ.ಜಿ.ಎಸ್./ ಎನ್.ಇ.ಎಫ್.ಟಿ. (ಖಖಿಉS /ಓಇಈಖಿ) ಮೂಲಕ ಪಾವತಿಸಲಾಗುವುದು.
ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್, ಆರ್.ಟಿ.ಸಿ. (ಪಹಣಿ), ಇತ್ತೀಚೆಗೆ ರಾಷ್ಟ್ರೀಕೃತ/ಶೆಡ್ಯೂಲ್ಡ್ ಬ್ಯಾಂಕ್‍ನಲ್ಲಿ ತೆರೆದ ಬ್ಯಾಂಕ್ ಅಕೌಂಟ್ ಖಾತೆ ಸಂಖ್ಯೆ, ಫೋಟೊ ಮತ್ತು ಐ.ಎಫ್.ಎಸ್.ಸಿ. ಕೋಡ್ ಹೊಂದಿರುವ ಪಾಸ್ ಬುಕ್‍ನ ಪ್ರತಿ, ಮೊಬೈಲ್ ಸಂಖ್ಯೆಯೊಂದಿಗೆ ಅವಶ್ಯವಿದ್ದಲ್ಲಿ ರದ್ದಾದ ಮೂಲ ಚೆಕ್ ಪ್ರತಿಯೊಂದಿಗೆ ಖರೀದಿ ಕೇಂದ್ರಗಳಿಗೆ ಬಂದು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮಧ್ಯವರ್ತಿಗಳು / ಏಜೆಂಟರ್‍ಗಳು ಖರೀದಿ ಕೇಂದ್ರಗಳಿಗೆ ರಾಗಿ ಮತ್ತು ಬಿಳಿಜೋಳ ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಕಡ್ಡಾಯ
********************************************************************
ಕಲಬುರಗಿ.ಜ.05.(ಕ.ವಾ.)-ಪ್ರಸಕ್ತ 2018-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳು ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಕೆಲವು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ತಮ್ಮ ಆಧಾರ್ ಜೋಡಣೆ ಮಾಡುವ ಬದಲು ಪಾಲಕರ ಆಧಾರ ಸಂಖ್ಯೆ ಜೋಡಣೆ ಮಾಡಿದ್ದು, ಇದರಿಂದ ಸಕಾಲದಲ್ಲಿ ಆಯಾ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿ ವೇತನ ಜಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ತಮ್ಮ ಬ್ಯಾಂಕ್ ಖಾತೆಗೆ ತಮ್ಮ ಆಧಾರ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ವಿದ್ಯಾರ್ಥಿಗಳ ಆಧಾರ ಸಂಖ್ಯೆ ಜೋಡಣೆ ಮಾಡದೇ ಇದ್ದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆಯುವುದಿಲ್ಲ. ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ ಪಾಲಕರು/ಪೋಷಕರು ತಕ್ಷಣವೇ ತಮ್ಮ ಮಕ್ಕಳ ಬ್ಯಾಂಕ ಖಾತೆಗೆ ಮಕ್ಕಳ ಆಧಾರ ಸಂಖ್ಯೆಯನ್ನು ಜೋಡಣೆ ಮಾಡಬೇಕು. ಇಲ್ಲದಿದ್ದಲ್ಲಿ ವಿದ್ಯಾರ್ಥಿ ವೇತನ ಪಡೆಯುವಲ್ಲಿ ಆಗುವ ತೊಂದರೆಗಳಿಗೆ ಸಂಬಂಧಿಸಿದ ಪಾಲಕ/ಪೋಷಕರೇ ಜವಾಬ್ದಾರರಾಗುವುರೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಲೇಖನಗಳು News Date: 05--01--2019
ಎಲ್ಲಾ ಲೇಖನಗಳು ಆಗಿದೆ News Date: 05--01--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 05--01--2019 ಲಿಂಕ್ ವಿಳಾಸ https://dekalungi.blogspot.com/2019/01/news-date-05-01-2019.html
0 Response to "News Date: 05--01--2019"
ಕಾಮೆಂಟ್ ಪೋಸ್ಟ್ ಮಾಡಿ