News And Photo Date: 31---12--2018

News And Photo Date: 31---12--2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News And Photo Date: 31---12--2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News And Photo Date: 31---12--2018
ಲಿಂಕ್ : News And Photo Date: 31---12--2018

ಓದಿ


News And Photo Date: 31---12--2018

ಸಂಶಯಾಸ್ಪದ ಕ್ಷಯರೋಗಿಗಳ ಕಫ ಪರಿಣಾಮಕಾರಿಯಾಗಿ ಪರೀಕ್ಷಿಸಲು ಸೂಚನೆ
*********************************************************************
ಕಲಬುರಗಿ,ಡಿ.31.(ಕ.ವಾ.)-ಜಿಲ್ಲೆಯಾದ್ಯಂತ 2019ರ ಜನವರಿ 2 ರಿಂದ ಹಮ್ಮಿಕೊಂಡಿರುವ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಸಂಶಯಾಸ್ಪದ ಕ್ಷಯರೋಗಿಗಳ ಕಫವನ್ನು ಪರಿಣಾಮಕಾರಿಯಾಗಿ ಪಡೆದು ಪರೀಕ್ಷಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಸಕ್ರಿಯ ಕ್ಷಯರೋಗ ಪ್ರಕರಣಗಳ ಪತ್ತೆ ಮಾಸಾಚರಣೆ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣಗಳು ಹೆಚ್ಚಿಗೆ ಇರುವ ಸಂಭವಗಳಿದ್ದು, ಕ್ಷಯರೋಗ ಪ್ರಕರಣಗಳು ಪರಿಣಾಮಕಾರಿಯಾಗಿ ಪತ್ತೆಯಾಗದಿರುವುದು ಅಸಮಾಧಾನಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕ್ಷಯರೋಗ ಹೆಚ್ಚಿಗೆ ಕಾಣಿಸಿಕೊಳ್ಳುವ ಹಾಗೂ ಕ್ಷಯರೋಗಿಗಳಿರುವ ಸಮುದಾಯ, ಪ್ರದೇಶ ಹಾಗೂ ಗ್ರಾಮಗಳ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಕ್ಷಯರೋಗ ಪತ್ತೆಗಾಗಿ ಹಾಗೂ ಚಿಕಿತ್ಸೆಗಾಗಿ ವಿವರಣಾತ್ಮಕ ಯೋಜನೆ ರೂಪಿಸಿ ಸಂಶಯಾಸ್ಪದ ಕ್ಷಯರೋಗಿಗಳಿಂದ ನಿಗದಿತ ಸಮಯದಲ್ಲಿ ಕಫ ಪಡೆಯಬೇಕಾಗುತ್ತದೆ. ಆರೋಗ್ಯ ಕಾರ್ಯಕರ್ತರು ಈ ಸಮಯದಲ್ಲೇ ಕಫ ಪಡೆದು ಪರೀಕ್ಷೆಗೊಳಪಡಿಸಬೇಕು. ಕ್ಷಯ ಪತ್ತೆ ಆಂದೋಲನದಲ್ಲಿ ಒಟ್ಟು ಸಂಗ್ರಹವಾಗುವ ಕಫದ ಮಾದರಿಗಳನ್ನು ಪರೀಕ್ಷಿಸಿದಾಗ ವಲಸೆ ಹೋಗುವವರಿಂದ, ಒಂದೇ ಸ್ಥಳದಲ್ಲಿ ಹೆಚ್ಚು ಜನ ವಾಸಿಸುವವರಿಂದ, ಕೊಳಚೆ ಪ್ರದೇಶಗಳಿಂದ ಎಷ್ಟು ಜನರಿಗೆ ಖಚಿತ ಕ್ಷಯರೋಗ ಪ್ರಕರಣಗಳು ಪತ್ತೆಯಾಗಿವೆ ಎಂಬುವ ಅಧ್ಯಯನ ಕೈಗೊಂಡು ಅಂತಹ ಕಡೆಗಳಲ್ಲಿ ಪರಿಣಾಮಕಾರಿಯಾಗಿ ಕ್ಷಯರೋಗ ಹತೋಟಿಗೆ ಕ್ರಮ ಜರುಗಿಸಬೇಕು ಎಂದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಡೈಗ್ನೋಸ್ಟಿಕ್ ಕೇಂದ್ರಗಳಲ್ಲಿ ಪತ್ತೆಯಾಗುವ ಕ್ಷಯರೋಗ ಪ್ರಕರಣಗಳ ಮಾಹಿತಿ ಪಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಕ್ಷಯರೋಗಿಗಳು ಜಿಲ್ಲೆಯಿಂದ ಬೇರೆಡೆಗೆ ವಲಸೆ ಹೋಗಿರುವ ಬಗ್ಗೆ ನಿಖರವಾಗಿ ತಿಳಿದುಕೊಂಡು ಅವರು ಸಮರ್ಪಕವಾಗಿ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ಷಯರೋಗದ ಜೊತೆಗೆ ಏಡ್ಸ್, ಕುಷ್ಠರೋಗ, ಅಂಧತ್ವ ನಿವಾರಣೆ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಏರ್ಪಡಿಸಲು ಕಾರ್ಯಕ್ರಮದ ಹಾಗೂ ರೋಗಿಗಳ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು. ಮನೆ ಮನೆಗೆ ಭೇಟಿ ನೀಡುವ ಮೂಲಕ ಕ್ಷಯರೋಗ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ಜರುಗಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಮಾತನಾಡಿ, ಸರಿಸುಮಾರು 1 ಲಕ್ಷ ಜನರಿಗೆ 128 ಕ್ಷಯರೋಗ ಪ್ರಕರಣಗಳು ಪತ್ತೆಯಾಗಬೇಕು. ಯಾವ ಪ್ರದೇಶದಲ್ಲಿ ಕ್ಷಯರೋಗದ ಸರಾಸರಿ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಅದಕ್ಕೆ ಕಾರಣ ಕಂಡುಕೊಳ್ಳಬೇಕು. ಕ್ಷಯರೋಗ ಹೆಚ್ಚಿಗೆ ಪತ್ತೆಯಾಗುವ ಪ್ರದೇಶಗಳಿಗೆ ಯಾವುದೇ ಪ್ರಕರಣಗಳು ಕಂಡು ಬರದಿದ್ದರೆ ಅಂತಹ ಕಡೆಗಳಲ್ಲಿ ಹೆಚ್ಚಿನ ಕಾಳಜಿವಹಿಸಿ ಕಫ ಪರೀಕ್ಷೆ ಮಾಡಬೇಕು. ಒಂದು ಗ್ರಾಮ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಘಟಕಗಳನ್ನಾಗಿಸಿ ಗುರಿ ಸಾಧಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಸಹ ಜಿಲ್ಲಾ ಮಟ್ಟದಲ್ಲಿರುವ ಎಲ್ಲ ಕಾರ್ಯಕ್ರಮ ಅಧಿಕಾರಿಗಳಿಗೆ ಸಹಾಯ ಮಾಡುವ ಮೂಲಕ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ|| ರಾಜೇಂದ್ರ ಭಾಲ್ಕೆ ಮಾತನಾಡಿ, ಜಿಲ್ಲೆಯಾದ್ಯಂತ ಜನವರಿ 2 ರಿಂದ 12ರವರೆಗೆ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 4.38 ಲಕ್ಷ ಜನರನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಟ್ಟು 468 ತಂಡಗಳನ್ನು ರಚಿಸಲಾಗಿದೆ. ಇದಕ್ಕಾಗಿ 936 ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನೇಮಿಸಲಾಗಿದೆ. ಕಳೆದ ಬಾರಿ ಜುಲೈ ಮಾಹೆಯಲ್ಲಿ ಕೈಗೊಂಡಿದ್ದ ಆಂದೋಲನದಲ್ಲಿ 207 ಖಚಿತ ಕ್ಷಯರೋಗ ಪ್ರಕರಣಗಳು ಪತ್ತೆಯಾಗಿದ್ದವು. ಜಿಲ್ಲೆಯಲ್ಲಿ ಸಧ್ಯ ಒಟ್ಟು 1397 ಕ್ಷಯರೋಗಿಗಳು ಡಾಟ್ಸ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ. ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಜಿಲ್ಲಾಡಳಿತದಿಂದ ಬೆಳೆಸಾಲ ಪಡೆದ ರೈತರಿಂದ ದಾಖಲಾತಿಗಳ ಸಂಗ್ರಹ
***************************************************************
ಕಲಬುರಗಿ,ಡಿ.31.(ಕ.ವಾ.)-ಸರ್ಕಾರವು ಬೆಳೆಸಾಲ ಮನ್ನಾ ಯೋಜನೆಯನ್ನು ಘೋಷಿಸಿದ್ದು, ಜಿಲ್ಲೆಯಲ್ಲಿ 2.25 ಲಕ್ಷ ಜನ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಬೆಳೆಸಾಲ ಪಡೆದಿದ್ದಾರೆ. ಈ ಎಲ್ಲ ರೈತರು ಬೆಳೆಸಾಲ ಯೋಜನೆಗೆ ತಮ್ಮ ಹೆಸರನ್ನು ಬ್ಯಾಂಕುಗಳಲ್ಲಿ ನೋಂದಾಯಿಸಿಕೊಳ್ಳುತ್ತಿಲ್ಲ. ಕಾರಣ ಜಿಲ್ಲಾಡಳಿತದಿಂದಲೇ ರೈತರ ಮನೆ ಮನೆಗೆ ತೆರಳಿ ರೈತರಿಂದ ಘೋಷಣಾ ಪತ್ರ ಹಾಗೂ ಅವಶ್ಯಕ ದಾಖಲಾತಿಗಳನ್ನು ನಾಳೆಯಿಂದ ಸಂಗ್ರಹಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಬೆಳೆಸಾಲ ಮನ್ನಾ ಯೋಜನೆಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ರಾಜ್ಯದಲ್ಲಿಯೇ ಕಲಬುರಗಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಬೆಳೆಸಾಲ ಪಡೆದಿದ್ದಾರೆ. ಈ ಎಲ್ಲ ರೈತರ ವಿವರವನ್ನು ವೆಬ್‍ಸೈಟ್‍ನಲ್ಲಿ ಬೆಳೆಸಾಲ ಮನ್ನಾ ಯೋಜನೆಗಾಗಿ ದಾಖಲಿಸಬೇಕಾಗಿದೆ. ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ ಪ್ರತಿದಿನ 200 ರೈತರಿಂದ ಸ್ವಯಂ ಘೋಷಣಾ ಪತ್ರ, ಪಡಿತರ ಚೀಟಿ, ಆಧಾರ ಕಾರ್ಡ ಹಾಗೂ ಸರ್ವೇ ನಂಬರಗಳ ಮಾಹಿತಿ ಸಂಗ್ರಹಿಸಿ ಸಲ್ಲಿಸಬೇಕೆಂದು ತಿಳಿಸಿದರು.
ರೈತರು ಮುಂಚಿತವಾಗಿಯೇ ಪಡಿತರ ಚೀಟಿ, ಆಧಾರ ಕಾರ್ಡ ದಾಖಲೆಗಳನ್ನು ಇಟ್ಟುಕೊಂಡು ಗ್ರಾಮ ಲೆಕ್ಕಿಗರು ಮನೆಗೆ ಬಂದಾಗ ಸ್ವಯಂ ಘೋಷಣಾ ಪತ್ರದ ಮೇಲೆ ಸಹಿ ಹಾಕಿ ಅವರಿಂದ ಸ್ವೀಕೃತಿ ಪತ್ರ ಪಡೆಯಬೇಕು. ಒಂದು ವೇಳೆ ಈಗಾಗಲೇ ಬ್ಯಾಂಕಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಲ್ಲಿ ಬ್ಯಾಂಕಿನಿಂದ ಪಡೆದ ಸ್ವೀಕೃತಿ ಪತ್ರವನ್ನು ಗ್ರಾಮ ಲೆಕ್ಕಿಗರಿಗೆ ತೋರಿಸಬೇಕು. ಗ್ರಾಮ ಲೆಕ್ಕಿಗರು ರೈತರಿಂದ ಪಡೆದ ದಾಖಲೆಗಳನ್ವಯ ಅವರ ಹೆಸರು ಮತ್ತು ಆಧಾರ ಕಾರ್ಡ ನಂಬರುಗಳನ್ನು ನಿಖರವಾಗಿ, ಸ್ಪಷ್ಟವಾಗಿ ಘೋಷಣಾ ಪತ್ರದಲ್ಲಿ ನಮೂದಿಸಬೇಕು. ಘೋಷಣಾ ಪತ್ರದಲ್ಲಿ ನಮೂದಿಸಿರುವ ಹೆಸರು ಮತ್ತು ಅಂಕಿ-ಅಂಶಗಳನ್ನು ನಿಖರವಾಗಿ ವೆಬ್‍ಸೈಟ್‍ನಲ್ಲಿ ಭರ್ತಿ ಮಾಡಬೇಕು. ವೆಬ್‍ಸೈಟ್‍ನಲ್ಲಿ ತಪ್ಪು ಮಾಹಿತಿ ಭರ್ತಿ ಮಾಡಿದರೆ ಮತ್ತೆ ಪುನ: ಘೋಷಣಾ ಪತ್ರಗಳನ್ನು ಪಡೆಯಬೇಕಾಗುತ್ತದೆ. ಕಾರಣ ಎಲ್ಲ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬೇಕು ಹಾಗೂ ರೈತರಿಂದ ಪಡೆಯುವ ಘೋಷಣಾ ಪತ್ರದ ಜೊತೆಗೆ ದಾಖಲಾತಿಗಳನ್ನು ಲಗತ್ತಿಸಿ ಬ್ಯಾಂಕಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಬ್ಯಾಂಕಿನವರು ದಾಖಲಾತಿಗಳನ್ನು ಸಲ್ಲಿಸಿಲ್ಲ ಎಂಬ ದೂರು ಬರಬಾರದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಹಕಾರ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ರೈತರ ಮಾಹಿತಿಗಳು ಸಂಗ್ರಹಿಸಲಾಗಿದೆ. ಆದರೆ ಮಾಹಿತಿಗಳು ಸ್ಪಷ್ಟವಾಗಿ ಹಾಗೂ ನಿಖರವಾಗಿ ಇಲ್ಲದ ಕಾರಣ ವೆಬ್‍ಸೈಟ್‍ನಲ್ಲಿ ದಾಖಲಾತಿಗಳು ತಾಳೆಯಾಗುತ್ತಿಲ್ಲ. ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದ ರೈತರ ಸ್ವಯಂ ಘೋಷಣಾ ಪತ್ರ ಹಾಗೂ ದಾಖಲಾತಿಗಳನ್ನು ಸಹ ಸಂಗ್ರಹಿಸಬೇಕಾಗಿದ್ದು, ಈ ಕುರಿತು ತಹಶೀಲ್ದಾರರು ತಾಲೂಕಾ ಮಟ್ಟದ ಸಹಕಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಕರೆದು ಕ್ರಮ ಜರುಗಿಸಬೇಕು. ಸಹಕಾರಿ ಬ್ಯಾಂಕಿನಿಂದ ಪಡೆದ ಬೆಳೆಸಾಲವನ್ನು ಸಹಕಾರಿ ಬ್ಯಾಂಕಿನಿಂದಲೇ ಮನ್ನಾ ಮಾಡಲಾಗುವುದು. ಸಹಕಾರಿ ಬ್ಯಾಂಕಿನ ಬೆಳೆಸಾಲವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಾಗಲಿ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದ ಬೆಳೆಸಾಲವನ್ನು ಸಹಕಾರಿ ಬ್ಯಾಂಕಿನಲ್ಲಿ ಮನ್ನಾ ಮಾಡಲು ಅವಕಾಶಗಳಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಎಲ್ಲ ತಾಲೂಕಿನ ತಹಶೀಲ್ದಾರರು, ಗ್ರಾಮ ಲೆಕ್ಕಿಗರು ಪಾಲ್ಗೊಂಡಿದ್ದರು.
ರಾಜ್ಯದಲ್ಲೇ ಅತ್ಯುತ್ತಮ ಸ್ವೀಪ್ ಚಟುವಟಿಕೆ ಕೈಗೊಂಡ ಜಿಲ್ಲೆಗೆ ಕಲಬುರಗಿ ಭಾಜನ
**********************************************************************
ಕಲಬುರಗಿ,ಡಿ.31.(ಕ.ವಾ.)-ಕಳೆದ 2018ರ ವಿಧಾನಸಭಾ ಚುನಾವಣೆ ಪ್ರಕ್ರಿಯೇಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಮತದಾರರಲ್ಲಿ ಚುನಾವಣಾ ಪ್ರಕ್ರಿಯೇ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ವಿನೂತನವಾಗಿ ಹಮ್ಮಿಕೊಂಡಿರುವ ಪ್ರಯುಕ್ತ ಕಲಬುರಗಿ ಜಿಲ್ಲಾ ಪಂಚಾಯಿತಿಗೆ ರಾಜ್ಯದಲ್ಲಿಯೇ ಅತ್ಯುತ್ತಮ ಸ್ವೀಪ್ ಚಟುವಟಿಕೆ ಜರುಗಿಸಿದ ಜಿಲ್ಲೆ ಎಂಬ ಹೆಗ್ಗಳ್ಳಿಗೆ ದೊರೆತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ರವಿವಾರ ಭಾರತ ಚುನಾವಣಾ ಆಯೋಗದ ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರು ಚುನಾವಣಾ ಜಾಗೃತಿ ಮೂಡಿಸುವಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲೆ ಎಂಬ ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಹಿಂದಿನ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರಿಗೆ ಸನ್ಮಾನಿಸಲಾಗಿದೆ.
ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ ಹಾಗೂ ತಂಡದ ಮಾರ್ಗದರ್ಶನದಂತೆ ಕಲಬುರಗಿ ಜಿಲ್ಲೆಯಲ್ಲಿ ಚುನಾವಣಾ ಜಾಗೃತಿ ಮೂಡಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಹಕರಿಸಿದ ಕಲಬುರಗಿ ಜಿಲ್ಲೆಯ ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಎಲ್ಲ ಸದಸ್ಯರಿಗೆ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ-2018ರ ಅಂಗವಾಗಿ ರಚಿಸಲಾಗಿರುವ ಸ್ವಿಪ್ ಸಮಿತಿಯಿಂದ ಎಲ್ಲ ಶಾಲೆಗಳಲ್ಲಿ ಮತದಾರರ ಶೈಕ್ಷಣಿಕ ಕ್ಲಬ್ ಸ್ಥಾಪಿಸುವ ಮೂಲಕ ನೂತನ ಮತದಾರರ ನೋಂದಣಿಗೆ ಹೆಚ್ಚು ಮಹತ್ವ ನೀಡಲಾಗಿತ್ತು. ಸ್ವೀಪ್ ಸಮಿತಿಯಿಂದ ಸೇಡಂನಿಂದ ಕಲಬುರಗಿಯವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳುವ ಮೂಲಕ ಕಡ್ಡಾಯ ಹಾಗೂ ಯಾವುದೇ ಆಮೀಷಕ್ಕೊಳಗಾಗದೇ ಮತದಾನ ಮಾಡಲು ಜಾಗೃತಿ ಹಮ್ಮಿಕೊಳ್ಳಲಾಗಿತ್ತು. ನಗರದಲ್ಲಿ ಸುಮಾರು 11 ಸಾವಿರ ವಿದ್ಯಾರ್ಥಿಗಳಿಂದ ವಲ್ಲಭಭಾಯಿ ಪಟೇಲ್ ವೃತ್ತದಿಂದ ರಂಗಮಂದಿರವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಗ್ರಾಮಗಳಲ್ಲಿ ಕಬ್ಬಡ್ಡಿ, ಖೋಖೋ, ಕುಂಟಲಪಿ ಸ್ಪರ್ಧೆಗಳನ್ನು ಆಯೋಜಿಸಿ ಮತದಾನದ ಜಾಗೃತಿ ಮೂಡಿಸಲಾಗಿತ್ತು. ಎಲ್ಲ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಿ ಸಂಗ್ರಹ ಮಾಡುವ ಮೂಲಕ ಜಾಗೃತಿ ಮೂಡಿಸಿದಲ್ಲದೇ ಎಲ್ಲ ವಿದ್ಯಾರ್ಥಿಗಳಿಂದ ಪೋಷಕರಿಗೆ ಕಡ್ಡಾಯ ಮತದಾನದ ಕುರಿತು ಪತ್ರಗಳನ್ನು ಕಳುಹಿಸಲಾಗಿತ್ತು ಎಂದು ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ದತ್ತು ಪಡೆಯಲು ಆಪ್ತ ಸಮಾಲೋಚನಾ ಕೇಂದ್ರ ಸ್ಥಾಪನೆ
*************************************************
ಕಲಬುರಗಿ,ಡಿ.31.(ಕ.ವಾ.)-ಮಕ್ಕಳನ್ನು ದತ್ತು ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕಲಬುರಗಿ ಜಿಲ್ಲೆಯಲ್ಲಿ ಆಪ್ತ ಸಮಾಲೋಚನಾ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರವು ಪ್ರತಿ ಬುಧವಾರ ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರ ಸೆಕ್ಷನ್ 56 ಹಾಗೂ ದತ್ತು ಅಧಿಸೂಚನೆ 2017ರ 34(6)ರ ಅನ್ವಯ ಮಕ್ಕಳನ್ನು ದತ್ತು ಪಡೆಯಲು ಬಯಸುವ ಕಲಬುರಗಿ ಜಿಲ್ಲೆಯ ಸಂಭವನೀಯ ಪೋಷಕರಿಗೆ ಹಾಗೂ ದತ್ತು ಹೋಗುವ ಹಿರಿಯ ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಎದುರಿಗೆಯಿರುವ ಸರ್ಕಾರಿ ವೀಕ್ಷಣಾಲಯದ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಸಂರಕ್ಷಣಾಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
**************************************
ಕಲಬುರಗಿ,ಡಿ.31.(ಕ.ವಾ.)-ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ವಸತಿ, ಅಟಲ್‍ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್. ಅಂಬೇಡ್ಕರ ವಸತಿ ಶಾಲೆಗಳಲ್ಲಿ 2019-20ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಲ್ವಾನಿಸಲಾಗಿದೆ ಎಂದು ಕಲಬರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ತಮಗೆ ಸಂಬಂಧಪಟ್ಟ ತಾಲೂಕಿನ ಸಮೀಪದ ವಸತಿ ಶಾಲೆಯ ಪ್ರಾಂಶುಪಾಲರು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ, ತಾಲೂಕು ಹಿಂದುಳಿದ ವರ್ಗಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ/ ಉಪನಿರ್ದೇಶಕರ ಕಚೇರಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯಬೇಕು. ಮತ್ತಿತರ ಹೆಚ್ಚಿನ ಮಾಹಿತಿಯನ್ನು ಮೇಲ್ಕಂಡ ಕಚೇರಿಗಳಿಂದ ಪಡೆಯಬಹುದಾಗಿದೆ.
ಇದಲ್ಲದೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕೃತ ತಿತಿತಿ.ಞಡಿeis.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ದಿಂದ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು 2019ರ ಜನವರಿ 15 ರೊಳಗಾಗಿ ತಮ್ಮ ಸಮೀಪದ ವಸತಿ ಶಾಲೆಯ ಪ್ರಾಂಶುಪಾಲರಿಗೆ ಸಲ್ಲಿಸಿ ಅವರಿಂದ ಸ್ವೀಕೃತಿ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಜನವರಿ 31ರೊಳಗೆ
******************
ಆಹಾರ ಪದಾರ್ಥಗಳ ವಹಿವಾಟುದಾರರು ನೋಂದಣಿ ಮಾಡಿಕೊಳ್ಳಲು ಸೂಚನೆ
*******************************************************************
ಕಲಬುರಗಿ,ಡಿ.31.(ಕ.ವಾ)-ಕಲಬುರಗಿ ಜಿಲ್ಲೆಯ ಎಲ್ಲ ಆಹಾರ ಪದಾರ್ಥ ವ್ಯವಹಾರ ಮಾಡುವವರು, ವರ್ಷಕ್ಕೆ 12 ಲಕ್ಷ ರೂ.ಗಳಿಗೆ ಮಿಗಿಲಾಗಿ ಹಾಗೂ 12 ಲಕ್ಷ ರೂ.ಗಿಂತ ಕಡಿಮೆ ವ್ಯವಹರಿಸುವ ಆಹಾರ ವಸ್ತುಗಳ ವಹಿವಾಟುದಾರರು ಕಡ್ಡಾಯವಾಗಿ 2019ರ ಜನವರಿ 31 ರೊಳಗಾಗಿ ನೋಂದಣಿ ಮತ್ತು ಪರವಾನಿಗೆ ಮಾಡಿಕೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ 5 ಲಕ್ಷ ರೂ.ಗಳ ದಂಡ ಮತ್ತು 6 ತಿಂಗಳ ಸೆರೆವಾಸ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011 ಅಗಸ್ಟ್ 5 ರಿಂದ ಜಾರಿಗೆ ಬಂದಿರುವುದರಿಂದ ಈ ಕಾಯ್ದೆಯಡಿಯಲ್ಲಿ ಆಹಾರ ವಸ್ತುಗಳ ವ್ಯವಹಾರಗಳು ಪರವಾನಿಗೆ ಮತ್ತು ನೊಂದಣಿ ನಿಯಂತ್ರಣ 2011 ರ ಕಲಂ 21 ರ ಅಡಿಯಲ್ಲಿ ಎಲ್ಲಾ ಬಗೆಯ ಆಹಾರ ಪದಾರ್ಥಗಳ ವಹಿವಾಟುದಾರರು ಪರವಾನಿಗೆ ಹಾಗೂ ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ.
ಕಲಬುರಗಿ ಜಿಲ್ಲೆಯಲ್ಲಿರುವ ಎಲ್ಲ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್‍ಗಳು, ಸಗಟು ವ್ಯಾಪಾರಿಗಳು, ವಿತರಕರು ಮತ್ತು ಮಾರಾಟಗಾರರು. ಎಲ್ಲಾ ಬೇಕರಿಗಳು, ಹೋಟೆಲ್‍ಗಳು, ವೈನಸ್ಟೋರ್/ ಬಾರ್, ರೆಸ್ಟೋರೆಂಟ್‍ಗಳು, ಕ್ಲಬ್‍ಗಳು/ ಕ್ಯಾಂಟೀನ್‍ಗಳು, ತಂಪು ಪಾನೀಯ ತಯಾರಿಕ ಘಟಕಗಳು, ರಸ್ತೆ ಬದಿ ಆಹಾರ ವ್ಯಾಪಾರಿಗಳು, ಡಾಬಾ, ಶಾಲಾ ಕಾಲೇಜು, ಕಚೇರಿಗಳ ಕ್ಯಾಂಟಿನ್ ಹಾಗೂ ವಸತಿ ನಿಲಯಗಳು, ನ್ಯಾಯಬೆಲೆ ಅಂಗಡಿ, ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯಗಳು, ಕೋಳಿ ಮೀನು ಮಾಂಸ ಮಾರಾಟ ಅಂಗಡಿಗಳು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಧಾರ್ಮಿಕ ಸ್ಥಳ/ ಸಮುದಾಯ ಭವನ/ ಕಲ್ಯಾಣ ಮಂಟಪ ಇತರೆ ಸ್ಥಳಗಳಲ್ಲಿ ಊಟದ ಸಂಯೋಜಕರು, ಕ್ಯಾಟರಿಂಗ್ ವ್ಯವಹಾರ ಮಾಡುವವರು, ಪ್ಯಾಕೇಜ ಡ್ರಿಂಕಿಂಗ್ ನೀರಿನ ಘಟಕಗಳು ಎಲ್ಲಾ ಆಹಾರ ವಸ್ತುಗಳ ಸಾಗಣೆದಾರರು/ಆಹಾರ ಉಗ್ರಾಣ ಸಂಘಟನೆಗಳ, ಎಲ್ಲಾ ಆಹಾರ ಸಂಸ್ಕರಣ ಘಟಕಗಳು (ರಿಪ್ಯಾಕರ್ಸ್ ಮತ್ತು ರಿಲೇಬಲರ್ಸ್ ಸೇರಿ) ಮತ್ತು ವಸ್ತುಗಳ ಆಮದುದಾರರು, ಎಲ್ಲಾ ಆಹಾರ ಪದಾರ್ಥ ವಹಿವಾಟುದಾರರು ಕಡ್ಡಾಯವಾಗಿ 2019ರ ಜನವರಿ 31 ರೊಳಗಾಗಿ ನೊಂದಣಿ, ಪರವಾನಿಗೆ, ನವೀಕರಣ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಅಂಕಿತ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು (ಎಫ್‍ಎಸ್‍ಎಸ್‍ಎ) ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಳೆ ಎಸ್.ಪಿ. ಕಚೇರಿ ಹಿಂಭಾಗ ಕಲಬುರಗಿ ದೂ: 08472-233888. ಮೊಬೈಲ್ ಸಂಖ್ಯೆ 9480360460, ಉಚಿತ ಕರೆ ಸಂಖ್ಯೆ 1800-112100ಗೆ ಸಂಪರ್ಕಿಸಬಹುದಾಗಿದೆ. ತಾಲೂಕಾವಾರು ಸಂಪರ್ಕಿಸಬೇಕಾದ ಅಧಿಕಾರಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆ ವಿವರ ಇಂತಿದೆ.
ಕಲಬುರಗಿ: ಡಾ|| ರಾಜಕುಮಾರ ಕುಲಕರ್ಣಿ ತಾಲೂಕಾ ಆರೋಗ್ಯ ಅಧಿಕಾರಿಗಳು, ಹಿರಿಯ, ಆಹಾರ ಸುರಕ್ಷತಾ ಅಧಿಕಾರಿಗಳು, ಮಹಾನಗರ ಪಾಲಿಕೆ ಕಲಬುರಗಿ ಮೊಬೈಲ್ ಸಂಖ್ಯೆ: 9986298098 ಹಾಗೂ ಕಿರಣರಾಜ ಎಚ್ ಚಲವಾದಿ ಆಹಾರ ಸುರಕ್ಷತಾ ಅಧಿಕಾರಿ ಕಲಬುರಗಿ ತಾಲೂಕಾ. ಮೊಬೈಲ್ ಸಂಖ್ಯೆ: 9916499884. ಆಳಂದ: ಪೊಲ್ಲಾ ಪಿ. ನಾಯಕ ಆಹಾರ ಸುರಕ್ಷತಾ ಅಧಿಕಾರಿ ಆಳಂದ ಮೊಬೈಲ್ ಸಂಖ್ಯೆ: 9480175437. ಜೇವರ್ಗಿ: ಶ್ರೀಶೈಲ್ ದಿವಟಗಿ ಆಹಾರ ಸುರಕ್ಷತಾ ಅಧಿಕಾರಿ ಜೇವರ್ಗಿ ಮೊಬೈಲ್ ಸಂಖ್ಯೆ: 9945887010. ಚಿತ್ತಾಪುರ: ಡಾ. ಸುರೇಶ ಸಿ. ತಾಲೂಕಾ ಆರೋಗ್ಯ ಅಧಿಕಾರಿಗಳು ಆಹಾರ ಸುರಕ್ಷತಾ ಅಧಿಕಾರಿ ಚಿತ್ತಾಪೂರ ಮೊಬೈಲ್ ಸಂಖ್ಯೆ: 9845708581.
ಅಫಜಲಪುರ: ಡಾ. ರತ್ನಾಕರ ತೋರಣ ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಅಫಜಲಪೂರ ಮೊಬೈಲ್ ಸಂಖ್ಯೆ: 7829277554. ಚಿಂಚೋಳಿ: ಡಾ. ಮಹ್ಮದ ಗಫ್ಫಾರ್ ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಚಿಂಚೋಳಿ ಮೋ ಸಂಖ್ಯೆ: 9740479500. ಸೇಡಂ: ಡಾ. ವಿವೇಕಾನಂದ ರೆಡ್ಡಿ ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಸೇಡಂ ಮೊಬೈಲ್ ಸಂಖ್ಯೆ: 8277500451.
ಮಧ್ಯವರ್ತಿಗಳಿಂದ (ಬ್ರೋಕರ್ಸ್) ಎಚ್ಚರವಹಿಸಬೇಕು: ಈ ಮೇಲ್ಕಂಡ ಅಧಿಕಾರಿಗಳು ಹೊರತುಪಡಿಸಿ ಯಾರಾದಾರೂ ಬಂದು ಅಹಾರ ಸುರಕ್ಷತಾ ಕಚೇರಿಯ ಸಿಬ್ಬಂದಿ ಎಂದು ನೋಂದಣಿ ಮತ್ತು ಲೈಸನ್ಸ್ ಬಗ್ಗೆ ವಿಚಾರಿಸಿದಾಗ ಹಾಗೂ ಮಾಡಿಕೊಡುವುದಾಗಿ ಹೇಳಿದಾಗ ಅವರ ಗುರುತಿನ ಚೀಟಿ ನೋಡಬೇಕು. ಗುರುತಿನ ಚೀಟಿ ನೀಡದೇ ಇದ್ದಾಗ ಅಥವಾ ಅನುಮಾನ ಬಂದಾಗ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು ಹಾಗೂ ಎಫ್.ಎಸ್.ಎಸ್.ಎ. ಕಾರ್ಯಾಲಯಕ್ಕೆ ಸಂರ್ಪಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಿತಿತಿ.ಜಿssಚಿi.gov.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಜನವರಿ 1 ರಿಂದ ಆಹಾರ ಅದಾಲತ್
********************************
ಕಲಬುರಗಿ,ಡಿ.31.(ಕ.ವಾ)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಆಯ್ದ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿ, ಪಡಿತರ ವಿತರಣೆ, ಅಡುಗೆ ಅನಿಲ ಸಮಸ್ಯೆಗಳು ಸೇರಿದಂತೆ ಇತರ ಗ್ರಾಹಕರ ಕುಂದುಕೊರತೆ ಆಲಿಸಲು 2019 ರ ಜನವರಿ 1 ರಿಂದ 30ವರೆಗೆ ಆಹಾರ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾಗಳ ಇಲಾಖೆಯ ಹಿರಿಯ ಉಪನಿರ್ದೇಶಕರು ತಿಳಿಸಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆಹಾರ ಅದಾಲತ್ ನಡೆಯುವ ದಿನಾಂಕ, ಸಮಯ, ತಾಲೂಕು ಮತ್ತು ಅದಾಲತ್ ನಡೆಸುವ ನ್ಯಾಯ ಬೆಲೆ ಅಂಗಡಿಗಳ ವಿವರ ಇಂತಿದೆ.
ಜನವರಿ 1ರಂದು: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಗ್ರಾಮಾಂತರ ಗೋಗಿ ಕೆ. ಅಂಬಾಭವಾನಿ ಎಸ್.ಎಸ್.ಎ.ಎಂ.ಎಂ. ನ್ಯಾಯ ಬೆಲೆ ಅಂಗಡಿ ಸಂಖ್ಯೆ 22ರಲ್ಲಿ. ಜನವರಿ 2ರಂದು: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಜೇವರ್ಗಿ ತಾಲೂಕಿನ ವಡಗೇರಾ ಲಗತ್ತು ಪಿ.ಎ.ಎಂ.ವಿ.ಎಸ್. ನ್ಯಾಯ ಬೆಲೆ ಅಂಗಡಿ ಸಂಖ್ಯೆ 82ರಲ್ಲಿ.
ಜನವರಿ 4ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿಂಚೋಳಿ ತಾಲೂಕಿನ ಐನಾಪುರ ವಿ.ಎಸ್.ಎಸ್.ಎನ್. ನ್ಯಾಯ ಬೆಲೆ ಅಂಗಡಿ ಸಂಖ್ಯೆ 45 ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕೊರವಿಯ ವಿ.ಎಸ್.ಎಸ್.ಎನ್. ನ್ಯಾಯ ಬೆಲೆ ಅಂಗಡಿ ಸಂಖ್ಯೆ 75ರಲ್ಲಿ.
ಜನವರಿ 7ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಆಳಂದ ತಾಲೂಕಿನ ವಿ.ಕೆ. ಸಲಗರ ವಿ.ಎಸ್.ಎಸ್.ಎಸ್.ಎನ್. ನ್ಯಾಯ ಬೆಲೆ ಅಂಗಡಿ ಸಂಖ್ಯೆ 117 ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ವಿ.ಕೆ. ಸಲಗರ ವಿ.ಎಸ್.ಎಸ್.ಎಸ್.ಎನ್. ನ್ಯಾಯ ಬೆಲೆ ಅಂಗಡಿ ಸಂಖ್ಯೆ 59ರಲ್ಲಿ.
ಜನವರಿ 8ರಂದು: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಗ್ರಾಮಾಂತರ ಕಮಲಾಪುರದ ಜೈ ಬಸಲಿಂಗಪ್ಪ ತರುಣ ಸಂಘ ನ್ಯಾಯ ಬೆಲೆ ಅಂಗಡಿ ಸಂಖ್ಯೆ 02ರಲ್ಲಿ. ಜನವರಿ 9ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸೇಡಂ ತಾಲೂಕಿನ ಗೌಡನಹಳ್ಳಿ ಮಾರುತಿ ಕಲ್ಯಾಣ ಸಂಘದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 20 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಹಂದರಕಿಯ ಶರಣಪ್ಪ ಡಿ. ನ್ಯಾಯಬೆಲೆ ಅಂಗಡಿ ಸಂಖ್ಯೆ 56.
ಜನವರಿ 11ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿತ್ತಾಪುರ ತಾಲೂಕಿನ ಯಾಗಾಪೂರ ತಾಂಡಾದ ಶ್ರೀ ಶಾಂತಗೌಡ ನ್ಯಾಯ ಬೆಲೆ ಅಂಗಡಿ ಸಂಖ್ಯೆ 67 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಹಣ್ಣಿಕೇರಾದ ಮಲ್ಲಿಕಾರ್ಜುನ ನ್ಯಾಯಬೆಲೆ ಅಂಗಡಿ ಸಂಖ್ಯೆ 79.
ಜನವರಿ 14ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರಸ ಶ್ರೀ ಸಿದ್ದಪ್ಪ ವಿ. ನ್ಯಾಯ ಬೆಲೆ ಅಂಗಡಿ ಸಂಖ್ಯೆ 36 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಗುಡೂರು ಶ್ರೀ ಬಸಣ್ಣಾ ಎಸ್.ಬಿ. ನ್ಯಾಯಬೆಲೆ ಅಂಗಡಿ ಸಂಖ್ಯೆ 61.
ಜನವರಿ 16ರಂದು: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಪಡಿತರÀ ಪಿ.ಸಿ.ಸಿ.ಎಸ್. ಜಿಲಾನಾಬಾದ್ ನ್ಯಾಯಬೆಲೆ ಅಂಗಡಿ ಸಂಖ್ಯೆ 232ರಲ್ಲಿ. ಜನವರಿ 18ರಂದು: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಜೇವರ್ಗಿ ತಾಲೂಕಿನ ಜವಳಗಾ ಎಸ್.ವಿ.ಎಸ್. ನ್ಯಾಯಬೆಲೆ ಅಂಗಡಿ ಸಂಖ್ಯೆ 68.
ಜನವರಿ 21ರಂದು: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಪಡಿತರ ಪಿ.ಸಿ.ಸಿ.ಎಸ್. ಎನ್.ಜಿ.ಓ. ಕಾಲೋನಿಯ ನ್ಯಾಯಬೆಲೆ ಅಂಗಡಿ ಸಂಖ್ಯೆ 133ರಲ್ಲಿ. ಜನವರಿ 22ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಆಳಂದ ತಾಲೂಕಿನ ಬೆಳಮಗಿ ತಾಂಡಾದ ಶ್ರೀ ಜೈ ಭವಾನಿ ಸೇವಾ ಸಂಘÀ ನ್ಯಾಯ ಬೆಲೆ ಅಂಗಡಿ ಸಂಖ್ಯೆ 133 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಜಮಗಾ (ಕೆ) ಸದ್ಗುರು ಯಲ್ಲಾಲಿಂಗ ಬಹುದೋದ್ದೇಶ ತರುಣ ಸಂಘ ನ್ಯಾಯಬೆಲೆ ಅಂಗಡಿ ಸಂಖ್ಯೆ 106.
ಜನವರಿ 23ರಂದು: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಪಡಿತರ ತಾರಫೈಲ್ ಡಾ. ಬಿ.ಆರ್. ಅಂಬೇಡ್ಕರ ಗರೀಬಿ ಹಠಾವೋ ಸಂಘದ ನ್ಯಾಯಬೆಲೆ ಅಂಗಡಿ ಸಂಖ್ಯೆ 131ರಲ್ಲಿ. ಜನವರಿ 25ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಸಿ.ವೈ. ಸಂಘದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 35 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಅಫಜಲಪುರ ಪಟ್ಟಣದ ಶ್ರೀ ಜಗದಂಬಾ ಮಹಿಳಾ ಮಂಡಳ ನ್ಯಾಯಬೆಲೆ ಅಂಗಡಿ ಸಂಖ್ಯೆ 07.
ಜನವರಿ 28ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿತ್ತಾಪುರ ಮತ್ತು ಶಹಾಬಾದ-ವಾಡಿಗಳಿಗೆ ಸಂಬಂಧಿಸಿದಂತೆ ಅಳ್ಳೊಳ್ಳಿಯ ನೆಹರು ಯುವಕ ಸಂಘದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 73 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಶಹಾಬಾದ ಶ್ರೀ ಅಂಬಾದಾಸ ತುಕಾರಾಂ ನ್ಯಾಯಬೆಲೆ ಅಂಗಡಿ ಸಂಖ್ಯೆ 150.
ಜನವರಿ 29ರಂದು: 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಪಡಿತರ ಬ್ರಹ್ಮಪೂರದ ಎಲ್.ಎಂ.ಪಿ.ಹೆಚ್. ನ್ಯಾಯಬೆಲೆ ಅಂಗಡಿ ಸಂಖ್ಯೆ 220ರಲ್ಲಿ. ಜನವರಿ 30ರಂದು: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸೇಡಂ ತಾಲೂಕಿನ ಕೋಲಕುಂದಾ ನ್ಯಾಯ ಬೆಲೆ ಅಂಗಡಿ ಸಂಖ್ಯೆ 26 ಮತ್ತು 27ರಲ್ಲಿ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಬಟಗೇರಾದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 75 ಹಾಗೂ ಬಟಗೇರಾ(ಬಿ) ನ್ಯಾಯಬೆಲೆ ಅಂಗಡಿ ಸಂಖ್ಯೆ 17ರಲ್ಲಿ ಏರ್ಪಡಿಸಲಾಗಿದೆ.






ಹೀಗಾಗಿ ಲೇಖನಗಳು News And Photo Date: 31---12--2018

ಎಲ್ಲಾ ಲೇಖನಗಳು ಆಗಿದೆ News And Photo Date: 31---12--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News And Photo Date: 31---12--2018 ಲಿಂಕ್ ವಿಳಾಸ https://dekalungi.blogspot.com/2018/12/news-and-photo-date-31-12-2018.html

Subscribe to receive free email updates:

0 Response to "News And Photo Date: 31---12--2018"

ಕಾಮೆಂಟ್‌‌ ಪೋಸ್ಟ್‌ ಮಾಡಿ