NEWS AND PHOTO DATE: 29-8-2018

NEWS AND PHOTO DATE: 29-8-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 29-8-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 29-8-2018
ಲಿಂಕ್ : NEWS AND PHOTO DATE: 29-8-2018

ಓದಿ


NEWS AND PHOTO DATE: 29-8-2018

ಜಿಲ್ಲೆಯ ಮೂರು ತಾಲೂಕುಗಳು ಬಯಲು ಬಹಿರ್ದೆಸೆ ಮುಕ್ತ
****************************************************
ಕಲಬುರಗಿ,ಆ.29.(ಕ.ವಾ.)-ಕಲಬುರಗಿ ಜಿಲ್ಲೆಯನ್ನು ಬರುವ ಅಕ್ಟೋಬರ್ 2ರೊಳಗಾಗಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಹಮ್ಮಿಕೊಂಡಿರುವ ಗುರಿಗೆ ಅನುಗುಣವಾಗಿ ಈಗಾಗಲೇ ಚಿತ್ತಾಪುರ, ಅಫಜಲಪುರ ಹಾಗೂ ಕಲಬುರಗಿ ತಾಲೂಕುಗಳು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.
ಅವರು ಬುಧವಾರ ಕಲಬುರಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲ್ಪಟ್ಟ ಚಿತ್ತಾಪುರ ತಾಲೂಕಿನ ಸ್ವಚ್ಛ ಭಾರತ ಮಿಷನ್ ಅಧಿಕಾರಿಗಳೊಂದಿಗೆ ಸಿಹಿ ಹಂಚಿ ಹರ್ಷವ್ಯಕ್ತಪಡಿಸಿ ಮಾತನಾಡಿ, 2012ರ ಬೇಸ್ ಲೈನ್ ಸಮೀಕ್ಷೆಯ ಪ್ರಕಾರ ಚಿತ್ತಾಪುರ ತಾಲೂಕಿನಲ್ಲಿ 31488 ಕುಟುಂಬಗಳು ಶೌಚಾಲಯ ಹೊಂದಿರುವುದಿಲ್ಲ. ಚಿತ್ತಾಪುರ ತಾಲೂಕಿನಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 31490 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲಾಗಿದೆ ಎಂದರು.
ಅಫಜಲಪುರ ತಾಲೂಕಿನ 19325 ಹಾಗೂ ಕಲಬುರಗಿ ತಾಲೂಕಿನ 35635 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಈ ತಾಲೂಕುಗಳನ್ನು ಸಹ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಸೇಡಂ ತಾಲೂಕಿನ 22346 ಶೌಚಾಲಯ ನಿರ್ಮಿಸುವ ಗುರಿಯ ಪೈಕಿ ಈಗಾಗಲೇ 20285 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, 26 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಈಗಾಗಲೇ 23 ಗ್ರಾಮ ಪಂಚಾಯಿತಿಗಳಲ್ಲಿ ಶೇ. 100ರಷ್ಟು ಶೌಚಾಲಯ ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, ಈ ಗ್ರಾಮಗಳನ್ನು ಸಹ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಬೇಕಾಗಿದೆ. ಸೇಡಂ ತಾಲೂಕಿನಾದ್ಯಂತ ಶೇ. 91.22 ರಷ್ಟು ಶೌಚಾಲಯ ನಿರ್ಮಿಸಲಾಗಿದೆ. ಇನ್ನುಳಿದ 1961 ಶೌಚಾಲಯಗಳನ್ನು ಆದಷ್ಟು ಬೇಗ ನಿರ್ಮಿಸುವ ಮೂಲಕ ಸೇಡಂ ತಾಲೂಕನ್ನು ಸಹ ಬಯಲು ಬಹಿರ್ದೆಸೆ ಮುಕ್ತಗೊಳಿಸಬೇಕೆಂದು ತಿಳಿಸಿದರು.
ಚಿಂಚೋಳಿ ತಾಲೂಕಿನಲ್ಲಿ 29522 ಶೌಚಾಲಯಗಳನ್ನು ನಿರ್ಮಿಸುವ ಗುರಿಯಿದ್ದು, ಈಗಾಗಲೇ 25729 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ತಾಲೂಕಿನಲ್ಲಿ 32 ಗ್ರಾಮ ಪಂಚಾಯಿತಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಆರು ಗ್ರಾಮ ಪಂಚಾಯಿತಿಗಳಲ್ಲಿ ಶೇ. 100ರಷ್ಟು ಶೌಚಾಲಯ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಜೇವರ್ಗಿ ತಾಲೂಕಿನಲ್ಲಿ 35055 ಶೌಚಾಲಯಗಳನ್ನು ನಿರ್ಮಿಸುವ ಗುರಿ ಇದ್ದು, ಈ ಪೈಕಿ 29318 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ತಾಲೂಕಿನಲ್ಲಿ 23 ಗ್ರಾಮ ಪಂಚಾಯಿತಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. 4 ಗ್ರಾಮ ಪಂಚಾಯಿತಿಗಳಲ್ಲಿ ಶೇ. 100 ರಷ್ಟು ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ. ಆಳಂದ ತಾಲೂಕಿನಲ್ಲಿ 41009 ಶೌಚಾಲಯ ನಿರ್ಮಿಸುವ ಗುರಿಯಿದ್ದು, 33456 ಶೌಚಾಲಯ ನಿರ್ಮಿಸಲಾಗಿದೆ. ಆಳಂದ ತಾಲೂಕಿನ ಎಲ್ಲ ಅಧಿಕಾರಿಗಳು ಜನಪ್ರತಿನಿಧಿಗಳ ಸಹಕಾರದೊಂದಿಗೆ ತಾಲೂಕಿನಲ್ಲಿ ಉಳಿದ 7553 ಶೌಚಾಲಯಗಳನ್ನು ಸೆಪ್ಟೆಂಬರ್ 15ರೊಳಗಾಗಿ ನಿರ್ಮಿಸಲು ಪ್ರಯತ್ನಿಸಬೇಕು ಎಂದರು.
ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿರುವ ಅಫಜಲಪುರ, ಚಿತ್ತಾಪುರ ಮತ್ತು ಕಲಬುರಗಿ ತಾಲೂಕಿನಲ್ಲಿರುವ ಶಾಲೆಗಳಿಗೆ ಶೌಚಾಲಯ, ಆವರಣ ಗೋಡೆ, ಶಾಲೆಗೆ ಸಂಪರ್ಕ ರಸ್ತೆ ಹಾಗೂ ಶಾಲೆಯ ಆಟದ ಮೈದಾನ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಪಡೆದು ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಣ ಪಾವತಿಸಲು ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿರುವ ಗ್ರಾಮ ಪಂಚಾಯಿತಿಗಳಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಪ್ರೋತ್ಸಾಹಧನ ಪಾವತಿಗಾಗಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಪೂರಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು. 2012ರ ಬೇಸ್ ಲೈನ್ ಸಮೀಕ್ಷೆಯಲ್ಲಿ ಗುರುತಿಸಲಾಗಿರುವ ಶೌಚಾಲಯಗಳಿಲ್ಲದ ಕುಟುಂಬಗಳಿಗಿಂತಲೂ ಗ್ರಾಮಗಳಲ್ಲಿ ಸಧ್ಯ ಹೆಚ್ಚು ಕುಟುಂಬಗಳಿದ್ದು, ವೈಯಕ್ತಿಕ ಶೌಚಾಲಯ ನಿರ್ಮಿಸುವ ಬೇಡಿಕೆ ಇದ್ದಲ್ಲಿ ಫಲಾನುಭವಿಗಳ ಸಂಖ್ಯೆಯನ್ನು ತಿಳಿದು ವರದಿ ಸಲ್ಲಿಸಬೇಕು. ಚಿತ್ತಾಪುರ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ ಯಾಗಾಪುರ ಗ್ರಾಮ ಪಂಚಾಯಿತಿಯ ಪಿಡಿಓ ಬಸವರಾಜ ಪೂಜಾರಿ ಹಾಗೂ ಇನ್ನಿತರ ಎಲ್ಲ ಅಧಿಕಾರಿಗಳಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸ್ವಚ್ಛ ಭಾರತ ಮಿಷನ್‍ನ ಜಿಲ್ಲಾ ಸಂಯೋಜಕಿ ಗುರುಬಾಯಿ ಎಸ್. ಪಾಟೀಲ, ಪಿಡಿಓಗಳು ಹಾಗೂ ಡಾಟಾ ಎಂಟ್ರಿ ಆಪರೇಟರಗಳು ಉಪಸ್ಥಿತರಿದ್ದರು.
ಸೆಪ್ಟೆಂಬರ್ 1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆ ಉದ್ಘಾಟನೆ
**********************************************************************
ಕಲಬುರಗಿ,ಆ.29.(ಕ.ವಾ.)-ಕಲಬುರಗಿ ಜಿಲ್ಲಾ ಮಟ್ಟದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಶಾಖೆಯ ಉದ್ಘಾಟನಾ ಸಮಾರಂಭವನ್ನು 2018ರ ಸೆಪ್ಟೆಂಬರ್ 1ರಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿ ನಗರದ ಸುಪರ ಮಾರ್ಕೇಟ್‍ನಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವ ಪೂರ್ಣ ಡಿಜಿಟಲ್ ಇಂಡಿಯಾ, ಸ್ಕೀಲ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾದ ಭಾಗವಾಗಿ ಅಂಚೆ ಇಲಾಖೆಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಆರಂಭವಾಗುತ್ತಿದೆ. ಕಲಬುರಗಿ ಅಂಚೆ ವಿಭಾಗದಿಂದ ಒಟ್ಟು 10 ಅಂಚೆ ಕಚೆÉೀರಿಗಳಲ್ಲಿ ಬ್ಯಾಂಕಿಂಗ್ ಸೇವೆ ಆರಂಭವಾಗಲಿದೆ. ಪ್ರಾರಂಭಿಕ ಹಂತದಲ್ಲಿ ಕಲಬುರಗಿ ಪ್ರಧಾನ ಅಂಚೆ ಕಚೆÉೀರಿ, ಕಲಬುರಗಿ ಆರ್.ಎಸ್. ಎಂಡಿಜಿ, ಪಿಟಿಸಿ ನಾಗನಹಳ್ಳಿ, ನಂದಿಕೂರ ಹಾಗೂ ಹಾಗರಗಾ ಗ್ರಾಮೀಣ ಶಾಖೆಗಳಲ್ಲಿ ಅಂಚೆ ಬ್ಯಾಂಕಿಂಗ್ ಸೇವೆ ಕಾರ್ಯಾರಂಭಗೊಳ್ಳಲಿದೆ.
ಅದೇ ರೀತಿ ಯಾದಗಿರಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 1ರಂದು ಯಾದಗಿರಿಯ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಮಟ್ಟದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆಯ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಯಾದಗಿರಿ ಪ್ರಧಾನ ಅಂಚೆ ಕಚೇರಿ, ಸೇಡಂ ಎಂಡಿಜಿ, ಕೋಡ್ಲಾ, ಸಿಂಧನಮಡು ಮತ್ತು ಭೀಮನಳ್ಳಿ ಗ್ರಾಮೀಣ ಶಾಖಾ ಅಂಚೆ ಕಚೇರಿಗಳಲ್ಲಿ ಐಪಿಪಿಬಿ ಶಾಖೆಗಳು ಉದ್ಘಾಟನೆಗೊಂಡು ಕಾರ್ಯಾರಂಭಗೊಳ್ಳಲಿದೆ. ನಂತರದ ದಿನಗಳಲ್ಲಿ ಕಲಬುರಗಿ ವಿಭಾಗದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಎಲ್ಲ 625 ಶಾಖೆಗಳಿಗೂ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಬಹು ನಿರೀಕ್ಷಿತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ದೇಶದಾದ್ಯಂತ 2018ರ ಸೆಪ್ಟೆಂಬರ್ 1 ರಂದು ಚಾಲನೆ ನೀಡಲಿದ್ದಾರೆ. ಇಲ್ಲಿಯವರೆಗೆ ಅಂಚೆ ಇಲಾಖೆಯು ಕೇವಲ ಪತ್ರ ವ್ಯವಹಾರ, ಸಣ್ಣ ಉಳಿತಾಯ ಖಾತೆಗಳನ್ನು ಮತ್ತು ಅಂಚೆ ವಿಮೆಯನ್ನು ಹೊಂದಿದ್ದು, ಈಗ ತನ್ನ ವ್ಯಾಪ್ತಿಯನ್ನು ಬ್ಯಾಂಕಿಂಗ್ ಸೇವೆ ನೀಡುವುದರ ಮೂಲಕ ವಿಸ್ತರಿಸಿಕೊಳ್ಳಲಿದೆ.
ಬ್ಯಾಂಕಿನ ವೈಶಿಷ್ಯಗಳು: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಖಾತೆ ತೆರೆಯಲು ಯಾವುದೇ ರೀತಿಯ ಅರ್ಜಿ ನಮೂನೆ ತುಂಬುವ ಅವಶ್ಯಕತೆಯಿಲ್ಲ. ಇದು ಕಾಗದ ರಹಿತ ಖಾತೆ ತೆರೆಯುವ ಹಾಗೂ ವ್ಯವಹರಿಸುವ ಬ್ಯಾಂಕಾಗಿದೆ. ಕೇವಲ ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ನೀಡಿ ಕ್ಷಣಾರ್ಥದಲ್ಲಿ ಸ್ಥಳದಲ್ಲಿಯೇ ಖಾತೆಯನ್ನು ತೆರೆಯಬಹುದಾಗಿದೆ. ನಂತರದ ವ್ಯವಹಾರ ಮಾಡಲು ಯಾವುದೇ ರೀತಿಯ ಫಾರಂ ತುಂಬಬೇಕಿಲ್ಲ. ಇದೊಂದು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ. ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಪ್ರತಿ ವ್ಯವಹಾರಕ್ಕೂ ಎಸ್.ಎಂ.ಎಸ್. ಬರುವುದರಿಂದ ವ್ಯವಹಾರ ಖಚಿತ ಮತ್ತು ಸುರಕ್ಷಿತವಾಗಿದೆ. ಖಾತೆಯ ಸಂಖ್ಯೆಯನ್ನು ನೆನೆಪಿಟ್ಟುಕೊಳ್ಳಬೇಕಿಲ್ಲ, ಈ ಖಾತೆಯಿಂದ ಅಂತರ್ಜಾಲದ ಬ್ಯಾಂಕಿಂಗ್ ಸೇವೆಗಳಾದ ರೈಲ್ವೆ ಟಿಕೆಟ್ ಬುಕಿಂಗ್, ವಿಮಾನ ಟಿಕೇಟ್ ಬುಕಿಂಗ್ ಸೇವೆಗಳು ಹಾಗೂ ಆನ್‍ಲೈನ್ ಎನ್‍ಇಎಫ್‍ಟಿ, ಆರ್‍ಟಿಜಿಎಸ್, ಐಎಮ್‍ಪಿಎಸ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ದಂತ ಆರೋಗ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ರದ್ದು
************************************************
ಕಲಬುರಗಿ,ಆ.29.(ಕ.ವಾ.)- ಕಲಬುರಗಿ ಜಿಲ್ಲೆಯಲ್ಲಿ ಖಾಲಿಯಿರುವ 3 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ನೇಮಕಾತಿಗೆ ಸಂಬಂಧಿಸಿದಂತೆ 2017ರ ಜುಲೈ 21ರಂದು ಅರ್ಜಿ ಆಹ್ವಾನಿಸಲಾಗಿತ್ತು. ಕೆಲವು ಕಾರಣದಿಂದ ಈ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
*****************************
ಕಲಬುರಗಿ,ಆ.29.(ಕ.ವಾ.)-ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ 2018-19ನೇ ಸಾಲಿಗೆ ಶಿಷ್ಯವೇತನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಬನಶಂಕರಿ ವಿ. ಅಂಗಡಿ ತಿಳಿಸಿದ್ದಾರೆ.
ಶಾಸ್ತ್ರೀಯ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕಿರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರಗಳಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಸಂದರ್ಶನದಲ್ಲಿ ಆಯ್ಕೆಯಾಧ ಅಭ್ಯರ್ಥಿಗಳಿಗೆ 10,000 ರೂ.ಗಳ ಶಿಷ್ಯವೇತನವಾಗಿ ನೀಡಲಾಗುವುದು.
ಅರ್ಜಿಗಳನ್ನು ಅಕಾಡೆಮಿಯ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ, ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಯಿಂದ ಅಥವಾ ಅಕಾಡೆಮಿಯ ತಿತಿತಿ.ಞಚಿಡಿಟಿಚಿಣಚಿಞಚಿsಚಿಟಿgeeಣಚಿಟಿಡಿiಣಥಿಚಿಚಿಛಿಚಿಜemಥಿ.ಛಿom ವೆಬ್‍ಸೈಟ್‍ದಿಂದ ಪಡೆಯಬಹುದಾಗಿದೆ.
ಅಂಚೆ ಮೂಲಕ ಅರ್ಜಿ ಪಡೆಯಲಿಚ್ಛಿಸುವರು 10 ರೂ.ಗಳ ಸ್ಟಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆ ಲಗತ್ತಿಸಿ ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ , ಜೆ.ಸಿ. ರಸ್ತೆ ಬೆಂಗಳೂರು-560002 ವಿಳಾಸಕ್ಕೆ ಕಳುಹಿಸಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಹೆಚ್.ಡಿ. ಸಂಶೋಧನೆಗೆ ಡಿ.ಎಸ್.ಟಿ. ಶಿಷ್ಯವೇತನ: ಅರ್ಜಿ ಆಹ್ವಾನ
***********************************************************
ಕಲಬುರಗಿ,ಆ.29.(ಕ.ವಾ.)-ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ.) 2018-19ನೇ ಸಾಲಿನಲ್ಲಿ ವಿಜ್ಞಾನ ಮತ್ತು ಇಂಜಿನಿಯರಿಂಗ್‍ನಲ್ಲಿ ಪಿಹೆಚ್.ಡಿ. ಸಂಶೋಧನೆಗೆ ಡಿ.ಎಸ್.ಟಿ. ಶಿಷ್ಯವೇತನ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಸಂಶೋಧನಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಶೇಷ ನಿರ್ದೇಶಕರು ತಿಳಿಸಿದ್ದಾರೆ.
ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಸಂಸ್ಥೆ, ಕಾಲೇಜುಗಳಲ್ಲಿ ಪಿಹೆಚ್.ಡಿ. ಪದವಿಗೆ ಈಗಾಗಲೇ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಸೆಪ್ಟೆಂಬರ್ 24ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ hಣಣಠಿ://ಞsಣeಠಿs.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.
ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
***********************************
ಕಲಬುರಗಿ,ಆ.29.(ಕ.ವಾ.)-ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅಫಜಲಪುರದ ಪುರಸಭೆ ವ್ಯಾಪ್ತಿಯ 20 ವಾರ್ಡುಗಳಲ್ಲಿ ಸಾರ್ವಜನಿಕರು ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲು ಉದ್ದೇಶಲಾಗಿದೆ. ಈ ಕುರಿತು ಅಫಜಲಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆಗಳಿದ್ದಲ್ಲಿ 2018ರ ಸೆಪ್ಟೆಂಬರ್ 5ರೊಳಗಾಗಿ ಲಿಖಿತವಾಗಿ ಸಲ್ಲಿಸಬೇಕೆಂದು ಅಫಜಲಪುರ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಂಡಗುರ್ತಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಂದ ಸಾಧನೆ
***************************************************
ಕಲಬುರಗಿ,ಆ.29.(ಕ.ವಾ.)-ಚಿತ್ತಾಪುರ ತಾಲೂಕಿನ ದಂಡೋತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗುಂಡಗುರ್ತಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಪ್ರೌಢ ಶಾಲಾ ಬಾಲಕಿಯರ ವಿಭಾಗದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಖೋಖೋ- ಪ್ರಥಮ ಸ್ಥಾನ, ಶಾಟ್ ಪುಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಚಕ್ರ ಎಸೇತ-ಪ್ರಥಮ ಸ್ಥಾನ, ರಿಲೇ ಓಟ (4ಘಿ100) ಪ್ರಥಮ ಸ್ಥಾನ, 100 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 200 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ, 200ಮೀ ಓಟದಲ್ಲಿ ದ್ವಿತೀಯ, ಶಾಟ್ ಪುಟ್ ದ್ವಿತೀಯ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ್ ಆಲ್ದಾರ್ತಿ, ದೈಹಿಕ ಶಿಕ್ಷಕ ಶಿವಾನಂದ ನಿರೋಣಿ ಮತ್ತು ಎಲ್ಲಾ ಶಾಲಾ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 30ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*********************************************
ಕಲಬುರಗಿ,ಆ.29.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಉಪ ವಿತರಣಾ ಕೇಂದ್ರದಿಂದ 33/11 ಕೆ.ವಿ. ಜಂಬಗಾ ಕೇಂದ್ರದಲ್ಲಿ 33 ಮೀಟರ್ ಐಬಿಎಮ್ ಕಂಬಗಳನ್ನು ಎತ್ತಲು ಜಿಆಯ್ ಸಬ್‍ಸ್ಟೇಶನ್ ಲೈನ್‍ನಲ್ಲಿ ಕಾರ್ಯಕೈಗೊಂಡಿರುವ ಪ್ರಯುಕ್ತ ಇದೇ ಆಗಸ್ಟ್ 30ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಜಂಬಗಾ ವಿದ್ಯುತ್ ವಿತರಣಾ ಕೇಂದ್ರ: ಜಂಬಗಾ, ಕಲ್ಲಹಂಗರಗಾ, ತಾಜ್‍ಸುಲ್ತಾನಪುರ, ಚಿಂಚನಸೂರ, ಬನ್ನೂರ, ಕಡಗಂಚಿ ಮತ್ತು ಬಂಬರಗಾ.




ಹೀಗಾಗಿ ಲೇಖನಗಳು NEWS AND PHOTO DATE: 29-8-2018

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 29-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 29-8-2018 ಲಿಂಕ್ ವಿಳಾಸ https://dekalungi.blogspot.com/2018/08/news-and-photo-date-29-8-2018.html

Subscribe to receive free email updates:

0 Response to "NEWS AND PHOTO DATE: 29-8-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ