ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು
ಲಿಂಕ್ : ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು

ಓದಿ


ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು


ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು 04 ನಗರ ಸ್ಥಳೀಯ ಸಂಸ್ಥೆಗಳ 103 ಸ್ಥಾನಗಳಿಗಾಗಿ 3784 ಅಭ್ಯರ್ಥಿಗಳು ಕಣದಲ್ಲಿದ್ದು, ಆ. 31 ರಂದು ನಡೆಯುವ ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. 
     ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳ ಪೈಕಿ ವಾರ್ಡ್ ಸಂಖ್ಯೆ 19 ರಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಈ ವಾರ್ಡ್‍ಗೆ ಅವಿರೋಧ ಆಯ್ಕೆ ಆದಂತಾಗಿದೆ.
ವಾರ್ಡ್ ಸಂಖ್ಯೆ ಹಾಗೂ ಮತಗಟ್ಟೆಗಳು :
************* ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 104 ವಾರ್ಡ್‍ಗಳಿದ್ದು, ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್ ಸಂಖ್ಯೆ 19 ರಲ್ಲಿ ಅವಿರೋಧ ಆಯ್ಕೆಯಾಗಿರುವುದರಿಂದ, 103 ವಾರ್ಡ್‍ಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಒಟ್ಟು 196 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.   ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, ಇಲ್ಲಿ 61 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‍ಗಳಿದ್ದು, 93 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.  ಕುಷ್ಟಗಿ ಪುರಸಭೆಯಲ್ಲಿ ಒಟ್ಟು 23 ವಾರ್ಡ್‍ಗಳಿದ್ದು, ಇಲ್ಲಿ 22 ವಾರ್ಡ್‍ಗಳಲ್ಲಿ ಮಾತ್ರ ಮತದಾನ ನಡೆಯಲಿದೆ.  ಒಟ್ಟು 27 ಮತಗಟ್ಟೆಗಳಿವೆ.  ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 15 ವಾರ್ಡ್‍ಗಳಿದ್ದು, 15 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
941 ಸಿಬ್ಬಂದಿ ನೇಮಕ :
********* ಕೊಪ್ಪಳ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ಯ ಮತದಾನ ಪ್ರಕ್ರಿಯೆ ಸುಗಮವಾಗಿ ಜರುಗಿಸಲು ಅನುಕೂಲವಾಗುವಂತೆ  ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಮತಗಟ್ಟೆ ಸಹಾಯಕರನ್ನು ನೇಮಿಸಲಾಗಿದೆ.  ಜಿಲ್ಲೆಯಲ್ಲಿ ಒಟ್ಟು 196 ಮತಗಟ್ಟೆಗಳಿಗೆ 941 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‍ಗಳಿಗೆ 61 ಮತಗಟ್ಟೆಗಳಿದ್ದು, ಒಟ್ಟು 292 ಸಿಬ್ಬಂದಿ ನೇಮಿಸಲಾಗಿದೆ.  ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‍ಗಳಿಗೆ 93 ಮತಗಟ್ಟೆಗಳಿದ್ದು, ಒಟ್ಟು 447 ಸಿಬ್ಬಂದಿ.  ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ 22 ವಾರ್ಡ್‍ಗಳಿಗೆ 27 ಮತಗಟ್ಟೆಗಳಿದ್ದು, 130 ಸಿಬ್ಬಂದಿ.  ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 15 ವಾರ್ಡ್‍ಗಳಿಗೆ 15 ಮತಗಟ್ಟೆಗಳಿದ್ದು, ಒಟ್ಟು 72 ಸಿಬ್ಬಂದಿಗಳನ್ನು ನೇಮಿಸಲಾಗಿದೆ.
91 ವಾಹನಗಳ ಬಳಕೆ :
********** ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆ. 31 ರಂದು ಜರುಗುವ ಮತದಾನ ಕಾರ್ಯಕ್ಕಾಗಿ  59- ಕ್ರೂಸರ್, 32- ಜೀಪ್ ಸೇರಿದಂತೆ ಒಟ್ಟು 91 ವಾಹನಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.  ಕೊಪ್ಪಳ ನಗರಸಭೆ ಚುನಾವಣೆಗೆ 20 ಕ್ರೂಸರ್, 08- ಜೀಪ್, ಒಟ್ಟು 28 ವಾಹನಗಳು.  ಗಂಗಾವತಿ ನಗರಸಭೆ ವ್ಯಾಪ್ತಿಗೆ 23 ಕ್ರೂಸರ್, 15- ಜೀಪ್, ಒಟ್ಟು 38 ವಾಹನಗಳು.  ಕುಷ್ಟಗಿ ಪುರಸಭೆ ವ್ಯಾಪ್ತಿಗೆ 10 ಕ್ರೂಸರ್, 02- ಜೀಪ್, ಒಟ್ಟು 12 ವಾಹನಗಳು.  ಯಲಬುರ್ಗಾ ಪ.ಪಂ. ವ್ಯಾಪ್ತಿಗೆ 06- ಕ್ರೂಸರ್, 07- ಜೀಪ್ ಸೇರಿದಂತೆ ಒಟ್ಟು 13 ವಾಹನಗಳನ್ನು ಬಳಸಲಾಗುತ್ತಿದೆ.
ಮತದಾರರ ವಿವರ :
********** ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪುರುಷ- 88128, ಮಹಿಳೆ- 89658 ಹಾಗೂ ಇತರೆ 12 ಸೇರಿದಂತೆ ಒಟ್ಟು 177798 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪುರುಷ- 30534,  ಮಹಿಳೆ-30935 ಹಾಗೂ ಇತರೆ-06 ಸೇರಿದಂತೆ ಒಟ್ಟು 61475 ಮತದಾರರಿದ್ದಾರೆ.  ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಪುರುಷ- 41548,  ಮಹಿಳೆ-42248 ಹಾಗೂ ಇತರೆ-01 ಸೇರಿದಂತೆ ಒಟ್ಟು 83797 ಮತದಾರರಿದ್ದಾರೆ.  ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಪುರುಷ- 10635,  ಮಹಿಳೆ-10759 ಹಾಗೂ ಇತರೆ-04 ಸೇರಿದಂತೆ ಒಟ್ಟು 21398 ಮತದಾರರಿದ್ದಾರೆ.   ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪುರುಷ- 5411,  ಮಹಿಳೆ-5716 ಹಾಗೂ ಇತರೆ-01 ಸೇರಿದಂತೆ ಒಟ್ಟು 11128 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಇವಿಯಂ ಯಂತ್ರ ಬಳಕೆ :
********* ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಬಾರಿ ವಿದ್ಯುನ್ಮಾನ ಮತ ಯಂತ್ರಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಕಳೆದ ಮೇ ತಿಂಗಳಿನಲ್ಲಿ ಜರುಗಿದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಳಸಲಾದ ವಿವಿ ಪ್ಯಾಟ್ ಯಂತ್ರವನ್ನು ಸ್ಥಳೀಯ ಸಂಸ್ಥೆ ಚುನಾವಣೆಗೆ ಬಳಸಲಾಗುತ್ತಿಲ್ಲ.  ಆದರೆ ವಿದ್ಯುನ್ಮಾನ ಮತಯಂತ್ರದಲ್ಲಿ ಈ ಬಾರಿ ‘ನೋಟಾ’ ಬಟನ್ ಬಳಸಲಾಗುತ್ತಿದೆ.  ಕೊಪ್ಪಳ ಜಿಲ್ಲೆಯಲ್ಲಿ ಜರುಗುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ತಲಾ 237 ಬ್ಯಾಲೆಟ್ ಯುನಿಟ್ ಹಾಗೂ ಕಂಟ್ರೋಲ್ ಯುನಿಟ್ ಉಪಯೋಗಿಸಲಾಗುತ್ತದೆ.  ಕೊಪ್ಪಳ- 74 ಬ್ಯಾಲೆಟ್ ಯುನಿಟ್ ಹಾಗೂ ಕಂಟ್ರೋಲ್ ಯುನಿಟ್.  ಗಂಗಾವತಿ- 111, ಕುಷ್ಟಗಿ- 34 ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಗೆ 18 ಬ್ಯಾಲೆಟ್ ಯುನಿಟ್ ಹಾಗೂ 18- ಕಂಟ್ರೋಲ್ ಯುನಿಟ್ ಬಳಸಲಾಗುತ್ತದೆ.
     ಕೊಪ್ಪಳ ಜಿಲ್ಲೆಯಲ್ಲಿ ನಗರ, ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ಯ ಆ. 31 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತಗಳ ಎಣಿಕೆ ಆಯಾ ತಾಲೂಕು ಕೇಂದ್ರದಲ್ಲಿ ಸೆ. 03 ರಂದು ನಡೆಯಲಿದೆ.  ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.  ಅಧಿಕಾರಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು ಸುಗಮ ಚುನಾವಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು

ಎಲ್ಲಾ ಲೇಖನಗಳು ಆಗಿದೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು ಲಿಂಕ್ ವಿಳಾಸ https://dekalungi.blogspot.com/2018/08/103-374.html

Subscribe to receive free email updates:

0 Response to "ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : 103 ಸ್ಥಾನಗಳಿಗೆ 374 ಅಭ್ಯರ್ಥಿಗಳು"

ಕಾಮೆಂಟ್‌‌ ಪೋಸ್ಟ್‌ ಮಾಡಿ