ಶೀರ್ಷಿಕೆ : ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಮರುಸ್ಥಾಪನೆ ಕಾರ್ಯ ತೀವ್ರಗತಿಯಲ್ಲಿ-ಸೋಮಶೇಖರ್
ಲಿಂಕ್ : ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಮರುಸ್ಥಾಪನೆ ಕಾರ್ಯ ತೀವ್ರಗತಿಯಲ್ಲಿ-ಸೋಮಶೇಖರ್
ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಮರುಸ್ಥಾಪನೆ ಕಾರ್ಯ ತೀವ್ರಗತಿಯಲ್ಲಿ-ಸೋಮಶೇಖರ್
ಮಡಿಕೇರಿ ಆ.22 (ಕರ್ನಾಟಕ ವಾರ್ತೆ):- ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆ ತೀವ್ರ ಹಾನಿಗೊಳಗಾಗಿದ್ದು, ಸೆಸ್ಕ್ ವತಿಯಿಂದ ಕೈಗೊಂಡ ತ್ವರಿತ ಗತಿಯ ಕಾರ್ಯಾಚರಣೆಯಿಂದ ಹಾಗೂ ಮಳೆ ಪ್ರಮಾಣ ಇಳಿಮುಖವಾಗಿ ಪ್ರಕೃತಿ ಸಹಕರಿಸಿದ ಪರಿಣಾಮ ಇದೀಗ ಜಿಲ್ಲೆಯಲ್ಲಿ ಶೇ. 90 ರಷ್ಟು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಸೆಸ್ಕ್ ನ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಸ್ಮಧಾರಣೆ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ತೀವ್ರ ಹಾನಿ ಉಂಟಾಗಿತ್ತು. ಆದರೆ ಸೆಸ್ಕ್ ಕೈಗೊಂಡ ತ್ವರಿತ ಕಾರ್ಯಾಚರಣೆಯಿಂದಾಗಿ ಜಿಲ್ಲೆಯಲ್ಲಿ ಸದ್ಯ ಶೇ. 90 ರಷ್ಟು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಸೆಸ್ಕ್ ನ ಕಾರ್ಯಾಚರಣೆಗೆ ಪ್ರಕೃತಿಯೂ ಸಹಕಾರ ನೀಡಿದೆ ಎಂದರು. ಅತಿವೃಷ್ಟಿಯಿಂದಾಗಿ ವಿದ್ಯುತ್ ಜಾಲಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸುಮಾರು 05 ಕೋಟಿ ರೂ. ಗಳಷ್ಟು ಹಾನಿಯಾಗಿರುವುದಾಗಿ ಅಚಿದಾಜಿಸಲಾಗಿದೆ. ತೀವ್ರ ಹಾನಿಗೊಳಗಾಗಿರುವ ಗ್ರಾಮಗಳ ಪೈಕಿ ಮಡಿಕೇರಿ ತಾಲೂಕಿನ ದೇವಸ್ತೂರು, ಬೆಟ್ಟತ್ತೂರು, ಪಾಟಿ, ಹಚ್ಚಿನಾಡು, ದೇವರಕೊಲ್ಲಿ, ಹಮ್ಮಿಯಾಲ, ಬಾಳೆಬೆಳಚು, ಮುಕ್ಕೋಡ್ಲು, ಮಕ್ಕಂದೂರು, ಜೋಡುಪಾಲ, ತಂತಿಪಾಲ, ಮದೆನಾಡು, 2ನೆ ಮೊಣ್ಣಂಗೇರಿ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಬೀಡಳ್ಳಿ, ಗರ್ವಾಲೆ, ಸೂರ್ಲಬ್ಬಿ ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಪೂರೈಕೆ ವ್ಯವಸ್ಥೆ ಪುನರ್ ಸ್ಥಾಪಿಸಬೇಕಿದೆ. ಗ್ರಾಮಗಳಿಗೆ ವಾಹನ ತೆರಳಲು ದಾರಿ ಸೂಕ್ತವಾvರದ ಕಾರಣದಿಂದಾಗಿ ಈ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ದುರಸ್ತಿಪಡಿಸಲು ಕಷ್ಟಕರವಾಗಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಸುಮಾರು 3500 ವಿದ್ಯುತ್ ಕಂಬಗಳು, 300 ವಿದ್ಯುತ್ ಪರಿವರ್ತಕಗಳು, ಸುಮಾರು 35 ರಿಂದ 40 ಕಿ.ಮೀ. ನಷ್ಟು ವೈರ್ ಲೈನ್ ಹಾನಿಗ್ಭಿಡಾಗಿದೆ. ದಾರಿ ಇಲ್ಲದ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಸೆಸ್ಕ್ ನ ಸಿಬ್ಬಂದಿಗಳು ಮಾತ್ರವಲ್ಲದೆ ಹೆಚ್ಚುವರಿಯಾಗಿ ಸುಮಾರು 250 ಸಿಬ್ಬಂದಿಗಳನ್ನು ಬೇರೆ ಜಿಲ್ಲೆಗಳಿಂದ ಹಾಗೂ ಗುತ್ತಿಗೆ ಆಧಾರದಲ್ಲಿ ಪಡೆದು, ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ. ಇದರ ಜೊತೆಗೆ ವಿದ್ಯುತ್ ದುರಸ್ತಿಗೆ ಸಂಬಂಧಿಸಿದ ಪರಿಕರ ಹಾಗೂ ಉಪಕರಣಗಳನ್ನು ಸಾಗಿಸಲು 05 ಲಾರಿಗಳು, 23 ಪಿಕಪ್ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ 50-ವಿದ್ಯುತ್ ಪರಿವರ್ತಕಗಳು, 1500 ವಿದ್ಯುತ್ ಕಂಬಗಳು, 50 ಕಿ.ಮೀ. ನಷ್ಟು ವ್ಶೆರ್ ಸೇರಿದಂತೆ ಇತರೆ ಉಪಯುಕ್ತ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ಸಲುವಾಗಿ ಈಗಾಗಲೆ 1912 ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗಳು, ಪರಿಹಾರ ಕೇಂದ್ರಗಳು, ಶಾಲೆಗಳು ಇಲ್ಲಿನ ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಸದ್ಯ ಮಳೆ ಕಡಿಮೆಯಾಗುತ್ತಿದ್ದು, ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಸೆಸ್ಕ್ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎನ್ನುತ್ತಾರೆ ಸೆಸ್ಕ್ ನ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು
ಹೀಗಾಗಿ ಲೇಖನಗಳು ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಮರುಸ್ಥಾಪನೆ ಕಾರ್ಯ ತೀವ್ರಗತಿಯಲ್ಲಿ-ಸೋಮಶೇಖರ್
ಎಲ್ಲಾ ಲೇಖನಗಳು ಆಗಿದೆ ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಮರುಸ್ಥಾಪನೆ ಕಾರ್ಯ ತೀವ್ರಗತಿಯಲ್ಲಿ-ಸೋಮಶೇಖರ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಮರುಸ್ಥಾಪನೆ ಕಾರ್ಯ ತೀವ್ರಗತಿಯಲ್ಲಿ-ಸೋಮಶೇಖರ್ ಲಿಂಕ್ ವಿಳಾಸ https://dekalungi.blogspot.com/2018/08/blog-post_29.html
0 Response to "ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಮರುಸ್ಥಾಪನೆ ಕಾರ್ಯ ತೀವ್ರಗತಿಯಲ್ಲಿ-ಸೋಮಶೇಖರ್"
ಕಾಮೆಂಟ್ ಪೋಸ್ಟ್ ಮಾಡಿ