ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ

ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ
ಲಿಂಕ್ : ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ

ಓದಿ


ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ


ಮಡಿಕೇರಿ ಆ.22 (ಕರ್ನಾಟಕ ವಾರ್ತೆ):-  ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾಗಿರುವವರಿಗೆ, ಸಂತ್ರಸ್ತರಿಗೆ ಆಹಾರ ಧಾನ್ಯಗಳ ಯಾವುದೇ ಕೊರತೆಯಾಗದಂತೆ ಮಾಡಲು ಸರ್ಕಾರ ವಿಶೇಷ ಕ್ರಮ ಕೈಗೊಂಡಿದ್ದು, ಅಕ್ಕಿ, ಬೇಳೆ, ಉಪ್ಪು, ಸಕ್ಕರೆ ಹಾಗೂ ಅಡುಗೆ ಎಣ್ಣೆಯನ್ನೊಳಗೊಂಡ ಕಿಟ್ಸ್‍ಗಳನ್ನು ಪೂರೈಸಲು ನಿರ್ಧರಿಸಿದೆ. ಐದಾರು ದಿನಗಳ ಒಳಗೆ ಕೊಡಗು ಜಿಲ್ಲೆಗೆ ಸುಮಾರು 50 ಸಾವಿರ ಕಿಟ್ಸ್‍ಗಳು ಪೂರೈಕೆಯಾಗಲಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕರುಗಳಾದ ವಿಜಯಕುಮಾರ್ ಹಾಗೂ ಸದಾಶಿವ ಮರ್ಜಿ ಅವರು ತಿಳಿಸಿದ್ದಾರೆ

  ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡಿರುವ ಕಾರ್ಯಗಳ ಕುರಿತು ಮಾಹಿತಿ ನೀಡಿರುವ ಅವರು, ನಿರಾಶ್ರಿತರಿಗೆ ಹಾಗೂ ಸಂತ್ರಸ್ತರಿಗೆ ಆಹಾರದ ಯಾವುದೇ ಕೊರತೆಯಾಗದಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.  ಯಾವುದೇ ಸಂತ್ರಸ್ತರು ಆಹಾರ ಸಾಮಗ್ರಿಗಳ ಕೊರತೆ ಎದುರಿಸಬಾರದು ಎನ್ನುವ ಸದುದ್ದೇಶದಿಂದ ಸರ್ಕಾರ ಕೊಡುಗು ಜಿಲ್ಲೆಗಾಗಿಯೇ ವಿಶೇಷ ಕ್ರಮ ಕೈಗೊಂಡಿದೆ.  ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಅನ್ನು ಪೂರೈಸಲಾಗುತ್ತಿದ್ದು, ಪ್ರತಿ ಒಂದು ಕಿಟ್ 10 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ, 01 ಕೆ.ಜಿ. ಸಕ್ಕರೆ, 01 ಕೆ.ಜಿ. ಉಪ್ಪು ಹಾಗೂ 01 ಲೀ. ಅಡುಗೆ ಎಣ್ಣೆ ಒಳಗೊಂಡಿರುತ್ತದೆ.  ಇಂತಹ 50 ಸಾವಿರ ಕಿಟ್‍ಗಳನ್ನು ಇನ್ನು ಸುಮಾರು ಐದಾರು ದಿನಗಳ ಒಳಗೆ ಜಿಲ್ಲೆಗೆ ಪೂರೈಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.  ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ, ಈ ಕಿಟ್ ಅನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಸ್ಥಳೀಯ ಗ್ರಾಮ ಪಂಚಾಯತಿಗಳ ಮೇಲುಸ್ತುವಾರಿಯಲ್ಲಿ ಅರ್ಹ ಸಂತ್ರಸ್ತರಿಗೆ ಹಾಗೂ ನಿರಾಶ್ರಿತ ಕುಟುಂಬಗಳಿಗೆ ಉಚಿತವಾಗಿ ವಿತರಿಸಲು ಯೋಜಿಸಲಾಗಿದೆ.  ಈ ಉಚಿತ ಕಿಟ್‍ಗಳು ಪಡಿತರ ವ್ಯವಸ್ಥೆಯಲ್ಲಿ ಪೂರೈಸಲಾಗುವ ಆಹಾರ ಧಾನ್ಯಗಳ ಜೊತೆ ಜೊತೆಗೆ, ಹೆಚ್ಚುವರಿಯಾಗಿ ಪೂರೈಸುವ ವ್ಯವಸ್ಥೆ ಇದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ  ವಿಜಯಕುಮಾರ್ ಅವರು ಮಾಹಿತಿ ನೀಡಿದರು.

 ಪ್ರತಿ ಗ್ರಾಮ ಪಂಚಾಯತಿಗೆ 200 ಲೀ. ಸೀಮೆಎಣ್ಣೆ : 
***************ತೀವ್ರ ಮಳೆಯಿಂದ ವಿದ್ಯುತ್ ಸಂಪರ್ಕ ಬಹಳಷ್ಟು ಗ್ರಾಮಗಳಲ್ಲಿ ಕಡಿತಗೊಂಡಿದ್ದು, ವಿದ್ಯುತ್ ಹಾಗೂ ಬೆಳಕಿನ ವ್ಯವಸ್ಥೆಗೆ ತೊಂದರೆಯಾಗಿದೆ.  ಹೀಗಾಗಿ ಗ್ರಾಮೀಣ ಜನರಿಗೆ ಕನಿಷ್ಟ ಪಕ್ಷ ಬೆಳಕಿನ ತುರ್ತು ವ್ಯವಸ್ಥೆಗಾಗಿಯೇ ಪ್ರತಿ ಗ್ರಾಮ ಪಂಚಾಯತಿಗೆ 200 ಲೀ. ಸೀಮೆಎಣ್ಣೆ ಪೂರೈಕೆ ಮಾಡಲಾಗುತ್ತಿದ್ದು, ಆಯಾ ಗ್ರಾಮ ಪಂಚಾಯತಿ ಪಿಡಿಒ ಗಳ ನಿಗಾದಲ್ಲಿ ಪ್ರತಿ ಕುಟುಂಬಕ್ಕೆ 01 ಲೀ. ಸೀಮೆಎಣ್ಣೆಯನ್ನು ಉಚಿತವಾಗಿ ನೀಡಲಾಗುತ್ತಿದೆ.  ಪ್ರತಿ ತಿಂಗಳು ಪಡಿತರ ಚೀಟಿದಾರರಿಗೆ ಪಡಿತರ ವ್ಯವಸ್ಥೆಯಲ್ಲಿ ನೀಡುತ್ತಿರುವ ಆಹಾರ, ಪಡಿತರ ಸಾಮಗ್ರಿಯನ್ನು ಯಥಾ ರೀತಿ ಪಡಿತರ ವ್ಯವಸ್ಥೆಯಲ್ಲಿ ಪೂರೈಕೆ ಮಾಡಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಕೊಡಗು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಅವರು. 
ಪರಿಹಾರ ಕೇಂದ್ರಗಳಲ್ಲಿ ಆಹಾರ ತಯಾರಿಕೆ :
************* ಪರಿಹಾರ ಮತ್ತು ಪುನರ್ವಸತಿ ಕೇಂದ್ರದ ಆಸರೆಯಲ್ಲಿರುವ ಸಂತ್ರಸ್ತ ನಿರಾಶ್ರಿತರಿಗಾಗಿ  ಉಪಹಾರ ಮತ್ತು ಊಟ ಸಿದ್ಧಪಡಿಸಿ ಪೂರೈಸಲು ಅನುಕೂಲವಾಗುವಂತೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಇತರೆ ಆಹಾರ ಸಿದ್ಧತಾ ಸಾಮಗ್ರಿಗಳನ್ನು ಪೂರೈಸಲು ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಗಳ ಮೇಲುಸ್ತುವಾರಿಗಾಗಿ ಆಹಾರ ಇಲಾಖೆ ಉನ್ನತ ಅಧಿಕಾರಿಗಳನ್ನು ನೇಮಿಸಿದೆ.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕರುಗಳಾದ ಸದಾಶಿವ ಮರ್ಜಿ, ವಿಜಯಕುಮಾರ್, ಉಪನಿರ್ದೇಶಕ ಪುಟ್ಟಸ್ವಾಮಿ ಅವರು ಪರಿಹಾರ ಕೇಂದ್ರಗಳಿಗೆ ಆಹಾರ ಸಾಮಗ್ರಿ ಪೂರೈಕೆ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ.  ಈವರೆಗೆ ಇದಕ್ಕಾಗಿ ಸುಮಾರು 150 ಕ್ವಿಂಟಾಲ್ ಅಕ್ಕಿ, 12 ಕ್ವಿಂಟಾಲ್ ಬೇಳೆ, 130 ಗ್ಯಾಸ್ ಸಿಲಿಂಡರ್ ಬಳಕೆ ಮಾಡಲಾಗಿದ್ದು, ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸಾಮಗ್ರಿ, ಸಿಲಿಂಡರ್ ಪೂರೈಸಲು ಇಲಾಖೆ ಸರ್ವ ಸನ್ನದ್ಧವಾಗಿದೆ.  
  ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಜವಾಬ್ದಾರಿ : ಕೊಡಗು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಊಟೋಪಹಾರದ ವ್ಯವಸ್ಥೆ, ವಾಸ್ತವ್ಯದ ವ್ಯವಸ್ಥೆ ಹಾಗೂ ಪರಿಹಾರ ಸಾಮಗ್ರಿಗಳ ಪೂರೈಕೆ ಮಾಡಲಾಗುತ್ತಿದ್ದು, ಇಂತಹ ಪರಿಹಾರ ಕೇಂದ್ರಗಳಲ್ಲಿ ಜಿಲ್ಲೆಯ ಹಲವಾರು ಗ್ರಾಮಗಳ ನಿರಾಶ್ರಿತರು ಆಸರೆ ಪಡೆಯದೇ ಇರುವ ಸಾಧ್ಯತೆಗಳು ಇರುತ್ತದೆ.  ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯದೇ ಇರದ ನಿರಾಶ್ರಿತರಿಗೂ ಆಯಾ ಗ್ರಾಮ ಪಂಚಾಯತಿಗಳ ಮೂಲಕ  ಪರಿಹಾರ ಸಾಮಗ್ರಿ, ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸುವ ಕಾರ್ಯ ನಿರಂತರವಾಗಿ ನಡೆದಿದೆ.  ವಸತಿ ಇಲಾಖೆ ಆಯುಕ್ತ ಅನ್ಬುಕುಮಾರ್ ಅವರು ಬುಧವಾರದಂದು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿಗಳಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದ್ದು, ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡುವಂತಿಲ್ಲ ಎನ್ನುವ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಈಗಾಗಲೆ ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿ ತಾಲೂಕು ಹೆಚ್ಚಿನ ಹಾನಿ ಅನುಭವಿಸಿದೆ.   ಇದರಿಂದಾಗಿ ಸಂತ್ರಸûರಾದವರಿಗೆ ರಾಜ್ಯದ ಎಲ್ಲ ದಿಕ್ಕುಗಳಿಂದಲೂ ಪರಿಹಾರ ಸಾಮಗ್ರಿಗಳ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.  ಎಲ್ಲ ಜಿಲ್ಲಾಡಳಿತಗಳು ಪರಿಹಾರ ಸಾಮಗ್ರಿಗಳನ್ನು ಪಡೆಯಲು ಆಯಾ ಜಿಲ್ಲೆಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಂಡಿದ್ದು, ಇದರ ಜೊತೆಗೆ ಸಾರ್ವಜನಿಕರು, ಹಲವಾರು ಸಂಘ ಸಂಸ್ಥೆಗಳು, ಸಂಘಟನೆಗಳು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗು ಜಿಲ್ಲೆಗೆ ರವಾನಿಸುವ ಕಾರ್ಯವನ್ನು ಮಾಡಿರುವುದು, ಕನ್ನಡಿಗರ ಒಗ್ಗಟ್ಟಿಗೆ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.  


ಹೀಗಾಗಿ ಲೇಖನಗಳು ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ

ಎಲ್ಲಾ ಲೇಖನಗಳು ಆಗಿದೆ ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ ಲಿಂಕ್ ವಿಳಾಸ https://dekalungi.blogspot.com/2018/08/50.html

Subscribe to receive free email updates:

0 Response to "ಸಂತ್ರಸ್ತರಿಗಾಗಿ ಕೊಡಗು ಜಿಲ್ಲೆಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ : ಆಹಾರ ಸಾಮಗ್ರಿಗಳನ್ನೊಳಗೊಂಡ 50 ಸಾವಿರ ಕಿಟ್ಸ್ ಶೀಘ್ರ ಪೂರೈಕೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ