ಶೀರ್ಷಿಕೆ : ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆ. 13 ರಿಂದ ಗ್ರಾಮ ಸ್ವರಾಜ್ ಅಭಿಯಾನ- ವೆಂಕಟ್ ರಾಜಾ
ಲಿಂಕ್ : ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆ. 13 ರಿಂದ ಗ್ರಾಮ ಸ್ವರಾಜ್ ಅಭಿಯಾನ- ವೆಂಕಟ್ ರಾಜಾ
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆ. 13 ರಿಂದ ಗ್ರಾಮ ಸ್ವರಾಜ್ ಅಭಿಯಾನ- ವೆಂಕಟ್ ರಾಜಾ
ಕೊಪ್ಪಳ ಆ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿವಿಧ ಲಸಿಕೆಗಳನ್ನು ನೀಡುವ 09 ಅಂಶಗಳ ಗ್ರಾಮ ಸ್ವರಾಜ್ ಅಭಿಯಾನ ಆಗಸ್ಟ್ 13 ರಿಂದ ಪ್ರಾರಂಭವಾಗಲಿದ್ದು, ವಿವಿಧ ಇಲಾಖೆಗಳ ಸಮನ್ವಯತೆಯ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಸೂಚನೆ ನೀಡಿದರು.
ಗ್ರಾಮ ಸ್ವರಾಜ್ ಅಭಿಯಾನ ಕಾರ್ಯಕ್ರಮ ಕುರಿತು ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಕೊಠಡಿಯಲ್ಲಿ ಮಂಗಳವಾರದಂದು ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡಲಾಗುವ ಹಲವು ಹಂತಗಳ ಲಸಿಕೆ ಕಾರ್ಯಕ್ರಮ ವಿವಿಧ ಕಾರಣಗಳಿಂದಾಗಿ ಅಪೂರ್ಣವಾಗಿರುವ ಸಾಧ್ಯತೆಗಳಿವೆ. ಹಲವು ಮಕ್ಕಳು ಪ್ರಮುಖ ಲಸಿಕೆಗಳಿಂದ ವಂಚಿತರಾಗಿರುವ ಸಂಭವವಿರುತ್ತದೆ. ಹೀಗಾಗಿ ಇಂತಹ ಎಲ್ಲ ಮಕ್ಕಳಿಗೂ ರೋಗ ನಿಯಂತ್ರಕ ಲಸಿಕೆಗಳನ್ನು ಹಾಕಲು ಸರ್ಕಾರ ನಿರ್ಧರಿಸಿದ್ದು, 09 ಅಂಶಗಳನ್ನು ಒಳಗೊಂಡ ಗ್ರಾಮ ಸ್ವರಾಜ್ ಅಭಿಯಾನವನ್ನು ಆಗಸ್ಟ್, ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಮೂರು ಹಂತಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಆಗಸ್ಟ್ 13, 14, 17 ಮತ್ತು 18 ರಂದು ಕಾರ್ಯಕ್ರಮ ಜರುಗಲಿದೆ. ಗ್ರಾಮ ಸ್ವರಾಜ್ ಅಭಿಯಾನವನ್ನು ಕಳೆದ ಜುಲೈ ತಿಂಗಳಿನಲ್ಲಿ ರಾಯಚೂರು ಮತ್ತು ಯಾದಗಿರಿ ಸೇರಿದಂತೆ 10 ಜಿಲ್ಲೆಗಳಲ್ಲಿ ಆಯೋಜಿಸಲಾಗಿತ್ತು. ಇದೀಗ ಆಗಸ್ಟ್ ತಿಂಗಳಿನಿಂದ ಮೂರು ತಿಂಗಳ ಕಾಲ ಕೊಪ್ಪಳ ಸೇರಿದಂತೆ ಉಳಿದ 17 ಜಿಲ್ಲೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗ್ರಾಮ ಸ್ವರಾಜ್ ಅಭಿಯಾನ ಹಮ್ಮಿಕೊಳ್ಳಲು ಈಗಾಗಲೆ ಕೊಪ್ಪಳ ನಗರ ಸೇರಿದಂತೆ ಹಲವೆಡೆ ಫಲಾನುಭವಿ ಮಕ್ಕಳು ಮತ್ತು ಗರ್ಭಿಣಿಯರ ಸಮೀಕ್ಷೆ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಮೂರೂ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಅಭಿಯಾನ ಯಶಸ್ವಿಯಾಗಲು ಸಾಧ್ಯ. ಹೀಗಾಗಿ ಮೂರೂ ಇಲಾಖೆಗಳ ಅಧಿಕಾರಿಗಳು ಸೂಕ್ತ ಸಿದ್ಧತೆ ಕೈಗೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಿಕೆಗೆ, ಜಂತುಹುಳು ನಿವಾರಕ ಮಾತ್ರೆ ವಿತರಣೆಗೆ ಸಹಕರಿಸುವಂತೆ ಸೂಚನೆ ನೀಡಬೇಕು. ಸಮರ್ಪಕ ಕಾರ್ಯ ನಿರ್ವಹಿಸದ ಅಧಿಕಾರಿ, ಸಿಬ್ಬಂದಿಗಳ ಕುರಿತ ವರದಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಲ್ಲಿಸಬೇಕು. ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿ, ಸಿಬ್ಬಂದಿಗಳು ನಮ್ಮ ಜಿಲ್ಲೆಯಲ್ಲಿ ಇರುವುದು ಬೇಡ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 0-5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿಯರನ್ನು ಗುರುತಿಸುವ ಕಾರ್ಯ ಆಗಬೇಕು. ಎಲ್ಲ ಶಾಲೆ, ಕಾಲೇಜು, ಪಾಲಿಟೆಕ್ನಿಕ್‍ಗಳಲ್ಲಿ ಜಂತುನಿವಾರಕ ಮಾತ್ರೆಗಳ ವಿತರಣೆ ಆಗಬೇಕು. ಒಟ್ಟಾರೆ ಗ್ರಾಮ ಸ್ವರಾಜ್ ಅಭಿಯಾನ ಜಿಲ್ಲೆಯಲ್ಲಿ ಸಮರ್ಪಕವಾಗಿ ಜರುಗಬೇಕು. ಯಾವುದೇ ಮಕ್ಕಳು ಅಥವಾ ಗರ್ಭಿಣಿಯರು ಕಾರ್ಯಕ್ರಮದಿಂದ ವಂಚಿತರಾಗದಂತೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮ ಸ್ವರಾಜ್ ಅಭಿಯಾನದ ಪ್ರಮುಖಾಂಶಗಳು :
************* ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಅಲಕಾನಂದ ಮಳಗಿ ಅವರು ಮಾತನಾಡಿ, ಒಂಭತ್ತು ಅಂಶಗಳ ಅನುಷ್ಠಾನದ ಗ್ರಾಮ ಸ್ವರಾಜ್ ಅಭಿಯಾನ ಕಾರ್ಯಕ್ರಮ ಇದಾಗಿದ್ದು, 02 ವರ್ಷದೊಳಗಿನ 10026 ಮಕ್ಕಳು, 5-6 ವರ್ಷದೊಳಗಿನ 4425 ಮಕ್ಕಳು, 1622- ಗರ್ಭಿಣಿಯರಿಗೆ ಲಸಿಕೆ ತಲುಪಿಸಲು ಗುರಿ ಹೊಂದಲಾಗಿದೆ. ಇಂದ್ರಧನುಷ್ ಲಸಿಕಾ ಕಾರ್ಯಕ್ರಮದಡಿ 02 ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡುವುದು. ಎಲ್ಲ ಗರ್ಭಿಣಿಯರಿಗೆ ರಕ್ತಹೀನತೆ ಮತ್ತು ಹೆಚ್.ಐ.ವಿ. ತಪಾಸಣೆ ನಡೆಸುವುದು. ರಾಷ್ಟ್ರೀಯ ಬಾಲಸ್ವಾಸ್ತ್ಯದಡಿ 06 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಯಲ್ಲಿ ತಪಾಸಣೆ ನಡೆಸುವುದು. ಹುಟ್ಟಿನಿಂದ ಬಂದ ನ್ಯೂನ್ಯತೆ, ವಿಕಲಾಂಗತೆ, ಕುಂಠಿತ ಬೆಳವಣಿಗೆ, ಹಾಗೂ ಇತರೆ ರೋಗಗಳ ಬಗ್ಗೆ ಗಮನ ಹರಿಸುವುದು. 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ವಿತರಣೆ. ಕನಿಷ್ಟ 02 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಪ್ರಾರಂಭಿಸುವುದು. ಜಿಲ್ಲಾ ಆಸ್ಪತ್ರೆಯಲ್ಲಿನ ಹೆರಿಗೆ ಕೊಠಡಿ ಗುಣಮಟ್ಟವಿರುವ ಕುರಿತು ಪ್ರಮಾಣೀಕರಿಸುವುದು, ನವಜಾತ ಶಿಶು ಮತ್ತು ಮಕ್ಕಳಿಗೆ ಪೌಷ್ಠಿಕಯುಕ್ತ ಆಹಾರ ನೀಡುವ ಬಗ್ಗೆ ಕುಟುಂಬಗಳೊಂದಿಗೆ ಸಮಾಲೋಚನೆ ನಡೆಸುವುದು. ಕ್ಷಯ ರೋಗ ನಿರ್ಮೂಲನೆಗೆ ವಿವಿಧ ಕ್ರಮ ಕೈಗೊಳ್ಳುವುದು ಗ್ರಾಮ ಸ್ವರಾಜ್ ಅಭಿಯಾನದ ಪ್ರಮುಖ ಕಾರ್ಯಕ್ರಮಗಳಾಗಿವೆ ಎಂದರು.
ಮೂರು ಹಂತಗಳಲ್ಲಿ ಅಭಿಯಾನ :
************ ಸಭೆಯಲ್ಲಿ ಭಾಗವಹಿಸಿದ್ದ ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಶ್ರೀಧರ್ ಅವರು, ಕೇಂದ್ರ ಸರ್ಕಾರವು ಗ್ರಾಮ ಸ್ವರಾಜ್ ಅಭಿಯಾನವನ್ನು ದೇಶಾದ್ಯಂತ 115 ಜಿಲ್ಲೆಗಳ 45137 ಗ್ರಾಮಗಳಲ್ಲಿ ಹಮ್ಮಿಕೊಂಡಿದೆ. ವಿಸ್ತರಿತ ಗ್ರಾಮ ಸ್ವರಾಜ್ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ಜರುಗಲಿದೆ. ‘ಸಬ್‍ಕಾ ಸಾಥ್, ಸಬ್‍ಕಾ ಗಾಂವ್, ಸಬ್‍ಕಾ ವಿಕಾಸ್’ ಎಂಬ ಘೋಷವಾಕ್ಯ ಇದೆ. ಜನಿಸಿದ ಮಕ್ಕಳಿಗೆ 05 ವರ್ಷದೊಳಗೆ 07 ಬಾರಿ ವಿವಿಧ ರೋಗಗಳನ್ನು ನಿಯಂತ್ರಿಸುವ ಲಸಿಕೆ ಹಾಕುವ ಯೋಜನೆಯಿದೆ. ಮೊದಲ ಹಂತದಲ್ಲಿ ಆಗಸ್ಟ್ 13, 14, 17 ಮತ್ತು 18 ರಂದು. ಎರಡನೆ ಹಂತದಲ್ಲಿ ಸೆಪ್ಟಂಬರ್ 10, 11, 14 ಮತ್ತು 15 ಹಾಗೂ ಮೂರನೆ ಹಂತದಲ್ಲಿ ಅಕ್ಟೋಬರ್ 09, 10, 12 ಮತ್ತು 15 ರಂದು ಜರುಗಲಿದೆ. ವಿವಿಧ ಕಾರಣಗಳಿಂದ ಈ ಹಿಂದೆ ಜರುಗಿದ ಇಂದ್ರಧನುಷ್ ಲಸಿಕಾ ಕಾರ್ಯಕ್ರಮದಿಂದ ಹೊರಗುಳಿದ ಗರ್ಭಿಣಿಯರು, 07 ವರ್ಷದೊಳಗಿನ ಎಲ್ಲ ಮಕ್ಕಳು ಈ ಅಭಿಯಾನದ ಫಲಾನುಭವಿಗಳಾಗಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ರಾಮಕೃಷ್ಣ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜಂಬಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್, ಸೇರಿದಂತೆ ಅನುಷ್ಠಾನಾಧಿಕಾರಿಗಳಾದ ಡಾ. ಎಸ್.ಕೆ. ದೇಸಾಯಿ, ಡಾ. ಪ್ರಕಾಶ್, ಡಾ. ರಾಮಾಂಜನೇಯ, ವಿವಿಧ ತಾಲೂಕುಗಳ ವೈದ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆ. 13 ರಿಂದ ಗ್ರಾಮ ಸ್ವರಾಜ್ ಅಭಿಯಾನ- ವೆಂಕಟ್ ರಾಜಾ
ಎಲ್ಲಾ ಲೇಖನಗಳು ಆಗಿದೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆ. 13 ರಿಂದ ಗ್ರಾಮ ಸ್ವರಾಜ್ ಅಭಿಯಾನ- ವೆಂಕಟ್ ರಾಜಾ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆ. 13 ರಿಂದ ಗ್ರಾಮ ಸ್ವರಾಜ್ ಅಭಿಯಾನ- ವೆಂಕಟ್ ರಾಜಾ ಲಿಂಕ್ ವಿಳಾಸ https://dekalungi.blogspot.com/2018/08/13.html
0 Response to "ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆ. 13 ರಿಂದ ಗ್ರಾಮ ಸ್ವರಾಜ್ ಅಭಿಯಾನ- ವೆಂಕಟ್ ರಾಜಾ"
ಕಾಮೆಂಟ್ ಪೋಸ್ಟ್ ಮಾಡಿ