ಶೀರ್ಷಿಕೆ : ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ
ಲಿಂಕ್ : ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ
ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ
ಕೊಪ್ಪಳ ಜು. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಜರುಗಿದ್ದು, ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು ಸೇರಿದಂತೆ ಒಟ್ಟು 509 ಪ್ರಕರಣಗಳು ಇತ್ಯರ್ಥಗೊಂಡಿವೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಆದೇಶದ ಮೇರೆಗೆ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ವಿವಿಧ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ರಾಜೀ ಮಾಡಲಾಯಿತು. ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು-31, ಅಸಲು ದಾವೆಗಳು-140, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು-23, ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು-02, ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮೀನಲ್ ಪ್ರಕರಣಗಳು-35, ಚೆಕ್ ಬೌನ್ಸ್ ಪ್ರಕರಣಗಳು-26 ಹಾಗೂ ಇತರೆ/ ಕ್ರಿಮೀನಲ್ ಪ್ರಕರಣಗಳು-254 ಸೇರಿ ಒಟ್ಟು 509 ಪ್ರಕರಣಗಳು ಇತ್ಯರ್ಥಪಡಿಸಿ ರೂ. 1,77,80,660/- ಮೊತ್ತದ ಪರಿಹಾರ ಹಣಕ್ಕೆ ರಾಜೀ ಮಾಡಲಾಯಿತು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಸಂಜೀವ ವಿ. ಕುಲಕರ್ಣಿ ಅವರು ತಿಳಿಸಿದ್ದಾರೆ.
ಲೋಕ್ ಅದಾಲತ್‍ಗೆ ಸಹಕರಿಸಿದ ಎಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಿಗೆ, ವಕೀಲರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರಿಗೆ, ಸಂಧಾನಕಾರರಿಗೆ, ಕಕ್ಷಿದಾರರಿಗೆ, ಬ್ಯಾಂಕ್/ ಇನ್ಸೂರೆನ್ಸ್ ಮ್ಯಾನೇಜರ್ಸ್‍ಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಹೀಗಾಗಿ ಲೇಖನಗಳು ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ
ಎಲ್ಲಾ ಲೇಖನಗಳು ಆಗಿದೆ ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ ಲಿಂಕ್ ವಿಳಾಸ https://dekalungi.blogspot.com/2018/07/509.html
0 Response to "ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 509 ಪ್ರಕರಣಗಳ ಇತ್ಯರ್ಥ"
ಕಾಮೆಂಟ್ ಪೋಸ್ಟ್ ಮಾಡಿ