ಶೀರ್ಷಿಕೆ : ತೋಟಗಾರಿಕೆ ಅಭಿಯಾನ : ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿ
ಲಿಂಕ್ : ತೋಟಗಾರಿಕೆ ಅಭಿಯಾನ : ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿ
ತೋಟಗಾರಿಕೆ ಅಭಿಯಾನ : ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿ
ಕೊಪ್ಪಳ ಜು. 25 (ಕರ್ನಾಟಕ ವಾರ್ತೆ): ತೋಟಗಾರಿಕೆ ಅಭಿಯಾನದ ಅಂಗವಾಗಿ ಅನೇಕ ರೈತಪರ ಕಾರ್ಯಕ್ರಮಗಳಾದ ರೈತರಿಗೆ ತೋಟಗಾರಿಕೆ ಬಗ್ಗೆ ಅರಿವು, ಹಾಗೂ ಹೊಸ ತಂತ್ರಜ್ಞಾನಗಳ ಬಗ್ಗೆ ತರಬೇತಿ, ಪ್ರಾತ್ಯಕ್ಷಿಕೆ ಮತ್ತು ಕ್ಷೇತ್ರ ವೀಕ್ಷಣೆಯಂತಹ ಕಾರ್ಯಕ್ರಮಗಳು ಕೊಪ್ಪಳ ಜಿಲ್ಲೆಯ ವಿವಿಧ ತಾಲುಕುಗಳಲ್ಲಿ ಯಶಸ್ವಿಯಾಗಿ ಜರುಗಿದವು.
ಜಿಲ್ಲೆಯ ವಿವಿಧ ತಾಲೂಕುಗಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಮ್ಮ ಎಲ್ಲಾ ಸಿಬ್ಬಂದಿಯೊಂದಿಗೆ ಮಾವಿನಲ್ಲಿ ಕೊಯ್ಲಿನ ನಂತರ ಗಿಡಗಳ ನಿರ್ವಹಣೆ, ಸವರುವಿಕೆ, ಪುನ:ಶ್ಚೇತನ ಅಲ್ಲದೇ ಆಧುನಿಕ ತಂತ್ರಜ್ಞಾನಗಳ ಕುರಿತು ಮಾಹಿತಿ ಮತ್ತು ಪ್ರಸಕ್ತ ಸಾಲಿನ ಇಲಾಖಾ ಯೋಜನೆಗಳ ಬಗ್ಗೆ ತೋಟಗಾರಿಕೆ ಬೆಳೆಗಾರರಿಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಗಂಗಾವತಿ ತಾಲೂಕು : ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಪ್ಪ ಮತ್ತು ಎಲ್ಲಾ ಸಿಬ್ಬಂದಿ ವಿರುಪಾಪುರ ಗ್ರಾಮದ ಬ್ರಹ್ಮರಾಜುರವರ ಮಾವಿನ ತೋಟದಲ್ಲಿ "ಆತ್ಮ ಯೋಜನೆ" ಅಡಿಯಲ್ಲಿ ಕ್ಷೇತ್ರೋತ್ಸವ ಆಯೋಜಿಸಿದ್ದರು. ಮಾವಿನ ಬೆಳೆ ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು, ಹೆಚ್ಚು ಕಾಳಜಿಯಿಂದ ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದಲ್ಲಿ ಉತ್ತಮ ಲಾಭ ಪಡೆಯಬಹುದು. ಕೊಯ್ಲಿನ ನಂತರ ಮಾವಿನಲ್ಲಿ ಚಾಟ್ನಿ ತುಂಬ ಅವಶ್ಯಕ. ಉತ್ತಮ ಮಾರುಕಟ್ಟೆ ಬೆಲೆ ದೊರೆಯಬೇಕಾದರೆ ಮತ್ತು ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬೇಕಾದಲ್ಲಿ ಗಾಳಿ-ಬೆಳಕು ಆಡುವಂತೆ ಮಾವಿನ ಮರಗಳ ನಿರ್ವಹಣೆ ತುಂಬ ಮುಖ್ಯ. ಈ ಚಾಟ್ನಿಯನ್ನು ಜುಲೈ ತಿಂಗಳೊಳಗಾಗಿ ಎಲ್ಲಾ ರೈತರು ಮಾಡಿ ಮುಗಿಸಬೇಕು ಎಂದು ತಿಳಿಸಲಾಯಿತು. ವಿಷಯ ತಜ್ಞ ವಾಮಮೂರ್ತಿ ಚಾಟ್ನಿ ವಿಧಾನ ಹೇಳಿಕೊಟ್ಟರು. ಅಧಿಕಾರಿಗಳಾದ ಚಂದ್ರಶೇಖರ, ಮಹಾಂತೇಶ ಮುಂತಾದವರು ಗಿಡಗಳನ್ನು ಪ್ರಯೋಗಿಕವಾಗಿ ಚಾಟ್ನಿ ಮಾಡಿ ರೈತರಿಗೆ ಮಾಹಿತಿ ನೀಡಿದರು.
ಕುಷ್ಟಗಿ ತಾಲೂಕು : ಕುಷ್ಟಗಿ ತಾಲ್ಲೂಕಿನಲ್ಲೂ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾವಿನಲ್ಲಿ ಸವರುವಿಕೆ, ತೋಟಗಾರಿಕೆ ಬೆಳೆಗಳ ನಿರ್ವಹಣೆ ಹಾಗೂ ಪ್ರಸಕ್ತ ಸಾಲಿನ ಯೋಜನೆಗಳ ಬಗ್ಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ ಕೆ.ಎಮ್. ಅವರು ಕುಷ್ಟಗಿ ತಾಲೂಕಿನ ತಿಮ್ಮನಹಟ್ಟಿ ಗ್ರಾಮದ ಶರಣಬಸವರಾಜರವರ ಮಾವಿನ ತೋಪಿನಲ್ಲಿ ನಡೆಸಿಕೊಟ್ಟರು. ತೋಟಗಾರಿಕೆ ಅಧಿಕಾರಿಗಳಾದ ಕಳಕನಗೌಡ, ಶಿವರಾಜ, ವಿದ್ಯಾಧರ, ಆಂಜನೇಯ, ಲೀಲಾವತಿ ಅಲ್ಲದೇ ಎಲ್ಲಾ ಸಿಬ್ಬಂದಿ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.
ಯಲಬುರ್ಗಾ ತಾಲೂಕು : ಯಲಬುರ್ಗಾ ರೈತ ಉತ್ಪಾದಕರ ಕಂಪನಿ, ಸಹಯೋಗದಲ್ಲಿ ತಾಲೂಕಿನ ಮುರಡಿ ಗ್ರಾಮದ ರಾಮಣ್ಣಾ ಬಾವಿರವರ ಮಾವಿನ ತೋಟದಲ್ಲಿ "ಮಾವು ಸವರುವಿಕೆ ಮತ್ತು ರೈತ ಉತ್ಪಾದನೆ ಕಂಪನಿ ಹಾಗೂ ತೋಟಗಾರಿಕೆ" ಬಗ್ಗೆ ಸಮಗ್ರ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಯಲಬುರ್ಗಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಲಿಂಗನಗೌಡ ಪಾಟಿಲ ಮಾತನಾಡಿ, ರೈತರು ತೋಟಗಾರಿಕೆ ಬೆಳೆಗಳ ಉತ್ತಮ ನಿರ್ವಹಣೆ ಕೈಗೊಂಡಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ರೈತರೇ ಗುಂಪು ಕಟ್ಟಿ ತಮ್ಮದೇ ಆದ ಕಂಪನಿ ರಚಿಸಿಕೊಳ್ಳುವ ಮೂಲಕ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಸಾಧ್ಯ. ಪ್ರತಿ ವರ್ಷ ಮಾವಿನಲ್ಲಿ ಕೊಯ್ಲಿನ ನಂತರ ಜುಲೈ ತಿಂಗಳೊಳಗೆ ಚಾಟ್ನಿ ಕೈಗೊಂಡು ಬರುವ ವರ್ಷ ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದು ಎಂದರು. ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಉಮೇಶ ಕಾಳೆ, ಪ್ರವೀಣಕುಮರ, ರಮೇಶ ಹಾಗೂ ವಿಷಯತಜ್ಞ ವಾಮನಮೂರ್ತಿ ಉಪಸ್ಥಿತರಿದ್ದರು. ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಮಲ್ಲಣ್ಣ ಕೋನನಗೌಡ, ಉಪಾಧ್ಯಕ್ಷ ರಾಮಣ್ಣ, ಸಿದ್ದನಗೌಡ, ನಾರಾಯಣಾಚಾರ ಸೇರಿದಂತೆ ಅನೇಕ ಪ್ರಗತಿಪರ ರೈತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರೈತರಿಗೆ ತೋಟಗಾರಿಕೆಯಲ್ಲಿ ಬಳಸಲ್ಪಡುವ ಅನೇಕ ಯಂತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು.
ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ತೋಟಗಾರಿಕೆ ಇಲಾಖೆಯ ಎಲ್ಲ ಅಧಿಕಾರಿಗಳು ವ್ಯವಸ್ಥಿತವಾಗಿ ಸಮರೋಪಾದಿಯಲ್ಲಿ ನಡೆಸುವಂತೆ ಕಲಬುರ್ಗಿ ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕರಾದ ಡಾ. ಶ್ರೀಶೈಲ ದಿಡ್ಡಿಮನಿ ಹಾಗೂ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರ ನಿರ್ದೇಶನದಂತೆ ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ ತಾಲೂಕಿನಲ್ಲಿ ಸಹ ಇದೇ ತಿಂಗಳ ಕಳೆದ ಎರಡನೇ ವಾರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಜುಲೈ ತಿಂಗಳ ಅಂತ್ಯದವರೆಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ರೈತರು ಆಯಾ ತಾಲೂಕಾ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳ ಬಹುದಾಗಿದೆಯೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ತೋಟಗಾರಿಕೆ ಅಭಿಯಾನ : ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿ
ಎಲ್ಲಾ ಲೇಖನಗಳು ಆಗಿದೆ ತೋಟಗಾರಿಕೆ ಅಭಿಯಾನ : ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತೋಟಗಾರಿಕೆ ಅಭಿಯಾನ : ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿ ಲಿಂಕ್ ವಿಳಾಸ https://dekalungi.blogspot.com/2018/07/blog-post_37.html
0 Response to "ತೋಟಗಾರಿಕೆ ಅಭಿಯಾನ : ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿ"
ಕಾಮೆಂಟ್ ಪೋಸ್ಟ್ ಮಾಡಿ