news and Photo Date: 11-6-2018

news and Photo Date: 11-6-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and Photo Date: 11-6-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and Photo Date: 11-6-2018
ಲಿಂಕ್ : news and Photo Date: 11-6-2018

ಓದಿ


news and Photo Date: 11-6-2018

ಜೂನ್ 12ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
************************************************************
ಕಲಬುರಗಿ,ಜೂ.11.(ಕ.ವಾ.)-ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂಲನಾ ಹಾಗೂ ಪುನರ್ವಸತಿ ಸಂಘ ಮತ್ತು ಮಕ್ಕಳ ಸಹಾಯವಾಣಿ 1098 ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ” ದಿನಾಚರಣೆಯನ್ನು ಜೂನ್ 12ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಟಿ. ಕಟ್ಟಿಮನಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂಲನಾ ಹಾಗೂ ಪುನರ್ವಸತಿ ಸಂಘದ ಅಧ್ಯಕ್ಷ ಆರ್. ವೆಂಕಟೇಶಕುಮಾರ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಮುಖ್ಯ ಅತಿಥಿಗಳಾಗಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೀನಾ ರಷ್ಮೀ ಡಿಸೋಜಾ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಾಧವರಾವ ಕೆ. ಪಾಟೀಲ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ದಾಲಮಿಲ್ ಅಸೋಶಿಯೇಶನ್ ಅಧ್ಯಕ್ಷ ಚಿದಂಬರರಾವ ಮರಗುತ್ತಿ, ಕಲಬುರಗಿ ಕಟ್ಟಡ ಕೇಂದ್ರ ವಲಯದ ಕಟ್ಟಡ ಕಾರ್ಮಿಕರ ಜಿಲ್ಲಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯ ಶಂಕರ ಕಟ್ಟಿಸಂಗಾವಿ, ಜಿಲ್ಲಾ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರುಗಳಾದ ಸುರೇಶ ಬಡಿಗೇರ, ಶಿವಶಂಕರ ರೇಷ್ಮಿ, ಎ.ಐ.ಟಿ.ಯು.ಸಿ. ಅಧ್ಯಕ್ಷ ಪ್ರಭು ಯಳಸಂಗಿ, ಚೈಲ್ಡ್‍ಲೈನ್ ನೋಡಲ್ ಕೇಂದ್ರದ ನಿರ್ದೇಶಕ ಡಾ. ಲಿಂಗರಾಜ ಕೋಣಿನ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಬಾಲ್ಯಾವಸ್ಥೆ ಹಾಗೂ ಕಿಶೋರಾವ್ಯವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1996 ಕುರಿತು ಕಲಬುರಗಿ ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ ವಿಶೇಷ ಉಪನ್ಯಾಸ ನೀಡುವರು.
ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಜಗತ್ ವತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯವರೆಗೆ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಶಾಲಾ ವಿದ್ಯಾರ್ಥಿನ್ನೊಳಗೊಂಡ ಜಾಥಾ ಏರ್ಪಡಿಸಲಾಗಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಜಾಥಾಕ್ಕೆ ಚಾಲನೆ ನೀಡುವರು.
ಪೊಲೀಸ್ ಕಾನ್ಸ್‍ಟೇಬಲ್‍ಗಳ ನೇಮಕಾತಿಯ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ
*********************************************************************
ಪರೀಕ್ಷೆ
*******
ಕಲಬುರಗಿ,ಜೂ.11.(ಕ.ವಾ.)-ಹೈದ್ರಾಬಾದ ಕರ್ನಾಟಕ ಪ್ರದೇಶ ವೃಂದದ ಕೆ.ಎಸ್.ಆರ್.ಪಿ. ಘಟಕದ ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್‍ಗಳ ಕ್ರಮವಾಗಿ 419 ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.)ಯನ್ನು 2018ರ ಜೂನ್ 18 ರಿಂದ 27 ರವರೆಗೆ (ಜೂನ್ 24ರ ಸಾರ್ವಜನಿಕ ರಜೆಯನ್ನು ಹೊರತುಪಡಿಸಿ) ಒಟ್ಟು 9 ದಿನಗಳ ಕಾಲ ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ನಡೆಯಲಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕರು ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಹಾಜರಾತಿ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಈಗಾಗಲೇ ಬೆಂಗಳೂರಿನ ನೇಮಕಾತಿ ಮತ್ತು ತರಬೇತಿಯ ಹೆಚ್ಚುವರಿ ಪೊಲೀಸ್ ನಿರ್ದೇಶಕರ ಕಚೇರಿಯಿಂದ ಸಂದೇಶವನ್ನು ರವಾನಿಸಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ತಮಗೆ ಹಾಜರಾತಿ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.) ಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ಮತ ಎಣಿಕೆ: ಮದ್ಯ ಮಾರಾಟ ನಿಷೇಧ
*********************************
ಕಲಬುರಗಿ,ಜೂ.11.(ಕ.ವಾ.)-ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಹಾಲ್‍ನಲ್ಲಿ ಜೂನ್ 12ರಂದು ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಜೂನ್ 12ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 12ರ ಮಧ್ಯರಾತ್ರಿಯವರೆಗೆ ಕಲಬುರಗಿ ನಗರಕ್ಕೆ ಅನ್ವಯವಾಗುವಂತೆ ಮಾತ್ರ ಎಲ್ಲ ತರಹದ ಮದ್ಯಪಾನ ಹಾಗೂ ಮದ್ಯದ ವಹಿವಾಟುಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆಯು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ನಡೆಸಲು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕಲಬುರಗಿ ನಗರಕ್ಕೆ ಅನ್ವಯವಾಗುವಂತೆ ಮಾತ್ರ ಎಲ್ಲ ತರಹದ ಮದ್ಯ, ಸರಾಯಿ, ಸೇಂದಿ, ಸ್ವದೇಶಿ ಹಾಗೂ ವಿದೇಶಿ ಮದ್ಯ ಮಾರಾಟ, ಮಾದಕ ವಸ್ತುಗಳ ಮಾರಾಟ, ಎಲ್ಲ ವೈನ್‍ಶಾಪ್, ಬಾರ್ ಮತ್ತು ರೆಸ್ಟಾರೆಂಟ್‍ಗಳು ಮುಚ್ಚುವಂತೆ ಹಾಗೂ ಎಲ್ಲ ತರಹದ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಲಾಗಿದೆ. ಕರ್ನಾಟಕ ಅಬಕಾರಿ ಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10(ಬಿ) ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮದ್ಯಮಾರಾಟ ನಿಷೇಧ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ
*********************************************************
ಅಧಿಸೂಚಿತ ಮುಖ್ಯ ಬೆಳೆಗಳ ವಿವರ
*******************************
ಕಲಬುರಗಿ,ಜೂ.11.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ 2018-19ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರವು 2018ರ ಏಪ್ರಿಲ್ 12ರಂದು ಆದೇಶ ಹೊರಡಿಸಿದೆ. ಈ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳನ್ನು ಜಿಲ್ಲೆಯ ಎಲ್ಲಾ ತಾಲೂಕುವಾರು, ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಳಿಸಲು ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿ ಲಿ. ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದೆ ಎಂದು ಕಲಬರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮುಸುಕಿನ ಜೋಳ, ಜೋಳ, ಸಜ್ಜೆ, ಉದ್ದು, ತೊಗರಿ, ಹೆಸರು, ಸೋಯಾ ಅವರೆ, ಎಳ್ಳು (ಮಳೆಯಾಶ್ರಿತ), ಜೋಳ, ತೊಗರಿ, ನೆಲಗಡಲೆ (ಶೇಂಗಾ), ಹತ್ತಿ, (ನೀರಾವರಿ ಮತ್ತು ಮಳೆಯಾಶ್ರಿತ) ಹಾಗೂ ಟೊಮೆಟೋ, ಅರಿಶಿಣ ಬೆಳೆಗಳಿಗೆ ವಿಮೆಯ ನೋಂದಣಿಗೆ 2018ರ ಜುಲೈ 31 ಕೊನೆಯ ದಿನವಾಗಿದೆ. ಅದೇ ರೀತಿ ಭತ್ತ, ಮುಸುಕಿನ ಜೋಳ, ಈರುಳ್ಳಿ, ಕೆಂಪು ಮೆಣಸಿನಕಾಯಿ (ನೀರಾವರಿ), ಸೂರ್ಯಕಾಂತಿ, (ನೀರಾವರಿ ಮತ್ತು ಮಳೆಯಾಶ್ರಿತ) ಬೆಳೆಗಳ ನೋಂದಣಿಗೆ 2018ರ ಆಗಸ್ಟ್ 14 ಕೊನೆಯ ದಿನಾಂಕವಾಗಿದೆ. ವಿಮಾ ಮೊತ್ತ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ.
ತಾಲೂಕುವಾರು ಮುಖ್ಯ ಬೆಳೆಗಳ ಹಾಗೂ ಇತರೆ ಬೆಳೆಗಳ ವಿವರ ಇಂತಿದೆ. ಅಫಜಲಪುರ: ಮುಖ್ಯ ಬೆಳೆಗಳು-ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ನೆಲೆಗಡಲೆ(ಶೇಂಗಾ)-ಮಳೆಯಾಶ್ರಿತ, ಮುಸುಕಿನಜೋಳ (ನೀರಾವರಿ ಮತ್ತು ಮಳೆಯಾಶ್ರಿತ). ಇತರೆ ಬೆಳೆಗಳು-ಈರುಳ್ಳಿ (ನೀರಾವರಿ), ಉದ್ದು (ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ಕೆಂಪು ಮೆಣಸಿನಕಾಯಿ (ನೀರಾವರಿ), ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ, ಹತ್ತಿ (ನೀರಾವರಿ ಮತ್ತು ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ) ಹಾಗೂ ಟೊಮ್ಯಾಟೋ ಬೆಳೆಗಳು. ಆಳಂದ: ಮುಖ್ಯ ಬೆಳೆಗಳು-ತೊಗರಿ, ಮುಸುಕಿನ ಜೋಳ (ಮಳೆಯಾಶ್ರಿತ). ಇತರೆ ಬೆಳೆಗಳು-ಈರುಳ್ಳಿ (ನೀರಾವರಿ), ಉದ್ದು, ಎಳ್ಳು, ಜೋಳ, ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ, ಸೋಯಾ ಅವರೆ, ಹೆಸರು (ಮಳೆಯಾಶ್ರಿತ) ಬೆಳೆಗಳು. ಕಲಬುರಗಿ: ಮುಖ್ಯ ಬೆಳೆಗಳು-ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ). ಇತರೆ ಬೆಳೆಗಳು-ಉದ್ದು, ಎಳ್ಳು, ಸಜ್ಜೆ, ಸೂರ್ಯಕಾಂತಿ, ಸೋಯಾಅವರೆ, ಹತ್ತಿ, ಹೆಸರು (ಮಳೆಯಾಶ್ರಿತ).
ಕಲಬುರಗಿ ಉತ್ತರ: ಮುಖ್ಯ ಬೆಳೆಗಳು-ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ಭತ್ತ(ನೀರಾವರಿ), ಮುಸುಕಿನಜೋಳ (ನೀರಾವರಿ ಮತ್ತು ಮಳೆಯಾಶ್ರಿತ). ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಸೋಯಾಅವರೆ, ಹೆಸರು (ಮಳೆಯಾಶ್ರಿತ). ಕಾಳಗಿ: ಮುಖ್ಯ ಬೆಳೆಗಳು-ತೊಗರಿ (ಮಳೆಯಾಶ್ರಿತ), ಭತ್ತ (ನೀರಾವರಿ). ಇತರೆ ಬೆಳೆಗಳು-ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳು. ಚಿಂಚೋಳಿ: ಮುಖ್ಯ ಬೆಳೆಗಳು-ತೊಗರಿ, ಮುಸುಕಿನ ಜೋಳ (ಮಳೆಯಾಶ್ರಿತ). ಇತರೆ ಬೆಳೆಗಳು-ಉದ್ದು, ಎಳ್ಳು(ಮಳೆಯಾಶ್ರಿತ), ಜೋಳ(ನೀರಾವರಿ ಮತ್ತು ಮಳೆಯಾಶ್ರಿತ), ಸಜ್ಜೆ, ಸೂರ್ಯಕಾಂತಿ, ಸೋಯಾಅವರೆ (ಮಳೆಯಾಶ್ರಿತ), ಹತ್ತಿ (ನೀರಾವರಿ), ಹೆಸರು (ಮಳೆಯಾಶ್ರಿತ) ಮತ್ತು ಅರಿಶಿಣ ಬೆಳೆಗಳು.
ಚಿತ್ತಾಪುರ: ಮುಖ್ಯ ಬೆಳೆಗಳು-ತೊಗರಿ (ಮಳೆಯಾಶ್ರಿತ), ಭತ್ತ (ನೀರಾವರಿ). ಇತರೆ ಬೆಳೆಗಳು-ಉದ್ದು, ಎಳ್ಳು, ನೆಲಗಡಲೆ(ಶೇಂಗಾ)-(ನೀರಾವರಿ), ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ).ಜೇವರ್ಗಿ ಮುಖ್ಯ ಬೆಳೆಗಳು-ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ನೆಲಗಡಲೆ(ಶೇಂಗಾ)-(ಮಳೆಯಾಶ್ರಿತ), ಭತ್ತ, ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ). ಇತರೆ ಬೆಳೆಗಳು-ಎಳ್ಳು, ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ, ಹತ್ತಿ (ನೀರಾವರಿ ಮತ್ತು ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ).ಯಡ್ರಾಮಿ: ಮುಖ್ಯ ಬೆಳೆಗಳು-ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ನೆಲಗಡಲೆ(ಶೇಂಗಾ)-(ಮಳೆಯಾಶ್ರಿತ), ಭತ್ತ, ಮುಸುಕಿನ ಜೋಳ(ನೀರಾವರಿ), ಮುಸುಕಿನಜೋಳ (ಮಳೆಯಾಶ್ರಿತ). ಇತರೆ ಬೆಳೆಗಳು-ಎಳ್ಳು, ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ, ಹತ್ತಿ (ಮಳೆಯಾಶ್ರಿತ ಮತ್ತು ನೀರಾವರಿ), ಹೆಸರು (ಮಳೆಯಾಶ್ರಿತ). ಸೇಡಂ: ಮುಖ್ಯ ಬೆಳೆಗಳು-ತೊಗರಿ (ಮಳೆಯಾಶ್ರಿತ), ಭತ್ತ (ನೀರಾವರಿ). ಇತರೆ ಬೆಳೆಗಳು-ಉದ್ದು, ಜೋಳ, ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ ಮತ್ತು ಮಳೆಯಾಶ್ರಿತ), ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳು.
ಸ್ಧಳ, ನಿರ್ದಿಷ್ಟ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅಧಿಸೂಚಿಸಿದೆ. 2018 ರ ಮುಂಗಾರು ಹಂಗಾಮಿನಲ್ಲಿ ಇಂಡೆಮ್ನಿಟಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ.90 ಹಾಗೂ ಮಳೆಯಾಶ್ರಿತ ಬೆಳೆಗಳಿಗೆ ಶೇ.80 ಎಂದು ನಿಗದಿಪಡಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಸರಾಸರಿ ಹಣಕಾಸು ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ಇಂತಹ ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 48 ಗಂಟೆಯೊಳಗೆ ತಿಳಿಸಬೇಕು.
ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದಾಗಿದೆ. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀದಿಯನ್ನು ನೀಡಬೇಕು.
ಈ ಯೋಜನೆಯಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಧೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಒಳಪಡಿಸಲಾಗಿದೆ. ವಿಮಾ ಸಂಸ್ಥೆಗಳು ಬೆಳೆ ಸಾಲ ಪಡೆಯದ ರೈತರು ತಮ್ಮ ಅಧಿಕೃತ ಎಜೆಂಟರ ಮೂಲಕವೇ ಯೋಜನೆಯಡಿ ನೋಂದಾಯಿಸಲು ಅನುಮತಿ ನೀಡಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ 2018ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನಿಗದಿಪಡಿಸಲಾಗಿರುವ ಇಂಡೆಮ್ನಿಟಿ -ಮಟ್ಟ (ಶೇಕಡಾ), ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ ಕುರಿತು ಹಾಗೂ ಹೆಚ್ಚಿನ ಮಾಹಿತಿಯನ್ನು ಆಯಾ ತಾಲೂಕಿನ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ವಾಹನ ಬಾಡಿಗೆಗಾಗಿ ದರಪಟ್ಟಿ ಆಹ್ವಾನ
***********************************
ಕಲಬುರಗಿ,ಜೂ.11.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿರುವ ಹೆಚ್.ಕೆ.ಆರ್.ಡಿ.ಬಿ. ಕೋಶದ ಸಿಬ್ಬಂದಿಯವರಿಗೆ ಒಂದು ವಾಹನವನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ವಿವಿಧ ಟ್ರಾವೆಲ್ ಏಜೆನ್ಸಿಯವರಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಇಚ್ಛೆಯುಳ್ಳ ಟ್ರಾವೆಲ್ಸ್ ಏಜೆನ್ಸಿಯವರು ಜೂನ್ 18ರೊಳಗಾಗಿ ತಮ್ಮ ದರಪಟ್ಟಿಯನ್ನು ಲಗತ್ತಿಸಿ ಭದ್ರಪಡಿಸಿದ ಲಕೋಟೆಯ ಮೇಲೆ ಬಾಡಿಗೆ ವಾಹನದ ತಿಂಗಳ ಬಾಡಿಗೆಯ ದರಪಟ್ಟಿ ಎಂದು ಕಡ್ಡಾಯವಾಗಿ ನಮೂದಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಕಲಬುರಗಿ ವಿಳಾಸಕ್ಕೆ ಸಲ್ಲಿಸಬೇಕು. ಅರ್ಹತೆ, ನಿಬಂಧನೆ ಮುಂತಾದ ಹೆಚ್ಚಿನ ಮಾಹಿತಿಗಾಗಿ ಹೆಚ್.ಕೆ.ಆರ್.ಡಿ.ಬಿ. ಯೋಜನಾ ಶಾಖೆ, ಜಿಲ್ಲಾ ಪಂಚಾಯಿತಿ ಕಾರ್ಯಾಲಯ ಕಲಬುರಗಿ ಇವರನ್ನು ಸಂಪರ್ಕಿಸಲು ಕೋರಿದೆ.
ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ತರಬೇತಿ
ಕಲಬುರಗಿ,ಜೂ.11.(ಕ.ವಾ.)-ಕಲಬುರಗಿಯ ಪಶು ವೈದ್ಯಕೀಯ ಪರಿವೀಕ್ಷಕರ ತರಬೇತಿ ಕೇಂದ್ರದಲ್ಲಿ ಜೂನ್ 21 ರಿಂದ 23ರವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಹಾಗೂ ಜೂನ್ 27 ರಿಂದ 29ರವರೆಗೆ ಹೈನುಗಾರಿಕೆ ಕುರಿತು ರೈತರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ.
ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ಹಾಗೂ ಪ್ರವಾಸದ ಊಟದ ವ್ಯವಸ್ಥೆ ಇರುವುದಿಲ್ಲ. ತರಬೇತಿ ಪಡೆಯಲಿಚ್ಛಿಸುವ ರೈತರು ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಕಲಬುರಗಿ ಸೇಡಂ ರಸ್ತೆಯಲ್ಲಿರುವ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಹಾಗೂ ದೂರವಾಣಿ ಸಂಖ್ಯೆ 08472-220576ನ್ನು ಸಂಪರ್ಕಿಸಲು ಕೋರಲಾಗಿದೆ.
ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ
****************************************
ಕಲಬುರಗಿ,ಜೂ.11.(ಕ.ವಾ.)-ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಕೆಳಕಂಡ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ತಿಳಿಸಿದ್ದಾರೆ.
ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು.ಬಹುಮಾನಕ್ಕಾಗಿ ಸಲ್ಲಿಸುವ ಕೃತಿಗಳು 2017ರ ಜನವರಿ 1 ರಿಂದ ಡಿಸೆಂಬರ್ 31ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಕೃತಿಯ ಪುಟದಲ್ಲಿ ಪ್ರಥಮ ಮುದ್ರಣ 2017 ಎಂದು ಮುದ್ರಿತವಾಗಿರಬೇಕು.
ಕಾವ್ಯ (ವಚನಗಳು ಮತ್ತು ಹನಿಗವನಗಳು ಸೇರಿ), ಯುವಕವಿಗಳ ಪ್ರಥಮ ಸಂಕಲನ (ದೃಢೀಕರಣ ಪತ್ರದೊಂದಿಗೆ), ಕಾವ್ಯ ಹಸ್ತಪ್ರತಿ- 30ವರ್ಷದೊಳಗಿರುವ ಯುವ ಕವಿಗಳು ತಮ್ಮ ಅಪ್ರಕಟಿತ ಪ್ರಥಮ ಕವನ ಸಂಕಲನದ ಹಸ್ತಪ್ರತಿಯನ್ನು ಕಳಿಸಿಕೊಡಬೇಕು. ಕಾದಂಬರಿ, ಸಣ್ಣಕಥೆ, ನಾಟಕ, ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ), ಪ್ರವಾಸ ಸಾಹಿತ್ಯ, ಜೀವನಚರಿರೆ/ಆತ್ಮಕಥೆ, ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ (ಭೌತ, ರಸಾಯನ, ಗಣಿತ, ಪ್ರಾಣಿ, ಸಸ್ಯ, ಇಂಜಿನಿಯರಿಂಗ್, ವೈದ್ಯ, ಭೂ, ಖಗೋಳ, ಗೃಹವಿಜ್ಞಾನ, ಪರಿಸರ), ಮಾನವಿಕ (ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನ:ಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಭಂಡಾರ ವಿಜ್ಞಾನ, ಸಮೂಹ ಸಂವಹನ, ಧಾರ್ಮಿಕ, ದಾರ್ಶನಿಕ).
ಸಂಶೋಧನೆ (ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕøತಿಗಳಿಗೆ ಸಂಬಂಧಿಸಿದ ಸಂಶೋಧನೆ), ವೈಚಾರಿಕ/ಅಂಕಣ ಬರಹ, ಅನುವಾದ-ಸೃಜನ-(ಕಾದಂಬರಿ, ಕಾವ್ಯ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನಚರಿತ್ರೆ, ಸೃಜನೇತರ (ಶಾಸ್ತ್ರಸಾಹಿತ್ಯ, ಸಾಹಿತ್ಯ ವಿಮರ್ಶೆ), ಅನುವಾದ-2(ಸೃಜನ-ಸೃಜನೇತರ) ಕನ್ನಡದಿಂದ ಅನ್ಯಭಾಷೆಗೆ ಅನುವಾನದೊಂಡ ಕೃತಿ, ಲೇಖಕರ ಮೊದಲ ಸ್ವತಂತ್ರ ಕೃತಿಗೆ ಬಹುಮಾನ:-2017ರಲ್ಲಿ ಪ್ರಕಟವಾದ ಹೊಸ ಬರಹಗಾರರ ಮೊದಲ ಸ್ವತಂತ್ರ ಕೃತಿಯೆಂದು ಖಾತರಿಪಡಿಸುವ ದೃಢೀಕರಣ ಪತ್ರ ಲಗತ್ತಿಸಬೇಕು. ಕನ್ನಡದಿಂದ ಇಂಗ್ಲೀಷಿಗೆ ಅನುವಾದ.
ಮೇಲ್ಕಂಡ ಅವಧಿಯಲ್ಲಿ ಪುಸ್ತಕಗಳ ತಲಾ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ/ಕೋರಿಯರ್ ಮೂಲಕ ಅಥವಾ ಖುದ್ದಾಗಿ ಜೂನ್ 25ರೊಳಗಾಗಿ ಸಲ್ಲಿಸಬೇಕು. ಕಳುಹಿಸಲ್ಪಡುವ ಕೃತಿಯ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿsಚಿhiಣhಥಿಚಿಚಿಛಿಚಿಜemಥಿ.oಡಿg ಅಥವಾ ದೂರವಾಣಿ ಸಂಖ್ಯೆ 080-22211730, 22106460ಗಳನ್ನು ಸಂಪರ್ಕಿಸಲು ಕೋರಲಾಗಿದೆ.


ಹೀಗಾಗಿ ಲೇಖನಗಳು news and Photo Date: 11-6-2018

ಎಲ್ಲಾ ಲೇಖನಗಳು ಆಗಿದೆ news and Photo Date: 11-6-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and Photo Date: 11-6-2018 ಲಿಂಕ್ ವಿಳಾಸ https://dekalungi.blogspot.com/2018/06/news-and-photo-date-11-6-2018.html

Subscribe to receive free email updates:

0 Response to "news and Photo Date: 11-6-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ