ಶೀರ್ಷಿಕೆ : ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಲಿಂಕ್ : ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಜೂ. 12 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಹೊಸಬಂಡಿಹರ್ಲಾಪೂರ ಗ್ರಾಮದ ನಿವಾಸಿ ಕುರ್ಶಿದ ಅಲಂ ಖಾನ (34) ತಂದೆ ರಾಜೇಸಾಬ ಎಂಬ ವ್ಯಕ್ತಿ ಏ. 28 ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಮುನಿರಾಬಾದ ಪೊಲೀಸ್ ಠಾಣೆಯ ಅಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕುರ್ಶಿದ ಅಲಂ ಖಾನ (34), ಏ. 28 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬ್ಯಾಂಕಿನಲ್ಲಿ ಕೆಲಸ ಇದೆ ಹೋಗುತ್ತೇನೆಂದು ಹೇಳಿ ಹೊಸಬಂಡಿಹರ್ಲಾಪೂರ ಗ್ರಾಮದ ಮನೆಯಿಂದ ಹೋಗಿದ್ದು, ವಾಪಸ್ಸ ಬಾರದೇ ಕಾಣೆಯಾಗಿದ್ದಾನೆ ಎಂದು ಕಾಣೆಯಾದ ವ್ಯಕ್ತಿಯ ತಂದೆ ರಾಜೇಸಾಬ ಅವರು ಮುನಿರಾಬಾದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ವಿವರ ಇಂತಿದೆ. ಅಲಂ ಖಾನ ತಂದೆ ರಾಜೇಸಾಬ, ವಯಸ್ಸು 34, ಎತ್ತರ 5.6 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಹಣೆಯಲ್ಲಿ ಬಿಳಿ ಮಚ್ಚೆ ಇದೆ. ಕಾಣೆಯಾದಾಗ ಬಿಳಿ & ನೀಲಿ ಬಣ್ಣದ ಟೀ ಶರ್ಟ ಹಾಗೂ ಜೀನ್ಸ್ ಫ್ಯಾಂಟ್ ಧರಿಸಿದ್ದು, ಕನ್ನಡ, ತೆಲಗು, ಹಿಂದಿ ಹಾಗೂ ಉರ್ದು ಭಾಷೆಗಳನ್ನು ಮಾತನಾಡುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಎಸ್.ಪಿ ಕಛೇರಿ ದೂ.ಸಂ 08539-230111, ಡಿವೈಎಸ್‍ಪಿ ದೂ.ಸಂ 08539-230432, ಮೊ.ಸಂ-9480803720, ಸಿಪಿಐ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ 08539-222433, ಮೊ.ಸಂ-9480803731 ಹಾಗೂ ಪಿಎಸ್‍ಐ ಮುನಿರಾಬಾದ ದೂ.ಸಂ 08539-27033, ಮೊ.ಸಂ-9480803748 ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಎಲ್ಲಾ ಲೇಖನಗಳು ಆಗಿದೆ ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ ಲಿಂಕ್ ವಿಳಾಸ https://dekalungi.blogspot.com/2018/06/blog-post_12.html
0 Response to "ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ"
ಕಾಮೆಂಟ್ ಪೋಸ್ಟ್ ಮಾಡಿ