ಶೀರ್ಷಿಕೆ : ಮುಂಗಾರು ಹಂಗಾಮು : ಬೆಳೆ ವಿಮೆ ನೊಂದಾಯಿಸಿಕೊಳ್ಳಲು ರೈತರಿಗೆ ಸೂಚನೆ
ಲಿಂಕ್ : ಮುಂಗಾರು ಹಂಗಾಮು : ಬೆಳೆ ವಿಮೆ ನೊಂದಾಯಿಸಿಕೊಳ್ಳಲು ರೈತರಿಗೆ ಸೂಚನೆ
ಮುಂಗಾರು ಹಂಗಾಮು : ಬೆಳೆ ವಿಮೆ ನೊಂದಾಯಿಸಿಕೊಳ್ಳಲು ರೈತರಿಗೆ ಸೂಚನೆ
ಕೊಪ್ಪಳ ಜೂ. 11 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗಾಗಿ ನೊಂದಾಯಿಸಿಕೊಳ್ಳುವಂತೆ ಕೊಪ್ಪಳ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ತಾಲೂಕವಾರು ಮುಖ್ಯ ಬೆಳೆಗಳ ಹಾಗೂ ಹೋಬಳಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳ ವಿವರ ಇಂತಿದೆ. ಗಂಗಾವತಿ ತಾಲೂಕು ನೀರಾವರಿ ಭತ್ತ. ಕೊಪ್ಪಳ ಮತ್ತು ಕುಷ್ಟಗಿ ತಾಲೂಕಿನ ಮಳೆಯಾಶ್ರಿತ ಮುಸಕಿನಜೋಳ ಹಾಗೂ ಸಜ್ಜೆ. ಯಲಬುರ್ಗಾ ತಾಲೂಕಿನ ಮಳೆಯಾಶ್ರಿತ ಹೆಸರು ಮತ್ತು ಮುಸುಕಿನಜೋಳ. ಹೋಬಳಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಾದ ಮಳೆಯಾಶ್ರಿತ ಮತ್ತು ನೀರಾವರಿ ಭತ್ತ, ಜೋಳ, ಮುಸಕಿನ ಜೋಳ, ಸಜ್ಜೆ, ಸೂರ್ಯಕಾಂತಿ, ತೊಗರಿ, ನೆಲಗಡಲೆ (ಶೇಂಗಾ), ಹತ್ತಿ. ಮಳೆಯಾಶ್ರಿತ ಅಲಸಂದಿ, ನವಣೆ, ಹೆಸರು, ಹುರಳಿ, ಎಳ್ಳು, ಹರಳು ಮತ್ತು ನೀರಾವರಿ ಈರುಳ್ಳಿ, ಟೊಮ್ಯಾಟೊ.
ವಿಮಾ ಮೊತ್ತ ಮತ್ತು ಕಂತು :
************ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನಿಗಧಿಪಡಿಸಲಾಗಿರುವ ಇಂಡೆಮ್ನಿಟಿ ಮಟ್ಟ, ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ ಇಂತಿದೆ. ನೀರಾವರಿ ಭತ್ತಕ್ಕೆ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 86000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಭತ್ತಕ್ಕೆ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 54000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ನೀರಾವರಿ ಮುಸುಕಿನ ಜೋಳಕ್ಕೆ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 59000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಮುಸುಕಿನ ಜೋಳಕ್ಕೆ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 50000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ನೀರಾವರಿ ಜೋಳ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 40000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಜೋಳ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 34000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ನೀರಾವರಿ ಸಜ್ಜೆ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 38000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಸಜ್ಜೆ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 29000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ನವಣೆ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 27000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ನೀರಾವರಿ ತೊಗರಿ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 42000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ತೊಗರಿ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 42000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಹೆಸರು ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 29000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಹುರುಳಿ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 18000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ನೀರಾವರಿ ಸೂರ್ಯಕಾಂತಿ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 42000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಸೂರ್ಯಕಾಂತಿ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 35000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಎಳ್ಳು ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 25000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ನೀರಾವರಿ ನೆಲಗಡಲೆ (ಶೇಂಗಾ) ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 57000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ನೆಲಗಡಲೆ (ಶೇಂಗಾ) ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 46000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಅಲಸಂದೆ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 26000, ಮತ್ತು ಶೇ.2 ರಷ್ಟು ರೈತರ ವಿಮಾ ಕಂತು. ನೀರಾವರಿ ಹತ್ತಿ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 67000, ಮತ್ತು ಶೇ.5 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಹತ್ತಿ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 43000, ಮತ್ತು ಶೇ.5 ರಷ್ಟು ರೈತರ ವಿಮಾ ಕಂತು. ಟೊಮ್ಯಾಟೋ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 118000, ಮತ್ತು ಶೇ.5 ರಷ್ಟು ರೈತರ ವಿಮಾ ಕಂತು. ನೀರಾವರಿ ಈರುಳ್ಳಿ ಇಂಡೆಮ್ನಿಟಿ ಮಟ್ಟ-ಶೇ.90, ವಿಮಾ ಮೊತ್ತ ರೂ. 75000, ಮತ್ತು ಶೇ.5 ರಷ್ಟು ರೈತರ ವಿಮಾ ಕಂತು. ಮಳೆ ಆಶ್ರಿತ ಈರುಳ್ಳಿ ಇಂಡೆಮ್ನಿಟಿ ಮಟ್ಟ-ಶೇ.80, ವಿಮಾ ಮೊತ್ತ ರೂ. 75000, ಮತ್ತು ಶೇ.5 ರಷ್ಟು ರೈತರ ವಿಮಾ ಕಂತು.
ನೀರಾವರಿ ಹತ್ತಿ ಮತ್ತು ಮಳೆಯಾಶ್ರಿತ ಹೆಸರು ಬೆಳೆಗೆ ನೊಂದಾಯಿಸಲು ಜುಲೈ. 16 ಕೊನೆಯ ದಿನ ಹಾಗೂ ಇತರೆ ಅಧಿಸೂಚಿತ ಬೆಳೆಗಳಿಗೆ ನೊಂದಾಯಿಸಲು ಜುಲೈ. 31 ಕೊನೆಯ ದಿನವಾಗಿದ್ದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಎಲ್ಲಾ ವರ್ಗದ ರೈತರು ಬೆಳೆವಿಮೆ ಪ್ರೀಮಿಯಂ ತುಂಬಿ ಯೋಜನೆಯ ಪ್ರಯೋಜನೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರಿ ಇಲಾಖೆ, ಸ್ಥಳೀಯ ವಾಣಿಜ್ಯ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಮುಂಗಾರು ಹಂಗಾಮು : ಬೆಳೆ ವಿಮೆ ನೊಂದಾಯಿಸಿಕೊಳ್ಳಲು ರೈತರಿಗೆ ಸೂಚನೆ
ಎಲ್ಲಾ ಲೇಖನಗಳು ಆಗಿದೆ ಮುಂಗಾರು ಹಂಗಾಮು : ಬೆಳೆ ವಿಮೆ ನೊಂದಾಯಿಸಿಕೊಳ್ಳಲು ರೈತರಿಗೆ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮುಂಗಾರು ಹಂಗಾಮು : ಬೆಳೆ ವಿಮೆ ನೊಂದಾಯಿಸಿಕೊಳ್ಳಲು ರೈತರಿಗೆ ಸೂಚನೆ ಲಿಂಕ್ ವಿಳಾಸ https://dekalungi.blogspot.com/2018/06/blog-post_43.html
0 Response to "ಮುಂಗಾರು ಹಂಗಾಮು : ಬೆಳೆ ವಿಮೆ ನೊಂದಾಯಿಸಿಕೊಳ್ಳಲು ರೈತರಿಗೆ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ