ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ

ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ
ಲಿಂಕ್ : ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ

ಓದಿ


ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ

ಕೊಪ್ಪಳ ಜೂ. 11 (ಕರ್ನಾಟಕ ವಾರ್ತೆ): ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ರೈತರು ಆರ್ಥಿಕ ಲಾಭ ಪಡೆಯುವಂತಾಗಲು ರೈತರಿಗೆ ತರಬೇತಿ ನೀಡುವ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಕೊಪ್ಪಳ ಕೃಷಿ ಇಲಾಖೆ ಸಭಾ ಭವನದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಹೊಸ ತೋಟಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ 50 ಫಲಾನುಭವಿಗಳಿಗೆ ಆರ್ಥಿಕ ಸೌಲಭ್ಯ ಒದಗಿಸಲಾಗಿದೆ.  ಸಮಗ್ರ ಪೋಷಕಾಂಶ/ ಕೀಟ ನಿರ್ವಹಣೆಗೆ ಪ್ರೋತ್ಸಾಹ ನೀಡುವ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ 17 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ.  ಜೇನು ಕೃಷಿ ಮತ್ತು ಮಧುವನ ನಿರ್ಮಾಣಕ್ಕೂ ಉತ್ತೇಜನ ನೀಡಲಾಗುತ್ತಿದೆ.  ಜೇನು ಬೆಳೆಗಾರರ ಸಂಘವನ್ನು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ರಚಿಸಲಾಗಿದೆ.  ಶುದ್ಧ ಜೇನುತುಪ್ಪಕ್ಕೆ ಸುಮಾರು 500 ರೂ. ಗಳಿಂದ 1000 ವರೆಗೂ ಲಭ್ಯವಾಗುತ್ತದೆ  ಎಂದು ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕರಡಿ ಸಂಗಣ್ಣ ಅವರು, ಜಿಲ್ಲೆಯಲ್ಲಿ ರಚಿಸಲಾಗಿರುವ ಜೇನು ಬೆಳೆಗಾರರ ಸಂಘಗಳ ಸದಸ್ಯರುಗಳಿಗೆ ಹೆಚ್ಚಿನ ತರಬೇತಿ ಅಗತ್ಯವಿದೆ.  ಜಿಲ್ಲೆಯಲ್ಲಿ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೂ ಬೆಳೆಗಳ ಮೌಲ್ಯವರ್ಧನೆ ಕುರಿತು ಹೆಚ್ಚಿನ ತರಬೇತಿಯ ಅಗತ್ಯವಿದೆ.  ರೈತರು ದ್ರಾಕ್ಷಿ ಸಂಸ್ಕರಣೆ ಮಾಡಲು ಮುಂದಾಗಬೇಕು.  ಒಣ ದ್ರಾಕ್ಷಿ ಘಟಕ ಕೈಗೊಂಡಲ್ಲಿ ಒಳ್ಳೆಯ ಲಾಭ ದೊರೆಯುತ್ತದೆ.  ಒಳ್ಳೆಯ ತಂತ್ರಜ್ಞಾನ ಬಳಸಿದಲ್ಲಿ ಒಣದ್ರಾಕ್ಷಿ ಗುಣಮಟ್ಟದ್ದಾಗಲಿದ್ದು, ಒಳ್ಳೆಯ ದರ ಮತ್ತು ಆರ್ಥಿಕ ಲಾಭ ಕಂಡುಕೊಳ್ಳಬಹುದು.  ತೋಟಗಾರಿಕೆ ಇಲಾಖೆಯು ಬೆಳೆಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ಮೌಲ್ಯವರ್ಧನೆ, ಮಾರುಕಟ್ಟೆ ವ್ಯವಸ್ಥೆ ಕುರಿತಂತೆ ರೈತರಿಗೆ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಂಸದರು ಸೂಚನೆ ನೀಡಿದರು.
ಜಾನುವಾರು ಪರಿಸ್ಥಿತಿ ಕುರಿತು ವರದಿ ನೀಡಿ :
************** ಕೊಪ್ಪಳ ಜಿಲ್ಲೆಯಲ್ಲಿ ಪಶುಸಂಗೋಪನೆ ಇಲಾಖೆ ವತಿಯಿಂದ ಹೈನುಗಾರಿಕೆ ಮತ್ತು ಕುರಿ, ಕೋಳಿ, ಮೇಕೆ ಸಾಕಾಣಿಕೆ ಕುರಿತಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.  ಪಶುಭಾಗ್ಯ, ಅಮೃತ ಯೋಜನೆ, ಕೋಳಿ ಸಾಕಾಣಿಕೆ ಯೋಜನೆಗಳಡಿ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತಿದೆ.  ಆದರೆ, ಇಂತಹ ಯೋಜನೆಗಳನ್ನು ಪಡೆದುಕೊಂಡಬಳಿಕ, ಜಿಲ್ಲೆಯಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಆಗುತ್ತಿರುವ ಸುಧಾರಣೆ, ಮಹಿಳಾ ರೈತರ ಆರ್ಥಿಕ ಸ್ಥಿತಿಗತಿಯ ಸುಧಾರಣೆ, ಜಾನುವಾರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೇ ಎನ್ನುವುದರ ಬಗ್ಗೆ ಪರಾಮರ್ಶೆ ಆಗಬೇಕಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ತಿಳಿಸಿದರು.  ಇದಕ್ಕೆ ಉತ್ತರಿಸಿದ ಪಶುಸಂಗೋಪನೆ ಇಲಾಖೆ ಅಧಿಕಾರಿ ಡಾ. ಸಾಲಿ ಅವರು, ಜಿಲ್ಲೆಯಲ್ಲಿ ಕಳೆದ ವರ್ಷ ಕೈಗೊಂಡ ಜಾನುವಾರು ಗಣತಿಯಲ್ಲಿ ಸುಮಾರು 2. 75 ಲಕ್ಷ ಜಾನುವಾರು ಹಾಗೂ 12 ಲಕ್ಷ ಕೋಳಿ ಇರುವ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿತ್ತು.  ಈ ವರ್ಷದ ಜಾನುವಾರು ಗಣತಿ ಜುಲೈ ತಿಂಗಳಿನಲ್ಲಿ ಕೈಗೊಳ್ಳಲಾಗುತ್ತಿದ್ದು, ಸಮೀಕ್ಷೆ ಬಳಿಕ ವರದಿ ಸಲ್ಲಿಸಲಾಗುವುದು ಎಂದರು.
ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ :
*************** ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ 2017-18 ನೇ ಸಾಲಿನಲ್ಲಿ ನೀಡುವ ಸಾಲ ಯೋಜನೆಗಳಡಿ ಜಿಲ್ಲೆಯಲ್ಲಿ ಇದುವರೆಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಕರಡಿ ಸಂಗಣ್ಣ ಅವರು, ಸರ್ಕಾರ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಸಾಲ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸುತ್ತವೆ.  ಆದರೆ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಯೋಜನೆಗಳು ನಿರೀಕ್ಷಿತ ಉದ್ದೇಶ ತಲುಪಲು ವಿಫಲವಾಗುತ್ತವೆ.  ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಕೂಡಲೆ ಫಲಾನುಭವಿಗಳಿಗೆ ಇನ್ನಾದರೂ ಸೌಲಭ್ಯ ತಲುಪಿಸಿ ಎಂದು ತಾಕೀತು ಮಾಡಿದರು.  ಗಂಗಾ ಕಲ್ಯಾಣ ಯೋಜನೆಯಡಿ ಅಲ್ಪಸಂಖ್ಯಾತರರಿಗೆ ಕಳೆದ ವರ್ಷ 02 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂಬುದಾಗಿ ಜೆಸ್ಕಾಂ ಅಧಿಕಾರಿಗಳು ನೀಡಿದ ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, 271 ಫಲಾನುಭವಿಗಳಿಗೆ ಶೇ. 15 ರಂತೆ ಅಲ್ಪಸಂಖ್ಯಾತ ಸಮುದಾಯದ ಒಟ್ಟು 40 ಫಲಾನುಭವಿಗಳ ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು.  ಆದರೆ ಕೇವಲ 02 ಕ್ಕೆ ಮಾತ್ರ ಸಂಪರ್ಕ ಕಲ್ಪಿಸಲಾಗಿದೆ.   ಕಳೆದ ಆರ್ಥಿಕ ವರ್ಷದ ಫಲಾನುಭವಿಗಳಿಗೆ ಇನ್ನೂ ಬೋರ್‍ವೆಲ್ ಕೊರೆಯಿಸಿಲ್ಲ.  ಈ ಫಲಾನುಭವಿಗಳ ಹೊಲದಲ್ಲಿ ಬೋರ್‍ವೆಲ್ ಕೊರೆಯಿಸುವುದು, ಪಂಪ್‍ಸೆಟ್ ಮೋಟಾರು ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸುವುದು ಯಾವಾಗ ಎಂದು ಜೆಸ್ಕಾಂ ಮತ್ತು ನಿಗಮಗಳ ಅಧಿಕಾರಿಗಳಿಗೆ ಸಂಸದರು ತರಾಟೆಗೆ ತೆಗೆದುಕೊಂಡರು.
     ವಿವಿಧ ಇಲಾಖೆಗಳಡಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಒದಗಿಸಲಾಗಿರುವ ಸೌಲಭ್ಯಗಳ ಕುರಿತು ಇದೇ ಸಂದರ್ಭದಲ್ಲಿ ಸಂಸದರು ಪ್ರಗತಿ ಪರಿಶೀಲನೆ ನಡೆಸಿದರು.  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಸಿರಾಜ್ ಕರಮುಡಿ, ಮಹಮ್ಮದ್ ಸಿರಾಜ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೆಹಮೂದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ

ಎಲ್ಲಾ ಲೇಖನಗಳು ಆಗಿದೆ ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ ಲಿಂಕ್ ವಿಳಾಸ https://dekalungi.blogspot.com/2018/06/blog-post_23.html

Subscribe to receive free email updates:

0 Response to "ತೋಟಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತ ರೈತರ ತರಬೇತಿಗೆ ಒತ್ತು ನೀಡಿ- ಕರಡಿ ಸಂಗಣ್ಣ"

ಕಾಮೆಂಟ್‌‌ ಪೋಸ್ಟ್‌ ಮಾಡಿ