ಶೀರ್ಷಿಕೆ : ಪಶುಭಾಗ್ಯ ಯೋಜನೆ : ರೈತರ ಆದಾಯೋತ್ಪನ್ನ ಕಸುಬಿಗೆ ಉತ್ತೇಜನ
ಲಿಂಕ್ : ಪಶುಭಾಗ್ಯ ಯೋಜನೆ : ರೈತರ ಆದಾಯೋತ್ಪನ್ನ ಕಸುಬಿಗೆ ಉತ್ತೇಜನ
ಪಶುಭಾಗ್ಯ ಯೋಜನೆ : ರೈತರ ಆದಾಯೋತ್ಪನ್ನ ಕಸುಬಿಗೆ ಉತ್ತೇಜನ
ಕೊಪ್ಪಳ: ಡಿ.18 (ಕರ್ನಾಟಕ ವಾರ್ತೆ) : ಕೃಷಿ ಚಟುವಟಿಕೆಯನ್ನು ನಂಬಿಕೊಂಡು ಬದುಕು ಸಾಗಿಸುತ್ತಿರುವ ರೈತರಿಗೆ ಸರ್ಕಾರ ಜಾರಿಗೊಳಿಸಿರುವ ಪಶುಭಾಗ್ಯ ಯೋಜನೆ ರೈತರ ಆರ್ಥಿಕ ಸ್ವಾವಲಂಬನೆಗೆ ಭರವಸೆಯ ಆಶಾಕಿರಣ ಮೂಡಿಸಿದಂತಾಗಿದೆ.
ಪಶುಭಾಗ್ಯ ಯೋಜನೆಯಡಿ ಹಲವಾರು ಸೌಲಭ್ಯಗಳು ಲಭ್ಯವಿದ್ದು, ವಿವಿಧ ಘಟಕಗಳಲ್ಲಿ ರೈತರಿಗೆ ಯೋಜನೆಯನ್ನು ತಲುಪಿಸುವುದಾಗಿದೆ. 2015-16 ರಲ್ಲಿ ಜಾರಿಗೆ ಬಂದ ಈ ಯೋಜನೆಗೆ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ 1.20 ಲಕ್ಷದ ವರೆಗೆ ಸಾಲ ಪಡೆದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ, ಘಟಕಗಳನ್ನು ಸ್ಥಾಪಿಸಿ, ಗ್ರಾಮೀಣ ಭಾಗದ ಜನರ ಪ್ರಮುಖ ಆದಾಯೋತ್ಪನ್ನ ಕಸುಬಾಗಿರುವ ಪಶುಸಂಗೋಪನೆ ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶ.
ಪಶುಭಾಗ್ಯ ಯೋಜನೆಗೆ ಒಳಪಡುವ ವಿವಿಧ ಘಟಕಗಳಾದ, ಮಿಶ್ರತಳಿ ಹಸು, ಎಮ್ಮೆಗಳ ಹೈನುಗಾರಿಕೆ ಗಟಕ. ಕುರಿ, ಮೇಕೆ ಘಟಕ. ಕುಕ್ಕಟ ಘಟಕ. ಮಹಿಳೆಯರಿಗಾಗಿ ಹೈನುಗಾರಿಕೆ ಅಮೃತ ಯೋಜನೆ. ಕುರಿ, ಮೇಕೆ ಸಾಕಾಣಿಕೆ ಘಟಕಗಳ ಮೂಲಕ ಫಲಾನುಭವಿಗಳಿಗೆ ಯೋಜನೆಯನ್ನು ಹಂಚಿಕೆ ಮಾಡಲಾಗುತ್ತದೆ. ಪ.ಜಾ. ಮತ್ತು ಪ.ಪಂ. ದವರಿಗೆ ಶೇ.50 ಹಾಗೂ ಇತರರಿಗೆ ಶೇ.25 ರಷ್ಟು ಸಹಾಯಧನ ಒದಗಿಸಲಾಗುತ್ತದೆ. ಅಮೃತ ಯೋಜನೆಯಡಿ ವಿಧವೆಯರು, ದೇವದಾಸಿಯರು, ಮತ್ತು ನಿರ್ಗತಿಕ ಮಹಿಳೆಯರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುವುದು.
ಜಿಲ್ಲೆಯಲ್ಲಿ 2017-18 ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆ ಅಡಿಯಲ್ಲಿರುವ ಎಲ್ಲಾ ಘಟಕಗಳನ್ನು ಒಗ್ಗೂಡಿಸಿ 516 ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸಲು ಗುರಿ ನಿಗದಿಪಡಿಸಿದ್ದು ಇದಕ್ಕಾಗಿ 1. 01 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈಗಾಗಲೆ ಶೇ. 75 ಕ್ಕೂ ಹೆಚ್ಚು ಸಾಧನೆಯನ್ನು ಇಲಾಖೆ ಮಾಡಿದೆ.
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ:
***************** ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ, ಈ ಯೋಜನೆಗಳ ಮೂಲಕ ದೊರೆಯುವ ಸಹಾಯಧನ ಮತ್ತು ಪೂರಕ ಬ್ಯಾಂಕ್ ಸಾಲದ ಮೂಲಕ ಪಶುಪಾಲನಾ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರನ್ನಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ವಿಶೇಷ ಘಟಕ ಯೋಜನೆಯಲ್ಲಿ ಹೈನುಗಾರಿಕೆಯಡಿ ಮಿಶ್ರತಳಿ ಹಸು ಘಟಕ, ಸುಧಾರಿತ ಎಮ್ಮೆ ಘಟಕ ಪಡೆಯಬಹುದು. ರೂ.1.20 ಲಕ್ಷಗಳಲ್ಲಿ ಶೇ.50 ರಷ್ಟು ಸಹಾಯಧನ ರೂ.60 ಸಾವಿರ ಜೊತೆಗೆ ಪೂರಕ ಬ್ಯಾಂಕ್ ಸಾಲ ರೂ.60 ಸಾವಿರ ವನ್ನು ನಿಗದಿ ಪಡಿಸಿದ ರಾಷ್ಟ್ರೀಕೃತ ಸಹಕಾರ ಬ್ಯಾಂಕ್ ಮೂಲಕ ಒದಗಿಸುವುದು. ಕುರಿ, ಮೇಕೆ ಘಟಕ ವೆಚ್ಚ 67400 ರೂ. ಅನುಷ್ಠಾನದಲ್ಲಿ 10 ಕುರಿ, 1 ಟಗರು, ಅಥವಾ 10 ಮೇಕೆ, 1 ಹೋತ ಖರೀದಿಸಲು ಅವಕಾಶವಿದೆ. ಶೇ.50 ರಷ್ಟು ಸಹಾಯಧನ, ಶೇ. 50 ರಷ್ಟು ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ಬಿಡುಗಡೆಯಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಳನ್ನು ಒಗ್ಗೂಡಿಸಿ ಒಟ್ಟು 24 ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಗುರಿ ಇದ್ದು ಈವರೆಗೆ ಶೇ.75 ರಷ್ಟು ಸಾಧನೆಯಾಗಿದೆ.
ಕುರಿ, ಮೇಕೆ ಸತ್ತರೆ ಪರಿಹಾರ ಧನ :
************* ಈ ಯೋಜನೆಯು 2013 ರಿಂದಲೂ ಜಾರಿಯಲ್ಲಿದ್ದು, ಈ ವಿಮೆಗೆ 6 ತಿಂಗಳ ಮೇಲ್ಪಟ್ಟ ಕುರಿ, ಮೇಕೆಗಳು ಆಕಸ್ಮಿಕ, ನಿರ್ದಿಷ್ಟ ಪ್ರಕರಣಗಳಲ್ಲಿ ಮರಣ ಹೊಂದಿದಾಗ ಕುರಿಗಾರರಿಗೆ ಆರ್ಥಿಕ ನಷ್ಟ ಭರಿಸಲು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪರಿಹಾರವಾಗಿ ಪ್ರತಿ ಕುರಿ, ಮೇಕೆಗೆ ರೂ.5000, ಪರಿಹಾರ ಧನವನ್ನು ಒದಗಿಸುವುದಾಗಿದೆ. ಜಿಲ್ಲೆಯಲ್ಲಿ 2015 ರಿಂದ 2017-18 ನೇ ಸಾಲಿನವರೆಗೆ ಮರಣಿಸಿದ ಒಟ್ಟು 4537 ಕುರಿ, ಮೇಕೆಗಳ ಪರಿಹಾರಕ್ಕಾಗಿ ರೂ.2. 26 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಇಲಾಖೆ ಕುರಿ ಮಂಡಳಿಗೆ ಸಲ್ಲಿಸಿದೆ. ಇದುವರೆಗೂ 51.25 ಲಕ್ಷ ರೂ. ಬಿಡುಗಡೆಯಾಗಿದ್ದು, ಆಯಾ ಕುರಿ, ಮೇಕೆ, ಮಾಲಿಕರ ಬ್ಯಾಂಕ್ ಖಾತೆಗಳಿಗೆ ಆರ್.ಟಿ.ಜಿ.ಎಸ್ ಮುಖಾಂತರ ಜಮಾ ಮಾಡಿದೆ.
ಆಕಸ್ಮಿಕವಾಗಿ ಮರಣಿಸಿದ ದನ, ಎಮ್ಮೆಗಳಿಗೆ ಪರಿಹಾರ ಧನ :
************ ಈ ಯೋಜನೆಯಲ್ಲಿ ಆಕಸ್ಮಿಕವಾಗಿ ಮರಣಿಸಿದ ದನ, ಎಮ್ಮೆಗಳಿಗೆ ಇಲಾಖೆಯಿಂದ ಪ್ರತಿ ರಾಸುವಿಗೆ ರೂ.10 ಸಾವಿರ ಪರಿಹಾರ ಧನವನ್ನು ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ 2017-18 ನೇ ಸಾಲಿನಲ್ಲಿ 19 ರಾಸುಗಳು ಸಾವನ್ನಪ್ಪಿದ್ದು, ಪರಿಹಾರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ.
ಮೇವಿನ ಕಿರು ಪೊಟ್ಟಣಗಳ ವಿತರಣೆ :
********* ಆಂತರಿಕ ಮೇವಿನ ಲಭ್ಯತೆಯನ್ನು ಹೆಚ್ಚಿಸುವ ಹಿತದೃಷ್ಟಿಯಿಂದ 2017-18ನೇ ಸಾಲಿನಲ್ಲಿ 6500 ಆಸಕ್ತ ರೈತರಿಗೆ 8434 ಮೇವಿನ ಕಿರುಪೊಟ್ಟಣಗಳನ್ನು ಇಲಾಖೆ ವಿತರಿಸಿದೆ.
ಗಿರಿರಾಜ ಕೋಳಿ ಮರಿಗಳ ವಿತರಣೆ :
************ಕೇಂದ್ರ ಪುರಸ್ಕøತ ರಾಷ್ಟ್ರೀಯ ಜಾನುವಾರು ಅಭಿಯಾನದಡಿ ಗ್ರಾಮೀಣ ಹಿತ್ತಲ ಕೋಳಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ರಾಜ್ಯದಲ್ಲಿ ಕೊಪ್ಪಳ, ಬಿದರ್, ಹಾಗೂ ಹಾಸನ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯು ಮೂರು ವರ್ಷದ್ದಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಮೊದಲ ವರ್ಷ-10, ಎರಡನೇ ವರ್ಷ-15 ಹಾಗೂ ಮೂರನೇ ವರ್ಷ-20 ಗಿರಿರಾಜ ಕೋಳಿ ಮರಿಗಳನ್ನು ವಿತರಿಸುವುದರ ಜೊತೆಗೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕಾಗಿ ಧನ ಸಹಾಯ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮೊದಲನೆ ವರ್ಷಕ್ಕೆ ಪ್ರತಿ ಫಲಾನುಭವಿಗೆ 10 ಕೋಳಿಮರಿಗಳಂತೆ ಒಟ್ಟು 380 ಫಲಾನುಭವಿಗಳಿಗೆ 3800 ಗಿರಿರಾಜ ಕೋಳಿ ಮರಿಗಳನ್ನು ವಿತರಿಸಿದೆ ಎಂದು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ತಿಳಿಸಿದೆ.
-ಬಸವರಾಜ ಬೋದೂರು
ಕೊಪ್ಪಳ.
ಹೀಗಾಗಿ ಲೇಖನಗಳು ಪಶುಭಾಗ್ಯ ಯೋಜನೆ : ರೈತರ ಆದಾಯೋತ್ಪನ್ನ ಕಸುಬಿಗೆ ಉತ್ತೇಜನ
ಎಲ್ಲಾ ಲೇಖನಗಳು ಆಗಿದೆ ಪಶುಭಾಗ್ಯ ಯೋಜನೆ : ರೈತರ ಆದಾಯೋತ್ಪನ್ನ ಕಸುಬಿಗೆ ಉತ್ತೇಜನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪಶುಭಾಗ್ಯ ಯೋಜನೆ : ರೈತರ ಆದಾಯೋತ್ಪನ್ನ ಕಸುಬಿಗೆ ಉತ್ತೇಜನ ಲಿಂಕ್ ವಿಳಾಸ https://dekalungi.blogspot.com/2017/12/blog-post_48.html
0 Response to "ಪಶುಭಾಗ್ಯ ಯೋಜನೆ : ರೈತರ ಆದಾಯೋತ್ಪನ್ನ ಕಸುಬಿಗೆ ಉತ್ತೇಜನ"
ಕಾಮೆಂಟ್ ಪೋಸ್ಟ್ ಮಾಡಿ