ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ

ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ
ಲಿಂಕ್ : ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ

ಓದಿ


ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ



ಕೊಪ್ಪಳ ಡಿ. 18 (ಕರ್ನಾಟಕ ವಾರ್ತೆ): ಜಿಲ್ಲೆ ಸತತ ಬರಗಾಲದಿಂದ ಸಂಕಸ್ಟಕ್ಕೆ ತುತ್ತಾಗಿ ರೈತರು ಕೃಷಿಯ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡಿದ್ದರು. ಆದರೆ ಜಿಲ್ಲೆಯಲ್ಲಿ ಈ ಬಾರಿ ಸುರಿದ ಹಿಂಗಾರುಮಳೆ ರೈತರ ಮೊಗದಲ್ಲಿ ಸಂತಸ ತಂದಿದೆ. ಜಿಲ್ಲೆಯ ರೈತರಿಗೆ ಕೃಷಿ ಇಲಾಖೆ ಹಲವಾರು ಸೌಲಭ್ಯಗಳನ್ನ ನೀಡುತ್ತಿದ್ದು, ಕೃಷಿಕರು ಹಾಗೂ ರೈತರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗಲೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ.

ಕೃಷಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆ  ಕೃಷಿ ಅಭಿಯಾನದ ಮೂಲಕ ರೈತರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಿಳಿಸುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳ ಯೋಜನೆಗಳ ಸೌಲಭ್ಯಗಳ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕಿದೆ. 

ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳಲ್ಲಿ ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮವೂ ಒಂದಾಗಿದ್ದು ಈ ಕಾರ್ಯಕ್ರಮದ ಉದ್ದೇಶ ಪ್ರಮಾಣಿತ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ರೈತರಿಗೆ ಸಕಾಲದಲ್ಲಿ ಒದಗಿಸುವುದಾಗಿದೆ.
     ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಎಲ್ಲಾ ವರ್ಗದ ರೈತರಿಗೆ ಮುಖ್ಯ ಬೆಳೆಗಳ ಹೈಬ್ರಿಡ್, ಅಧಿಕ ಇಳುವರಿ ತಳಿಗಳು ಮತ್ತು ತಳಿಗಳ ಉತ್ತಮ ಗುಣಮಟ್ಟದ ಪ್ರಮಾಣಿತ ಹಾಗೂ ನಿಜ ಚೀಟಿ ಬಿತ್ತನೆ ಬೀಜಗಳನ್ನು ಮುಂಗಾರು, ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ರಿಯಾಯಿತಿ ದರದಲ್ಲಿ ಸಕಾಲದಲ್ಲಿ ರೈತರಿಗೆ ಒದಗಿಸಿ ಅಧಿಕ ಇಳುವರಿ ಪಡೆಯಲು ನೆರವಾಗುವುದು.
        ಮುಂಗಾರು ಹಂಗಾಮಿನಲ್ಲಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು “ಬೀಜಗಳ ಪೂರೈಕೆ ಹಾಗೂ ಇತರೆ ಹೂಡುವಳಿ” ಯೋಜನೆಯಡಿ ವಿತರಿಸಿದೆ. ಸಾಮಾನ್ಯ ರೈತರಿಗೆ ಶೇ.50 ಹಾಗೂ ಪ.ಜಾತಿ ಪ.ಪಂಗಡದ ರೈತರಿಗೆ ಶೇ.75 ರ ರೀಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಿಸಲಾಗಿದೆ.
ಸಸ್ಯ ಕಾರ್ಯಕ್ರಮ:
******** ಈ ಕಾರ್ಯಕ್ರಮವು ಜಿಲ್ಲೆಯ ವಿವಿಧ ಕೃಷಿ ವಲಯಗಳಲ್ಲಿ ಬಾಧಿಸುವ ಕೀಟ/ರೋಗ/ಕಳೆಗಳ ನಿರ್ವಹಣೆಗೆ ತುರ್ತು ಸಸ್ಯ ಸಂರಕ್ಷಣಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಸ್ಯ ಸಂರಕ್ಷಣಾ ಔಷಧಿ/ ಉಪಕರಣಗಳು, ಕೀಟನಾಶಕಗಳು, ಜೈವಿಕ ಪೀಡೆನಾಶಕಗಳು ಮುಂತಾದವುಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.
ಸಸ್ಯ ಸಂರಕ್ಷಣಾ ಪೀಡೆನಾಶಕಗಳ ವಿತರಣೆ ಶೇ.50 ರ ರೀಯಾಯಿತಿ ದರದಲ್ಲಿ ಪ್ರತಿ ಹೆಕ್ಟೇರಿಗೆ ರೂ.500 ಮೀರದಂತೆ ಪ್ರತಿ ರೈತರಿಗೆ ಪ್ರತಿ ಹಂಗಾಮಿಗೆ ಗರಿಷ್ಟ 2 ಹೆಕ್ಟೇರಿಗೆ ಕೀಟನಾಶಕಗಳು, ಶಿಲೀಂದ್ರ ನಾಶಕಗಳು, ಕಳೆ ನಾಶಕಗಳು, ಸಸ್ಯ ಮೂಲ ಕೀಟನಾಶಕಗಳು, ಮತ್ತು ಜೈವಿಕ ಪೀಡೆನಾಶಕಗಳು/ ಜೈವಿಕ ನಿಯಂತ್ರಣಕಾರಕಗಳು ಮುಂತಾದವುಗಳ ವಿತರಣೆ ಮಾಡಲಾಗುವುದು. ಶೇ.50ರ ರೀಯಾಯಿತಿ ದರದಲ್ಲಿ ಪ್ರತಿಯೊಂದು ಉಪಕರಣಕ್ಕೆ ಗರಿಷ್ಟ ರೂ.800 ಮೀರದಂತೆ ಸಸ್ಯ ಸಂರಕ್ಷಣಾ ಉಪಕರಣಗಳ ವಿತರಣೆ ಮಾಡಲಾಗುವುದು.
      2017-18 ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಜೈವಿಕ ಪೀಡೆನಾಶಕ/ ಜೈವಿಕ ನಿಯಂತ್ರಣಕಾರಕಗಳ ವಿತರಣೆ ಶೇ.50 ರ ಸಹಾಯಧನದಲ್ಲಿ ರೂ.500 ಪ್ರತಿ ಹೆ.ಗೆ ಮೀರದಂತೆ ಕೊಪ್ಪಳ ಜಿಲ್ಲೆಯಾದ್ಯಂತ ಒಟ್ಟು ಭೌತಿಕ 3750, ಆರ್ಥಿಕ 75 ಲಕ್ಷ ರೂ ನಿಗದಿ ಪಡಿಸಲಾಗಿದೆ.  ಸುಧಾರಿತ ಧಾನ್ಯ ಸಂಗ್ರಹಣಾ ಪೆಟ್ಟಿಗೆಗಳ ವಿತರಣೆ ಶೇ.50 ರ ಸಹಾಯಧನದಲ್ಲಿ ರೂ.750 ಮೀರದಂತೆ (106) ಒಟ್ಟು ಬೌತಿಕ 133 ಆರ್ಥಿಕ 10 ಲಕ್ಷ ರೂ ನಿಗದಿಪಡಿಸಿದೆ.
ಸಸ್ಯ ಸಂರಕ್ಷಣೆ(ಕೀಟನಾಶಕ ನಿಯಂತ್ರಣ ಪ್ರಯೋಗ ಶಾಲೆ)
1.    ಜೈವಿಕ ಪೀಡೆನಾಶಕ ಮತ್ತು ಜೈವಿಕ ನಿಯಂತ್ರಣಕಾರಕಗಳ ವಿತರಣೆಯಲ್ಲಿ ಮುಖ್ಯ ಬೆಳೆಗಳಿಗೆ ಬಾಧಿಸುವ ಕೀಟ/ರೋಗಗಳ ನಿರ್ವಹಣೆಗೆ ರಾಸಾಯನಿಕ ಪೀಡೆನಾಶಕಗಳನ್ನು ಉತ್ತೇಜಿಸುವುದಕ್ಕಾಗಿ ಶೇ.50ರ ರೀಯಾಯಿತಿಯಲ್ಲಿ ಪ್ರತಿ ಹೆಕ್ಟೇರಿಗೆ ರೂ.500 ಮೀರದಂತೆ ಪ್ರತಿ ರೈತರಿಗೆ ಪ್ರತಿ ಹಂಗಾಮಿಗೆ ಗರಿಷ್ಠ 2 ಹೆಕ್ಟೇರಿಗೆ ಸೀಮಿತಗೊಳಿಸಿ ವಿತರಿಸಲು ಕ್ರಮ ವಹಿಸಲಾಗಿದೆ.
2.    ವೈಜ್ಞಾನಿಕ ಧಾನ್ಯ ಸಂಗ್ರಹಣೆಗಾಗಿ ಸುಧಾರಿತ ಧಾನ್ಯ ಸಂಗ್ರಹಣಾ ಪೆಟ್ಟಿಗೆ ವಿತರಣೆಯಲ್ಲಿ ಧಾನ್ಯ ಸಂಗ್ರಗಣೆಯಲ್ಲಿ ದವಸ ಧಾನ್ಯಗಳಿಗೆ ಕಾಡುವ ಇಲಿ, ಹೆಗ್ಗಣ, ಕೀಟ ಮತ್ತು ರೋಗ ಬಾಧೆಗಳಿಂದ ಆಗುವ ನಷ್ಟವನ್ನು ಸಂಗ್ರಹಣಾ ಪೆಟ್ಟಿಗೆಗಳು ಪ್ರಯೋಜನಕಾರಿಯಾಗಿವೆ. ರೈತರಿಗೆ ಅರ್ಧ ಕ್ವಿಂಟಾಲಿನಿಂದ ಹತ್ತು ಕ್ವಿಂಟಾಲ್ ಸಾಮಥ್ರ್ಯದವರೆಗಿನ ಧಾನ್ಯ ಸಂಗ್ರಹಣಾ ಪೆಟ್ಟಿಗೆಯನ್ನು ಶೇ.50ರ ರಿಯಾಯಿತಿಯಲ್ಲಿ ಪ್ರತಿ ಪೆಟ್ಟಿಗೆಗೆ ಗರಿಷ್ಟ ರೂ.750 ಮೀರದಂತೆ ವಿತರಣೆ. ಪ್ರತಿ ಫಲಾನುಭವಿಗೆ ಒಂದು ಪೆಟ್ಟಿಗೆ ಸೀಮಿತಗೊಳಿಸಲಾಗಿದೆ.
       ಕೃಷಿ ಇಲಾಖೆಯಿಂದ ಆಯೋಜಿಸಲಾಗುವ ಈ ಎಲ್ಲಾ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಸಿಕೊಳ್ಳಲು ಯುವ ರೈತರು ಮುಂದಾಗಿ ಅನಕ್ಷರಸ್ಥ ರೈತರುಗಳಿಗೆ ಈ ಎಲ್ಲಾ ಸೌಲಭ್ಯಗಳ ಮನವರಿಕೆ ಮಾಡಿಕೊಟ್ಟು ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ತೋರಿಸಬಹುದು. ಯುವಕರು,  ಕೃಷಿಕರು ಹಾಗೂ ರೈತರು ಸರ್ಕಾರದ ಈ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಹಾಗೂ ಪ್ರಯೋಜನಕಾರಿಯಾಗಿ ಪಡೆದು ಅಭಿವೃದ್ಧಿ ಹೊಂದುವಂತೆ ಮಾಡುವುದೇ ಕೃಷಿ ಇಲಾಖೆಯ ಆಶಯವಾಗಿದೆ.

                                                                     -ನಾಗರಾಜ ಬೆಲ್ಲದ
                                                                          ಕೊಪ್ಪಳ


ಹೀಗಾಗಿ ಲೇಖನಗಳು ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ

ಎಲ್ಲಾ ಲೇಖನಗಳು ಆಗಿದೆ ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ ಲಿಂಕ್ ವಿಳಾಸ https://dekalungi.blogspot.com/2017/12/blog-post_12.html

Subscribe to receive free email updates:

0 Response to "ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ