ಶೀರ್ಷಿಕೆ : ವಿಮಾ ಮೊತ್ತ ಪಾವತಿಸಲು ಕಂಪನಿಗೆ ಗ್ರಾಹಕರ ವೇದಿಕೆ ಆದೇಶ
ಲಿಂಕ್ : ವಿಮಾ ಮೊತ್ತ ಪಾವತಿಸಲು ಕಂಪನಿಗೆ ಗ್ರಾಹಕರ ವೇದಿಕೆ ಆದೇಶ
ವಿಮಾ ಮೊತ್ತ ಪಾವತಿಸಲು ಕಂಪನಿಗೆ ಗ್ರಾಹಕರ ವೇದಿಕೆ ಆದೇಶ
ಕೊಪ್ಪಳ ಡಿ. 18 (ಕರ್ನಾಟಕ ವಾರ್ತೆ): ಜೀವ ವಿಮಾ ಮೊತ್ತವನ್ನು ಪಾವತಿಸದೆ, ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿ, ವಿಮಾ ಕಂಪನಿಯು ಸೇವಾ ನ್ಯೂನತೆ ಕೈಗೊಂಡಿದ್ದು, ಕೂಡಲೆ ಜೀವ ವಿಮಾ ಮೊತ್ತವನ್ನು ನಾಮ ನಿರ್ದೇಶಿತ ಅಭ್ಯರ್ಥಿಗೆ ಪಾವತಿಸುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಯರಡೋಣಾದ ಸುಶೀಲಾಬಾಯಿ ಗಂಡ ಪಂಪನಗೌಡ ಅವರು 2015 ರ ಸೆ. 22 ರಂದು ಹೆಚ್‍ಡಿಎಫ್‍ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಸುರೆನ್ಸ್ ಕಂಪನಿ ಲಿ. ಮುಂಬೈ ಇವರಲ್ಲಿ 10. 10 ಲಕ್ಷ ರೂ. ಗಳ ಅರ್ಧ ವಾರ್ಷಿಕ ಪ್ರೀಮಿಯಂ 25 ಸಾವಿರ ರೂ. ಗಳಂತೆ ಪಾವತಿಸುವ ಪಾಲಿಸಿಯನ್ನು ಪಡೆದುಕೊಂಡಿದ್ದರು. ಆದರೆ ಪಾಲಸಿದಾರರಾದ ಸುಶೀಲಾಬಾಯಿ ಗಂಡ ಪಂಪಗೌಡ ಅವರು 2015 ರ ನವೆಂಬರ್ 18 ರಂದು ಹೃದಯಘಾತವಾಗಿ ಮೃತಪಟ್ಟರು. ಪಾಲಿಸಿದಾರರಾಗಿದ್ದ ಸುಶೀಲಾಬಾಯಿಯವರ ಮಗ ಅಮರೇಗೌಡ ಅವರು ಪಾಲಿಸಿಯಲ್ಲಿ ನಾಮಿನಿ ಅಭ್ಯರ್ಥಿಯಾಗಿದ್ದರಿಂದ, ಪಾಲಿಸಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಮತ್ತು ವಾರಸುದಾರಿಕೆ ಪತ್ರದೊಂದಿಗೆ ವಿಮಾ ಕಂಪನಿಗೆ ತಮ್ಮ ಕ್ಲೇಮ್ ಸಲ್ಲಿಸಿ, ತನ್ನ ತಾಯಿಯ ಜೀವ ವಿಮಾ ಮೊತ್ತವನ್ನು ಪಾವತಿಸುವಂತೆ ವಿನಂತಿಸಿಕೊಂಡಿದ್ದರು. ಆದರೆ ವಿಮಾ ಕಂಪನಿಯು, ಪಾಲಿಸಿದಾರರು, ಪಾಲಿಸಿ ಪಡೆಯುವ ಸಂದರ್ಭದಲ್ಲಿ ಹೊಂದಿರುವ ಇತರೆ ಪಾಲಿಸಿಗಳ ಬಗ್ಗೆ ತಿಳಿಸದೆ, ವಿಷಯ ಮುಚ್ಚಿಟ್ಟು ಪಾಲಿಸಿ ಪಡೆದಿದ್ದು, ವಿಮಾ ಮೊತ್ತ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತು. ಈ ಕುರಿತಂತೆ ಅಮರೇಗೌಡ ಅವರು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋದರು. ಗ್ರಾಹಕರ ವೇದಿಕೆಗೆ ಹಾಜರಾದ ಕಂಪನಿಯು, ಪಾಲಿಸಿದಾರರು ಪ್ರಪೋಸಲ್ ಫಾರಂನಲ್ಲಿ ಕೇಳಿದ ಕೆಲವು ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದ್ದರು, ಮತ್ತು ಪಾಲಸಿ ಪಡೆದ ಕೇವಲ 57 ದಿವಸಗಳಲ್ಲಿ ಮೃತಳಾಗಿದ್ದರಿಂದಾಗಿ ವಿಮಾ ಕಂಪನಿಯು ವಿವರವಾದ ತನಿಖೆಯನ್ನು ಕೈಗೊಂಡಿದ್ದು, ಪಾಲಸಿದಾರರು ತೀರಿಕೊಂಡ ಸಮಯದಲ್ಲಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು ಮತ್ತು ಅದಕ್ಕಾಗಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಬೆಂಗಳೂರು, ಕಸ್ತೂರಬಾ ಆಸ್ಪತ್ರೆ, ಮಣಿಪಾಲ ಮತ್ತು ಆರ್.ಬಿ ಪಾಟೀಲ್ ಕ್ಯಾನ್ಸರ್ ಆಸ್ಪತ್ರೆ ಹಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದರಿಂದಾಗಿ ಅವರು 2015ನೇ ಇಸ್ವಿಯ ಮಧ್ಯಬಾಗದಲ್ಲಿ ತೀರಿಕೊಂಡಿದ್ದಾರೆ. ಆದರೆ ಪಾಲಸಿದಾರರು 2015 ರ ನವೆಂಬರ್ 18 ರಂದು ಮೃತರಾಗಿದ್ದಾರೆ ಎಂದು ಸುಳ್ಳು ಪ್ರಮಾಣ ಪತ್ರವನ್ನು ಹಾಜರುಪಡಿಸಿದ್ದಾರೆ. ಮತ್ತು ಸುಶೀಲಾಬಾಯಿಯು ತಾನು ಹೊಂದಿರುವ ಬೇರೆ ಜೀವ ವಿಮಾ ಪಾಲಸಿಗಳ ಬಗ್ಗೆಯಾಗಲೀ ಅಥವಾ ತಾನು ಬಳಲುತ್ತಿರುವ ರೋಗಗಳ ಬಗ್ಗೆ ಏನನ್ನು ಹೇಳದೆ ಪಾಲಸಿಯನ್ನು ಪಡೆದಿರುವುದರಿಂದ ಸೆಕ್ಷನ್ 45 ಆಫ್ ಇನ್ಸುರೆನ್ಸ್ ಆಕ್ಟ್ 1938ರ ಪ್ರಕಾರ ಪಾಲಸಿಯ ಹಣ ಕೊಡಲು ಸಾಧ್ಯವಿಲ್ಲವೆಂದು ವಾದಿಸಿದರು.
ಕೊಪ್ಪಳ ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಏಕತಾ ಹೆಚ್.ಡಿ ಹಾಗೂ ಮಹಿಳಾ ಸದಸ್ಯರಾದ ಸುಜಾತಾ ಅಕ್ಕಸಾಲಿ ವಾದ ಮತ್ತು ಪ್ರತಿ ವಾದಗಳನ್ನು ಆಲಿಸಿ, ಪಾಲಿಸಿದಾರರು ಈ ಮೊದಲೇ ಹೊಂದಿರುವ ಪಾಲಿಸಿಗಳ ಬಗ್ಗೆಯಾಗಲೀ ಅಥವಾ ಅವರು ಕ್ಯಾನ್ಸರ್‍ನಿಂದ ಬಳಲುತ್ತಿದ್ದರು ಎನ್ನುವುದರ ಬಗ್ಗೆ ಯಾವುದೇ ಸಾಕ್ಷಾಧಾರಗಳನ್ನು ಜೀವ ವಿಮಾ ಕಂಪನಿಯವರು, ಹಾಜರುಪಡಿಸದೇ ಕೇವಲ ಪಾಲಸಿದಾರರು ತಮ್ಮ ಅನಾರೋಗ್ಯ ವಿವರ ಮುಚ್ಚಿಟ್ಟಿದ್ದರೆನ್ನುವ ಬಗ್ಗೆ ಯಾವುದೇ ಪುರಾವೆಯನ್ನು ಹಾಜರುಪಡಿಸದೇ ಪಾಲಸಿಯನ್ನು ತೀರಸ್ಕರಿಸಿರುವುದು ಸರಿಯಲ್ಲವೆಂದು ನಿರ್ಧರಿಸಿತು. ಹೆಚ್.ಡಿ.ಎಫ್.ಸಿ ಸ್ಟ್ಯಾಂಡಡ್ ಲೈಫ್ ಇನ್ಸುರೆನ್ಸ್ ಕಂಪನಿ ಲಿ. ರಿಂದ ನಿರ್ಲಕ್ಯತನ ಹಾಗೂ ಸೇವಾ ನ್ಯೂನತೆ ಉಂಟಾಗಿದೆಯೆಂದು ತೀರ್ಮಾನಿಸಿ, ಪಾಲಿಸಿದಾರರ ಮಗನಾದ ಅಮರೇಗೌಡ ಅವರಿಗೆ, ಪಾಲಸಿ ಮೊತ್ತ ರೂ. 10,10,224, ಮಾನಸಿಕ ವ್ಯಥೆಗೆ ರೂ. 10,000 ಮತ್ತು ದೂರಿನ ಖರ್ಚು ರೂ. 2500 ಗಳನ್ನು ಒಂದು ತಿಂಗಳ ಒಳಗಾಗಿ ಪಾವತಿಸುವಂತೆ, ಒಂದು ವೇಳೆ ಒಂದು ತಿಂಗಳೊಳಗಾಗಿ ಪಾವತಿಸಲು ವಿಫಲರಾದರೆ, ವಿಮಾ ಕಂಪನಿಯವರು ಈ ಹಣದ ಮೊತ್ತದ ಮೇಲೆ ದೂರು ದಾಖಲಾದ ದಿನದಿಂದ 9% ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆಯ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ವಿಮಾ ಮೊತ್ತ ಪಾವತಿಸಲು ಕಂಪನಿಗೆ ಗ್ರಾಹಕರ ವೇದಿಕೆ ಆದೇಶ
ಎಲ್ಲಾ ಲೇಖನಗಳು ಆಗಿದೆ ವಿಮಾ ಮೊತ್ತ ಪಾವತಿಸಲು ಕಂಪನಿಗೆ ಗ್ರಾಹಕರ ವೇದಿಕೆ ಆದೇಶ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಮಾ ಮೊತ್ತ ಪಾವತಿಸಲು ಕಂಪನಿಗೆ ಗ್ರಾಹಕರ ವೇದಿಕೆ ಆದೇಶ ಲಿಂಕ್ ವಿಳಾಸ https://dekalungi.blogspot.com/2017/12/blog-post_18.html
0 Response to "ವಿಮಾ ಮೊತ್ತ ಪಾವತಿಸಲು ಕಂಪನಿಗೆ ಗ್ರಾಹಕರ ವೇದಿಕೆ ಆದೇಶ"
ಕಾಮೆಂಟ್ ಪೋಸ್ಟ್ ಮಾಡಿ