ಶೀರ್ಷಿಕೆ : ಕೊಪ್ಪಳದಲ್ಲಿ ಚಲನ ಚಿತ್ರೋತ್ಸವ ಸಪ್ತಾಹ : ನ. 17ರಿಂದ ಒಂದು ವಾರ ಪ್ರಶಸ್ತಿ ವಿಜೇತ ಸಿನಿಮಾಗಳ ಉಚಿತ ಪ್ರದರ್ಶನ
ಲಿಂಕ್ : ಕೊಪ್ಪಳದಲ್ಲಿ ಚಲನ ಚಿತ್ರೋತ್ಸವ ಸಪ್ತಾಹ : ನ. 17ರಿಂದ ಒಂದು ವಾರ ಪ್ರಶಸ್ತಿ ವಿಜೇತ ಸಿನಿಮಾಗಳ ಉಚಿತ ಪ್ರದರ್ಶನ
ಕೊಪ್ಪಳದಲ್ಲಿ ಚಲನ ಚಿತ್ರೋತ್ಸವ ಸಪ್ತಾಹ : ನ. 17ರಿಂದ ಒಂದು ವಾರ ಪ್ರಶಸ್ತಿ ವಿಜೇತ ಸಿನಿಮಾಗಳ ಉಚಿತ ಪ್ರದರ್ಶನ
ಕೊಪ್ಪಳ, ನವೆಂಬರ್ 15 (ಕರ್ನಾಟಕ ವಾರ್ತೆ): ಕನ್ನಡ ಚಿತ್ರ ರಸಿಕರಿಗೆ ಕನ್ನಡ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಒಂದು ಸುವರ್ಣಾವಕಾಶ ಕೊಪ್ಪಳದಲ್ಲಿ ಒದಗಿಬಂದಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ಕೊಪ್ಪಳ ನಗರದಲ್ಲಿ ನವೆಂಬರ್ 17 ರಿಂದ 23ರ ವರೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನ ಚಿತ್ರಗಳ ಪ್ರದರ್ಶನದ ಚಿತ್ರೋತ್ಸವ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶವಿರುತ್ತದೆ.
ಕೊಪ್ಪಳ ನಗರದ ಶಾರದ ಮತ್ತು ಲಕ್ಷ್ಮಿ ಸೇರಿದಂತೆ ಎರಡು ಚಿತ್ರಮಂದಿರಗಳಲ್ಲಿ ನ. 17 ರಿಂದ 23 ರವರೆಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ (ಬೆಳಗಿನ ಆಟ) ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ.
ನವೆಂಬರ್ 17 ರಂದು ಅಮರಾವತಿ, ನ.18 ರಂದು ಕಿರಿಕ್ ಪಾರ್ಟಿ, ನ.19 ರಂದು ರಾಮಾ ರಾಮಾ ರೇ, ನ.20 ರಂದು ಮದಿಪು (ತುಳು ಭಾಷೆ), ನ.21 ರಂದು ಯೂ ಟರ್ನ್, ನ.22 ರಂದು ಅಲ್ಲಮ ಹಾಗೂ ನ.23 ರಂದು ಮಾರಿಕೊಂಡವರು ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಅಮರಾವತಿ-2016 ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುತ್ತದೆ. ಕಿರಿಕ್ ಪಾರ್ಟಿ- 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿರುತ್ತದೆ. ರಾಮಾ ರಾಮಾ ರೇ- 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುತ್ತದೆ. ಮದಿಪು(ತುಳು ಭಾಷೆ)- ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಮತ್ತು ಅತ್ಯುತ್ತಮ ತುಳು ಭಾಷಾ ರಾಷ್ಟ್ರ ಪ್ರಶಸ್ತಿ ಪಡೆದಿರುತ್ತದೆ. ಯೂ ಟರ್ನ್-2016ನೇ ಸಾಲಿನ ಗೋವಾ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುತ್ತದೆ. ಅಲ್ಲಮ-2016ನೇ ಸಾಲಿನ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿರುತ್ತದೆ. ಮಾರಿಕೊಂಡವರು-2015ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುತ್ತದೆ.
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಜೊತೆಗೆ ಮಾನ್ಯತೆ ಪಡೆದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಅತ್ಯುತ್ತಮ ಚಲನಚಿತ್ರಗಳನ್ನು ಚಿತ್ರೋತ್ಸವ ಸಪ್ತಾಹದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಪ್ರೇಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಕೊಪ್ಪಳದಲ್ಲಿ ಚಲನ ಚಿತ್ರೋತ್ಸವ ಸಪ್ತಾಹ : ನ. 17ರಿಂದ ಒಂದು ವಾರ ಪ್ರಶಸ್ತಿ ವಿಜೇತ ಸಿನಿಮಾಗಳ ಉಚಿತ ಪ್ರದರ್ಶನ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳದಲ್ಲಿ ಚಲನ ಚಿತ್ರೋತ್ಸವ ಸಪ್ತಾಹ : ನ. 17ರಿಂದ ಒಂದು ವಾರ ಪ್ರಶಸ್ತಿ ವಿಜೇತ ಸಿನಿಮಾಗಳ ಉಚಿತ ಪ್ರದರ್ಶನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳದಲ್ಲಿ ಚಲನ ಚಿತ್ರೋತ್ಸವ ಸಪ್ತಾಹ : ನ. 17ರಿಂದ ಒಂದು ವಾರ ಪ್ರಶಸ್ತಿ ವಿಜೇತ ಸಿನಿಮಾಗಳ ಉಚಿತ ಪ್ರದರ್ಶನ ಲಿಂಕ್ ವಿಳಾಸ https://dekalungi.blogspot.com/2017/11/17.html
0 Response to "ಕೊಪ್ಪಳದಲ್ಲಿ ಚಲನ ಚಿತ್ರೋತ್ಸವ ಸಪ್ತಾಹ : ನ. 17ರಿಂದ ಒಂದು ವಾರ ಪ್ರಶಸ್ತಿ ವಿಜೇತ ಸಿನಿಮಾಗಳ ಉಚಿತ ಪ್ರದರ್ಶನ"
ಕಾಮೆಂಟ್ ಪೋಸ್ಟ್ ಮಾಡಿ