ಶೀರ್ಷಿಕೆ : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ
ಲಿಂಕ್ : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ ನ. 14 (ಕರ್ನಾಟಕ ವಾರ್ತೆ): ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2015, 2016 ಮತ್ತು ಪ್ರಸಕ್ತ ಸಾಲಿನ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನದ ಮೊತ್ತ ರೂ. 25,00-00 ಆಗಿದ್ದು, ಅರ್ಜಿ ಸಲ್ಲಿಸಲು ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕವು ಪುನರ್ ಮುದ್ರಣವಾಗಿರಬಾರದು. ಮೊದಲು ಆವೃತ್ತಿಯಲ್ಲಿ ಪ್ರಕಟಗೊಂಡಿರಬೇಕು. ಪುಸ್ತಕಗಳು ಯಾವುದೇ ಪಠ್ಯಪುಸ್ತಕವಾಗಿರಬಾರದು. ಪುಸ್ತಕವು ಲೇಖಕರ ಸ್ವಂತ ರಚನೆಯಾಗಿರಬೇಕು. ಸಂಪಾದಿತ ಕೃತಿಯಾಗಿರಬಾರದು. ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಪುಸ್ತಕದ ಲೇಖಕರಿಗೆ ಈ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಆಯ್ಕೆ ಮಾಡುವ ಈ ವರ್ಷದಲ್ಲಿ ಕನಿಷ್ಠ 4 ಪುಸ್ತಕಗಳು ಬಹುಮಾನಕ್ಕೆ ಸ್ವೀಕೃತವಾಗಿರಬೇಕು. ಒಂದೇ ಪ್ರಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಯನ್ನು ಅದೇ ಪ್ರಕಾರದಲ್ಲಿ ಮತ್ತೆ ಬಹುಮಾನಕ್ಕೆ ಪರಿಗಣಿಸುವುದಿಲ್ಲ. ವಿವಿಧ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ಸೋದರ ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇನ್ನೂ ಮುಂತಾದ ಅನುದಾನ ಸಂಸ್ಥೆಗಳಿಂದ ಅನುದಾನ ಪಡೆದು ತಾವೇ ಪ್ರಕಟಿಸಿದ ಅಥವಾ ಅಂತಹ ಸಂಸ್ಥೆಗಳೇ ಬರಿಸಿ ಪ್ರಕಟಿಸಿದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಶಿಲ್ಪ : ಶಿಲ್ಪಕಲೆಗೆ ಸಂಬಂಧಪಟ್ಟ ಸಾಂಪ್ರದಾಯಿಕ, ಸಮಕಾಲೀನ, ಜನಪದ ಇತ್ಯಾದಿ ಯಾವುದೇ ಪ್ರಕಾರದ ಶಿಲ್ಪಕಲೆಗೆ ಸಂಬಂಧಪಟ್ಟದ್ದಾಗಿರಬೇಕು. ಧಾರ್ಮಿಕ ಮೂರ್ತಿ ಪೂಜಾ ವಿಧಿಗಳು, ಪ್ರೇಕ್ಷಣಿಯ ಸ್ಥಳಗಳಲ್ಲಿರುವ ದೇವಾಲಯ, ಮುಂತಾದ ವಾಸ್ತು ಶಿಲ್ಪಗಳ ವಿವರಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಪರಿಗಣಿಸುವುದಿಲ್ಲ. ಪಿ.ಹೆಚ್.ಡಿ, ಡಿ.ಲಿಟ್ ಅಥವಾ ಅಧ್ಯಯನಕ್ಕಾಗಿ ಮಾಡಿದಂತಹ ಪುಸ್ತಕಗಳನ್ನು ಪರಿಗಣಿಸಲಾಗುವುದಿಲ್ಲ. ಕೃತಿಗಳಲ್ಲಿ ಪುಸ್ತಕವು ಕನಿಷ್ಠ 100 ಪುಟಗಳಿಗೂ ಹೆಚ್ಚಿನ ಪುಟಗಳನ್ನು ಹೊಂದಿರಬೇಕು. 2015ನೇ ಸಾಲಿನ ಬಹುಮಾನಕ್ಕೆ ಕೃತಿ:ಪುಸ್ತಕ 01-01-2014 ರಿಂದ 31-12-2014 ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು. 2016ನೇ ಸಾಲಿನ ಬಹುಮಾನಕ್ಕೆ ಕೃತಿ:ಪುಸ್ತಕ 01-01-2015 ರಿಂದ 31-12-2015 ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು. ಪ್ರಸಕ್ತ ಸಾಲಿನ ಬಹುಮಾನಕ್ಕೆ ಕೃತಿ:ಪುಸ್ತಕ 01-01-2016 ರಿಂದ 31-12-2016 ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು.
ಒಬ್ಬ ಲೇಖಕರು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿ ಬಹುಮಾನ ಪಡೆದ ನಂತರ ಆ ಲೇಖಕರು ಮತ್ತೆ 3 ವರ್ಷಗಳವರೆಗೆ ಶಿಲ್ಪಕಲಾ ಅಕಾಡೆಮಿಯಿಂದ ಬಹುಮಾನ ಪಡೆಯಬಾರದು. ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ಲೇಖಕರು ತಾವು ಕಳುಹಿಸುವ ಪುಸ್ತಕ 4 ಪ್ರತಿಗಳನ್ನು ಉಚಿತವಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಕಡ್ಡಾಯವಾಗಿ ನೀಡಬೇಕು. ಬಹುಮಾನಕ್ಕಾಗಿ ಕಳುಹಿಸುವ ಪುಸ್ತಕಗಳು ಪ್ರಕಟಿತ ವರ್ಷವನ್ನು ನಮೂದಿಸದ ಅಥವಾ ಪ್ರಕಟಿತ ವರ್ಷವನ್ನು ತಿದ್ದಿದ ಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಪ್ರತಿವರ್ಷ ಬಹುಮಾನಕ್ಕಾಗಿ ಪುಸ್ತಕಗಳನ್ನು ಬರಮಾಡಿಕೊಳ್ಳಲು ವಿವಿಧ ಪತ್ರಿಕೆಗಳಿಗೆ ಪ್ರಕಟಣೆ ನೀಡಬೇಕು. ಬಹುಮಾನಕ್ಕೆ ಪರಿಗಣಿಸಲು ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಬರಮಾಡಿಕೊಳ್ಳುವುದರ ಜೊತೆಗೆ ಆಸಕ್ತ ಸಾರ್ವಜನಿಕರಿಂದಲೂ ಅರ್ಹ ಪುಸ್ತಕಗಳನ್ನು ಸೂಚಿಸುವಂತೆ ಪ್ರಕಟಣೆಯಲ್ಲಿ ಕೇಳಬೇಕು. ಹೀಗೆ ಸೂಚಿಸಲ್ಪಡುವ ಪುಸ್ತಕಗಳನ್ನು ಲೇಖಕರು ಮತ್ತು ಪ್ರಕಾಶಕರು ಕಳುಹಿಸಿದ್ದರೆ, ಸಮಿತಿಯು ತನ್ನ ಗಮನಕ್ಕೆ ಬಂದಂತಹ ಪುಸ್ತಕಗಳನ್ನು ಅಕಾಡೆಮಿ ನೇರವಾಗಿ ಪಡೆದುಕೊಂಡು ಬಹುಮಾನಗಳಿಗೆ ಪರಿಗಣಿಸಬೇಕು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರು, ಸದಸ್ಯರು, ರಿಜಿಸ್ಟ್ರಾರ್ ಮತ್ತು ಸಿಬ್ಬಂದಿ ತಮ್ಮ ಅವಧಿಯಲ್ಲಿ ಅಕಾಡೆಮಿಯ ಯಾವ ಬಹುಮಾನವನ್ನು ಸ್ವೀಕರಿಸುವಂತಿಲ್ಲ. ಅಕಾಡೆಮಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ವೀಕೃತವಾದ ಪುಸ್ತಕಗಳನ್ನು 3 ಮಂದಿ ವಿಷಯ ತಂಜ್ಞರಿಗೆ ಕಳುಹಿಸಿ ಅವರಿಂದ ಬಂದಂತಹ ಶಿಫಾರಸ್ಸನ್ನು ಅಕಾಡೆಮಿಯ ಸಭೆಯಲ್ಲಿ ಮಂಡಿಸಿ ಅಕಾಡೆಮಿಯೇ ಅಂತಿಮ ತೀರ್ಮಾನ ಕೈಗೊಳ್ಳಬಹುದಾಗಿದೆ.
ಪುಸ್ತಕ ಬಹುಮಾನದ ಪುಸ್ತಕಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ರಜಾ ದಿನಗಳನ್ನು ಹೊರತುಪಡಿಸಿ ಡಿಸೆಂಬರ್. 10 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು-560002, ದೂರವಾಣಿ ಸಂಖ್ಯೆ 080-22278725 ಕ್ಕೆ ಸಂಪರ್ಕಿಸಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/11/blog-post_52.html
0 Response to "ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ