NEWS AND PHOTO DATE: 15--11--2017

NEWS AND PHOTO DATE: 15--11--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 15--11--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 15--11--2017
ಲಿಂಕ್ : NEWS AND PHOTO DATE: 15--11--2017

ಓದಿ


NEWS AND PHOTO DATE: 15--11--2017

ವೈದ್ಯರ ಮುಷ್ಕರ ಹಿನ್ನೆಲೆ: ರೋಗಿಗಳಿಗೆ ತೊಂದರೆಯಾಗದಂತೆ 
ಸೇವೆ ನೀಡಲು ಸೂಚನೆ
        ಕಲಬುರಗಿ,ನ.15.(ಕ.ವಾ.)-ಖಾಸಗಿ ವೈದ್ಯರು ಮುಷ್ಕರ ನಡೆಸಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಹಾಜರಿದ್ದು, ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದರು. 
        ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಬೋಧನಾ ವೈದ್ಯಕೀಯ ಕಾಲೇಜುಗಳ ವೈದ್ಯರೊಂದಿಗೆ ಸಮಾಲೋಚಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳ ವೈದ್ಯರು 24 ಗಂಟೆಗಳ ಕಾಲ ಹಾಜರಿದ್ದು, ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳನ್ನು ದಾಖಲಿಸಿಕೊಳ್ಳಬೇಕು. ತುರ್ತು ಚಿಕಿತ್ಸೆ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಬೇಕೆಂದು ಸಲಹೆ ನೀಡಿದರು. 
    ಖಾಸಗಿ ವೈದ್ಯರ ಮುಷ್ಕರ ಅಂತ್ಯಗೊಳ್ಳುವವರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳನ್ನು ದಾಖಲಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಸ್ಥಳಾವಕಾಶ ಅಭಾವವಾದಲ್ಲಿ ಇ.ಎಸ್.ಐ. ಆಸ್ಪತ್ರೆಗೆ ರೋಗಿಗಳನ್ನು ಸ್ಥಳಾಂತರಿಸಬೇಕು. ಇ.ಎಸ್.ಐ. ಆಸ್ಪತ್ರೆಯ ಎಲ್ಲ ವಾರ್ಡುಗಳನ್ನು ಆರೈಕೆಗೆ ಸಜ್ಜುಗೊಳಿಸಬೇಕು. ಅವಶ್ಯವಿದ್ದಲ್ಲಿ ಬೋಧನಾ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಾದ ಕೆ.ಬಿ.ಎನ್. ಹಾಗೂ ಬಸವೇಶ್ವರ ಆಸ್ಪತ್ರೆಗಳಲ್ಲಿನ ತುರ್ತು ಚಿಕಿತ್ಸೆಗೆ ಅವಶ್ಯಕವಿರುವ ರೋಗಿಗಳನ್ನು ದಾಖಲಿಸಿ ಅಲ್ಲಿ ಸರ್ಕಾರಿ ವೈದ್ಯರ ಸೇವೆ ಒದಗಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅವರು ಸೂಚಿಸಿದರು. 
    ಕಲಬುರಗಿಯಲ್ಲಿ 4 ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಇರುವುದರಿಂದ ಹೆಚ್ಚಿನ ರೋಗಿಗಳನ್ನು ದಾಖಲಿಸಿಕೊಳ್ಳಬಹುದಾಗಿದೆ. ಜಿಲ್ಲಾ ಆಸ್ಪತ್ರೆ ಹಾಗೂ ಬೋಧನಾ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳ ವೈದ್ಯರು ವಾಕಿ-ಟಾಕಿಗಳ ಮೂಲಕ ಸಂಪರ್ಕದಲ್ಲಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು. 
     ಜಿಲ್ಲೆಯಲ್ಲಿ ಕೆಲವು ಸಂಘಟನೆಗಳು ಸಣ್ಣಪುಟ್ಟ  ಕಾರಣಗಳನ್ನು ಮುಂದಿಟ್ಟುಕೊಂಡು ಆಸ್ಪತ್ರೆಗಳಲ್ಲಿ ದಾಂಧಲೆ ಮಾಡಿ ತೊಂದರೆ ನೀಡುತ್ತಿರುವ ದೂರುಗಳಿವೆ. ಇನ್ನು ಮುಂದೆ ಯಾವುದೇ ಸಂಘಟನೆಯವರು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ತೊಂದರೆ ನೀಡುತ್ತಿದ್ದರೆ ಅಂಥವರ ವಿರುದ್ಧ ಜಿಲ್ಲಾ ಆಸ್ಪತ್ರೆ ಹಾಗೂ ಜಿಮ್ಸ್ ವೈದ್ಯರು ದೂರು ನೀಡಿ ಎಫ್.ಐ.ಆರ್. ದಾಖಲಿಸಬೇಕು. ಆಸ್ಪತ್ರೆಯ ವ್ಯವಸ್ಥೆಯಿಂದ ಸಂಘಟನೆಗಳಿಗೆ ತೊಂದರೆ ಉಂಟಾಗಿದ್ದರೆ ಅವರು ದಾಂಧಲೆ ಮಾಡದೇ ದೂರು ದಾಖಲಿಸಬೇಕೆಂದರು. 
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ|| ಜೋಶಿ, ಜಿಮ್ಸ್ ಅಧಿಕಾರಿ ದೊಡ್ಡಮನಿ, ಇ.ಎಸ್.ಐ.ಸಿ., ಕೆ.ಬಿ.ಎನ್., ಬಸವೇಶ್ವರ, ಎಂ.ಆರ್.ಎಂ.ಸಿ. ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು, ವೈದ್ಯರು ಹಾಜರಿದ್ದರು. 
ಜಿಲ್ಲೆಯಲ್ಲಿ ನವೆಂಬರ್ 16 ರಿಂದ ಡಿಸೆಂಬರ್ 7ರ ವರೆಗೆ 
ಕಾನೂನು ಸಾಕ್ಷರತಾ ರಥ ಸಂಚಾರ
ಕಲಬುರಗಿ,ನ.15.(ಕ.ವಾ.)-ಜನಸಾಮಾನ್ಯರಿಗೆ ಕಾನೂನು ಮತ್ತು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕಲಬುರಗಿ ಜಿಲ್ಲೆಯಾದ್ಯಂತ ನವೆಂಬರ್ 16 ರಿಂದ ಡಿಸೆಂಬರ್ 7ರ ವರೆಗೆ ಕಾನೂನು ಸಾಕ್ಷರತಾ ರಥ ಸಂಚರಿಸಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ತಿಳಿಸಿದರು.
ಅವರು ಬುಧವಾರ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರದಲ್ಲಿ ಕಾನೂನು ಸಾಕ್ಷರತಾ ರಥದ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ವಿವರಿಸಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸಾಕ್ಷರತಾ ರಥ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಸಂಚರಿಸಲಿರುವ ಕಾನೂನು ಸಾಕ್ಷರತಾ ರಥಕ್ಕೆ ನವೆಂಬರ್ 16ರಂದು ಬೆಳಿಗ್ಗೆ 9.30 ಗಂಟೆಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವ್ಹಿ.ಪಾಟೀಲ್ ಚಾಲನೆ ನೀಡುವರು. ಪ್ರತಿ ತಾಲೂಕಿಗೆ 4 ದಿನದಂತೆ ರಥ ಸಂಚರಿಸಲಿದ್ದು, ದಿನಕ್ಕೆ 3ರಂತೆ ಒಟ್ಟು 84 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕಾನೂನು ರಥ ಸಂಚಾರದ ವಿವರ:-ನವೆಂಬರ್ 16 ರಿಂದ 19ರ ವರೆಗೆ ಕಲಬುರಗಿ ನಗರ ಮತ್ತು ಗ್ರಾಮಾಂತರ. ನವೆಂಬರ್ 20 ರಿಂದ 23ರ ವರೆಗೆ ಸೇಡಂ ತಾಲೂಕು, ನವೆಂಬರ್ 24 ರಿಂದ 27ರ ವರೆಗೆ ಚಿಂಚೋಳಿ ತಾಲೂಕು, ಡಿಸೆಂಬರ್ 2 ರಿಂದ 5ರ ವರೆಗೆ ಚಿತ್ತಾಪುರ ತಾಲೂಕು, ಡಿಸೆಂಬರ್ 6 ರಿಂದ 9ರ ವರೆಗೆ ಆಳಂದ ತಾಲೂಕು, ಡಿಸೆಂಬರ್ 10 ರಿಂದ 13ರ ವರೆಗೆ ಅಫಜಲಪುರ ತಾಲೂಕು ಮತ್ತು ಡಿಸೆಂಬರ್ 14 ರಿಂದ 17ರ ವರೆಗೆ ಜೇವರ್ಗಿ ತಾಲೂಕು ಸಂಚರಿಸಲಿದೆ.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ತಾಲೂಕು ನ್ಯಾಯವಾದಿಗಳ ಸಂಘ ಇವರುಗಳ ಸಂಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ನ್ಯಾಯಾಧೀಶರುಗಳಾದ ಮಹ್ಮದ್ ಯೂಸೂಫ್ ಅಥಣಿ, ಹೆಚ್.ಕೆ. ನವೀನ್, ಎಸ್. ಎಲ್. ಚವ್ಹಾಣ್, ಶ್ರೀಕಾಂತ ವೈದ್ಯ, ವಿಜಯಕುಮಾರ ಬಗಾಡೆ ಮತ್ತು ಆರ್. ಕೆ. ತಾಳಿಕೋಟೆ ಸೇರಿದಂತೆ ಇನ್ನೀತರ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಅಸಂಘಟಿತ ಕಾರ್ಮಿಕರಿಗೆ ಇರುವ ಯೋಜನೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಮಕ್ಕಳ ಹಕ್ಕುಗಳು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಐ.ಸಿ.ಡಿ.ಎಸ್. ಯೋಜನೆ, ಹೆಣ್ಣು ಮಕ್ಕಳ ಅಕ್ರಮ ಸಾಗಾಣಿಕೆ ನಿಷೇಧ ಕಾಯ್ದೆ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ತಂಬಾಕು ದೂಮಪಾನ ದುಷ್ಪರಿಣಾಮ, ಕಾನೂನು ಸೇವಾ ಪ್ರಾಧಿಕಾರದಿಂದ ಸಿಗಬಹುದಾದ ಸೌಲಭ್ಯಗಳ ಕುರಿತು ಉಪನ್ಯಾಸವನ್ನು ನೀಡುವರು ಎಂದರು. 
ಕಲಬುರಗಿಯಲ್ಲಿ ನವೆಂಬರ್ 17ರಿಂದ ಕನ್ನಡ ಚಲನಚಿತ್ರೋತ್ಸವ ಸಪ್ತಾಹ
ಕಲಬುರಗಿ ನ.15 (ಕ.ವಾ): ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಕಲಬುರಗಿಯ ಮಿರಾಜ್ ಚಿತ್ರಮಂದಿರದಲ್ಲಿ 2017ರ ನವೆಂಬರ್ 17 ರಿಂದ 23ರವರೆಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳ ಚಲನಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮ ಆಯೋಜಿಸಿದೆ. 
ಈ ಚಿತ್ರೋತ್ಸವ ಸಪ್ತಾಹದಲ್ಲಿ ನವೆಂಬರ್ 17ರಂದು ಅಮರಾವತಿ, ನವೆಂಬರ್ 18 ರಂದು ಕಿರಿಕ್ ಪಾರ್ಟಿ, ನವೆಂಬರ್ 19ರಂದು ರಾಮಾ ರಾಮಾ ರೇ, ನವೆಂಬರ್ 20ರಂದು ಮದಿಪು (ತುಳು), ನವೆಂಬರ್ 21ರಂದು ಯೂ ಟರ್ನ್, ನವೆಂಬರ್ 22ರಂದು ಅಲ್ಲಮ್ಮ ಮತ್ತು ನವೆಂಬರ್ 23ರಂದು ಮಾರಿಕೊಂಡವರು ಚಲನಚಿತ್ರಗಳು ಪ್ರತಿದಿನ ಬೆಳಗಿನ 8.30 ಗಂಟೆಯಿಂದ ಪ್ರದರ್ಶಿಸಲಾಗುವುದು. ಸಾರ್ವಜನಿಕರಿಗೆ ಈ ಚಲನಚಿತ್ರಗಳ ವೀಕ್ಷಣೆಗೆ ಉಚಿತ ಪ್ರವೇಶಾವಕಾಶವಿರುತ್ತದೆ.  
ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟನೆ  
ಕಲಬುರಗಿ ನ.15 (ಕ.ವಾ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಕಾನೂನು ಸಾಕ್ಷರತಾ ರಥÀ”ದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನವೆಂಬರ್ 16ರಂದು ಗುರುವಾರ ಬೆಳಿಗ್ಗೆ 9.30 ಗಂಟೆಗೆ ಕಲಬುರಗಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ. 
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವಿ. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಹಾಗೂ ಗುಲಬರ್ಗಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎನ್. ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. 
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ.ನ.15(ಕ.ವಾ): ಕರ್ನಾಟಕ ಲಲಿತಾಕಲಾ ಅಕಾಡೆಮಿಯಿಂದ ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದಿನ ಕೋರ್ಸಿನಲ್ಲಿ/ವರ್ಷದಲ್ಲಿ ಹೆಚ್ಚು ಅಂಕ ಪಡೆದಿರುವ ಅರ್ಹ ಸಾಮಾನ್ಯ ವರ್ಗ/ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಕಾಡೆಮಿಯ ರಿಜಿಸ್ವ್ರಾರ್ ಇಂದ್ರಮ್ಮ ಹೆಚ್.ವಿ ತಿಳಿಸಿದ್ದಾರೆ.
       ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ಕರ್ನಾಟಕದವರಾಗಿರಬೇಕು. ವಯೋಮಿತಿ 16 ರಿಂದ 25 ವರ್ಷದೊಳಗಿರಬೇಕು. ಕರ್ನಾಟಕ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅಂಗೀಕೃತಗೊಂಡ ಚಿತ್ರಕಲಾ ದೃಶ್ಯಕಲಾ ಶಿಕ್ಷಣದ ಕಾಲೇಜುಗಳು, ಸರ್ಕಾರದ ಮಾನ್ಯತೆ ಪಡೆದ ಗುರುಕುಲ ಪದ್ದತಿಯಲ್ಲಿ ಶಿಕ್ಷಣ ಪಡೆಯುತ್ತಿರುವವರು, ಪದವಿ/ಸ್ನಾತಕೋತ್ತರ ಪದವಿಗಳಲ್ಲಿ ಚಿತ್ರಕಲಾ ವಿಷಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
      ಆಸಕ್ತಿಯುಳ್ಳ ವಿದ್ಯಾರ್ಥಿಗಳು ತಮ್ಮ ಪೂರ್ಣ ವಿವರಗಳೊಂದಿಗೆ ಪಾಸ್‍ಪೋರ್ಟ್ ಅಳತೆಯ ಎರಡು ಭಾವಚಿತ್ರ ಹಾಗೂ ಕೃತಿಗಳ ಕ್ಯಾಬಿನೆಟ್ ಸೈಜಿನ ಎರಡು ಛಾಯಾಚಿತ್ರಗಳು ಸೇರಿದಂತೆ ಈ ಹಿಂದೆ ವಿದ್ಯಾರ್ಥಿ ವೇತನ ಪಡೆದಿಲ್ಲವೆಂದು ಸಂಬಂದಪಟ್ಟ ಸಂಸ್ಥೆಯ ಮುಖ್ಯಸ್ಥರ ದೃಢೀಕರಣದೊಂದಿಗೆ ಇದೇ ಡಿಸೆಂಬರ್ 12ರ ಒಳಗಾಗಿ ರಿಜಿಸ್ವ್ರಾರ್ ಕರ್ನಾಟಕ ಲಲಿತಕಲಾ ಅಕಾಡೆಮಿ ಕನ್ನಡ ಭವನ 2ನೇ ಮಹಡಿ ಜೆ.ಸಿ ರಸ್ತೆ ಬೆಂಗಳೂರು 560002 ವಿಳಾಸಕ್ಕೆ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ವೆಬ್ ಸೈಟ್ ತಿತಿತಿ.ಟಚಿಟiಣಞಚಿಟಚಿಞಚಿಡಿಟಿಚಿ ಣಚಿಞಚಿ.oಡಿg, ಇ-ಮೇಲ್ ವಿಳಾಸ ಞಟಚಿ.ಞಚಿಡಿಟಿಚಿಣಚಿಞಚಿ@gmಚಿiಟ.ಛಿom  ಹಾಗೂ 080-22480297ನ್ನು ಸಂಪರ್ಕಿಸಲು ಕೋರಲಾಗಿದೆ. 
ಹೈಕೋರ್ಟ ಪೀಠದಲ್ಲಿ ಹೊಟೇಲ್ ನಡೆಸಲು ಟೆಂಡರ್ ಆಹ್ವಾನ
ಕಲಬುರಗಿ,ನ.15.(ಕ.ವಾ.)-ಕಲಬುರಗಿ ಹೈಕೋರ್ಟ್ ಪೀಠದಲ್ಲಿರುವ ಕ್ಯಾಂಟೀನ ನಡೆಸಲು ಹೊಟೇಲ್ ಅಥವಾ ಕ್ಯಾಟರೆರ್ಸ್‍ರರಿಂದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೂದೆ ಅವರು ತಿಳಿಸಿದ್ದಾರೆ. 
ಟೆಂಡರ್ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ ಪೀಠದ ಕಲಬುರಗಿ ಕಚೇರಿಯಿಂದ ನವೆಂಬರ್ 14ರಿಂದ 30ರವರೆಗೆ ಬೆಳಿಗ್ಗೆ 10.30 ರಿಂದ ಸಾಯಂಕಾಲ 4 ಗಂಟೆಯವರೆಗೆ 100 ರೂ. ಶುಲ್ಕ ಪಾವತಿಸಿ, ಪಡೆದು ಭರ್ತಿ ಮಾಡಿ ದ್ವಿಲಕೋಟೆಯೊಂದಿಗೆ ದಿ ಅಡಿಷನಲ್ ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್ ಆಫ್ ಕರ್ನಾಟಕ, ಕಲಬುರಗಿ ಬೇಂಚ್ ಇವರ ಹೆಸರಿನಲ್ಲಿ 10,000ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ಪಡೆದು, ಲಕೋಟೆ ಒಂದರಲ್ಲಿ 10,000 ರೂ.ಗಳ ಡಿಮ್ಯಾಂಡ್ ಡ್ರಾಫ್ಟ್  ಮತ್ತು ಲಕೋಟೆ ಎರಡರಲ್ಲಿ ಟೆಂಡರ್ ಸಂಬಂಧಪಟ್ಟ ಅರ್ಜಿ, ಲೈಸೆನ್ಸ್ ನೋಂದಣಿ ಪತ್ರ, ಕ್ಯಾಂಟಿನ ಚಲಾಯಿಸಲು ಆಹಾರ ಪದಾರ್ಥಗಳ ದರಪಟ್ಟಿ ಮತ್ತು ಹಿಂದೆ ಕ್ಯಾಂಟಿನ್ ನಡೆಸಿದ ಅನುಭವ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಭದ್ರಪಡಿಸಿದ ಲಕೋಟೆಯೊಂದಿಗೆ 2017ರ ನವೆಂಬರ್ 30ರ  ಸಂಜೆ 4 ರೊಳಗಾಗಿ ಸಲ್ಲಿಸಬೇಕು.
ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು 2017ರ ಡಿಸೆಂಬರ್ 2ರಂದು ಮಧ್ಯಾಹ್ನ 1 ಗಂಟೆಗೆ ತೆರೆಯಲಾಗುವುದು ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ  ಕಲಬುರಗಿ ಹೈಕೋರ್ಟ ಪೀಠದ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ.



ಹೀಗಾಗಿ ಲೇಖನಗಳು NEWS AND PHOTO DATE: 15--11--2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 15--11--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 15--11--2017 ಲಿಂಕ್ ವಿಳಾಸ https://dekalungi.blogspot.com/2017/11/news-and-photo-date-15-11-2017.html

Subscribe to receive free email updates:

0 Response to "NEWS AND PHOTO DATE: 15--11--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ