ಶೀರ್ಷಿಕೆ : *ಮುತ್ತಿನಂತ ಮಾತು*
ಲಿಂಕ್ : *ಮುತ್ತಿನಂತ ಮಾತು*
*ಮುತ್ತಿನಂತ ಮಾತು*
ಬೆಳಿಗ್ಗೆ ಶಾಲೆಗೆ ತಲುಪಿˌ ನೋಟೀಸ್ ಬೋರ್ಡ್ ನಲ್ಲಿ ಹಾಕಿದ್ದ ವಾರ್ತೆ ನೋಡಿ ಆಶ್ಚರ್ಯವಾಯ್ತು
*"ಈ ಶಾಲೆಯಲ್ಲಿˌ ನಿಮ್ಮ ಏಳಿಗೆಯನ್ನು ಮೊಟಕುಗೊಳಿಸುವಂತಹˌ ನಿಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿ ನಿನ್ನೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.ಮೃತ ದೇಹವನ್ನು ಹಾಲ್ ನಲ್ಲಿ ಇರಿಸಲಾಗಿದೆˌ ಶವ ಸಂಸ್ಕಾರಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಿದ್ದೇವೆ"*ಎಂದು ಬರೆಯಲಾಗಿತ್ತು
ನಮ್ಮಲ್ಲಿನ ಸಹಕಾರ್ಯಕರ್ತನೊಬ್ಬ ನ ಮರಣ ವಾರ್ತೆಯು ಅಘಾತವಾಯ್ತಾದರೂˌ ನಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿ ಯಾರೆಂದು ತಿಳಿಯುವ ಹಂಬಲ ಎಲ್ಲರಿಗೂ ಇತ್ತುˌ
*ಅಬ್ಬಾ..ˌˌˌಏನೇ ಆಗಲೀˌ ನಮ್ಮ ಉನ್ನತಿಯನ್ನ ತಡೆಯುವಂತಹ ವ್ಯಕ್ತಿ ಮರಣ ಹೊಂದಿದನಲ್ಲವೇ..*ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರು......
ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರಾಗಿ ಶವ ಮಂಚದ ಹತ್ತಿರ ತೆರಳಿದರುˌ ಅದನ್ನು ನೋಡಿˌ ಬೆವರನ್ನು ಒರೆಸುತ್ತಾ ಹಿಂದೆ ಬರುತ್ತಿದ್ದರುˌ
ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯವಾಗಿತ್ತುˌ
ಯಾಕಂದ್ರೆˌ ಆ ಶವ ಮಂಚದಲ್ಲಿ *ಕನ್ನಡಿ*ಯೊಂದನ್ನ ಸ್ಥಾಪಿಸಲಾಗಿತ್ತುˌ ಎಲ್ಲರೂ ಅವರವರ *ಪ್ರತಿಬಿಂಬ*ವನ್ನೇ ನೋಡುತ್ತಿದ್ದರು
ಆ ಕನ್ನಡಿಯ ಮೇಲೆ ಈ ರೀತಿ ಬರೆದಿತ್ತು
*"ನಿಮ್ಮ ಉನ್ನತಿಯನ್ನು ತಡೆಯಲು ಒಬ್ಬ ವ್ಯಕ್ತಿಗೆ ಮಾತ್ರ ಸಾಧ್ಯವಾಗುವುದು....!*
*ಆ ವ್ಯಕ್ತಿ ನೀನೇ ಆಗಿರುವೆ...!ನಿನ್ನ ಸಂತೋಷವನ್ನೂ ಸ್ವಾತಂತ್ರ್ಯವನ್ನೂ ಕನಸನ್ನೂ ಸ್ವಾಧೀನಪಡಿಸಲು ಸಾಧ್ಯವಿರುವ ಏಕ ವ್ಯಕ್ತಿ ನೀನು ಮಾತ್ರ.....!*
ನಿಮ್ಮ HM ಬದಲಾವಣೆಯಿಂದಲೋˌ ಗೆಳೆಯರು ಅಥವಾ ಶಾಲೆ ಬದಲಾವಣೆಯಿಂದಲೋˌನಿನ್ನ ಜೀವನ ಬದಲಾಗಲ್ಲˌˌ ನಿನ್ನ ಜೀವನ ಬದಲಾವಣೆಯಾಗಬೇಕಾದರೆˌ ನೀ ಬದಲಾವಣೆಯಾಗಬೇಕು.
*ಅದು ನಿನ್ನಿಂದ ಪ್ರಾರಂಭವಾಗಲೀ*
*ಅದು ಇಂದೇ ಆರಂಭವಾಗಲೀ*
*ನಿನ್ನ ಜೀವನದ ಜವಾಬ್ಧಾರಿ ನೀನೇ ಎಂದು ತಿಳಿದುಕೋ*
ದುಃಖದಿಂದˌ ಬೇಸರಗಳಿಂದ ಜೀವನ ಬದಲಾಗಲ್ಲˌ......!
ನಷ್ಟಗಳು ಮಾತ್ರ ಬರಲಿದೆ.
ಒಂದು ಕೋಳಿಮೊಟ್ಟೆ ಹೊರಗಡೆಯ ಶಕ್ತಿಯಿಂದ ಒಡೆದರೆˌ ಒಂದು ಜೀವ ನಷ್ಟಹೊಂದುತ್ತದೆˌ
ಒಳಗಡೆಯಿಂದ ಒಡೆದರೆ
ˌಒಂದು ಜೀವಹೊರ ಬರುತ್ತದೆ
*ನೀ ಬಯಸೋ ಬದಲಾವಣೆ; ಮೊದಲು ನಿನ್ನಿಂದಾಗಲಿ"*
*ಅದು ಇಂದಿನಿಂದವೇ ಆಗಲೀ*
*ಮೂಲ—ಡಾ.ಎ.ಪಿ.ಜೆ ಅಬ್ದುಲ್ ಕಲಾಂ*
ಹೀಗಾಗಿ ಲೇಖನಗಳು *ಮುತ್ತಿನಂತ ಮಾತು*
ನೀವು ಈಗ ಲೇಖನ ಓದುತ್ತಿದ್ದಲ್ಲಿ *ಮುತ್ತಿನಂತ ಮಾತು* ಲಿಂಕ್ ವಿಳಾಸ https://dekalungi.blogspot.com/2017/10/blog-post_42.html
0 Response to "*ಮುತ್ತಿನಂತ ಮಾತು*"
ಕಾಮೆಂಟ್ ಪೋಸ್ಟ್ ಮಾಡಿ