ಶೀರ್ಷಿಕೆ : NEWS AND PHOTO DATE: 14--10-2017
ಲಿಂಕ್ : NEWS AND PHOTO DATE: 14--10-2017
NEWS AND PHOTO DATE: 14--10-2017
ಸಂಪೂರ್ಣ ಸಾಕ್ಷರತೆಯಿಂದ ಮಾತ್ರ ದೇಶದ ಅಭಿವೃದ್ಧಿ
************************************************
ಕಲಬುರಗಿ,ಅ.14(ಕ.ವಾ.)-ದೇಶದಲ್ಲಿರುವ ಪ್ರತಿಯೊಬ್ಬರು ಸಂಪೂರ್ಣ ಸಾಕ್ಷರರಾದಲ್ಲಿ ಮಾತ್ರ ದೇಶ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸಾಕ್ಷರತಾ ಅಧಿಕಾರಿಗಳು ಅನಕ್ಷರಸ್ಥರಲ್ಲಿ ಸಾಕ್ಷರತೆ ಮೂಡಿಸಲು ಮುತುವರ್ಜಿಯಿಂದ ಕೆಲಸ ಮಾಡಬೇಕೆಂದು ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದಶಿ ಡಾ|| ಉಮೇಶ ಜಾಧವ ತಿಳಿಸಿದರು.
ಅವರು ಶನಿವಾರ ಕಲಬುರಗಿಯ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಮತ್ತು ತಾಲೂಕಾ ಲೋಕ ಶಿಕ್ಷಣ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಸಾಕ್ಷರತಾ ಸಮಾವೇಶ ಮತ್ತು 51ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿಣಾಚರಣೆ ಉದ್ಘಾಟಿಸಿ ಮಾತನಾಡಿ, ಅನಕ್ಷರತೆಯ ಕಾರಣದಿಂದ ಗ್ರಾಮ ಮಟ್ಟದಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು ಮೋಸಕ್ಕೆ ಒಳಗಾಗಿ ಜೈಲುಸೇರುವಂತಾಗುವ ಘಟನೆಗಳು ಜರುಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಲಬುರಗಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ ಉಪನ್ಯಾಸ ನೀಡಿ, ಹೈದ್ರಾಬಾದ ಕರ್ನಾಟಕ ವಿಭಾಗದಲ್ಲಿ 1961ರಲ್ಲಿ ಕೇವಲ ಶೇ.7.10 ಸಾಕ್ಷರತೆ ಇತ್ತು. ಸಧ್ಯ ಈ ಪ್ರಮಾಣ ಶೇ.65ಕ್ಕೆ ಹೆಚ್ಚಿದೆ ಹಾಗು ಮಹಿಳಾ ಸಾಕ್ಷರತಾ ಪ್ರಮಾಣ ಶೇ.54ಕ್ಕೆ ಹೆಚ್ಚಿದೆ. ಆದರೂ ಇಂದಿಗೂ ಕೆಲವು ಗ್ರಾಮಗಳಲ್ಲಿ ಸಾಕ್ಷರತಾ ಪ್ರಮಾಣ ಶೇ.9ಕ್ಕಿಂತ ಕಡಿಮೆ ಇದೆ. ಗ್ರಾಮಗಳಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸುವುದು ಸಧ್ಯದ ಅವಶ್ಯಕತೆ ಇದ್ದು, ಎಲ್ಲರೂ ಪ್ರಮಾಣಿಕವಾಗಿ ಕೆಲಸ ನಿರ್ವಹಿಸುವ ಅಗತ್ಯತೆ ಇರುವುದಾಗಿ ತಿಳಿಸಿದರು.
ಸಂಯುಕ್ತ ರಾಷ್ಟ್ರಗಳು 2030 ರವರೆಗೆ ವಿಶ್ವವನ್ನು ಪರಿವರ್ತಿಸುವುದಕ್ಕೆ 17 ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ ಹಮ್ಮಿಕೊಂಡಿದೆ. ಇವುಗಳಲ್ಲಿ ಬಡತನ ಕಡಿಮೆಗೊಳಿಸುವುದು, ಹಸಿವು ನಿವಾರಿಸುವುದು, ಆರೋಗ್ಯ ಸವಲತ್ತು ಹೆಚ್ಚಿಸುವುದು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಮೊದಲ 4 ಪ್ರಮುಖ ಅಂಶಗಳಾಗಿವೆ. ದೇಶದಲ್ಲಿ ಬಡತನ ಮತ್ತು ಹಸಿವಿಗೆ ಸಾಕ್ಷರತೆ ಪ್ರಮುಖ ಕಾರಣವಾಗಿದ್ದು, ವಿಶ್ವ ಸಂಸ್ಥೆಯ ವರದಿಯ ಪ್ರಕಾರ ದೇಶದಲ್ಲಿ 276 ಮಿಲಿಯನ್ ಮಕ್ಕಳು ಹಸಿವಿನಿಂದ ಇರುವ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳ ಹಸಿವು ನೀಗಿಸಿ ಶಿಕ್ಷಣ ನೀಡಲು ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಪಡಿತರದಲ್ಲಿ ಕಡಿಮೆಬೆಲೆಯಲ್ಲಿ ಅಕ್ಕಿ ವಿತರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ಶೇ.1 ಪ್ರಮಾಣ ಸಾಕ್ಷರತೆ ಹೆಚ್ಚಿದರೆ ಶೇ.10 ಪ್ರಮಾಣ ಬಡತನ ಕಡಿಮೆಯಾಗಿ ಶೇ.2 ಪ್ರಮಾಣ ಜಿ.ಡಿ.ಪಿ. ಹೆಚ್ಚುತ್ತದೆ. ಸಶಕ್ತ ಭಾರತ ನಿರ್ಮಾಣವಾಗಬೇಕಾದರೆ ಮಹಿಳಾ ಶಿಕ್ಷಣಕ್ಕೆ ಹಾಗೂ ಆರೋಗ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. 10ನೇ ತರಗತಿ ಹಂತದವರೆಗೆ 100ಕ್ಕೆ ಸುಮಾರು 97ರಷ್ಟು ಹುಡುಗಿಯರು ಶಾಲೆಗೆ ಹಾಜರಾಗುತ್ತಾರೆ. ಮುಂದೆ ಪಿ.ಯು.ಸಿ. ಮತ್ತು ಉನ್ನತ ಶಿಕ್ಷಣಕ್ಕೆ ಬಂದಾಗ ಹುಡುಗಿಯರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಇದು ಕಳವಳಕಾರಿ ಸಂಗತಿಯಾಗಿದೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಡಿಜಿಟಲ್ ಮಿಷನ್ ಜಾರಿಗೆ ಬರುತ್ತಿದ್ದು, ಮೊಬೈಲ್ ತಂತ್ರಜ್ಞಾನದ ಸದುಪಯೋಗ ಪಡೆದು ಎಲ್ಲ ಕ್ಷೇತ್ರಗಳ ಮಾಹಿತಿ ನೀಡಬಹುದಾಗಿದೆ ಎಂದರು.
ಕಲಬುರಗಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎನ್.ವಿ.ಶಿವಪ್ಪ ಮಾತನಾಡಿ, ರಾಜ್ಯದಲ್ಲಿ ಸಾಕ್ಷರ ಭಾರತ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಯೋಜನೆಯಲ್ಲಿ ಬಾಕಿ ಉಳಿದ ಹಣದಲ್ಲಿ ಕಲಬುರಗಿ ವಿಭಾಗದ 6 ಜಿಲ್ಲೆಗಳಲ್ಲಿ 6 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ ಈ ವರ್ಷ ನೀಡಲಾಗಿದೆ. ಈ ಪೈಕಿ ಕಲಬುರಗಿ ಜಿಲ್ಲೆಯಲ್ಲಿ 1.28 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು ಲೋಕ ಶಿಕ್ಷಣ ಸಮಿತಿಯಿಂದ 440 ಪ್ರೇರಕರನ್ನು ಹಾಗೂ 12800 ಸ್ವಯಂ ಸೇವಕರನ್ನು ಗುರುತಿಸಲಾಗಿದೆ. 2010-11ರಲ್ಲಿ ಕೈಗೊಂಡ ಅನಕ್ಷರಸ್ಥರ ಸರ್ವೇ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ 5.39 ಲಕ್ಷ ಅನಕ್ಷರಸ್ಥರನ್ನು ಗುರುತಿಸಲಾಗಿತ್ತು. ಸಾಕ್ಷರ ಭಾರತ ಕಾರ್ಯಕ್ರಮದ ಒಂದನೇ ಹಂತದಲ್ಲಿ 1.19 ಲಕ್ಷ, ಎರಡನೇ ಹಂತದಲ್ಲಿ ಒಂದು ಲಕ್ಷ ಹಾಗು ಮೂರನೇ ಹಂತದಲ್ಲಿ 98 ಸಾವಿರ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರೇರಕರು ಮತ್ತು ಸ್ವಯಂ ಸೇವಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನವಸಾಕ್ಷರರಾಗಿ ಸಾಧನೆ ಮಾಡಿದ ತಾಜ ಸುಲ್ತಾನಪುರದ ಭಾಗಮ್ಮ ದೇವೇಂದ್ರಪ್ಪ, ಶರಣ ಸಿರಸಗಿಯ ರೇಣುಕಾ ಯಲ್ಲಪ್ಪ, ಅಫಜಲಪೂರಿನ ಬಂಗಾರಮ್ಮ ಹಾಗೂ ಸಾಕ್ಷರ ಭಾರತ ಕಾರ್ಯಕ್ರಮದ ರಾಜ್ಯ ಪ್ರಶಸ್ತಿ ವಿಜೇತ ಗುರುಶಾಂತಪ್ಪ ಚಿಂಚೋಳಿ ಅವರನ್ನು ಸನ್ಮಾನಿಸಲಾಯಿತು.

ಅಕ್ಟೋಬರ್ 16ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
******************************************************
ಕಲಬುರಗಿ,ಅ.14(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಮಹಿಳಾ ಮಹಾವಿದ್ಯಾಲಯ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಕಲಬುರಗಿ ಹಾಗೂ ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ “ಪ್ರಸವ ಪೂರ್ವ ಲಿಂಗ ಪತ್ತೆ ಕಾನೂನು ಮತ್ತು ಮಾಹಿತಿ ಹಕ್ಕು ಕಾಯ್ದೆ” ಕುರಿತು ಅರಿವು ನೆರವು ಕಾರ್ಯಕ್ರಮವನ್ನು ಕಲಬುರಗಿ ಹಳೇ ಜೇವರ್ಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ವಿದ್ಯಾಲಯದಲ್ಲಿ ಅಕ್ಟೋಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.

ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಸರ್ಕಾರಿ ಮಹಿಳಾ ವಿದ್ಯಾಲಯದ ಪ್ರಾಂಶುಪಾಲ ಖಂಡೇರಾವ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಹಾಗೂ ಮಹಾನಗರ ಪಾಲಿಕೆ ಸದಸ್ಯ ಶಿವು ಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಅವರು ಮಾಹಿತಿ ಹಕ್ಕು ಕಾಯ್ದೆ ಮತ್ತು ಪೊಲೀಸ್ ದೂರು ಪ್ರಾಧಿಕಾರ ಕುರಿತು ಹಾಗು ಖ್ಯಾತ ಸ್ತ್ರೀರೋಗ ತಜ್ಞೆ ಡಾ|| ಹೇಮಾ ಅವರು “ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾನೂನು (ಪಿ.ಸಿ. ಪಿ.ಎನ್.ಡಿ.ಟಿ. ಕಾಯ್ದೆ)” ಕುರಿತು ಮಾತನಾಡುವರು.
ನಿವೇಶನ ಹಂಚಿಕೆ: ಕೈಗಾರಿಕೋದ್ಯಮಿಗಳಿಂದ ಅರ್ಜಿ ಆಹ್ವಾನ
*****************************************************
ಕಲಬುರಗಿ,ಅ.14(ಕ.ವಾ.)-ಕಲಬುರಗಿ ಜಿಲ್ಲೆಯ ಕಪನೂರ ಕೈಗಾರಿಕಾ ಪ್ರದೇಶ ಮತ್ತು ನಂದೂರು ಕೆಸರಟಗಿ ಕೈಗಾರಿಕಾ ಪ್ರದೇಶಗಳಲ್ಲಿ ಖಾಲಿಯಿರುವ ನಿವೇಶನಗಳ ಹಂಚಿಕೆಗಾಗಿ ಕೈಗಾರಿಕೆಯನ್ನು ಸ್ಥಾಪಿಸಲು ಆಸಕ್ತಿಯಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೈಗಾರಿಕೋದ್ಯಮಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಧಿಮೆದಾರರು ಉದ್ಧಿಮೆ ಪ್ರಾರಂಭಿಸಲು ಆಸಕ್ತಿ ಹೊಂದಿದ ಪುರುಷ ಮತ್ತು ಮಹಿಳಾ ಉದ್ಧಿಮೆಗಳಿಗೆ ಕೈಗಾರಿಕಾ ನಿವೇಶನವನ್ನು ಶೇ. 50 ದರದಲ್ಲಿ ಖರೀದಿಸಲು ಅವಕಾಶ ಅವಕಾಶÀವಿದೆ. ಕಪನೂರು 3ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ 100 ಎಕರೆ ಕ್ಷೇತ್ರದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗಿದೆ. 10 ಗುಂಟೆ, 20 ಗುಂಟೆ ಮತ್ತು 40 ಗುಂಟೆ ಕ್ಷೇತ್ರದ ವಿವಿಧ ಅಳತೆಯ ನಿವೇಶನಗಳನ್ನು ರಚಿಸಿ ಉದ್ದಿಮೆಗಳಿಗೆ ಲೀಸ್-ಕಂ-ಸೇಲ್ ಡೀಡ್ ಮಾಡಲು ಲಭ್ಯವಿರುತ್ತವೆ. ನಿವೇಶನದ ಬೆಲೆ ಎಕರೆಗೆ 64 ಲಕ್ಷ ರೂ.ಇರುತ್ತದೆ.
ನಂದೂರು ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ 200 ಎಕರೆ ಕ್ಷೇತ್ರದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗಿದೆ. ಈ ಪ್ರದೇಶದಲ್ಲಿ 10 ಗುಂಟೆ, 20 ಗುಂಟೆ ಮತ್ತು 1 ಎಕರೆ ವಿಸ್ತೀರ್ಣದ ಕೈಗಾರಿಕಾ ನಿವೇಶನಗಳ ಲಭ್ಯವಿರುತ್ತದೆ. ನಿವೇಶನದ ಬೆಲೆ ಎಕರೆಗೆ 55 ಲಕ್ಷ. ರೂ. ಇರುತ್ತದೆ. ನಂದೂರ ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ 40 ಎಕರೆ ವಿಸ್ತೀರ್ಣದಲ್ಲಿ 400 ಚ.ಮೀ. ದಿಂದ 500 ಚ.ಮೀ. ಅಳತೆಯ 230 ನಿವೇಶನಗಳನ್ನು ರಚಿಸಲಾಗಿದೆ. ಪ್ರತಿ ಚದÀರ ಅಡಿ ನಿವೇಶನದ ಬೆಲೆ 1,375 ರೂ.ಇರುತ್ತದೆ.
ಉದ್ದಿಮೆ ಪ್ರಾರಂಭಿಸಲು ಆಸಕ್ತ ಹೊಂದಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮಹಿಳಾ ಉದ್ಧಿಮೆದಾರರು ಯೋಜನಾ ವರದಿಯೊಂದಿಗೆ ಅರ್ಜಿಯ ಶುಲ್ಕ 250 ರೂ., ಇ.ಎಂ.ಡಿ. ಡಿ.ಡಿ. 5000ರೂ. ಮತ್ತು ನಿವೇಶನದ ಬೆಲೆಯ ಶೇಕಡಾ 10 ರಷ್ಟು ಮೊತ್ತದ ಡಿ.ಡಿ. ತೆಗೆದು ಯೋಜನಾ ವರದಿಯೊಂದಿಗೆ ತಿತಿತಿ.ಞiಚಿಜb.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಮುದ್ರಿತ ಅರ್ಜಿಯನ್ನು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಹೀಗಾಗಿ ಲೇಖನಗಳು NEWS AND PHOTO DATE: 14--10-2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 14--10-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 14--10-2017 ಲಿಂಕ್ ವಿಳಾಸ https://dekalungi.blogspot.com/2017/10/news-and-photo-date-14-10-2017.html
0 Response to "NEWS AND PHOTO DATE: 14--10-2017"
ಕಾಮೆಂಟ್ ಪೋಸ್ಟ್ ಮಾಡಿ