ಶೀರ್ಷಿಕೆ : ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಪ್ರಸ್ತುತ- ಬಸವರಾಜ ರಾಯರಡ್ಡಿ
ಲಿಂಕ್ : ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಪ್ರಸ್ತುತ- ಬಸವರಾಜ ರಾಯರಡ್ಡಿ
ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಪ್ರಸ್ತುತ- ಬಸವರಾಜ ರಾಯರಡ್ಡಿ
ಕೊಪ್ಪಳ, ಅ.02 (ಕರ್ನಾಟಕ ವಾರ್ತೆ) : ಧರಣಿ ಸತ್ಯಾಗ್ರಹಗಳನ್ನು ಚಳುವಳಿಗಾಗಿ ಬಳಸಿಕೊಂಡು, ಸತ್ಯ, ಅಹಿಂಸೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡ ಮಹಾತ್ಮ ಗಾಂಧೀಜಿಯವರ ತತ್ವಗಳು ಕೇವಲ ಭಾರತ ದೇಶಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ಪ್ರಸ್ತುತ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ 149 ನೇ ಜಯಂತಿ, ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಹಾಗೂ ವಿಚಾರಗೋಷ್ಠಿಯನ್ನು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರು ಕೇವಲ ಭಾರತದ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಡಲಿಲ್ಲ. ಮೂಢನಂಬಿಕೆ, ಅಸ್ಪøಷ್ಯತೆ, ಬಾಲ್ಯವಿವಾಹ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧವೂ ಹೋರಾಡಿದರು. ಗಾಂಧೀಜಿ ಯವರ ವಿಚಾರಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಅವಶ್ಯಕವಾಗಿವೆ. ವಕೀಲಿ ವೃತ್ತಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಅವರು, ಒಮ್ಮೆ ರೈಲಿನಲ್ಲಿ ಮೊದಲನೆ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ, ವರ್ಣಬೇಧ ನೀತಿ ಅನುಸರಿಸುತ್ತಿದ್ದ ಅಲ್ಲಿನ ಆಡಳಿತ, ರೈಲಿನಿಂದ ಕೆಳಗಿಳಿಸಿ ಅಪಮಾನ ಮಾಡಿತು. ಇದು ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲು ಕಾರಣವಾಯಿತು. ಅಲ್ಲದೆ ಮಾನವ ವಿರೋಧಿ ವರ್ಣಬೇಧ ನೀತಿಯ ವಿರುದ್ಧ ಹೋರಾಟಕ್ಕೆ ನಾಂದಿಯಾಯಿತು. ಮಾನವ ಹಕ್ಕುಗಳಿಗೆ ಸಂಘಟನೆ ಮಾಡುವ ನಿರ್ಧಾರವನ್ನು ಅವರು ಕೈಗೊಂಡರು. ತಮಗಾದ ಅಪಮಾನ ವಿರುದ್ಧ ಅಲ್ಲಿನ ನ್ಯಾಯಾಲಯದಲ್ಲಿ ವಾದಿಸಿ, ಕೊನೆಗೂ ಜಯ ಸಾಧಿಸಿದರು. ನಂತರ ವಕೀಲ ವೃತ್ತಿಗೆ ತಿಲಾಂಜಲಿ ಹೇಳಿ, ಭಾರತಕ್ಕೆ ಆಗಮಿಸಿದ ಗಾಂಧೀಜಿಯವರು, ಇಲ್ಲಿನ ಅಸ್ಪøಷ್ಯತೆ, ಜಾತಿಭೇದ, ಲಿಂಗಭೇದ, ಅನಕ್ಷರತೆಯನ್ನು ನೋಡಿಯೇ, ಸ್ವಾತಂತ್ರ್ಯ ಚಳುವಳಿಗೆ ಧುಮುಕುವ ಅಚಲ ನಿರ್ಧಾರ ಕೈಗೊಂಡರು. ಸತ್ಯ, ಅಹಿಂಸೆಯ ಮಾರ್ಗವನ್ನೇ ಸ್ವಾತಂತ್ರ್ಯ ಚಳುವಳಿಗೆ ಅನುಸರಿಸಿದರು. ಹಿಂಸೆಗೆ ಹಿಂಸೆ ಉತ್ತರವಲ್ಲ ಎನ್ನುವ ಸಿದ್ಧಾಂತ ಅವರದಾಗಿತ್ತು. ಸ್ವಾತಂತ್ರ್ಯಕ್ಕಾಗಿ ಜನಶಕ್ತಿಯನ್ನು ಕಟ್ಟಿದರು, ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಧರಣಿ ಸತ್ಯಾಗ್ರಹಗಳನ್ನು ಚಳುವಳಿಗಾಗಿ ಬಳಸಿಕೊಂಡು ವಿಶ್ವದ ಜನಮನವನ್ನು ಗೆದ್ದರು. ಗಾಂಧೀಜಿ ಅವರಿಗೆ ಮಹಾತ್ಮಾ ಎಂದು ಕರೆಯಲು ಅವರು ಮಾಡಿದ ತ್ಯಾಗ, ಅಹಿಂಸಾ ಮಾರ್ಗಗಳೆ ಕಾರಣ. ಮಹಾತ್ಮಾ ಗಾಂಧಿಯವರ ವಿಚಾರಗಳು ಇಂದಿಗೂ ನಾಳಿಗೂ ಅಮರವಾಗಿವೆ. ಲಾಲ ಬಹಾದ್ದೂರ ಶಾಸ್ತ್ರಿ ಅವರು ಈ ದೇಶ ಕಂಡ ಸರಳ ಸಜ್ಜನಿಕೆಯ ಪ್ರಧಾನಿಯಾಗಿದ್ದರು. ರೈತ ಹಾಗೂ ಸೈನಿಕರಿಗಾಗಿ "ಜೈ ಜವಾನ ಜೈ ಕಿಸಾನ್" ಎಂಬ ಘೋಷಣೆ ನೀಡಿದ ದಕ್ಷ ಆಡಳಿತಗಾರರು. ಇಂತಹ ಇಬ್ಬರು ಮಾಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಶರಣಪ್ಪ ಬಿಳಿಎಲಿ ಅವರು ಮಾತನಾಡಿ, ಮಹಾತ್ಮಾ ಗಾಂಧಿಯವರು ಪ್ರಯೋಗಶೀಲ ಹೋರಾಟಗಾರರು. ಅವರು ಎಂದೂ ಕಾನೂನು ಭಂಗ ಮಾಡಲಿಲ್ಲ. ಹಿಂಸೆ ಮಾರ್ಗಕ್ಕೆ ಅವಕಾಶ ನೀಡಲಿಲ್ಲ. ಯಾವ ವ್ಯಕ್ತಿ ಸಮಾಜದ, ತಮ್ಮ ಬೆಂಬಲಿಗರ ನೋವನ್ನು ಅರಿಯುತ್ತಾರೆಯೋ ಅವರೇ ಮಾಹಾನ್ ನಾಯಕರಾಗುತ್ತಾರೆ. ಗ್ರಾಮ ಸ್ವರಾಜ್ಯ, ಸ್ವರಾಜ್ಯ, ಸತ್ಯಾಗ್ರಹ, ಚಳುವಳಿ ಹಾಗೂ ಗಾಂಧಿಯವರ ವಿಚಾರಗಳು ಇಂದಿಗೂ ಪ್ರಚಲಿತವಾಗಿವೆ. ಗಾಂಧೀಜಿ ಅವರಿಗೆ ನೊಬೆಲ್ ಪ್ರಶಸ್ತಿ ಸಿಗಲಿಲ್ಲ ಆದರೆ ಗಾಂಧಿ ತತ್ವಗಳನ್ನು ಅನುಸರಿಸಿದ ಈ ಜಗತ್ತಿನ ಐವರು ಮಹಾನ್ ಸಾಧಕರಿಗೆ ಐದು ನೊಬೆಲ್ ಪ್ರಶಸ್ತಿಗಳು ಸಿಕ್ಕಿವೆ. ವಿಶ್ವದ ಎಲ್ಲೆಡೆಯೂ ಗಾಂಧೀಜಿ ಅವರ ಚಿಂತನೆಗಳ ಬಗ್ಗೆ ಪ್ರಸ್ತುತತೆಯನ್ನು ಕಾಣಬಹುದಾಗಿದೆ ಎಂದರು.
ವಿಶೇಷ ಸಂಚಿಕೆಗಳ ಬಿಡುಗಡೆ : ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗಿರುವ ಅಕ್ಟೋಬರ್ ಮಾಹೆಯ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಸಂಚಿಕೆಯ ಗಾಂಧೀಜಿ ವಿಶೇಷಾಂಕಗಳನ್ನು ಸಚಿವ ಬಸವರಾಜ ರಾಯರಡ್ಡಿ ಅವರು ಸೇರಿದಂತೆ ಎಲ್ಲ ಗಣ್ಯಮಾನ್ಯರಿಂದ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಅಲ್ಲದೆ ಕಿರುಹೊತ್ತಿಗೆಗಳನ್ನು ಎಲ್ಲ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಿರುಚಿತ್ರ ಪ್ರದರ್ಶನ : ಮಹಾತ್ಮಾಗಾಂಧೀಜಿಯವರ ಆತ್ಮ ಚರಿತ್ರೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನ್ನಡ ಅವತರಣಿಕೆಯಲ್ಲಿ ಹೊರತಂದಿರುವ 27 ನಿಮಿಷಗಳ ಅವಧಿಯ ಸಾಕ್ಷ್ಮ ಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಪ್ರಭಾರಿ ಡಿಡಿಪಿಐ ಗೋನಾಳ ಉಪಸ್ಥಿತರಿದ್ದು ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದರು.
ಇದಕ್ಕೂ ಪೂರ್ವದಲ್ಲಿ ಭಾಗ್ಯನಗರದ ಅಂಬಿಕಾ ಮತ್ತು ಸಂಗಡಿಗರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ರಘುಪತಿ ರಾಘವ ರಾಜಾರಾಂ, ಸುಮರನಕರಲೆ, ವೈಷ್ಣವಜನತೋ ಗೀತ ಗಾಯನ ನಡೆಸಿಕೊಟ್ಟರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.
ಹೀಗಾಗಿ ಲೇಖನಗಳು ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಪ್ರಸ್ತುತ- ಬಸವರಾಜ ರಾಯರಡ್ಡಿ
ಎಲ್ಲಾ ಲೇಖನಗಳು ಆಗಿದೆ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಪ್ರಸ್ತುತ- ಬಸವರಾಜ ರಾಯರಡ್ಡಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಪ್ರಸ್ತುತ- ಬಸವರಾಜ ರಾಯರಡ್ಡಿ ಲಿಂಕ್ ವಿಳಾಸ https://dekalungi.blogspot.com/2017/10/blog-post_40.html
0 Response to "ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಪ್ರಸ್ತುತ- ಬಸವರಾಜ ರಾಯರಡ್ಡಿ"
ಕಾಮೆಂಟ್ ಪೋಸ್ಟ್ ಮಾಡಿ