ಶೀರ್ಷಿಕೆ : ಮಾತೃಪೂರ್ಣ ಯೋಜನೆಯಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ- ಎಂ. ಕನಗವಲ್ಲಿ
ಲಿಂಕ್ : ಮಾತೃಪೂರ್ಣ ಯೋಜನೆಯಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ- ಎಂ. ಕನಗವಲ್ಲಿ
ಮಾತೃಪೂರ್ಣ ಯೋಜನೆಯಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ- ಎಂ. ಕನಗವಲ್ಲಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನಗರದ ಸರ್ಕಾರಿ ನೌಕರರ ಸಾಂಸ್ಕøತಿಕ ಭವನದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ ‘ಮಾತೃಪೂರ್ಣ’ ಯೋಜನೆಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗರ್ಭಿಣಿಯರ, ಬಾಣಂತಿಯರ ಸದೃಢ ಆರೋಗ್ಯಕ್ಕಾಗಿ ಈ ಮೊದಲು ಪೂರಕ ಪೌಷ್ಠಿಕ ಆಹಾರವನ್ನು ಆಯಾ ಫಲಾನುಭವಿಗಳ ಮನೆಗೆ ತಲುಪಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಈ ವ್ಯವಸ್ಥೆ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಠಿಕ ಆಹಾರಧಾನ್ಯವನ್ನು ನೀಡಲಾಗುತ್ತಿದ್ದರೂ, ಅದರ ಬಳಕೆಯನ್ನು ಫಲಾನುಭವಿ ಸಮರ್ಪಕವಾಗಿ ಮಾಡುತ್ತಿದ್ದಾರೆಯೋ ಇಲ್ಲವೋ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಶಿಶು ಮರಣ, ತಾಯಿ ಮರಣದಂತಹ ಪ್ರಕರಣಗಳು ಈಗಲೂ ಅಲ್ಲಲ್ಲಿ ಸಂಭವಿಸುತ್ತಿವೆ. ಇದಕ್ಕೆ ಕಾರಣ ಮಾತ್ರ ಅಪೌಷ್ಠಿಕತೆ, ರಕ್ತಹೀನತೆ ಎಂಬುದಾಗಿ ವರದಿಗಳು ಬರುತ್ತಿವೆ. ಹೀಗಾಗಿ ಪೂರಕ ಪೌಷ್ಠಿಕ ಆಹಾರ ಪೂರೈಕೆಯ ಯೋಜನೆಯನ್ನೇ ಮರು ರೂಪಿಸಿ, ಪೌಷ್ಠಿಕ ಆಹಾರ, ಅಂಗನವಾಡಿ ಕೇಂದ್ರದಲ್ಲಿ, ಸಿಬ್ಬಂದಿಗಳ ಸಮ್ಮುಖದಲ್ಲಿಯೇ, ಫಲಾನುಭವಿಗಳಿಗೆ ತಲುಪಿಸಬೇಕು. ಹೆರಿಗೆ ಸಮಯದಲ್ಲಿ ಗರ್ಭಿಣಿ ತಾಯಂದಿರ ಹಾಗೂ ಶಿಶುಗಳ ಮರಣ ಪ್ರಮಾಣವನ್ನು ತಡೆಗಟ್ಟುವÀ ಉದ್ದೇಶದಿಂದ ‘ಮಾತೃಪೂರ್ಣ’ ಯೋಜನೆಯನ್ನು ಇಂದಿನಿಂದ ಜಾರಿಗೊಳಿಸಲಾಗುತ್ತಿದೆ. ಹೊಸ ಯೋಜನೆಯಡಿ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ, ಒಂದು ಅತ್ಯುತ್ತಮ ಪರಿಪೂರ್ಣ ಪೌಷ್ಠಿಕ ಆಹಾರವನ್ನು ತಯಾರಿಸಿ, ಅಲ್ಲಿಯೇ ಬಿಸಿಯಾಗಿ ಊಟ ಮಾಡಿಸುವ ರೀತಿಯಲ್ಲಿ ಯೋಜನೆ ರೂಪಿಸಿ, ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ 1850 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ, ಈಗಿನ ಅಂಕಿ ಅಂಶಗಳ ಪ್ರಕಾರ 15640 ಗರ್ಭಿಣಿಯರು ಹಾಗೂ 17765 ಬಾಣಂತಿಯರು ಸೇರಿದಂತೆ ಒಟ್ಟು 33405 ಫಲಾನುಭವಿಗಳಿಗೆ ಮಾತೃಪೂರ್ಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದಡಿ ಪೌಷ್ಠಿಕ ಆಹಾರ ನೀಡಲಾಗುವುದು. ಮಹಿಳೆಯರು, ತಾವು ಗರ್ಭಿಣಿಯರೆಂದು ತಿಳಿದ ತಕ್ಷಣ, ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು. ಗರ್ಭಿಣಿಯರು ಕೇವಲ ತಮ್ಮ ಆರೋಗ್ಯದ ಬಗ್ಗೆ ಮಾತ್ರವಲ್ಲದೆ, ಜನಿಸುವ ಮಗುವಿನ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ಸಮಾಜಕ್ಕೆ ಒಂದು ಸದೃಢ, ಆರೋಗ್ಯಪೂರ್ಣ ಮಗುವಿಗೆ ಜನ್ಮ ನೀಡಲು ಸಾಧ್ಯ. ಗರ್ಭಿಣಿಯರು ಮಾತೃಪೂರ್ಣ ಯೋಜನೆಯಡಿ ಮಧ್ಯಾಹ್ನದ ಊಟ ಸೇವಿಸಲು ಹೋಗಬೇಕು. ಇದರಲ್ಲಿ ಯಾವುದೇ ಸಂಕೋಚ ಅಥವಾ ಮುಜುಗರ ಪಡುವ ಅಗತ್ಯವಿಲ್ಲ. ಬೇರೆಯವರು ಏನನ್ನುತ್ತಾರೆ ಎಂಬುದು ಮುಖ್ಯವಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ, ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ಫಲಾನುಭವಿಗೆ ಪರಿಪೂರ್ಣ ಪೌಷ್ಠಿಕ ಆಹಾರ ಪೂರೈಸಲಾಗುವುದು. ಇದರಲ್ಲಿ ಅಕ್ಕಿ, ತೊಗರಿಬೇಳೆ, ಎಣ್ಣೆ, ಹಾಲು, ಮೊಟ್ಟೆ, ತರಕಾರಿ, ಬೆಲ್ಲ ಮತ್ತು ಕಡಲೆ ಬೀಜದಿಂದ ಮಾಡಿದ ಚಿಕ್ಕಿ, ಮಸಾಲ ಪದಾರ್ಥಗಳು ಒಳಗೊಂಡಿರುತ್ತದೆ. ತಿಂಗಳಿಗೆ 25 ದಿನಗಳಂತೆ ವರ್ಷದಲ್ಲಿ ಒಟ್ಟು 300 ದಿನಗಳು ನೀಡಲಾಗುವುದು. ಮೊಟ್ಟೆ ತಿನ್ನದಿರುವವರಿಗೆ, ಮೊಳಕೆ ಬರಿಸಿದ ಕಾಳು ನೀಡಲಾಗುವುದು. ಒಟ್ಟಾರೆ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ದಿನವೊಂದಕ್ಕೆ ಬೇಕಾಗುವ ಪ್ರೋಟೀನ್ ಕ್ಯಾಲರಿ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಆಹಾರದಲ್ಲಿ ಒದಗಿಸಲಾಗುವುದು. ಆರಂಭದಲ್ಲಿ ಈ ಯೋಜನೆ ಜಾರಿಯಲ್ಲಿ ಅಲ್ಪಸ್ವಲ್ಪ ಲೋಪದೋಷಗಳು, ಅಡ್ಡಿಗಳು, ತೊಂದರೆಗಳು ಬರುವುದು ಸಹಜ. ಆದರೆ, ದಿನದಿಂದ ದಿನಕ್ಕೆ, ಯೋಜನೆಯ ಜಾರಿಯಲ್ಲಿ ಸುಧಾರಣೆಯನ್ನು ತಂದು, ಸಮರ್ಪಕವಾಗಿ ಜಾರಿಗೊಳಿಸಲು ಅಧಿಕಾರಿಗಳು ಪ್ರಾಮಾಣಿಕ ಯತ್ನ ಮಾಡಬೇಕು. ಮಹಿಳೆಯರು ಸರ್ಕಾರ ಅತ್ಯಂತ ಕಳಕಳಿಯಿಂದ ಜಾರಿಗೆ ತಂದಿರುವ ಈ ಯೋಜನೆಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕಾನಂದ ಮಳಗಿ ಅವರು ಮಾತನಾಡಿ, ಗರ್ಭಿಣಿಯರು ಮತ್ತು ಬಾಣಂತಿಯರು ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ, ಉತ್ತಮ ಆಹಾರ ಸೇವಿಸುವುದು ಅಗತ್ಯವಿದೆ. ಇಂತಹ ಉತ್ತಮ ಆಹಾರವನ್ನು ಸರ್ಕಾರವೇ ತಯಾರಿಸಿ, ತಮಗೆ ಉಣಬಡಿಸುವ ರೀತಿಯಲ್ಲಿ ಮಾತೃಪೂರ್ಣ ಯೋಜನೆಯನ್ನು ರೂಪಿಸಿದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಸ್ವಾಗತಿಸಿದರು. ನಗರಸಭೆ ಸದಸ್ಯರುಗಳಾದ ಅಮ್ಜದ್ ಪಟೇಲ್, ಖಾಜಾವಲಿ ಬನ್ನಿಕೊಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ರಾಮಾಂಜನೇಯ, ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳಾದ ಪ್ರತಿಭಾ ಪಾಟೀಲ್, ತ್ರಿಶೂಲಾ, ಕೋಮಲ ಕುದರಿಮೋತಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಗರ್ಭಿಣಿಯರಿಗೆ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೀಮಂತ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು.
ಹೀಗಾಗಿ ಲೇಖನಗಳು ಮಾತೃಪೂರ್ಣ ಯೋಜನೆಯಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ- ಎಂ. ಕನಗವಲ್ಲಿ
ಎಲ್ಲಾ ಲೇಖನಗಳು ಆಗಿದೆ ಮಾತೃಪೂರ್ಣ ಯೋಜನೆಯಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ- ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾತೃಪೂರ್ಣ ಯೋಜನೆಯಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ- ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2017/10/blog-post_2.html
0 Response to "ಮಾತೃಪೂರ್ಣ ಯೋಜನೆಯಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ- ಎಂ. ಕನಗವಲ್ಲಿ"
ಕಾಮೆಂಟ್ ಪೋಸ್ಟ್ ಮಾಡಿ