News & photos Dt.02-10-2017

News & photos Dt.02-10-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News & photos Dt.02-10-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News & photos Dt.02-10-2017
ಲಿಂಕ್ : News & photos Dt.02-10-2017

ಓದಿ


News & photos Dt.02-10-2017

                                                      ಮಾನವಕುಲಕ್ಕೆ ಅಹಿಂಸೆ ಸಂದೇಶ ಸಾರಿದವರು ಗಾಂಧೀಜಿ

ಕಲಬುರಗಿ,ಅ.02.(ಕ.ವಾ.)-ಸತ್ಯ, ಅಹಿಂಸೆ, ಜನಾಂದೋಲನ ಚಳವಳಿ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು, ಇಡೀ ಮಾನವಕುಲಕ್ಕೆ ಶಾಂತಿಯ ಸಂದೇಶ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಮಹಾನ ಪುರುಷರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಸೋಮವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಹಾಗೂ ಭಾರತ ಸೇವಾದಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸರ್ವ ಧರ್ಮ ಪ್ರಾರ್ಥನೆ-ಸದ್ಭಾವನಾ ಗೀತಗಾಯನ ಕಾರ್ಯಕ್ರಮವನ್ನು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ಇಡೀ ದೇಶ ಶ್ರದ್ಧಾ ಭಕ್ತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ ಶಾಸ್ತ್ರೀ ಅವರ ಜಯಂತಿಯನ್ನು ಆಚರಿಸುತ್ತಿದೆ. ಇಡೀ ವಿಶ್ವದಲ್ಲಿ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದ ದೇಶ ಭಾರತವಾಗಿದ್ದು, ಗಾಂಧೀಜಿ ಅವರ ಅಹಿಂಸಾ ತತ್ವವೇ ಇದಕ್ಕೆ ಮೂಲ ಕಾರಣವಾಗಿದೆ. ಸ್ವಾತಂತ್ರ್ಯ ಸಮಯದಲ್ಲಿ ಅವರ ಮಾತಿಗೆ ಇಡೀ ದೇಶ ಜನತೆ ಬೆಂಬಲ ನೀಡಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದನ್ನು ಸಚಿವರು ಸ್ಮರಿಸಿದರು.
ಗಾಂಧೀಜಿ ಅವರು ಅನುಸರಿಸಿದ ಮಾರ್ಗವನ್ನು, ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಗಾಂಧೀಜಿ ಅವರು ಕಂಡ ರಾಮ ರಾಜ್ಯದ ಕನಸು ನನಸಾಗಿಸಬಹುದಾಗಿದೆ. ಅಸ್ಪøಶ್ಯರ ಬಗ್ಗೆ ತುಂಬಾ ಕಾಳಜಿ ಹೊಂದಿದ್ದ ಅವರು ಸ್ವಚ್ಛತೆಗೂ ಗಮನಹರಿಸಿದ್ದರು. ಜನರ ಸೇವೆಗೆ ತಮ್ಮ ಜೀವನವೇ ಮುಡಪಾಗಿಟ್ಟಿದ ಗಾಂಧೀಜಿಯವರ ಜೀವನವೇ ನಮಗೆ ಸಂದೇಶವಾಗಿದೆ, ಮಾಜಿ ಪ್ರಧಾನಿ ಲಾಲ ಬಹಾದ್ದೂರ ಶಾಸ್ತ್ರೀಯವರ ಜನ್ಮದಿನವು ಇಂದೇ ಇರುವುದರಿಂದ ಶಾಸ್ತ್ರಿ ಅವರ ಪ್ರಮಾಣಿಕ ಸೇವೆಯನ್ನು ಕೊಂಡಾಡಿದರು. ಲಾಲ ಬಹಾದ್ದೂರ ಶಾಸ್ತ್ರೀ, ಮಹಾತ್ಮ ಗಾಂಧೀಜಿ ಸೇರಿದಂತೆ ಮಹಾನ್ ಪುರುಷರ ಜೀವನವನ್ನು ಇಂದಿನ ಯುವ ಪೀಳಿಗೆ ಅಧ್ಯಯನ ಮಾಡುವುದರೊಂದಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀಶೈಲಂ ಸಾರಂಗಮಠದ ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಮಹ್ಮದ್ ಜಾವೀದ್ ಆಲಂ ಖಾಸ್ಮಿ, ಪೂಜ್ಯ ಸಂಗಾನಂದ ಭಂತೇಜಿ ಹಾಗೂ ಸೆಂಟ್ ಮೇರಿ ಚರ್ಚಿನ ಫಾದರ್ ಸ್ಟ್ಯಾನಿ ಅವರು ಧಾರ್ಮಿಕ ಪಠಣ ಮಾಡಿದರು. ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ನಿಮಿತ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದ ಜನಪದ, ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಯನ್ನು ಸಹ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಲಾವಿದ ಸಿದ್ರಾಮಪ್ಪ ಪೊಲೀಸ್ ಪಾಟೀಲ್, ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತ ಹಾಗೂ ಭಾರತ ಸೇವಾದಳದಿಂದ ಸರ್ವಧರ್ಮ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ತದನಂತರ “ವೈಷ್ಣವ ಜನತೋ....”, ”ರಘುಪತಿ ರಾಘವ.....” ಗಾಂಧಿ ಭಜನೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು “ಕರ್ನಾಟಕದಲ್ಲಿ ಗಾಂಧೀಜಿ” ಕುರಿತ ಅಪೂರ್ವ ಛಾಯಚಿತ್ರ ಪ್ರದರ್ಶನ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಶರಣ ಕುಮಾರ ಮೋದಿ, ಆಯುಕ್ತ ಪಿ. ಸುನೀಲ ಕುಮಾರ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಶಶೀಲ ಜಿ.ನಮೋಶಿ, ಸಹಾಯಕ ಆಯುಕ್ತ ರಾಚಪ್ಪ, ಶಿಷ್ಠಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಭಾರತ ಸೇವಾದಳದ ಕಾರ್ಯದರ್ಶಿ ಶವಲಿಂಗಪ್ಪ ಗೌಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅನೇಕ ಗಣ್ಯರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಹಶೀಲ್ದಾರ ದಯಾನಂದ ಪಾಟೀಲ್ ಸ್ವಾಗತಿಸಿದರು.
                                          
                                         ಜಿಲ್ಲೆಯ 54 ಸಾವಿರ ಫಲಾನುಭವಿಗಳಿಗೆ ಮಾತೃಪೂರ್ಣದ ಫಲ
ಕಲಬುರಗಿ,ಅ.02.(ಕ.ವಾ.)-ಜಿಲ್ಲೆಯ 54 ಸಾವಿರ ಫಲಾನುಭವಿಗಳಿಗೆ ಮಾತೃಪೂರ್ಣ ಯೋಜನೆಯ ಫಲ ದೊರೆಯಲಿದೆ. ಗರ್ಭಿಣಿಯರಲ್ಲಿ ಪೌಷ್ಠಿಕತೆ ಹೆಚ್ಚಿಸಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಹಾಗೂ ಕಡಿಮೆ ತೂಕದ ಮಕ್ಕಳ ಜನನ ತಗ್ಗಿಸುವುದೆ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಸೋಮವಾರ ಕಲಬುರಗಿಯ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ಇವರÀ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗರ್ಭಿಣಿ ಮತ್ತು ಬಾಣಂತಿಯರಿಗೆ ಮದ್ಯಾಹ್ನದ ಪೌಷ್ಠಿಕ ಬಿಸಿಯೂಟ ನೀಡುವ ಆರೋಗ್ಯವಂತ ತಾಯಿ: ಆರೋಗ್ಯವಂತ ಮಗು ಎಂಬ ಧ್ಯೇಯ ಹೊಂದಿರುವ “ಮಾತೃಪೂರ್ಣ” ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯಿ ಮತ್ತು ಮಗುವಿನ ಆರೋಗ್ಯ ಸಂರಕ್ಷಣೆ ಮಾಡುವ ಮೂಲಕ ಆರೋಗ್ಯವಂತ ರಾಜ್ಯ ನಿರ್ಮಾಣದ ಗುರಿ ಇಟ್ಟಿಕೊಳ್ಳಲಾಗಿದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ನೀಡುವ ಮೂಲಕ ಆರೋಗ್ಯವಂತ ಮಕ್ಕಳ ಜನನಕ್ಕೆ “ಮಾತೃ ಪೂರ್ಣ” ಯೋಜನೆ ಸಹಕಾರಿಯಾಗಲಿದೆ ಎಂದರು.
ಗರ್ಭಿಣಿ ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸಮತೋಲಿತ ಹಾಗೂ ಪೌಷ್ಟಿಕ ಆಹಾರವನ್ನು ಮಧ್ಯಾಹ್ನ ಸಮಯದಲ್ಲಿ ತಯಾರಿಸಿ ಬಿಸಿಯೂಟ ಪೂರೈಸುವ ಮೂಲಕ ಅವರ ಆರೋಗ್ಯದಲ್ಲಿ ಪೌಷ್ಠಿಕಾಂಶದ ಸುಧಾರಣೆ ತರುವ ವೈಶಿಷ್ಠಪೂರ್ಣ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಇದಾಗಿದೆ. ಇಂದಿನಿಂದ ರಾಜಾದ್ಯಂತ ಜಾರಿಗೆ ತರಲಾಗುತ್ತಿದೆ. ಕಾಲಕಾಲಕ್ಕೆ ಕಬ್ಬಿಣಾಂಶದ ಮಾತ್ರೆ ವಿತರಿಸುವ, ತೂಕ ಪರೀಕ್ಷಿಸುವ, ಆಹಾರ ಪದ್ಧತಿಗಳ ನಿರ್ವಹಣೆ, ಚುಚ್ಚು ಮದ್ದು ಮತ್ತು ಆಪ್ತ ಸಮಾಲೋಚನೆ, ಆರೋಗ್ಯ ಸಂಸ್ಥೆಗಳಲ್ಲಿ ಹೆರಿಗೆ ಮಾಡಿಸಲು ಉತ್ತೇಜಿಸುವುದನ್ನು ಯೋಜನೆ ಒಳಗೊಂಡಿದೆ ಎಂದರು.
. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊಂದಿದ್ದು, ಗರ್ಭಿಣಿ, ಬಾಣಂತಿಯರಿಗೆ ಗುಣಮಟ್ಟದ ಆಹಾರವನ್ನು ಪೂರೈಸಬೇಕು ಹಾಗೂ ಯಾವುದೇ ಅಪಸ್ವರ ಬಾರದಂತೆ ಯೋಜನೆ ಅನುಷ್ಟಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೀನ-ದಲಿತರ ಹಾಗೂ ಬಡವರ ಅಭ್ಯುದಯಕ್ಕೆ ಹಲವಾರು ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಯಾರು ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕಾಗಿ ಇಡೀ ದೇಶಕ್ಕೆ ಮಾದರಿಯಾದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಬಿ.ಪಿ.ಎಲ್. ಕುಟುಂಬದ ಪ್ರತಿ ಸದಸ್ಯರಿಗೆ 7ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ವಾರದ ಐದು ದಿನ ಹಾಲನ್ನು ಪೂರೈಸಲಾಗುತ್ತಿದ್ದು, ಬಡವರ ಏಳಿಗೆಗೆ ಸರ್ಕಾರದ ಅನುದಾನವನ್ನು ಪ್ರಮಾಣಿಕವಾಗಿ ಖರ್ಚು ಮಾಡುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಲೋಕಸಭಾ ಸದಸ್ಯ ಹಾಗೂ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಕಲಬುರಗಿ ಜಿಲ್ಲೆಯಲ್ಲಿ 3098 ಅಂಗನವಾಡಿ ಕೇಂದ್ರಗಳ ಮೂಲಕ ಮಾತೃಪೂರ್ಣ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದ್ದು, ತಾಯಂದಿರು ಯೋಜನೆಯ ಲಾಭ ಪಡೆಯಬೇಕು. ನಗರ ಪ್ರದೇಶದಲ್ಲಿ ಮಹಿಳೆಯರು ಸೌಂದರ್ಯ ಕಾರಣವೊಡ್ಡಿ ಮಕ್ಕಳಿಗೆ ಎದೆ ಹಾಲು ಉಣಿಸುವ ಬದಲಾಗಿ ಪೌಡರ್ ಹಾಲು ಉಣಿಸುತ್ತಿರುವುದು ಖೇದಕರ. ಮಗುವಿಗೆ ತಾಯಿ ಹಾಲು ಅಮೃತವಿದ್ದಂತೆ, ತಾಯಂದಿರು ಮಗುವಿಗೆ ಎದೆ ಹಾಲನ್ನೆ ಉಣಿಸಬೇಕು. ಇದಕ್ಕೆ ಪೂರಕವಾಗಿಯೆ ಮಹಿಳೆಯರಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಅಲ್ಲಿ ತಾಯಂದಿರು ದಿನದಲ್ಲಿ ಐದಾರು ಬಾರಿ ಮಗುವಿಗೆ ಹಾಲುಣಿಸುವುದರಿಂದ ಅಲ್ಲಿನ ಮಕ್ಕಳು ಆರೋಗ್ಯವಂತರಾಗಿರುವುದನ್ನು ನಾವು ಕಾಣಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುವರ್ಣ ಹಣಮಂತ ಮಲಾಜಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ ಬಾಗವಾನ್, ಮಹಾನಗರ ಪಾಲಿಕೆ ಮಹಾಪೌರ ಶರಣ ಕುಮಾರ ಮೋದಿ, ಸಹಾಯಕ ಆಯುಕ್ತ ರಾಚಪ್ಪ, ಶಿಷ್ಠಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸಂಪತ ಕುಮಾರ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅಂಗನವಾಡಿ ಕಾರ್ಯತೆಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಣ್ಯರಿಂದ ಮಾತೃಪೂರ್ಣ ಯೋಜನೆಯ ಬ್ರೋಚರ್ ಬಿಡುಗಡೆ ಮಾಡಲಾಯಿತು. ಯೋಜನೆ ಚಾಲನೆ ಅಂಗವಾಗಿ ಗರ್ಭೀಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡಿದಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ನೀಡಲಾಯಿತು.
ಯೋಜನೆಯ ಹಿನ್ನೆಲೆ:
ಕಲಬುರಗಿ ಜಿಲ್ಲೆಯ 7 ತಾಲೂಕಿನ 9 ಶಿಶು ಅಭಿವೃದ್ಧಿ ಯೋಜನೆಗಳ 3098 ಅಂಗನವಾಡಿ ಕೇಂದ್ರಗಳಲ್ಲಿ ಈಗಾಗಲೇ ಗುರುತಿಸಲಾದ 27440 ಗರ್ಭಿಣಿಯರಿಗೆ ಹಾಗೂ 27695 ಹಾಲುಣಿಸುವ ತಾಯಂದಿರಿಗೆ ಸೇರಿದಂತೆ ಒಟ್ಟು 55135 ಜನರು ಈ ಸೌಲಭ್ಯ ಪಡೆಯಲಿದ್ದಾರೆ.
ಒಂದು ಪೂರ್ಣ ಪೌಷ್ಟಿಕ ಊಟವು ಅನ್ನ, ಸಾಂಬಾರ್, ಪಲ್ಯ ಜೊತೆಗೆ ಬೇಯಿಸಿದ ಒಂದು ಮೊಟ್ಟೆ, ಬೆಲ್ಲ ಮತ್ತು ಕಡಲೆ ಬೀಜದಿಂದ ಮಾಡಿದ ಚಿಕ್ಕಿ, 200 ಮಿ.ಲಿ. ಹಾಲನ್ನು ಒಳಗೊಂಡಿರುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳು ಕೊಡಲಾಗುವುದು. ಇನ್ನು ಆಹಾರದಲ್ಲಿನ ಪ್ರಮಾಣ ನೋಡಿದಾಗ ಅಕ್ಕಿ-150 ಗ್ರಾಮ, ತೊಗರಿ ಬೇಳೆ-30 ಗ್ರಾಂ, ಎಣ್ಣೆ-16ಗ್ರಾಂ, ತರಕಾರಿ-50 ಗ್ರಾಂ ಮತ್ತು ಅಗತ್ಯಾನುಸಾರ ಮಸಾಲಾ ಪದಾರ್ಥಗಳ ಸೇರಿದೆ. ಗರ್ಭಿಣಿಯಿಂದ ಹಿಡಿದು ಬಾಣಂತಿಯಾದ ನಂತರ ಮಗುವಿನ ಆರೈಕೆಯ ದಿನಗಳು ಸೇರಿದಂತೆ ತಿಂಗಳಿಗೆ 25 ದಿನಗಳು, ವಾರ್ಷಿಕ 300 ದಿನಗಳು ಸೇರಿದಂತೆ ಒಟ್ಟು 1000 ದಿನ ಆಹಾರ ನೀಡುವ ಯೋಜನೆ ಇದಾಗಿದೆ. ಈ ಒಂದು ಊಟದಿಂದ 1342 ಕ್ಯಾಲೊರೀಸ್, 41 ಗ್ರಾಂ ಪ್ರೊಟೀನ್, 578 ಎಂ.ಜಿ. ಕ್ಯಾಲ್ಶಿಯಂ ಲಭ್ಯವಾಗಲಿದೆ. ಇದಲ್ಲದೇ ಊಟದ ನಂತರ ಕಬ್ಬೀಣಾಂಶದ ಮಾತ್ರೆ ಸಹ ನೀಡಲಾಗುತ್ತದೆ.
                                                       ಅಸಹಿಷ್ಣುತೆ ತೊಡೆದರೆ ಒಳ್ಳೆಯ ಸಮಾಜ ನಿರ್ಮಾಣ
ಕಲಬುರಗಿ,ಅ.02.(ಕ.ವಾ.)-ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಂದೇಶ ಪರಿಪಾಲಿಸುವ ಮೂಲಕ ಅಸಹಿಷ್ಣುತೆಯನ್ನು ತೊಡೆದು ಹಾಕಿ ಒಳ್ಳೆಯ ಸಮಾಜ ನಿರ್ಮಿಸುವಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ತಿಳಿಸಿದರು.
ಅವರು ಸೋಮವಾರ ಗಾಂಧಿ ಜಯಂತಿ ಅಂಗವಾಗಿ ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಂಧೀಜಿಯವರು ತಾವು ಸಮಾಜಕ್ಕೆ ಹೇಳಬೇಕಾಗಿರುವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವೇ ಒಂದು ಸಂದೇಶದಂತೆ ಬದುಕಿದ್ದಾರೆ ಎಂದರು.
ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧೀಜಿ ಸರ್ವ ಧರ್ಮ ಸಹಿಷ್ಣುತೆಯನ್ನು ದೇಶದ ಉದ್ದಗಲಕ್ಕೂ ಪ್ರಯಾಣಿಸಿ ಬಿತ್ತರಿಸಿದ್ದಾರೆ. ಮಹಾತ್ಮ ಗಾಂಧಿಯವರ ಆತ್ಮಕಥೆಯನ್ನು ಎಲ್ಲರೂ ಅಧ್ಯಯನ ಮಾಡಿ ಅವರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕೆಂದು ಸಚಿವರು ತಿಳಿಸಿದರು.
ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಮಾತನಾಡಿ, ಸ್ವಚ್ಛತೆಯು ನಿರಂತರ ಪ್ರಕ್ರಿಯೆಯಾಗಿದ್ದು, ಕಲಬುರಗಿ ನಗರ ಸ್ವಚ್ಛತೆಗೆ ಮಹಾನಗರ ಪಾಲಿಕೆ ಪ್ರಥಮಾದ್ಯತೆ ನೀಡಿದೆÉ. ಪೌರಕಾರ್ಮಿಕರು ಹೆಚ್ಚಿನ ಜವಾಬ್ದಾರಿಯಿಂದ ಸ್ವಚ್ಛತಾಕಾರ್ಯ ಕೈಗೊಂಡು ಮಹಾನಗರ ಪಾಲಿಕೆಗೆ ಬಹುಮಾನ ದೊರಕಿಸುವಲ್ಲಿ ಭಾಗಿಯಾಗಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಾನಗರ ಪಾಲಿಕೆ ಆಯುಕ್ತ ಪಿ.ಸುನಿಲಕುಮಾರ ಮಾತನಾಡಿ, ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸುಮಾರು 2000 ಜನ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ 1200 ಪೌರಕಾರ್ಮಿಕರ ಸಹಾಯದಿಂದ ಇಂದು ನಗರದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಿಂದ ರೈಲು ನಿಲ್ದಾಣ, ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಿಂದ ಬಸ್ ನಿಲ್ದಾಣ, ಕೋರ್ಟ್ ಆವರಣ, ಸರ್ಕಾರಿ ಆಸ್ಪತ್ರೆ ಆವರಣ ಹಾಗೂ ಸೂಪರ್ ಮಾರ್ಕೇಟ್ ಪ್ರದೇಶಗಳನ್ನು ಸ್ವಚ್ಛಗೊಳಿಸಳಾಗುತ್ತಿದೆ. ಪೌರಕಾರ್ಮಿಕರಿಗೆ ಇಂದು ಮಹಾನಗರ ಪಾಲಿಕೆ ಅನುದಾನದಲ್ಲಿ ಆರೋಗ್ಯ ತಪಾಸಣೆ ಸಹ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ರಮೇಶ ಕಮಕನೂರ, ಕಾರ್ಯನಿರ್ವಾಹಕ ಇಂಜಿನೀಯರ ಆರ್.ಪಿ.ಜಾಧವ, ಪರಿಸರ ಇಂಜನೀಯರ ಮುನಾಫ ಪಟೇಲ, ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಕಾರ್ಯಕರ್ತರು ಮತ್ತಿತರರು ಪಾಲ್ಗೊಂಡಿದ್ದರು.


















ಹೀಗಾಗಿ ಲೇಖನಗಳು News & photos Dt.02-10-2017

ಎಲ್ಲಾ ಲೇಖನಗಳು ಆಗಿದೆ News & photos Dt.02-10-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News & photos Dt.02-10-2017 ಲಿಂಕ್ ವಿಳಾಸ https://dekalungi.blogspot.com/2017/10/news-photos-dt02-10-2017.html

Subscribe to receive free email updates:

0 Response to "News & photos Dt.02-10-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ