ಶೀರ್ಷಿಕೆ : ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಅ. 29 ರಂದು ಲಿಖಿತ ಪರೀಕ್ಷೆ
ಲಿಂಕ್ : ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಅ. 29 ರಂದು ಲಿಖಿತ ಪರೀಕ್ಷೆ
ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಅ. 29 ರಂದು ಲಿಖಿತ ಪರೀಕ್ಷೆ
ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್‍ರ ಪ್ರಸಕ್ತ ಸಾಲಿನ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಅಕ್ಟೋಬರ್. 29 ರಂದು ಭಾನುವಾರ ಬೆಳಿಗ್ಗೆ 11-00 ರಿಂದ 12-30 ಗಂಟೆಯವರೆಗೆ ಜಿಲ್ಲೆಯ ಗಂಗಾವತಿ ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 5120 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷಾ ಕೇಂದ್ರಗಳ ವಿವರ : ಗಂಗಾವತಿ ತಾಲೂಕಿನ ಸಾಯಿ ನಗರದ ಕೊಲ್ಲಿ ನಾಗೇಶ್ವರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್. 6664001 ರಿಂದ 6664600 ವರೆಗೆ ಒಟ್ಟು 600 ಅಭ್ಯರ್ಥಿಗಳು. ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ, ಸರಸ್ವತಿ ಗಿರಿ, ಲಲಿತ ಮಹಲ್ ಹೊಟೇಲ್ ಹಿಂದುಗಡೆ ರೂಲ್ ನಂಬರ್. 6664601 ರಿಂದ 6664900 ವರೆಗೆ ಒಟ್ಟು 300, ವಿರುಪಾಪುರ ಬೆಥಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ರೂಲ್ ನಂಬರ್. 6664901 ರಿಂದ 6665300 ವರೆಗೆ ಒಟ್ಟು 400, ಎಂ.ಎನ್.ಎಂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಬಾಗ) ದಲ್ಲಿ ರೂಲ್ ನಂಬರ್. 6665301 ರಿಂದ 6665600 ರವರೆಗೆ ಒಟ್ಟು 300, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 6665601 ರಿಂದ 666200 ವರೆಗೆ ಒಟ್ಟು 300, ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜ್ ಲಯನ್ಸ್ ಕ್ಲಬ್ ಆವರಣದಲ್ಲಿ ರೂಲ್ ನಂಬರ್. 6665901 ರಿಂದ 6666200 ವರೆಗೆ ಒಟ್ಟು 300, ಪಂಪಾನಗರದ ಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಭಾಗ) ದಲ್ಲಿ ರೂಲ್ ನಂಬರ್. 6666201 ರಿಂದ 6666500 ವರೆಗೆ ಒಟ್ಟು 300, ಎಚ್.ಆರ್. ಸರೋಜಮ್ಮ ಸ್ಮಾರಕ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 6666501 ರಿಂದ 6666700 ಒಟ್ಟು 200, ಕಲ್ಮಠ ಚನ್ನಬಸವಸ್ವಾಮಿ ಮಹಿಳಾ ಕಲಾ & ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್. 6666701 ರಿಂದ 6666960 ವರೆಗೆ ಒಟ್ಟು 260, ಜಯನಗರದ ಸೇಂಟ್ ಪಾಲ್ಸ್ ಆಂಗ್ಲ ಶಾಲೆಯಲ್ಲಿ ರೂಲ್ ನಂಬರ್. 6666961 ರಿಂದ 6667320 ವರೆಗೆ ಒಟ್ಟು 360, ಎಲ್.ಐ.ಸಿ ಆಫೀಸ್ ಎದುರುಗಡೆ ಲಿಟಲ್ ಹಾಟ್ರ್ಸ್ ಸ್ಕೂಲ್‍ನಲ್ಲಿ ರೂಲ್ ನಂಬರ್. 6667321 ರಿಂದ 6667720 ವರೆಗೆ ಒಟ್ಟು 400, ಜುಲಾಯಿ ನಗರದ ಜನತಾ ಸೇವಾ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ರೂಲ್ ನಂಬರ್. 6667721 ರಿಂದ 6667980 ವರೆಗೆ ಒಟ್ಟು 260, ಲಕ್ಷ್ಮೀದೇವಿ ಗುಡಿ ಹತ್ತಿರದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ 6667981 ರಿಂದ 6668220 ವರೆಗೆ ಒಟ್ಟು 240, ವಡ್ಡರಹಟ್ಟಿಯ ಕೆ.ಎಲ್.ಇ ಸಂಸ್ಥೆಯ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್. 6668221 ರಿಂದ 6668460 ವರೆಗೆ ಒಟ್ಟು 240, ಚೈತನ್ಯ ಟೆಕ್ನೊ ಸ್ಕೂಲ್, ಕೇರಾಫ್ ಸಪ್ತಗಿರಿ ಪಬ್ಲಿಕ್ ಸ್ಕೂಲ್‍ನಲ್ಲಿ ರೂಲ್ ನಂಬರ್. 6668461 ರಿಂದ 6668760 ವರೆಗೆ ಒಟ್ಟು 300, ಕೊಪ್ಪಳ ರಸ್ತೆಯ ವೆಂಕಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 6668761 ರಿಂದ 6669000 ವರೆಗೆ ಒಟ್ಟು 240, ಹಾಗೂ ಇಲಾಹಿ ಕಾಲೋನಿಯ ಟಿ.ಎಂ.ಎ.ಇ ಸೊಸೈಟಿ ಆಫ್ ಎಜ್ಯಕೇಶನ್ ಸಂಸ್ಥೆಯಲ್ಲಿ ರೂಲ್ ನಂಬರ್. 6669001 ರಿಂದ 6669120 ವರೆಗೆ ಒಟ್ಟು 120, ಸೇರಿದಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ ಹೀಗೆ ಒಟ್ಟು 5120 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕರೆಪತ್ರಗಳನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್ www.ksp.gov.in ನಿಂದ ಪಡೆದುಕೊಳ್ಳಬಹುದಾಗಿದೆ. ಲಿಖಿತ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಹಾಗೂ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾದ ಪರೀಕ್ಷಾ ಕೇಂದ್ರದ ವಿವರಗಳನ್ನು ಸಹ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಕರಪತ್ರವನ್ನು ಪಡೆಯದೇ ಪರೀಕ್ಷೆಗೆ ಹಾಜರಾದಲ್ಲಿ ಲಿಖಿತ ಪರೀಕ್ಷಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ. ಕರೆಪತ್ರದ ಜೊತೆಗೆ ಗುರುತಿನ ಚೀಟಿಯನ್ನು ಕಡ್ಡಾಯಬಾಗಿ ತರಬೇಕು. ನಿಗಧಿತ ದಿನಾಂಕ ಹಾಗೂ ಸಮಯದಲ್ಲಿ ಹಾಜರಾಗದಿದ್ದರೆ ಅಂತಹವರನ್ನು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ.
ಪೊಲೀಸ್ ನೇಮಕಾತಿಯು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯುತ್ತದೆ. ಯಾವುದೇ ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲೀ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಥವಾ ಯಾವುದೇ ವಿಧವಾದ ಪಾರತೋಷಕ ನೀಡುವುದು ಮಾಡಬಾರದು. ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ. ಈ ದಿಸೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಮಾರು ಹೋಗಬಾರದು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ನೇಮಕಾತಿ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಅ. 29 ರಂದು ಲಿಖಿತ ಪರೀಕ್ಷೆ
ಎಲ್ಲಾ ಲೇಖನಗಳು ಆಗಿದೆ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಅ. 29 ರಂದು ಲಿಖಿತ ಪರೀಕ್ಷೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಅ. 29 ರಂದು ಲಿಖಿತ ಪರೀಕ್ಷೆ ಲಿಂಕ್ ವಿಳಾಸ https://dekalungi.blogspot.com/2017/10/29.html
0 Response to "ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಅ. 29 ರಂದು ಲಿಖಿತ ಪರೀಕ್ಷೆ"
ಕಾಮೆಂಟ್ ಪೋಸ್ಟ್ ಮಾಡಿ