ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ

ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ
ಲಿಂಕ್ : ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ

ಓದಿ


ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ

 ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಮದ್ಯಪಾನದಿಂದ ಗ್ರಾಮಗಳಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿದ್ದು, ಗ್ರಾಮಗಳನ್ನು ಪಾನಮುಕ್ತಗೊಳಿಸಲು, ಜನರ ಮನಪರಿವರ್ತನೆ ಮಾಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ. ರುದ್ರಪ್ಪ ಅವರು ಹೇಳಿದರು
 
      ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಮದ್ಯಪಾನ ಮತ್ತು ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕೇವಲ ಕಾನೂನು ಪ್ರಯೋಗಿಸಿ, ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ.  ಗ್ರಾಮಗಳು ಪಾನಮುಕ್ತವಾಗಬೇಕು.  ಮದ್ಯ ಮತ್ತು ಮಾದಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಬೇಕು.  ಜನರ ಮನ ಪರಿವರ್ತನೆಯಾಗದ ಹೊರತು ದುಶ್ಚಟಗಳನ್ನು ದೂರಗೊಳಿಸುವುದು ಕಷ್ಟಸಾಧ್ಯ.  ಮಹಿಳೆ ಮನಸ್ಸು ಮಾಡಿದಲ್ಲಿ, ತನ್ನ ಇಡೀ ಸಂಸಾರ ತಪ್ಪು ದಾರಿಗೆ ಹೋಗುವುದನ್ನು ತಡೆಗಟ್ಟಲು ಸಾಧ್ಯವಿದೆ.  ಹೀಗಾಗಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಪಂಚಾಯತಿ ಮಟ್ಟದಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮಹಿಳಾ ಕೇಂದ್ರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.  ಒಂದೆಡೆ ಅಬಕಾರಿ ಇಲಾಖೆಗೆ ಮದ್ಯ ಮಾರಾಟದ ಗುರಿ ನಿಗದಿಪಡಿಸಲಾಗುತ್ತಿದೆ.  ಇನ್ನೊಂದೆಡೆ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸರ್ಕಾರವೇ ಜಾಗೃತಿ ಮೂಡಿಸಲು ಶ್ರಮ ಪಡುತ್ತಿದೆ.  ಇದೇಕೆ ಹೀಗೆ ಎನ್ನುವ ಜಿಜ್ಞಾಸೆ ಜನರಲ್ಲಿ ಮೂಡುವುದು ಸಹಜ.  ಆಹಾರ, ಹವ್ಯಾಸಗಳು ಆಯಾ ವ್ಯಕ್ತಿಯ ವಯಕ್ತಿಕ ವಿಷಯವಾಗಿದ್ದು, ಆಯಾ ಇಲಾಖೆಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತವೆ.  ಮದ್ಯ ಮತ್ತು ಮಾದಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಲವು ಬಗೆಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ.  ಈ ದಿಸೆಯಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯಾದ್ಯಂತ ಮದ್ಯ ವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹವಾಗಿದ್ದು, ಇಂತಹ ಶಿಬಿರಗಳಿಂದ ಈವರೆಗೆ ರಾಜ್ಯದಲ್ಲಿ 80 ಸಾವಿರ ಜನ ಪಾನಮುಕ್ತರಾಗಿದ್ದಾರೆ.  ಒಟ್ಟಾರೆಯಾಗಿ ಮನ ಪರಿವರ್ತನೆ ಮಾಡುವುದು ಬಹು ಮುಖ್ಯ ಅಂಶವಾಗಿದೆ.  ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ತಪ್ಪುದಾರಿಗೆ ಇಳಿಯುತ್ತಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.  ಹೀಗಾಗಿ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಜರುಗಬೇಕು.  ಪೊಲೀಸ್ ಮತ್ತು ಅಬಕಾರಿ ಇಲಾಖೆಯವರು ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವಂತಹವರ ಮೇಲೆ ಮಾತ್ರ ಕ್ರಮ ಜರುಗಿಸುತ್ತಾರೆಯೇ ಹೊರತು, ಅವರಿಗೆ ಮದ್ಯ ಮಾರಾಟ ಪೂರೈಸಿದವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ.  ಹೀಗಾಗಿ ಇದು ನಿಯಂತ್ರಣಕ್ಕೆ ಬರುತ್ತಿಲ್ಲ.  ಅಕ್ರಮವಾಗಿ ಮದ್ಯ ಪೂರೈಸುವವರ ಮೇಲೂ ಕ್ರಮ ಆಗಬೇಕು ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ. ರುದ್ರಪ್ಪ ಅವರು ಹೇಳಿದರು.
     ಸಭೆಯಲ್ಲಿ ಭಾಗವಹಿಸಿದ್ದ ಅಬಕಾರಿ ಉಪ ಅಧೀಕ್ಷಕ ಡಿ. ದೇಮಣ್ಣ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 139 ಪರವಾನಿಗೆ ಹೊಂದಿರುವ ಮದ್ಯ ಮಾರಾಟಗಾರರಿದ್ದು, ಕಳೆದ ವರ್ಷ 24 ಕೋಟಿ ರೂ. ರೆವಿನ್ಯೂ ಸಂಗ್ರಹವಾಗಿದೆ.  ಕಳೆದ 2016 ರ ಜುಲೈ ರಿಂದ 2017 ರ ಜೂನ್ ವರೆಗೆ ಜಿಲ್ಲೆಯಲ್ಲಿ ಲೈಸೆನ್ಸ್ ಷರತ್ತುಗಳ ಉಲ್ಲಂಘನೆಗಾಗಿ 371 ಪ್ರಕರಣಗಳು ದಾಖಲಾಗಿದ್ದು, 44. 46 ಲಕ್ಷ ರೂ. ದಂಡ ವಿಧಿಸಲಾಗಿದೆ.  ಗ್ರಾಮಗಳ ಸಣ್ಣ ಪುಟ್ಟ ಅಂಗಡಿಗಳಲ್ಲಿ, ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದಂತಹ 415 ಪ್ರಕರಣಗಳನ್ನು ದಾಖಲಿಸಿ 6. 72 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಜಿಲ್ಲೆಯಲ್ಲಿ 06 ಗಂಭೀರ ಪ್ರಕರಣಗಳನ್ನು ದಾಖಲಿಸಿದ್ದು, ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ ಎಂದರು.
     ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ

ಎಲ್ಲಾ ಲೇಖನಗಳು ಆಗಿದೆ ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ ಲಿಂಕ್ ವಿಳಾಸ https://dekalungi.blogspot.com/2017/10/blog-post_39.html

Subscribe to receive free email updates:

0 Response to "ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ"

ಕಾಮೆಂಟ್‌‌ ಪೋಸ್ಟ್‌ ಮಾಡಿ