ಶೀರ್ಷಿಕೆ : ಹಿಂಗಾರು : ಕೊತ್ತಂಬರಿ ಬೆಳೆಯಲು ರೈತರಿಗೆ ಸಲಹೆ
ಲಿಂಕ್ : ಹಿಂಗಾರು : ಕೊತ್ತಂಬರಿ ಬೆಳೆಯಲು ರೈತರಿಗೆ ಸಲಹೆ
ಹಿಂಗಾರು : ಕೊತ್ತಂಬರಿ ಬೆಳೆಯಲು ರೈತರಿಗೆ ಸಲಹೆ
ಕೊಪ್ಪಳ ಅ. 27 (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹಿಂಗಾರು ಬೆಳೆಗಳಿಗೆ ತುಂಬ ಸಹಕಾರಿಯಾಗಿದೆ. ಹಿಂಗಾರಿನಲ್ಲಿ ಮಳೆಯಾಶ್ರಿತ ಹಲವು ಬಗೆಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.
ಉತ್ತಮ ಹಿಂಗಾರು ಮಳೆ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಫ್ರೆಂಚ್ ಬೀನ್ಸ್, ಅವರೆ, ಬಟಾಣಿ, ಎಲೆಕೋಸು ಹಾಗೂ ಹೂ ಕೋಸು ಅಲ್ಲದೆ ಎರೆ ಭೂಮಿಗೆ ಸೂಕ್ತವಾದ ಅಲ್ಪಾವಧಿ ಸೊಪ್ಪಿನ ಬೆಳೆಯಾದ ಕೊತ್ತಂಬರಿ ಬಿತ್ತಲು ಈಗ ಸೂಕ್ತ ಕಾಲವಾಗಿದೆ. ಕೊತ್ತಂಬರಿ ಬೆಳೆಯುವವರಿಗೆ ತೋಟಗಾರಿಕೆ ಇಲಾಖೆಯಿಂದ ಸಲಹೆ ನೀಡಲಾಗಿದೆ. ಧನಿಯಾ ಎಂದು ಕರೆಯಲ್ಪಡುವ ಈ ಬೆಳೆ ಎರೆ ಭೂಮಿಗೆ ಹೇಳಿ ಮಾಡಿಸಿದ ಮಳೆಯಾಶ್ರಿತ ಸೊಪ್ಪಿನ ಬೆಳೆ. ಇದನ್ನು ಬೀಜಕ್ಕಾಗಿ ಮತ್ತು ಸೊಪ್ಪಿಗಾಗಿ ಬೆಳೆಯಬಹುದು.
ಬೇಸಾಯ ಕ್ರಮಗಳು: ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಕಸಕಡ್ಡಿ ತೆಗೆದು ಸ್ವಚ್ಛಗೊಳಿಸಿದ ನಂತರ ಎಕರೆಗೆ ಬೇಕಾದ 3-4 ಟನ್ ಕೊಟ್ಟಿಗೆ ಗೊಬ್ಬರವನ್ನು ಟ್ರೈಕೋಡರ್ಮಾ ದಂತಹ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಿ ಭೂಮಿಯಲ್ಲಿ ಸೇರಿಸಬೇಕು. ನಂತರ ಉತ್ತಮ ತಳಿಯ ಬೀಜಗಳ ಆಯ್ಕೆ ಬಹು ಮುಖ್ಯ. ಸ್ಥಳಿಯ ತಳಿಗಳಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯಿಂದ ಅರ್ಕಾ ಇಶಾ ಎನ್ನುವ ಅಧಿಕ ಇಳುವರಿ ಕೊಡುವ ಸುಧಾರಿತ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಡಿ.ಡಬ್ಲೂ,ಡಿ -3 ಎನ್ನುವ ಇನ್ನೂಂದು ತಳಿ ಸೊಪ್ಪು ಹಾಗೂ ಬೀಜಕ್ಕಾಗಿ ಬೆಳೆಯಬಹುದಾಗಿದೆ. ಕಡಿಮೆ ಅವಧಿಯಲ್ಲಿ ಅಂದರೆ ಬಿತ್ತಿದ 4-6 ವಾರಗಳಲ್ಲಿ ಕಟಾವಿಗೆ ಬರುವ ಈ ಬೆಳೆಯಿಂದ ಉತ್ತಮ ಲಾಭ ಪಡೆಯಬಹುವುದು. ಮನೆ ಬೀಜ ಬಳಸಿದರೆ ಇಳುವರಿ ಕಡಿಮೆ. ಬಿತ್ತಿದ 90 ದಿನಗಳ ನಂತರ ಬೀಜದ ಕಾಳು ಲಭ್ಯವಾಗುತ್ತವೆ. ಈಗ ಬೀಜ ಬಿತ್ತಲು ಸಕಾಲ. ಕೂರಿಗೆ ಬಳಸಿ ಬಿತ್ತನೆ ಮಾಡಿದ 10-12 ದಿನಗಳಲ್ಲಿ ಬೀಜ ಮೊಳಕೆ ಒಡೆಯುವುದು. ಬಿತ್ತನೆ ಮಾಡಿದ ಮರು ದಿನವೇ ಕಳೆನಾಶಕ ಬಳಸಿದರೆ ಉತ್ತಮ. ಕಳೆಮುಕ್ತ ಬೆಳೆಯಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದು. ಏರು ಮಡಿ ಮಾಡಿ ಬಿತ್ತುವುದು ಸೂಕ್ತ .ರಾಸಾಯನಿಕ ಗೊಬ್ಬರಗಳನ್ನು 15:15:15 (ಸಾ.ರಂ.ಪೊ.) ಪ್ರಮಾಣದಲ್ಲಿ ಎಕರೆಗೆ ನೀಡಬೇಕು. ಸಾರಜನಕವನ್ನು ಅರ್ಧಭಾಗ ಬಿತ್ತುವಾಗ ಮತ್ತು ಇನ್ನರ್ಧ ಭಾಗ ಮೇಲು ಗೊಬ್ಬರವಾಗಿ ಕೊಡಬೇಕು. ಕೀಟ /ರೋಗಗಳ ನಿಯಂತ್ರಣಕ್ಕೆ ಒಂದೆರೆಡು ಬಾರಿ ಗಂಧಕದ ಪುಡಿ ಹಾಗೂ ಬೇವಿನ ಎಣ್ಣೆ ಸಿಂಪರಿಸಿದರೆ ಸಾಕು. ಎಕರೆಗೆ 3-4 ಟನ್ ಸೊಪ್ಪು ಹಾಗೂ ಸುಮಾರು 400 ಕಿ.ಗ್ರಾಂ. ನಷ್ಟು ಜೀಜದ ಇಳುವರಿ ಪಡೆಯಬಹುದು. ಉತ್ತಮ ಬೆಲೆ ಇದ್ದಲ್ಲಿ ಎಕೆರೆಗೆ ನಿವ್ವಳ ರೂ.50000 ಲಾಭ ಸಿಗುವ ಸಾಧ್ಯತೆ ಇದೆ. ಬಿತ್ತನೆ ಮಾಡುವಾಗ ಬಿತ್ತನೆ ಪ್ರದೇಶವನ್ನು 3-4 ಭಾಗ ಮಾಡಿ 10-12 ದಿನಗಳ ಅಂತರದಲ್ಲಿ ಬಿತ್ತಿದರೆ ನಿರಂತರ ಆದಾಯ ಲಭ್ಯ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆಯ ಆಯಾ ತಾಲ್ಲೂಕಾ ಕಛೇರಿ, ಹಾಗೂ ತೋಟಗಾರಿಕೆ ಉಪ ನಿರ್ದೇಶಕರು ಅಥವಾ ಹಾರ್ಟಿಕ್ಲಿನಿಕ್ ವಿಷಯ ತಜ್ಞರು, ಕೊಪ್ಪಳ ರವರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಹಿಂಗಾರು : ಕೊತ್ತಂಬರಿ ಬೆಳೆಯಲು ರೈತರಿಗೆ ಸಲಹೆ
ಎಲ್ಲಾ ಲೇಖನಗಳು ಆಗಿದೆ ಹಿಂಗಾರು : ಕೊತ್ತಂಬರಿ ಬೆಳೆಯಲು ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಿಂಗಾರು : ಕೊತ್ತಂಬರಿ ಬೆಳೆಯಲು ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2017/10/blog-post_45.html
0 Response to "ಹಿಂಗಾರು : ಕೊತ್ತಂಬರಿ ಬೆಳೆಯಲು ರೈತರಿಗೆ ಸಲಹೆ"
ಕಾಮೆಂಟ್ ಪೋಸ್ಟ್ ಮಾಡಿ