NEWS AND PHOTOS 24-07-2017

NEWS AND PHOTOS 24-07-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTOS 24-07-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTOS 24-07-2017
ಲಿಂಕ್ : NEWS AND PHOTOS 24-07-2017

ಓದಿ


NEWS AND PHOTOS 24-07-2017

ರೈತರ ಹಿತ ಕಾಪಾಡಲು ಸರ್ಕಾರ ಬದ್ಧ
***************************
ಕಲಬುರಗಿ,ಜು.24.(ಕ.ವಾ.)-ರಾಜ್ಯ ಸರ್ಕಾರವು ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡುವ ದೃಷ್ಟಿಯಿಂದ 50000 ರೂ.ವರೆಗಿನ ಸಹಕಾರಿ ಸಂಘಗಳ ಸಾಲವನ್ನು ಮನ್ನಾ ಮಾಡಿದೆ. ಇದಲ್ಲದೆ ರಾಜ್ಯದಲ್ಲಿ ರೈತರಿಂದ 36 ಲಕ್ಷ ಕ್ವಿಂಟಲ್ ತೊಗರಿಯನ್ನು ಸರ್ಕಾರ ಖರೀದಿಸಿದ್ದು, ಈ ಪೈಕಿ ಕಲಬುರಗಿ ಜಿಲ್ಲೆಯೊಂದರಲ್ಲೇ 12 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಿರುವುದು ಒಂದು ಐತಿಹಾಸಿಕ ದಾಖಲೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ್ ಹೇಳಿದರು.
ಅವರು ಸೋಮವಾರ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದಲ್ಲಿ 38 ಲಕ್ಷ ರೂ. ವೆಚ್ಚದಿಂದ ನಿರ್ಮಿಸಿದ ನೂತನ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಶ್ರೇಯೋಭಿವೃದ್ಧಿಗೆ ಕಟಿಬದ್ಧವಾಗಿದ್ದು, ಹಲವಾರು ವಿನೂತನ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 7000 ಕೃಷಿ ಹೊಂಡಗಳನ್ನು ನಿರ್ಮಿಸಿದ್ದು, ಈ ಪೈಕಿ ಸೇಡಂ ತಾಲೂಕಿನಲ್ಲಿ 110 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದರು.
ರೈತರ ಅನುಕೂಲಕ್ಕಾಗಿ ಆಡಕಿ ಗ್ರಾಮದಲ್ಲಿ ನೂತನ ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಿಸಿದ್ದು, ವಿವಿಧ ಯೋಜನೆಗಳ ಅರ್ಜಿಗಳನ್ನು ಆನ್‍ಲೈನ್ ಮೂಲಕ ಈ ಕೇಂದ್ರದಲ್ಲಿಯೇ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರದ ವ್ಯಾಪ್ತಿಗೊಳಪಡುವ ಐದು ಗ್ರಾಮ ಪಂಚಾಯಿತಿಗಳ ಹಾಗೂ 26 ಹಳ್ಳಿಗಳ ರೈತರು ಇದರ ಲಾಭ ಪಡೆಯಬೇಕು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜದ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಈ ಕೇಂದ್ರಕ್ಕೆ ಆಗಮಿಸುವ ರೈತರಿಗೆ ಕೇಂದ್ರದ ಅಧಿಕಾರಿಗಳು ಸೂಕ್ತ ಮಾಹಿತಿ ಮತ್ತು ತಿಳುವಳಿಕೆ ನೀಡುವುದರೊಂದಿಗೆ ಅವರ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದÀು ಸೂಚಿಸಿದರು.
ಸಂವಿಧಾನದ 371(ಜೆ) ಜಾರಿಯಿಂದ ಹೈದ್ರಾಬಾದ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಖಾಲಿಯಿರುವ 30000 ಹುದ್ದೆಗಳ ಪೈಕಿ ಈಗಾಗಲೇ 20000 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ಭಾಗದ 5000 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವಿಶೇಷ ನೇಮಕಾತಿ ಪ್ರಕ್ರಿಯೆ ಸಹ ಪ್ರಗತಿಯಲ್ಲಿದ್ದು, ಉಳಿದ 5000 ಹುದ್ದೆಗಳನ್ನು ವರ್ಷಾಂತ್ಯದೊಳಗೆ ಭರ್ತಿ ಮಾಡಲಾಗುವುದು. ಇದಲ್ಲದೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳ ಮೀಸಲಾತಿಯಿಂದ ಈ ಭಾಗದ ಎಲ್ಲ ವರ್ಗದ ವಿದ್ಯಾರ್ಥಿಗಳು ವೈದ್ಯರಾಗುವ ಮತ್ತು ಇಂಜಿನಿಯರರಾಗುವ ಕನಸು ಸಾಕಾರಗೊಳ್ಳುತ್ತಿದೆ. ಸರ್ಕಾರ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಈವರೆಗೆ ಒಟ್ಟು 4500 ಕೋಟಿ ರೂ. ಅನುದಾನ ಮಂಜೂರು ಮಾಡಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಎಂದರು.    
ಸೇಡಂ ತಾಲೂಕಿನ ಬಿದರಚೇಡು ಗ್ರಾಮದ ರಸ್ತೆ ಅಭಿವೃದ್ಧಿಗಾಗಿ 3 ಕೋಟಿ ರೂ., ಸೇತುವೆಗೆ 3 ಕೋಟಿ ರೂ., ಆಡಕಿ ತಾಂಡಾ ರಸ್ತೆಗಾಗಿ 1.20 ಕೋಟಿ ರೂ. ಒದಗಿಸಲಾಗಿದೆ. ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಸಭೆಗಳ ಮೂಲಕವೇ ಮಾಡಿ, ಅರ್ಹರಿಗೆ ಮನೆ ದೊರಕಿಸುವಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದÀು ಡಾ|| ಶರಣಪ್ರಕಾಶ ಪಾಟೀಲ್ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮೇಶಪ್ಪ ಹೂಡೇಂ ಸಮಾರಂಭದ ಅಧ್ಯಕ್ಷತೆವಹಿಸಿ ಬಿದರಚೇಡ ಮತ್ತು ಮದರಿನಾಗಸನಪಲ್ಲಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಹಾಗೂ ತಾಲೂಕಿನಲ್ಲಿ ಈಗಾಗÀಲೇ ಮಂಜೂರಾದ 860 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಿಸಬೇಕೆಂದು ಸಚಿವರನ್ನು ಕೋರಿದರು.
ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷ ಗುರುನಾಥರೆಡ್ಡಿ ಪಾಟೀಲ, ಕರ್ನಾಟಕ ಹಾಪಕಾಮ್ಸ್ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಸೇಡಂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಮತ್ತಿಮೂಡ, ತಾಲೂಕು ಪಂಚಾಯತಿ ಸದಸ್ಯೆ ಸಿದ್ದಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಧೂಳಪ್ಪ ದೊಡ್ಮನಿ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್.ಮೊಕಾಶಿ, ಸಹಾಯಕ ಆಯುಕ್ತ ಎಂ.ಪರಮೇಶ್ವರ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಪ ಕೃಷಿ ನಿರ್ದೇಶಕ ಬಾಲರಾಜ ಅವರು ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗ ಬಗ್ಗೆ ವಿವರಿಸಿದರು.

ಬೆಳೆ ವಿಮೆ ನೋಂದಣಿಗೆ ಕೇವಲ ಒಂದು ವಾರ ಬಾಕಿ
************************************
ಕಲಬುರಗಿ,ಜು.24.(ಕ.ವಾ.)-ಮುಂಗಾರು ಹಂಗಾಮಿನಲ್ಲಿ 2017-18ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಈ ಮುಂದಿನ ಅಂಶನ್ನೊಳಗೊಂಡ ಕಲಬುರಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರವು ಮಂಜೂರಾತಿ ನೀಡಿದೆ. ಮುಂಗಾರು ಹಂಗಾಮಿನ 2017-18ನೇ ಸಾಲಿನಲ್ಲಿ ಸದರಿ ಯೋಜನೆಯಡಿ ಮುಖ್ಯ ಬೆಳೆಗಳನ್ನು ಜಿಲ್ಲೆಯ ಎಲ್ಲ ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ 2017ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿ ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದೆ. ಮುಂಗಾರು ಹಂಗಾಮಿನ 2017-18ನೇ ಸಾಲಿನ ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬೆಳೆ ವಿಮೆ ನೋಂದಣಿಗೆ ಮತ್ತು ಪ್ರೀಮಿಯಂ ತುಂಬಲು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಜುಲೈ 31 ಸೋಮವಾರ ಕೊನೆಯ ದಿನವಾಗಿದೆ. ಸೂರ್ಯಕಾಂತಿ ಬೆಳೆಗೆ 2017ರ ಆಗಸ್ಟ್ 14 ಕೊನೆಯ ದಿನಾಂಕವಾಗಿದೆ.
ಬೆಳೆ ವಿಮೆಗಾಗಿ ಕಟ್ಟುವ ಪ್ರೀಮಿಯಂ ಹಾಗೂ ಬೆಳೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಮಾ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಮನ್ಸೂರ್ ಶೇಖ್ ಮೊಬೈಲ್ ಸಂಖ್ಯೆ 9731814498/9731499917ಗಳನ್ನು ಮತ್ತು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ನಿಗದಿತ ಬೆಳೆ ವಿಮೆಯ ಪ್ರೀಮಿಯಂನ್ನು ಪಾವತಿಸಲು ಕೋರಿದೆ.  

ಕೃಷಿ ಪ್ರಶಸ್ತಿ ಸ್ಪರ್ಧೆಗಾಗಿ ಅರ್ಜಿ ಆಹ್ವಾನ
**************************
ಕಲಬುರಗಿ,ಜು.24.(ಕ.ವಾ.)-ಕೃಷಿ ಇಲಾಖೆಯಿಂದ ಕೃಷಿ ಪ್ರಶಸ್ತಿ ಯೋಜನೆಯಡಿ ರೈತರಿಗೆ ಉತ್ಪಾದನೆ ಬಹುಮಾನಗಳನ್ನು ನೀಡುವ ಮೂಲಕ ಕೃಷಿ ವಲಯದ ಉತ್ಪಾದನೆ  ಹೆಚ್ಚಿಸಲು ಹಾಗೂ ರೈತರಿಗೆ ಸ್ಪರ್ಧಾ ಮನೋಭಾವ ಬೆಳೆಸಲು 2017-18ನೇ ಸಾಲಿನ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಂಗಾರು ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಭತ್ತ-(ನೀರಾವರಿ). ರಾಗಿ, ಜೋಳ, ತೊಗರಿ, ಸೋಯಾ ಅವರೆÉ, ಶೇಂಗಾ (ಮಳೆಯಾಶ್ರಿತ ಪ್ರದೇಶ) ಮತ್ತು ಸೂರ್ಯಕಾಂತಿ-ಮುಂಗಾರು/ಹಿಂಗಾರು (ಮಳೆಯಾಶ್ರಿತ) ಬೆಳೆಗಳನ್ನು ನಿಗದಿಪಡಿಸಿದ್ದು, 50000 ರೂ. ಪ್ರಥಮ, 25000 ರೂ. ದ್ವಿತೀಯ ಮತ್ತು 15000 ರೂ. ತೃತೀಯ ಬಹುಮಾನ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಬೆಳೆ ಸ್ಪರ್ಧೆಗೆ ಮಳೆಯಾಶ್ರಿತ ತೊಗರಿ ಬೆಳೆಯನ್ನು ನಿಗದಿಪಡಿಸಿದ್ದು, 25000 ರೂ. ಪ್ರಥಮ, 15000 ರೂ. ದ್ವಿತೀಯ ಮತ್ತು 10000 ರೂ. ತೃತೀಯ ಬಹುಮಾನ ನೀಡಲಾಗುತ್ತದೆ. ಅದೇ ರೀತಿ ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಚಿಂಚೋಳಿ, ಚಿತ್ತಾಪುರ ಮತ್ತು ಸೇಡಂ ತಾಲೂಕುಗಳ ಮಳೆಯಾಶ್ರಿತ ತೊಗರಿ ಬೆಳೆಯನ್ನು ನಿಗದಿಪಡಿಸಿದ್ದು, 15000 ರೂ. ಪ್ರಥಮ, 10000 ರೂ. ದ್ವಿತೀಯ ಮತ್ತು 5000 ರೂ.ಗಳ ತೃತೀಯ ಬಹುಮಾನ ನೀಡಲಾಗುತ್ತದೆ.
ಈ ಮೂರೂ ಹಂತದ ಬೆಳೆಗಳ ಸ್ಫರ್ಧೆಗಳಲ್ಲಿ ಭಾಗವಹಿಸುವ ಆಸಕ್ತ ಸಾಮಾನ್ಯ ರೈತರು  100 ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರು 25 ರೂ. ಅಗಸ್ಟ್ 30ರೊಳಗಾಗಿ ಹಣ ಪಾವತಿ ಮಾಡಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಅಥವಾ ಕಲಬುರಗಿ ಮತ್ತು ಸೇಡಂ ಉಪ ಕೃಷಿ ನಿರ್ದೇಶಕರ ಅಥವಾ ಕಲಬುರಗಿಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗಳನ್ನು  ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
**********************************
ಕಲಬುರಗಿ,ಜು.24.(ಕ.ವಾ.)-ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಮಕ್ಕಳ ಸಾಹಿತ್ಯದ 5 ಪ್ರಕಾರಗಳಿಗೆ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
2015ನೇ ಸಾಲಿಗಾಗಿ 2015ರ ಜನವರಿಯಿಂದ ಡಿಸೆಂಬರ್‍ರವರೆಗೆ ಮತ್ತು 2016ನೇ ಸಾಲಿನಲ್ಲಿ 2016 ಜನವರಿಯಿಂದ ಡಿಸೆಂಬರ್‍ವರೆಗೆ ಮಕ್ಕಳ ಕ್ಷೇತ್ರದಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ (ಪಠ್ಯಾಧಾರಿತ ಬಿಟ್ಟು), ಮಕ್ಕಳ ಜನಪದ (ಸೃಜನಾತ್ಮಕ/ಸಂಪಾದಿತ) ಪುಸ್ತಕಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದಾಗಿದೆ.
ಮಕ್ಕಳು ಮಕ್ಕಳಿಗಾಗಿ ಪ್ರಕಟಿಸಿದ ಕಾವ್ಯ, ಕಥೆ, ಕೃತಿಗಳನ್ನು ಸಹ ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಈ ಅವಧಿಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆಯಾಗಿರಬೇಕು. ಪ್ರಶಸ್ತಿಗಳಿಗೆ ಆಯ್ಕೆಯಾದ ಕೃತಿಗಳಿಗೆ 10,000ರೂ. ನಗದು ಬಹುಮಾನ ನೀಡಿ ಲೇಖಕರನ್ನು ಗೌರವಿಸಲಾಗುವುದು. ಈಗಾಗಲೇ ಅಕಾಡೆಮಿಯಿಂದ ಪ್ರಶಸ್ತಿಯನ್ನು ಪಡೆದಿದ್ದರೆ ಅವರು ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.
ಪ್ರತಿಯೊಂದು ಪುಸ್ತಕದ ನಾಲ್ಕು ಪ್ರತಿಗಳನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಎದುರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಆಗಸ್ಟ್ 15ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278659ನ್ನು ಕೋರಿದೆ.

ವೈಲ್ಡ್ ಬರ್ಡ್ ಸೆಕ್ಯೂರಿಟಿ ಮತ್ತು ಮೆಂಟೆನೆನ್ಸ್ ಸರ್ವೀಸ್ ಏಜೆನ್ಸಿ ಕಪ್ಪು ಪಟ್ಟಿಗೆ ಸೇರ್ಪಡೆ
*********************************************************
ಕಲಬುರಗಿ,ಜು.24.(ಕ.ವಾ.)-ಕಲಬುರಗಿ ವೈಲ್ಡ್ ಬರ್ಡ್ ಸೆಕ್ಯೂರಿಟಿ ಮತ್ತು ಮೆಂಟೆನೆನ್ಸ್ ಸರ್ವೀಸ್ ಏಜೆನ್ಸಿಯು ಟೆಂಡರಿನಲ್ಲಿನ ಷರತ್ತುಗಳನ್ನು ಉಲ್ಲಂಘಿಸಿದ್ದು ಹಾಗೂ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಸದರಿ ಏಜೆನ್ಸಿಯನ್ನು ಕಲಬುರಗಿ ಜಿಲ್ಲೆಯ ಕಂದಾಯ ಕಚೇರಿಗಳಲ್ಲಿ ಹಾಗೂ ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಟೆಂಡರಿನಲ್ಲಿ ಭಾಗವಹಿಸದಂತೆ ನಿರ್ಬಂಧಿಸಿ, ಸದರಿ ಏಜೆನ್ಸಿಯನ್ನು ಖಾಯಂ ಆಗಿ ಕಪ್ಪು ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಅವರು ಆದೇಶ ಹೊರಡಿಸಿದ್ದಾರೆ.
ಚಿಂಚೋಳಿ: ಜುಲೈ 26ರಂದು ಐಟಿಐ ಪ್ರವೇಶ
ಕಲಬುರಗಿ,ಜು.24.(ಕ.ವಾ.)-ಕಲಬುರಗಿ ಜಿಲ್ಲೆಯ ಚಿಂಚೋಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎನ್.ಸಿ.ವಿ.ಟಿ. ವೃತ್ತಿಯ ಪಿ.ಪಿ.ಪಿ. ಯೋಜನೆಯಡಿ 2017-18ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪಾಸಾಗಿರುವ ವಿದ್ಯಾರ್ಥಿಗಳಿಗೆ ಫಿಟ್ಟರ್ ಹಾಗೂ ಎಲೆಕ್ಟ್ರಿಷಿಯನ್ ವೃತ್ತಿಗಳಲ್ಲಿ ಜುಲೈ 26ರಂದು ಬೆಳಗಿನ 10 ಗಂಟೆಗೆ ಪ್ರವೇಶ ನೀಡಲಾಗುತ್ತಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಗಣಪತಿ ತಿಳಿಸಿದ್ದಾರೆ.
ಈ ಕೋರ್ಸುಗಳ ತರಬೇತಿ ಅವಧಿಯು ಎರಡು ವರ್ಷವಿದ್ದು, ಒಟ್ಟು ತಲಾ ಐದು ಸ್ಥಾನಗಳು ಲಭ್ಯವಿರುತ್ತದೆ. ಈ ಸ್ಥಾನಗಳನ್ನು ಐ.ಎಂ.ಸಿ. ಅಡಿಯಲ್ಲಿ ಸ್ಥಳದಲ್ಲಿಯೇ ಗರಿಷ್ಠ ಶುಲ್ಕ ಪಾವತಿ ಮಾಡುವ ಅಭ್ಯರ್ಥಿಗಳಿಗೆ ನೀಡಲಾಗುವುದು. ಪ್ರವೇಶ ಪಡೆದ ಅಭ್ಯರ್ಥಿಗಳು ಒಂದು ವಾರದೊಳಗೆ ಪೂರ್ಣ ಶುಲ್ಕವನ್ನು ಪಾವತಿಸಬೇಕು. ಇಲ್ಲದಿದ್ದಲ್ಲಿ ಪ್ರವೇಶವನ್ನು ರದ್ದುಪಡಿಸಲಾಗುವುದು.
 ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳು, ಇತ್ತೀಚಿನ 06 ಭಾವಚಿತ್ರಗಳು ದಾಖಲಾತಿಗಳ ದೃಢೀಕೃತ ಜೆರಾಕ್ಸ್ 02 ಸೆಟ್ಟು ಮತ್ತು ಪ್ರವೇಶ ಶುಲ್ಕದೊಂದಿಗೆ ಮತ್ತು ಕಡ್ಡಾಯವಾಗಿ ತಮ್ಮ ಪಾಲಕರೊಂದಿಗೆ ಮೇಲ್ಕಂಡ ದಿನದಂದು ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಚಿಂಚೋಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08475-273353ನ್ನು ಸಂಪರ್ಕಿಸಲು ಕೋರಿದೆ.

ಗ್ರಾಮ ಲೆಕ್ಕಿಗರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
********************************
ಕಲಬುರಗಿ,ಜು.24.(ಕ.ವಾ.)-ಕಲಬುರಗಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿಯಿರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್‍ಲೈನ್ ಮೂಲಕ ಬಂದ ಅರ್ಜಿಗಳನ್ನು ಪರಿಶೀಲಿಸಿ 1:5 ಅನುಪಾತದಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ (ಮೇರಿಟ್) ಹಾಗೂ ರೋಸ್ಟರ್ ಪ್ರಕಾರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು hಣಣಠಿ://ಞಚಿಟಚಿbuಡಿಚಿgi.ಟಿiಛಿ.iಟಿ/vಚಿ/ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ.
 
ಜೇವರ್ಗಿ: ಜುಲೈ 28ರಂದು ಐ.ಟಿ.ಐ. ಪ್ರವೇಶ
*******************************
ಕಲಬುರಗಿ,ಜು.24.(ಕ.ವಾ.)-ಕಲಬುರಗಿ ಜಿಲ್ಲೆಯ ಜೇವರ್ಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2017-18ನೇ ಸಾಲಿನ ಕೆಳಕಂಡ ವಿವಿಧ ಎನ್.ಸಿ.ವಿ.ಟಿ. ಮತ್ತು ಎಸ್.ಸಿ.ವಿ.ಟಿ. ವೃತ್ತಿಯ ಪಿ.ಪಿ.ಪಿ. ಯೋಜನೆಯಡಿ ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳಿಗೆ 2017ರ ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ ಪ್ರವೇಶ ನೀಡಲಾಗುತ್ತಿದೆ ಎಂದು ಎಂದು ಸಂಸ್ಥೆಯ ಪ್ರಾಚಾರ್ಯ ಶರಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋರ್ಸು ಮತ್ತು ಎನ್.ಸಿ.ವಿ.ಟಿ. ಮತ್ತು ಎಸ್.ಸಿ.ವಿ.ಟಿ.ಯಡಿಯಲ್ಲಿ ಲಭ್ಯವಿರುವ ಸ್ಥಾನಗಳ ವಿವರ ಇಂತಿದೆ. ಒಂದು ವರ್ಷದ ಕೋಪಾ: ಎನ್.ಸಿ.ವಿ.ಟಿ.-06, ವೆಲ್ಡರ್: ಎಸ್.ಸಿ.ವಿ.ಟಿ.-16. ಎರಡು ವರ್ಷದ ಫಿಟ್ಟರ್:ಎನ್.ಸಿ.ವಿ.ಟಿ.-05 ಮತ್ತು ಎಸ್.ಸಿ.ವಿ.ಟಿ.-21. ಎಲೆಕ್ಟ್ರಿಷಿಯನ್:  ಎನ್.ಸಿ.ವಿ.ಟಿ.-05 ಮತ್ತು ಎಸ್.ಸಿ.ವಿ.ಟಿ.-21.ಎಲೆಕ್ಟ್ರಾನಿಕ್ ಮೆಕ್ಯಾನಿಕ್:  ಎನ್.ಸಿ.ವಿ.ಟಿ.-06. ಟರ್ನರ್: ಎನ್.ಸಿ.ವಿ.ಟಿ.-04. ಮೇಲ್ಕಂಡ ಸ್ಥಾನಗಳನ್ನು ಐ.ಎಂ.ಸಿ. ಅಡಿಯಲ್ಲಿ ಭರ್ತಿ ಮಾಡಲಾಗುವುದು.
ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳು, ಇತ್ತೀಚಿನ ಆರು ಭಾವಚಿತ್ರಗಳು ದಾಖಲಾತಿಗಳ ದೃಢೀಕೃತ ಜೆರಾಕ್ಸ್ ಎರಡು ಸೆಟ್ಟು ಮತ್ತು ಪ್ರವೇಶ ಶುಲ್ಕದೊಂದಿಗೆ ಮತ್ತು ಕಡ್ಡಾಯವಾಗಿ ತಮ್ಮ ಪಾಲಕರೊಂದಿಗೆ ಮೇಲ್ಕಂಡ ದಿನದಂದು ಹಾಜರಿರಬೇಕು.  ಹೆಚ್ಚಿನ ಮಾಹಿತಿಗೆ ಮೇಲ್ಕಂಡ ಸಂಸ್ಥೆಯ ಪ್ರಾಚಾರ್ಯರನ್ನು ಅಥವಾ ದೂರವಾಣಿ ಸಂಖ್ಯೆ 08475-273353ನ್ನು ಸಂಪರ್ಕಿಸಬಹುದು.

ವಿದ್ಯುತ ಮಾರ್ಗದ ಸಮೀಪ ಹೋಗದಂತೆ ಸೂಚನೆ
*********************************
ಕಲಬುರಗಿ,ಜು.24.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ನಿರ್ಮಾಣ ಮತ್ತು ನಿರ್ವಹಣೆ ವಿಭಾಗದಿಂದ ಚಿಂಚೋಳಿ ತಾಲೂಕಿನ 33/11ಕೆ.ವಿ. ಚಿಮ್ಮನಚೋಡದಿಂದ 33ಕೆವಿ ಐನಾಪುರವರೆಗಿನ ಹೊಸ ವಿದ್ಯುತ್ ಮಾರ್ಗವು ಸುಮಾರು 17 ಕಿ.ಮೀ. ಗಳಿದ್ದು, ಸದರಿ ಹೊಸ ವಿದ್ಯುತ್ ಮಾರ್ಗವು ಚಿಂಚೋಳಿ ತಾಲೂಕಿನ ಬಸಂತಪುರ, ಐನಾಪುರ ಮತ್ತು ಗಡಿಲಿಂಗದಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಈ ಹೊಸ ವಿದ್ಯುತ್ ಮಾರ್ಗವನ್ನು 2017ರ ಜುಲೈ 28ರಂದು ಅಥವಾ ತದನಂತರ ಯಾವುದೇ ದಿನದಂದು ಚಾಲನೆ ಮಾಡಲಿದ್ದು, ಈ ಮಾರ್ಗವು ಕೆಳಕಂಡ ಗ್ರಾಮಗಳಲ್ಲಿ ಹಾದು ಹೋಗುತ್ತದೆ ಎಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ನಿರ್ಮಾಣ ಮತ್ತು ನಿರ್ವಹಣೆ ವಿಭಾಗದÀ ಕಾರ್ಯನಿರ್ವಾಹಕ ಇಂಜನಿಯರ್ ತಿಳಿಸಿದ್ದಾರೆ.
 ಚಿಮ್ಮನಚೋಡ, ಚೌಕಿ ತಾಂಡ, ನಲ್‍ಗಂಗಿ ತಾಂಡ, ಶಿವರಾಮನಾಯಕ ತಾಂಡ, ಯಲಮಡಗಿ-1, ಯಲಮಡಗಿ-2, ಏತಬಾರಪೂರ ತಾಂಡ, ಬಿಕುನಾಯಕ ತಾಂಡ, ಪಲ್ತಾತಾಂಡ, ವಡಚಾ ತಾಂಡ, ಬಸಂತಪೂರ, ಬೆಂಕಿಪಲ್ಲಿ, ಸಲಗರ ತಾಂಡ, ಬಾವನಗುಡಿ ತಾಂಡ, ಗಡಿಲಿಂಗದಳ್ಳಿ ಮತ್ತು ಐನಾಪೂರ ಗ್ರಾಮಗಳಲ್ಲಿ ಹಾಯ್ದು ಹೋಗುವ ವಿದ್ಯುತ್ ಕಂಬದ ಸಮೀಪ ಹೋಗಬಾರದು, ಗೈ ತಂತಿಗೆ/ಕಂಬಗಳನ್ನು ಏರಬಾರದು, ಕಂಬಗಳ ಸಮೀಪದಲ್ಲಿ ದನಕರುಗಳನ್ನು ಕಟ್ಟಬಾರದು ಮತ್ತು ವಿದ್ಯುತ್ ಮಾರ್ಗವನ್ನು ಮುಟ್ಟುವುದಾಗಲಿ ಮಾಡಬಾರದೆಂದು ಕಾರ್ಯನಿರ್ವಾಹಕ ಇಂಜಿನಿಯರರು ಸಾರ್ವಜನಿಕರಲ್ಲಿ ಕೋರಿದ್ದಾರೆ. ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರೂ ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜವಾಬ್ದಾರಿಯಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ಶಾಲಾ ಮಕ್ಕಳಿಂದ ಡೆಂಗ್ಯೂ ಮತ್ತು ಚಿಕನ್‍ಗುನ್ಯಾ ಜಾಗೃತಿ ಜಾಥಾ
*******************************************
ಕಲಬುರಗಿ,ಜು.24.(ಕ.ವಾ.)-ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಹಾಬಜಾರ ಮತ್ತು ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಮತ್ತು ಚಿಕನ್‍ಗುನ್ಯಾ ರೋಗಗಳ ಕುರಿತು ಅರಿವು ಮೂಡಿಸುವ ಜಾಗೃತಿ ಜಾಥಾವನ್ನು ಕಲಬುರಗಿ ನಗರದ ಶಹಾಬಜಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಲಾ ಮಕ್ಕಳಿಂದ ಹಮ್ಮಿಕೊಳ್ಳಲಾಗಿತ್ತು.
ಕಲಬುರಗಿ ನಗರದ ಶಹಾಬಜಾರ ಪ್ರದೇಶದಲ್ಲಿನ ಮಾಹಾಂತಪ್ಪ ಅಲ್ಲದ ಪ್ರೌಢಶಾಲಾ ಮಕ್ಕಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಮತ್ತು ಚಿಕಿತ್ಸೆ ಕುರಿತು ಮಕ್ಕಳು ಘೋಷಣೆ ಮೂಲಕ ಅರಿವು ಮೂಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ|| ನಂದಿನಿ ಭೋಸ್ಗಿ ಮಕ್ಕಳ ಆರೋಗ್ಯದ ಕುರಿತು ಶಿಕ್ಷಕರು ಮತ್ತು ಪಾಲಕರು ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು. ವೈದ್ಯಾಧಿಕಾರಿ ಡಾ|| ನಂದಿನಿ ಬೋಸ್ಗಿ, ಮುಖ ಗುರುಗಳಾದ ಸಿದ್ದಣ್ಣ, ಶಿಕ್ಷಕರಾದ ಜಿ.ಬಿ.ಕುಲಕರ್ಣಿ, ಬಿ.ಆರ್. ನಿಂಬಾಲಕರ್ ಹಾಗೂ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
*******************
ಕಲಬುರಗಿ,ಜು.24.(ಕ.ವಾ.)-ಕಲಬುರಗಿ ರಂಗಾಯಣಕ್ಕೆ ತಾತ್ಕಾಲಿಕವಾಗಿ 3 ವರ್ಷಗಳ ಅವಧಿಗೆ ಓರ್ವ ನಟಿಯನ್ನು ಆಯ್ಕ್ಕೆ ಮಾಡಿಕೊಂಡು ರೆಪರ್ಟರಿ ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ಓರ್ವ ನಟಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 29ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ರಂಗಾಯಣದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಕಲಾವಿದರ ವಯಸ್ಸು ಗರಿಷ್ಟ 25 ವರ್ಷ ಮೀರಬಾರದು. ಈಗಾಗಲೇ ಆಯ್ಕೆಯಾಗಿರುವ ನಟ-ನಟಿಯರು  ಪುನ: ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆಸಕ್ತ ಕಲಾವಿದರು ಬಿಳಿ ಹಾಳೆಯ ಮೇಲೆ ಸಂಪೂರ್ಣ ಸ್ವವಿವರದೊಂದಿಗೆ ತಮ್ಮ ಸಂಬಂಧಿಸಿದ ದಾಖಲೆಗಳೊಂದಿಗೆ ಇ-ಮೇಲ್ ವಿಳಾಸ ಡಿಚಿಟಿgಚಿಥಿಚಿಟಿಚಿಞಚಿಟಚಿbuಡಿgi@gmಚಿiಟ.ಛಿom ಅಥವಾ ಅಂಚೆ ಮೂಲಕ, ಖುದ್ದಾಗಿ ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ, ಡಾ. ಸಿದ್ಧಯ್ಯ ಪುರಾಣಿಕ ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ-ಶಹಾಬಾದ ವರ್ತುಲ ರಸ್ತೆ, ಕಲಬುರಗಿ–585105 ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.  ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-227735ನ್ನು ಸಂಪರ್ಕಿಸಲು ಕೋರಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 22 ಎಂದು ನಿಗದಿಪಡಿಸಲಾಗಿತ್ತೆಂದು ಅವರು ತಿಳಿಸಿದ್ದಾರೆ.








ಹೀಗಾಗಿ ಲೇಖನಗಳು NEWS AND PHOTOS 24-07-2017

ಎಲ್ಲಾ ಲೇಖನಗಳು ಆಗಿದೆ NEWS AND PHOTOS 24-07-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTOS 24-07-2017 ಲಿಂಕ್ ವಿಳಾಸ https://dekalungi.blogspot.com/2017/07/news-and-photos-24-07-2017.html

Subscribe to receive free email updates:

0 Response to "NEWS AND PHOTOS 24-07-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ