ಶೀರ್ಷಿಕೆ : ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಪಂಚ ಯೋಜನೆಗಳು- ವಾಸುದೇವ ಶರ್ಮಾ
ಲಿಂಕ್ : ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಪಂಚ ಯೋಜನೆಗಳು- ವಾಸುದೇವ ಶರ್ಮಾ
ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಪಂಚ ಯೋಜನೆಗಳು- ವಾಸುದೇವ ಶರ್ಮಾ
ಕೊಪ್ಪಳ, ಜು. 24 (ಕರ್ನಾಟಕ ವಾರ್ತೆ): ಸುಸ್ಥರ ಅಭಿವೃದ್ಧಿಗಾಗಿ ಜನ, ಭೂಮಿ, ಸಮೃದ್ಧಿ, ಶಾಂತಿ ಹಾಗೂ ಸಹಯೋಗ ಎಂಬ ಯೋಜನೆ (ಫೈ ಪ್ಲಾನ್ಸ್) ಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಮ್ಮ ಸುತ್ತಮುತ್ತಲಿನ ಸ್ಥಳೀಯ ಸರ್ಕಾರಗಳು, ಆಡಳಿತ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಸೇವಾವಲಯಗಳನ್ನು ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಗಮನಿಸಬೇಕಿರುವ ಅವಶ್ಯಕತೆ ಇರುತ್ತದೆ ಎಂದು ಬೆಂಗಳೂರಿನ ಮಕ್ಕಳ ಹಕ್ಕುಗಳ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮಾ ಅವರು ಹೇಳಿದರು.
ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಸೋಮವಾರದಂದು ಏರ್ಪಡಿಸಲಾದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯುನಿಸೆಫ್- ಮಕ್ಕಳ ರಕ್ಷಣಾ ಯೋಜನೆ ಸಹಯೋಗದೊಂದಿಗೆ ಕಲಬುರಗಿ ವಿಭಾಗಮಟ್ಟದ “ಸುಸ್ಥಿರ ಅಭಿವೃದ್ಧಿ ಗುರಿ”ಗಳ ಕುರಿತು ವಿಭಾಗ ಮಟ್ಟದ ಒಂದು ದಿನದ “ಸಾಮಥ್ರ್ಯ ವರ್ಧನಾ” ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ಚೈಲ್ಡ್ ರೈಟ್ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮಾ ಅವರು ಕಾರ್ಯಾಗಾರದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಮಾತನಾಡಿ, ಮುಂದಿನ 15 ವರ್ಷಗಳಲ್ಲಿ ಜಗತ್ತಿನ ಜನರೆಲ್ಲರ ಒಳಿತಿಗಾಗಿ ಉತ್ತಮ ವಿಶ್ವವನ್ನು ರೂಪಿಸಲು ಸಾಧಿಸಲೇಬೆಕಾದ ಕೆಲವು ಗುರಿಗಳನ್ನು ವಿಶ್ವ ಸಂಸ್ಥೆಯು ರೂಪಿಸಿ ಅವುಗಳನ್ನು “ಸುಸ್ಥಿರ ಅಭಿವೃದ್ಧಿ ಗುರಿಗಳು” ಎಂದು ಹೆಸರಿಸಿದೆ. ಮಕ್ಕಳು ಮತ್ತು ಯುವಜನರೂ ಸೇರಿದಂತೆ ಕೋಟ್ಯಾಂತರ ಜನರ ಮತ್ತು ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಪ್ರತಿನಿಧಿಗಳು ಸೇರಿ ತೀರ್ಮಾನಿಸಲಾದ ಗುರಿಗಳನ್ನು ವಿಶ್ವದ ಎಲ್ಲ ದೇಶಗಳು ಒಪ್ಪಿಕೊಂಡಿವೆ ಎಂದು ವಿಶ್ವಸಂಸ್ಥೆ ಹೇಳಿದೆ. ಇಲ್ಲಿರುವ ಗುರಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುವಂತಹುಗಳೇ ಸುಸ್ಥಿರ ಅಭಿವೃದ್ಧಿಗಳಾಗಿವೆ.
2030 ರೊಳಗಾಗಿ ಸುಸ್ಥರ ಅಭಿವೃದ್ಧಿಗಾಗಿ ಜನ, ಭೂಮಿ, ಸಮೃದ್ಧಿ, ಶಾಂತಿ ಹಾಗೂ ಸಹಯೋಗ ಎಂಬ ಯೋಜನೆ (ಫೈ ಪ್ಲಾನ್ಸ್) ಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಮ್ಮ ಸುತ್ತಮುತ್ತಲಿನ ಸ್ಥಳೀಯ ಸರ್ಕಾರಗಳು, ಆಡಳಿತ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಸೇವಾವಲಯಗಳನ್ನು ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಗಮನಿಸಬೇಕಿರುವ ಅವಶ್ಯಕತೆ ಇರುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ, ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ (2011 ಜನಗಣತಿ) ಶೇ. 40 ರಷ್ಟು ಜನ 18 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಈ ಮಕ್ಕಳ ಪರಿಸ್ಥಿತಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೇಗಿದೆ, ವಿವಿಧ ಅಭಿವೃದ್ಧಿ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಆರೋಗ್ಯ, ಮರಣ ಪರಿಸ್ಥಿತಿ, ರಕ್ಷಣೆ, ಶಿಕ್ಷಣ, ಶೋಷಣೆ, ಭಾಗವಹಿಸುವಿಕೆಯೇ ಮೊದಲಾದ ವಿಚಾರಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಹೋಲಿಸಿ ನೋಡಿದಾಗ ಭಾರತ ಮತ್ತು ಕರ್ನಾಟಕದಲ್ಲಿ ಮಕ್ಕಳ ಪರಿಸ್ಥಿತಿ ಹೇಗಿದೆ ಎಂಬುದು ತಿಳಿಯುತ್ತದೆ.
ಸುಸ್ಥಿರ ಅಭಿವೃದ್ಧಿಯು ಎಲ್ಲೆಡೆಯಲ್ಲಿಯೂ ಎಲ್ಲಾ ವಿಧದ, ಹಸಿವು ಮುಕ್ತ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣ ಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ನೀರು ಮತ್ತು ನೈರ್ಮಲ್ಯ, ಕೈಗೆಟುಕಬಹುದಾದ ಮತ್ತು ಶುದ್ಧ ಇಂಧನ ಶಕ್ತಿ, ಗೌರವಯುತ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಉದ್ಯಮ, ಆವಿಷ್ಕಾರ ಮತ್ತು ಮೂಲಸೌಕರ್ಯ, ಅಸಮಾನತೆಗಳ ಇಳಿಕೆ ಮುಂತಾದ ಗುರಿಗಳನ್ನು ಹೊಂದಿದ್ದು, ಬಡತನವನ್ನು ಕೊನೆಗಾಣಿಸುವುದು. ಹಸಿವನ್ನು ಕೊನೆಗಾಣಿಸಿ, ಆಹಾರ ಭದ್ರತೆ ಮತ್ತು ಸುಧಾರಿತ ಪೌಷ್ಟಿಕತೆಯನ್ನು ಸಾಧಿಸಿ ಹಾಗೂ ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು. ಎಲ್ಲರಿಗೂ ಎಲ್ಲ ವಯೋಮಾನದಲ್ಲೂ ಆರೋಗ್ಯಕರ ಜೀವನವನ್ನು ಖಾತ್ರಿಪಡಿಸಿ ಯೋಗಕ್ಷೇಮವನ್ನು ಉತ್ತೇಜಿಸುವುದು. ಸಮನ್ವಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಮತ್ತು ಜೀವನದುದ್ದಕ್ಕೂ ಕಲಿಕೆಯ ಅವಕಾಶಗಳಿಗೆ ಉತ್ತೇಜನವನ್ನು ಖಾತ್ರಿಪಡಿಸುವುದು. ಲಿಂಗ ಸಮಾನತೆಯನ್ನು ಸಾಧಿಸಿ ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸುವುದು. ನೀರು ಮತ್ತು ನೈರ್ಮಲ್ಯದ ಲಭ್ಯತೆ ಮತ್ತು ಅದರ ಸುಸ್ಥಿರ ನಿರ್ವಹಣೆಯನ್ನು ಖಾತ್ರಿಗೊಳಿಸುವುದು. ಎಲ್ಲರಿಗೂ ಕೈಗೆಟುಕಬಲ್ಲ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಆಧುನಿಕ ಇಂಧನದ ಲಭ್ಯತೆಯನ್ನು ಖಾತ್ರಿಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಬೆಂಗಳೂರು ಚೈಲ್ಡ್ ರೈಟ್ ಟ್ರಸ್ಟ್ ನಿರ್ದೇಶಕರಾದ ವಾಸುದೇವ ಶರ್ಮಾ ಅವರು ಕಾರ್ಯಾಗಾರದಲ್ಲಿ ತಿಳಿಸಿದರು.
ಕಾರ್ಯಾಗಾರದಲ್ಲಿ ಬಳ್ಳಾರಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಘವೇಂದ್ರ, ಕೊಪ್ಪಳ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ರಾಮತ್ನಾಳ, ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್, ಯುನೆಸೆಫ್ ಸಂಯೋಜಕ ಹರೀಶ ಜೋಗಿ ಸೇರಿದಂತೆ ಬೀದರ್, ಗುಲಬರ್ಗಾ, ಯಾದಗಿರಿ, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಪ್ರತಿನಿಧಿಗಳು ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಪಂಚ ಯೋಜನೆಗಳು- ವಾಸುದೇವ ಶರ್ಮಾ
ಎಲ್ಲಾ ಲೇಖನಗಳು ಆಗಿದೆ ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಪಂಚ ಯೋಜನೆಗಳು- ವಾಸುದೇವ ಶರ್ಮಾ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಪಂಚ ಯೋಜನೆಗಳು- ವಾಸುದೇವ ಶರ್ಮಾ ಲಿಂಕ್ ವಿಳಾಸ https://dekalungi.blogspot.com/2017/07/blog-post_964.html
0 Response to "ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಪಂಚ ಯೋಜನೆಗಳು- ವಾಸುದೇವ ಶರ್ಮಾ"
ಕಾಮೆಂಟ್ ಪೋಸ್ಟ್ ಮಾಡಿ