ಶೀರ್ಷಿಕೆ : ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ- ಕೆ. ಲೋಕೇಶ್
ಲಿಂಕ್ : ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ- ಕೆ. ಲೋಕೇಶ್
ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ- ಕೆ. ಲೋಕೇಶ್
ಕೊಪ್ಪಳ ಜು. 24 (ಕರ್ನಾಟಕ ವಾರ್ತೆ): ದೇಶದ ಸರ್ವತೋಮುಖ ಅಭಿವೃದ್ಧಿಗೆ ಆದಾಯ ತೆರಿಗೆ ಸಂಗ್ರಹ ಬಹುಮುಖ್ಯವಾಗಿದ್ದು, ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೂರನೆ ಸ್ಥಾನ ಗಳಿಸುವ ಮೂಲಕ ಮುಂಚೂಣಿಯಲ್ಲಿದೆ ಎಂದು ಕೊಪ್ಪಳದ ಆದಾಯ ತೆರಿಗೆ ಇಲಾಖೆ ಅಧಿಕಾರಿ ಕೆ. ಲೋಕೇಶ್ ಹೇಳಿದರು.
ನಗರದ ಆದಾಯ ತೆರಿಗೆ ಇಲಾಖೆಯ ಕಚೇರಿ ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಆದಾಯ ತೆರಿಗೆ ದಿನ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಹಣಕಾಸಿನ ಅಗತ್ಯವಿರುತ್ತದೆ. ಇದನ್ನು ಭರಿಸಲು ತೆರಿಗೆ ಹಣವೇ ಪ್ರಮುಖ ಮೂಲವಾಗಿರುತ್ತದೆ. ಹೀಗಾಗಿ ದೇಶದ ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ಪ್ರತಿಯೊಬ್ಬರದೂ ಪಾತ್ರವಿರುತ್ತದೆ. ಕಳೆದ 2016-17 ರಲ್ಲಿ ದೇಶದ ಒಟ್ಟಾರೆ ಆದಾಯ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೂರನೆ ಸ್ಥಾನದಲ್ಲಿದೆ. ರಾಜ್ಯದಲ್ಲಿ 85 ಸಾವಿರ ಕೋಟಿ ರೂ. ಗುರಿಯ ಬದಲಿಗೆ 90 ಸಾವಿರ ಕೋಟಿ ರೂ. ಆದಾಯ ತೆರಿಗೆ ಸಂಗ್ರಹಣೆಯಾಗಿದೆ. ಜಿಲ್ಲೆಯಲ್ಲಿ ಕಳೆದ 2016-17 ರಲ್ಲಿ 12. 15 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಗೆ ಬದಲಿಗೆ 13.43 ಕೋಟಿ ರೂ. ಆದಾಯ ತೆರಿಗೆ ಸಂಗ್ರಹ ಮಾಡಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುವುದನ್ನು ಯಾರೂ ಕೂಡ ಹೊರೆ ಎಂದು ಭಾವಿಸಬಾರದು. ಆದಾಯ ತೆರಿಗೆ ಪಾವತಿಯಿಂದ, ದೇಶದ ಅಭಿವೃದ್ಧಿಯಲ್ಲಿ ತಮ್ಮದೂ ಒಂದು ಕೊಡುಗೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಕ್ರಮ ವ್ಯವಹಾರ ಮಾಡಿಕೊಂಡು, ಸರಿಯಾದ ರೀತಿಯಲ್ಲಿ ತೆರಿಗೆ ಪಾವತಿಸುವವರು, ನೆಮ್ಮದಿಯುತ ಜೀವನ ಸಾಗಿಸಬಹುದು ಎಂದು ಆದಾಯ ತೆರಿಗೆ ಅಧಿಕಾರಿ ಕೆ. ಲೋಕೇಶ್ ಹೇಳಿದರು.
ಆದಾಯ ತೆರಿಗೆ ನಿರೀಕ್ಷಕ ಮಲ್ಲಿಕಾರ್ಜುನ್ ಅವರು ಮಾತನಾಡಿ, ಆದಾಯ ತೆರಿಗೆ ಇಲಾಖೆಯನ್ನು ಇತ್ತೀಚಿನ ದಿನಗಳಲ್ಲಿ ಗಣಕೀಕೃತಗೊಳಿಸಲಾಗುತ್ತಿದೆ. ಆನ್‍ಲೈನ್ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪಾವತಿ ಹಾಗೂ ರಿಟನ್ರ್ಸ್ ಸಲ್ಲಿಕೆಯನ್ನು ಸರಳೀಕರಣ ಮಾಡಲಾಗಿದೆ. ಆದಾಯ ತೆರಿಗೆ ವ್ಯವಸ್ಥೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಇಲಾಖೆ ಕೈಗೊಳ್ಳಲಿದೆ ಎಂದರು.
ಆದಾಯ ತೆರಿಗೆ ದಿನಾಚರಣೆ ಅಂಗವಾಗಿ ಆದಾಯ ತೆರಿಗೆಯನ್ನು ಸಮರ್ಪಕ ರೀತಿಯಲ್ಲಿ ಪಾವತಿಸಿದ್ದಕ್ಕಾಗಿ ಕಾರಟಗಿಯ ವೀರೇಶಪ್ಪ ಹಾಗೂ ಗುರುರಾಜ ಅವರನ್ನು ಇಲಾಖೆ ಪರವಾಗಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಆದಾಯ ತೆರಿಗೆ ಕುರಿತಂತೆ ಏರ್ಪಡಿಸಿದ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಆದಾಯ ತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ- ಕೆ. ಲೋಕೇಶ್
ಎಲ್ಲಾ ಲೇಖನಗಳು ಆಗಿದೆ ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ- ಕೆ. ಲೋಕೇಶ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ- ಕೆ. ಲೋಕೇಶ್ ಲಿಂಕ್ ವಿಳಾಸ https://dekalungi.blogspot.com/2017/07/blog-post_720.html
0 Response to "ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ- ಕೆ. ಲೋಕೇಶ್"
ಕಾಮೆಂಟ್ ಪೋಸ್ಟ್ ಮಾಡಿ