ಶೀರ್ಷಿಕೆ : ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ
ಲಿಂಕ್ : ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ
ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ
ಕೊಪ್ಪಳ ಜು. 21 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜು. 21 ರಿಂದ ಆಗಸ್ಟ್ 13 ರವರೆಗೆ ಆಯೋಜಿಸಿರುವ ‘ಕಲಾಜಾಥಾ’ ವಿಶೇಷ ಪ್ರಚಾರಾಂದೊಲನಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಶುಕ್ರವಾರದಂದು ಜಿಲ್ಲಾಡಳಿತ ಭವನ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಮೈತ್ರಿ-ಮನಸ್ವಿನಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಜನಸಾಮಾನ್ಯರ ಶ್ರೇಯೋಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಜಾರಿಗೊಳಿಸಿದೆ. ಈ ಯೋಜನೆಗಳ ಬಗ್ಗೆ ಬೀದಿನಾಟಕಗಳ ಮೂಲಕ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಕಲಾಜಾಥಾ- ವಿಶೇಷ ಪ್ರಚಾರಾಂದೋಲನ ಉತ್ತಮ ಪ್ರಯತ್ನವಾಗಿದೆ ಎಂದರು.
ಐಎಎಸ್ ಪ್ರೊಬೆಷನರಿ ಅಧಿಕಾರಿ ಪ್ರಾವಿಣ್ಯ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್, ಇಲಾಖೆಯ ಅವಿನಾಶ್, ಪಾಂಡುರಂಗ ಸೇರಿದಂತೆ ಚೇತನ ಕಲಾ ತಂಡದ ಮುಖ್ಯಸ್ಥ ಶಿವಮೂರ್ತಿ ಮೇಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಲಾಜಾಥಾ ಕಾರ್ಯಕ್ರಮ ವಿವರ :
************** ಜುಲೈ 21 ರಿಂದ ಆಗಸ್ಟ್ 13 ರವರೆಗೆ 24 ದಿನಗಳ ಕಾಲ ಪ್ರತಿ ನಿತ್ಯ ಎರಡು ಗ್ರಾಮಗಳಲ್ಲಿ ವಿಶೇಷ ವಿನ್ಯಾಸ ಹೊಂದಿರುವ ಸಂಚಾರಿ ವಾಹನದ ಮೂಲಕ ಕಲಾಜಾಥಾ ಪ್ರಚಾರಾಂದೋಲನ ನಡೆಯಲಿದೆ. ಜು. 21 ರಂದು ಯಲಬುರ್ಗಾ ತಾಲೂಕಿನ ಬೇವೂರ, ಹಿರೇಅರಳಿಹಳ್ಳಿ, 22 ರಂದು ವಜ್ರಬಂಡಿ, ಗೆದಿಗೇರಿ, 23 ರಂದು ಮಂಗಳೂರು, ಬಳಗೇರಿ, 24 ರಂದು ಕುಕನೂರು, ಯರೇಹಂಚಿನಾಳ, 25 ರಂದು ಮುಧೋಳ, ಬಳ್ಳೂಟಗಿ. 26 ರಂದು ತುಮ್ಮರಗುದ್ದಿ, ಬಂಡಿ, 27 ರಂದು ಕುಷ್ಟಗಿ ತಾಲೂಕಿನ ಹಿರೇಗೊಣ್ಣಾಗರ, ಮಾಲಗಿತ್ತಿ, 28 ರಂದು ನಿಲೋಗಲ್, ಜಹಗೀರಗುಡದೂರ, 29 ರಂದು ಬೆನಕನಾಳ, ಹಿರೇನಂದಿಹಾಳ, 30 ರಂದು ಹಿರೇಬನ್ನಿಗೋಳ, ಕೊರಡಕೇರಾ, 31 ರಂದು ತಾವರಗೇರಾ, ಕಿಲ್ಲಾರಹಟ್ಟಿ, ಆ. 01 ರಂದು ಸಂಗನಾಳ, ಕನಕಗಿರಿ. 02 ರಂದು ಗಂಗಾವತಿ ತಾಲೂಕಿನ ಹಿರೇಖೇಡ, ಕರಡೋಣ, 03 ರಂದು ನವಲಿ, ಕಾರಟಗಿ, 04 ರಂದು ಬೂದಗುಂಪಾ, ಹುಳ್ಕಿಹಾಳ. 05 ರಂದು ಶ್ರೀರಾಮನಗರ, ಬರಗೂರ. 06 ರಂದು ಮುಸ್ಟೂರ, ಡಣಾಪುರ. 07 ರಂದು ಹೊಸಕೇರಾ, ಆನೆಗೊಂದಿ. 08 ರಂದು ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ, ಹುಲಿಗಿ. 09 ರಂದು ಮುನಿರಾಬಾದ್, ಹಿಟ್ನಾಳ. 10 ರಂದು ಬೂದಗುಂಪಾ, ಇಂದರಗಿ. 11 ರಂದು ವಣಬಳ್ಳಾರಿ, ಕಲ್‍ತಾವರಗೇರಾ, 12 ರಂದು ಗಿಣಿಗೇರಾ, ಮಾದಿನೂರ. 13 ರಂದು ಹಲಗೇರಾ ಮತ್ತು ಕವಲೂರ ಗ್ರಾಮಗಳಲ್ಲಿ ಕಲಾಜಾಥ ಕಾರ್ಯಕ್ರಮ ಜರುಗಲಿದೆ.
ಹೀಗಾಗಿ ಲೇಖನಗಳು ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/07/blog-post_92.html
0 Response to "ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ