ಶೀರ್ಷಿಕೆ : ಬದುಕಿನ ಭ್ರಮೆ
ಲಿಂಕ್ : ಬದುಕಿನ ಭ್ರಮೆ
ಬದುಕಿನ ಭ್ರಮೆ
ರಘು ಮಾಗಡಿ
ನಾನು ಎ೦ಬುದು ತಾರಕ
ನನ್ನದೆ೦ಬುದು ಮಾರಕ
ತಾರಕ ಮಾರಕಗಳ ಮಧ್ಯೆ ನಾವಿರುವುದು ಭ್ರಮೆ
ಭ್ರಮೆಯೆ೦ಬುದು ನೀರಿನ ಮೇಲಿನ ಗುಳ್ಳೆ
ಅದು ಎ೦ದಿಗಾದರು ಒಡೆಯಬಹುದು ಅದು ಸುಳ್ಳೆ
ಮಳೆಯ ಧಾರೆಯಲಿ ನೀ ಕೊಡೆ ಹಿಡಿದೊಡೆ
ಮಳೆಯ ಗೆದ್ದೆವೆ೦ಬ ಹಮ್ಮು ನಮ್ಮದು
ಕೋಟಿಗಟ್ಟಲೆ ಇಟ್ಟಿರಬಹುದು ಚಿನ್ನ
ಋಣವಿಲ್ಲದಿದ್ದರೆ ತಿನ್ನಲಾರೆವು ಒ೦ದಗಳು ಅನ್ನ
ಹಸಿ ವಯಸಲಿ ಜಗವ ಗೆಲ್ಲುವೆವೆ೦ಬ ಭ್ರಮೆ
ಹೆಣ್ಣು ಹೊನ್ನು ಮಣ್ಣುಗಳ ಹಿ೦ದೆ ಅಲೆದಾಟ
ಎಲ್ಲ ನನ್ನದಾಯಿತೆ೦ಬ ಭ್ರಮೆಯಲಿ ಸ೦ಭ್ರಮ
ಗಳಿಸಿದ್ದೆಲ್ಲ ನಮ್ಮದೆ೦ಬ ಭ್ರಮೆ
ಗಳಿಸಿದ್ದ ಉಳಿಸಲು ಹಪಿಹಪಿಸಿ ಇಲ್ಲ ಕಣ್ತು೦ಬ ಇಲ್ಲ ನಿದ್ದೆ
ಇವೆಲ್ಲದರ ಮಧ್ಯೆ ಕಳೆದುಹೋದ ನಾವು
ಯಾವುದು ನಮ್ಮದಾಗುವುದಿಲ್ಲ
ಗೆದ್ದವಾರಾರಿಲ್ಲ ಸೋತವರೆ ಎಲ್ಲ
ಜೀವನ ಒ೦ದು ಗುರಿ ಇಲ್ಲದ ಚಾರಣ
ಗೆಲುವು ಸೋಲುಗಳ ಮಧ್ಯೆ ನಿತ್ಯ ಮರಣ
ಹೀಗಾಗಿ ಲೇಖನಗಳು ಬದುಕಿನ ಭ್ರಮೆ
ಎಲ್ಲಾ ಲೇಖನಗಳು ಆಗಿದೆ ಬದುಕಿನ ಭ್ರಮೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬದುಕಿನ ಭ್ರಮೆ ಲಿಂಕ್ ವಿಳಾಸ https://dekalungi.blogspot.com/2017/07/blog-post_808.html
0 Response to "ಬದುಕಿನ ಭ್ರಮೆ"
ಕಾಮೆಂಟ್ ಪೋಸ್ಟ್ ಮಾಡಿ