ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ

ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ
ಲಿಂಕ್ : ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ

ಓದಿ


ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ


ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷ ಕೈಗೊಂಡ ಸಮೀಕ್ಷೆಯಲ್ಲಿ 14 ವರ್ಷದೊಳಗಿನ ಬಾಲಕಾರ್ಮಿಕರ ಸಂಖ್ಯೆ 1315 ಎಂಬುದಾಗಿ ವರದಿ ಸಲ್ಲಿಸಲಾಗಿತ್ತು.  ಸಮೀಕ್ಷಾ ವರದಿಯ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಆಯಾ ತಾಲೂಕು ಮಟ್ಟದಲ್ಲಿ ತಹಸಿಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪಿಡಿಒ ಗಳಿಂದ ವರದಿಯನ್ನು ಮರು ಪರಿಶೀಲಿಸಿ ವರದಿ ಸಲ್ಲಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕೊಪ್ಪಳ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಲ್ಲಿ ಒಂದು ಬಗೆಯ ವರದಿಯಿದ್ದರೆ, ಯುನಿಸೆಫ್‍ನವರ ಬಳಿ ಇನ್ನೊಂದು ಬಗೆ ಇದೆ.  ಅದೇ ರೀತಿ ಬಾಲಕಾರ್ಮಿಕರ ಸಂಖ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದವರು ಕೈಗೊಂಡ ಸಮೀಕ್ಷೆ ವರದಿಯಲ್ಲಿಯೂ ಸಾಕಷ್ಟು ಗೊಂದಲವಿದೆ.  ಶಾಲೆಗೆ ದಾಖಲಾತಿ ಆದವರ ಪೈಕಿ, ನಂತರದ ದಿನಗಳಲ್ಲಿ ಕೆಲವರು ಶಾಲೆಯಿಂದ ಹೊರಗುಳಿದಲ್ಲಿ, ಅಂತಹ ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗೆ ಸೇರ್ಪಡೆಯಾಗಬೇಕಾಗುತ್ತದೆ.  ಮಕ್ಕಳು ಸತತವಾಗಿ 07 ದಿನಗಳ ಕಾಲ ಶಾಲೆಗೆ ಗೈರಾದರೆ, ಅಂತಹ ಮಕ್ಕಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳು ಎಂದೇ ಪರಿಗಣಿಸಬೇಕು.  ಶಾಲೆಗೆ ದಾಖಲಾದ ತಕ್ಷಣ ಮಕ್ಕಳು ಶಾಲೆಗೆ ನಿರಂತರವಾಗಿ ಬರುತ್ತಿದ್ದಾರೋ, ಇಲ್ಲವೋ ಎನ್ನುವುದರ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕಾಗುತ್ತದೆ.  ಶಾಲೆಯಿಂದ ಮಕ್ಕಳು ಹೊರಗುಳಿದಾಕ್ಷಣ, ಅಂತಹ ಮಕ್ಕಳನ್ನು ಬಾಲಕಾರ್ಮಿಕರೆಂದು ಹೇಳಲು ಸಾಧ್ಯವಿಲ್ಲ.  ಕುರಿಗಾಹಿಗಳು ಹಾಗೂ ತಮ್ಮ ಹೊಲದಲ್ಲಿ ಕೆಲಸ ಮಾಡುವವರು ಕೂಡ ಶಾಲೆಯಿಂದ ಹೊರಗುಳಿದಿರುವ ಸಾಧ್ಯತೆ ಇರುತ್ತದೆ.  ಬಾಲಕಾರ್ಮಿಕತೆ ಬಗ್ಗೆ ಕಾರ್ಮಿಕ ಇಲಾಖೆ ನೀಡುವ ವ್ಯಾಖ್ಯಾನವನ್ನು ಸಮರ್ಪಕವಾಗಿ ಪಡೆದುಕೊಂಡು, ಜಿಲ್ಲೆಯಲ್ಲಿನ ಬಾಲಕಾರ್ಮಿಕರ ಸಂಖ್ಯೆಗೆ ಸಂಬಂಧಿಸಿದಂತೆ ಆಯಾ ಗ್ರಾಮ ಪಂಚಾಯತಿ ಹಾಗೂ ತಾಲೂಕು ಮಟ್ಟದಲ್ಲಿ ತಹಸಿಲ್ದಾರರು, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒ ಗಳು ಮರು ಪರಿಶೀಲಿಸಿ, ಸಮರ್ಪಕ ವರದಿಯನ್ನು ಮರು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಜಿಲ್ಲಾ ಬಾಲಕಾರ್ಮಿಕ ಯೋಜನಾ  ಸಂಘವನ್ನು ಕ್ರಿಯಾಶೀಲಗೊಳಿಸಿ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ, ಪ್ರತಿ ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಭೆಗಳಲ್ಲಿ ಬಾಲಕಾರ್ಮಿಕ ವಿಷಯವನ್ನು ಸೇರಿಸಿ, ಪ್ರತಿ ತಿಂಗಳು ಸಭೆ ನಡೆಸಬೇಕು.  ಇಂತಹ ಸಭೆಗೆ ಆಯಾ ಗ್ರಾಮದಲ್ಲಿನ ಶಾಲೆಗಳ ಮುಖ್ಯ ಶಿಕ್ಷಕರನ್ನು ಸಹ ಸೇರ್ಪಡೆಗೊಳಿಸಿಕೊಳ್ಳಬೇಕು.  ಜಿಲ್ಲೆಯಲ್ಲಿ ಮಾದರಿ ಬಾಲಕಾರ್ಮಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸೂಕ್ತ ನಿವೇಶನ ಗುರುತಿಸಬೇಕು.  ಬಾಲಕಾರ್ಮಿಕ ಕಾಯ್ದೆ ಹಾಗೂ ಇತರೆ ಕಾಯ್ದೆಗಳಡಿ ಜಿಲ್ಲೆಯಲ್ಲಿ ಹಠಾತ್ ದಾಳಿ ಕಾರ್ಯವನ್ನು ನಿಯಮಿತವಾಗಿ ಕೈಗೊಂಡು, ಬಾಲಕಾರ್ಮಿಕರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.  ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಲ್ಲಿ ಬಾಲಕಾರ್ಮಿಕ ಅನಿಷ್ಠ ಪದ್ಧತಿ ಕುರಿತಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯಾ ತಹಸಿಲ್ದಾರರ ಸಹಯೋಗದಲ್ಲಿ ಆಯೋಜಿಸಬೇಕು.  ಬಾಲಕಾರ್ಮಿಕರನ್ನು ಪತ್ತೆ ಹಚ್ಚುವುದು ಕೇವಲ ಬಾಲಕಾರ್ಮಿಕ ಯೋಜನಾ ಸಂಘ ಅಥವಾ ಕಾರ್ಮಿಕ ಇಲಾಖೆಯದ್ದು ಮಾತ್ರವಲ್ಲ, ಬಾಲಕಾರ್ಮಿಕ ಕಾಯ್ದೆ ಕಲಂ 17 ರ ಅಡಿಯಲ್ಲಿ ತಾಲೂಕು ಮತ್ತು ಗ್ರಾಮ ಮಟ್ಟದ ಒಟ್ಟು 11 ಅಧಿಕಾರಿಗಳನ್ನು ನಿರೀಕ್ಷಕರನ್ನಾಗಿ ಅಧಿಸೂಚಿಸಿ ಸರ್ಕಾರ ಆದೇಶ ಹೊರಡಿಸಿದೆ.  ಇಂತಹ ಅಧಿಕಾರಿಗಳು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ಕರ್ತವ್ಯವನ್ನು ತಪ್ಪದೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ಯಾಮರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀದೇವಿ ಗದ್ದಿನಕೇರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 


ಹೀಗಾಗಿ ಲೇಖನಗಳು ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ

ಎಲ್ಲಾ ಲೇಖನಗಳು ಆಗಿದೆ ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/07/blog-post_296.html

Subscribe to receive free email updates:

0 Response to "ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ