ಶೀರ್ಷಿಕೆ : ಹನಮಸಾಗರ ಐಟಿಐ ಕಾಲೇಜಿನಲ್ಲಿ ಐಎಂಸಿ ಕೋಟಾದಲ್ಲಿ ಸೀಟುಗಳ ಭರ್ತಿ
ಲಿಂಕ್ : ಹನಮಸಾಗರ ಐಟಿಐ ಕಾಲೇಜಿನಲ್ಲಿ ಐಎಂಸಿ ಕೋಟಾದಲ್ಲಿ ಸೀಟುಗಳ ಭರ್ತಿ
ಹನಮಸಾಗರ ಐಟಿಐ ಕಾಲೇಜಿನಲ್ಲಿ ಐಎಂಸಿ ಕೋಟಾದಲ್ಲಿ ಸೀಟುಗಳ ಭರ್ತಿ
ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಹನಮಸಾಗರ ಗ್ರಾಮದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಪ್ರಸಕ್ತ ಸಾಲಿನ ಸರ್ಕಾರದ ನಿಯಮಾವಳಿಗಳಂತೆ ಐ.ಎಂ.ಸಿ ಕೋಟಾದಡಿ ಖಾಲಿ ಇರುವ ಸೀಟುಗಳಿಗೆ ಜುಲೈ. 29 ರಂದು ಬೆಳಿಗ್ಗೆ 10-30 ಗಂಟೆಗೆ ಬಹಿರಂಗ ಹರಾಜಿನ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ಫಿಟ್ಟರ ಮತ್ತು ಎಲೆಕ್ಟ್ರಿಷೀಯನ್ ವೃತ್ತಿಗಳಲ್ಲಿ ತಲಾ 05, ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕಲ್ ವೃತ್ತಿಯಲ್ಲಿ 06 ಸೀಟುಗಳು ಖಾಲಿ ಇದ್ದು, ಬಹಿರಂಗ ಹರಾಜಿನ (ಬಿಡ್ಡಿಂಗ್) ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಸಂಸ್ಥೆಯ ಕಛೇರಿಯಲ್ಲಿ ರೂ. 100/- ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಜು. 28 ರೊಳಗಾಗಿ ಸಲ್ಲಿಸಬೇಕು. ಬಹಿರಂಗ ಹರಾಜಿನ ಮೂಲಕ ಸೀಟು ಪಡೆದ ಅಭ್ಯರ್ಥಿಗಳು ಸ್ಥಳದಲ್ಲಿಯೇ ಹರಾಜು ಹಣ ಮತ್ತು ಸರ್ಕಾರಿ ಶುಲ್ಕ ರೂ. 2200/-ಗಳನ್ನು ಭರಿಸಬೇಕು. ತಪ್ಪಿದ್ದಲ್ಲಿ ಮುಂದಿನ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗುವುದು. ಹರಾಜಿನ ಪ್ರಾರಂಭಿಕ ಮೊತ್ತ (ಸರ್ಕಾರ ನಿಗದಿಪಡಿಸಿದ ಕನಿಷ್ಠ ಮೊತ್ತ) ರೂ. 10,000/- ಗಳಾಗಿದ್ದು, ಎರಡನೇ ವರ್ಷದಲ್ಲಿ ಆಗಸ್ಟ-2018 ರೊಳಗಾಗಿ ರೂ. 1200/- ಗಳ ಸರ್ಕಾರಿ ಶುಲ್ಕವನ್ನು ಭರಿಸಬೇಕು. ಸಂಸ್ಥೆಯಲ್ಲಿ ನಡೆಯುವ ಬಹಿರಂಗ ಹರಾಜನ್ನು ಐ.ಎಂ.ಸಿ ಕಮೀಟಿಯಿಂದ ನಡೆಸಲಾಗುವುದು ಹಾಗೂ ಐ.ಎಂ.ಸಿ ನಿಯಮಾವಳಿಗಳ ಪ್ರಕಾರ ಇರುತ್ತದೆ.
ಬಹಿರಂಗ ಹರಾಜನ್ನು ಐ.ಎಂ.ಸಿ ಕೋಟಾದಡಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹನಮಸಾಗರ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು, ದೂರವಾಣಿ ಸಂಖ್ಯೆ 08536-270633 ಅಥವಾ 9740713006 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಹನಮಸಾಗರ ಐಟಿಐ ಕಾಲೇಜಿನಲ್ಲಿ ಐಎಂಸಿ ಕೋಟಾದಲ್ಲಿ ಸೀಟುಗಳ ಭರ್ತಿ
ಎಲ್ಲಾ ಲೇಖನಗಳು ಆಗಿದೆ ಹನಮಸಾಗರ ಐಟಿಐ ಕಾಲೇಜಿನಲ್ಲಿ ಐಎಂಸಿ ಕೋಟಾದಲ್ಲಿ ಸೀಟುಗಳ ಭರ್ತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹನಮಸಾಗರ ಐಟಿಐ ಕಾಲೇಜಿನಲ್ಲಿ ಐಎಂಸಿ ಕೋಟಾದಲ್ಲಿ ಸೀಟುಗಳ ಭರ್ತಿ ಲಿಂಕ್ ವಿಳಾಸ https://dekalungi.blogspot.com/2017/07/blog-post_412.html
0 Response to "ಹನಮಸಾಗರ ಐಟಿಐ ಕಾಲೇಜಿನಲ್ಲಿ ಐಎಂಸಿ ಕೋಟಾದಲ್ಲಿ ಸೀಟುಗಳ ಭರ್ತಿ"
ಕಾಮೆಂಟ್ ಪೋಸ್ಟ್ ಮಾಡಿ