ಶೀರ್ಷಿಕೆ : ಹೆಸರು ಬೆಳೆಯಲ್ಲಿ ರೋಗ ನಿರ್ವಹಣಾ ಕ್ರಮಗಳು
ಲಿಂಕ್ : ಹೆಸರು ಬೆಳೆಯಲ್ಲಿ ರೋಗ ನಿರ್ವಹಣಾ ಕ್ರಮಗಳು
ಹೆಸರು ಬೆಳೆಯಲ್ಲಿ ರೋಗ ನಿರ್ವಹಣಾ ಕ್ರಮಗಳು
ಕೊಪ್ಪಳ, ಜು. 25 (ಕರ್ನಾಟಕ ವಾರ್ತೆ): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಗೆ ಅಲ್ಲಲ್ಲಿ ಹಳದಿ ನಂಜು ರೋಗ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೃಷಿ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
ಮುಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಸುಮಾರು 17308 ಹೆಕ್ಟರ್ ಕ್ಷೇತ್ರದಲ್ಲಿ ಹೆಸರು ಬಿತ್ತನೆಯಾಗಿದ್ದು, 30 ರಿಂದ 60 ದಿವಸದ ಬೆಳೆಯಿದ್ದು, ಬೆಳೆಗೆ ಅಲ್ಲಲ್ಲಿ ಹಳದಿ ನಂಜು ರೋಗದ ಭಾದೆ ಕಂಡುಬಂದಿದ್ದು, ರೋಗದ ಪ್ರಮುಖ ಲಕ್ಷಣಗಳು ಹಾಗೂ ನಿರ್ವಹಣಾ ಕ್ರಮಗಳು ಇಂತಿವೆ.
ಲಕ್ಷಣಗಳು :
******ಎಲೆಗಳ ಮೇಲೆ ತಿಳಿ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಹಳದಿ ಬಣ್ಣದ ಭಾಗ ಬೆಳಯುತ್ತಾ ಹೋಗುವುದು. ಇಂತಹ ರೋಗ ಪೀಡಿತ ಸಸಿಗಳು ತಡವಾಗಿ ಮಾಗುವುದಲ್ಲದೇ, ಹೂ ಕಾಯಿಗಳ ಸಂಖ್ಯೆ ಕಡಿಮೆ ಇರುವುದು. ಕಾಯಿಗಳ ಗಾತ್ರ ಚಿಕ್ಕದಾಗಿ ಕಾಳುಗಳು ಸಣ್ಣದಾಗುವುದು. ಈ ರೋಗವು ಬೀಜಗಳ ಮುಖಾಂತರ ಪ್ರಸಾರ ಆಗುವುದಿಲ್ಲ. ಆದರೆ ಇದರ ಪ್ರಸಾರ ಬಿಳಿನೊಣಗಳ ಮುಖಾಂತರ ಆಗುವುದು. ಬಾಡುತ್ತಿರುವ ಮತ್ತು ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲದಲ್ಲಿ ಹೂಳಬೇಕು.
ರೋಗ ನಿರ್ವಹಣಾ ಕ್ರಮಗಳು :
************** ಪ್ರತಿ ಲೀಟರ್ ನೀರಿಗೆ 1 ಮೀ.ಲೀ ಪ್ಯಾರಾಥಿಯಾನ್ 50 ಇಸಿ ಅಥವಾ 1 ಮೀ.ಲೀ. ಮೊನೋಕ್ರೋಟೋಫಾಸ್ 36 ಎಸ್.ಎಲ್. ಅಥವಾ 1.7 ಮೀ.ಲೀ. ಡೈಮಿಥೋಯೇಟ್ 30 ಇಸಿ ಬೆರೆಸಿ ಸಿಂಪಡಿಸಬೇಕು. ಅಥವಾ ಪ್ರತಿ ಲೀಟರ್ ನೀರಿಗೆ 0.25 ಮೀ.ಲೀ. ಇಮಿಡಾಕ್ಲೋಪ್ರಿಡ್ 17.80 ಎಸ್.ಎಲ್ ಅಥವಾ 0.3 ಮೀ.ಲೀ. ಥಯಾಮಿಥಾಕ್ಸಾಮ್ 25 ಡಬ್ಲೂಜಿ ಅಥವಾ 1.7 ಮೀ.ಲೀ. ಡೈಮೆಥೋಯೆಟ್ 30 ಇಸಿ ಬೆರಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳ ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಹೆಸರು ಬೆಳೆಯಲ್ಲಿ ರೋಗ ನಿರ್ವಹಣಾ ಕ್ರಮಗಳು
ಎಲ್ಲಾ ಲೇಖನಗಳು ಆಗಿದೆ ಹೆಸರು ಬೆಳೆಯಲ್ಲಿ ರೋಗ ನಿರ್ವಹಣಾ ಕ್ರಮಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹೆಸರು ಬೆಳೆಯಲ್ಲಿ ರೋಗ ನಿರ್ವಹಣಾ ಕ್ರಮಗಳು ಲಿಂಕ್ ವಿಳಾಸ https://dekalungi.blogspot.com/2017/07/blog-post_162.html
0 Response to "ಹೆಸರು ಬೆಳೆಯಲ್ಲಿ ರೋಗ ನಿರ್ವಹಣಾ ಕ್ರಮಗಳು"
ಕಾಮೆಂಟ್ ಪೋಸ್ಟ್ ಮಾಡಿ