ಶೀರ್ಷಿಕೆ : ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಜೋಡಣೆ: ಗ್ರಾ.ಪಂ. ಮಟ್ಟದಲ್ಲಿ ಶಿಬಿರ
ಲಿಂಕ್ : ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಜೋಡಣೆ: ಗ್ರಾ.ಪಂ. ಮಟ್ಟದಲ್ಲಿ ಶಿಬಿರ
ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಜೋಡಣೆ: ಗ್ರಾ.ಪಂ. ಮಟ್ಟದಲ್ಲಿ ಶಿಬಿರ
ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬದ ಸದಸ್ಯರ ಆಧಾರ್ ಜೋಡಣೆ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದಕ್ಕಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಶಿಬಿರಗಳನ್ನು ಪ್ರಾರಂಭಿಸಲಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೊಂದಾಯಿಸಿದ ಉದ್ಯೋಗ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಆಧಾರ ಜೋಡಣೆ ಕಡ್ಡಾಯವಾಗಿದ್ದು, ಡಿಸೇಂಬರ್. 31ರ ನಂತರ ಕೂಲಿಕಾರರ ಆಧಾರ ಕಾರ್ಡ ಜೋಡಣೆ ಆಗಿದ್ದಲ್ಲಿ ಮಾತ್ರ ಅಂತವರಿಗೆ ಸಕಾಲದಲ್ಲಿ ಕೂಲಿ ಕೆಲಸ ಒದಗಿಸಿ ಅವರ ಖಾತೆಗೆ ಕೂಲಿ ಹಣ ಪಾವತಿಸಲಾಗುವುದು. ನರೇಗಾ ಸಾಫ್ಟ್‍ನಲ್ಲಿ ಆಧಾರ ಜೋಡಣೆಯಾಗದ ಸಕ್ರಿಯ ಕೂಲಿಕಾರರಿಂದ ಆಧಾರ ಜೋಡಣೆ ಮಾಡುವದು ಮತ್ತು ಆಧಾರ ಹೊಂದಿಲ್ಲದ ಕೂಲಿಕಾರರಿಗೆ ಆಧಾರ ಸಂಖ್ಯೆ ಕಡ್ಡಾಯವಾಗಿದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಇವರು ಕಟ್ಟು ನಿಟ್ಟಿನ ನಿರ್ದೇಶನ ನೀಡಿರುವುದರಿಂದ ಕೊಪ್ಪಳ ತಾಲೂಕಿನಲ್ಲಿರುವ ಎಲ್ಲ ನೊಂದಾಯಿತ ಕೂಲಿಕಾರರು ಇದುವರೆಗೆ ತಮ್ಮ ಉದ್ಯೋಗ ಚೀಟಿಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡದಿದ್ದಲ್ಲಿ, ಆಧಾರ ಜೆರಾಕ್ಸ್ ಪ್ರತಿ ಮೇಲೆ ಸ್ವಸಹಿಯೊಂದಿಗೆ ಖಾತೆ ಹೊಂದಿರುವ ಪಾಸ್ ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು.
ಈಗಾಗಲೇ ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೂಲಿಕಾರರ ಆಧಾರ ಸಂಗ್ರಹಣೆ, ಜೋಡಣೆ, ಒಪ್ಪಿಗೆ ಪತ್ರವನ್ನು ಮತ್ತು ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಶಿಬಿರಗಳನ್ನು ಜು.25 ರಿಂದ ಪ್ರಾರಂಭಿಸಲಾಗಿದ್ದು, ಸೆಪ್ಟೆಂಬರ್. 10 ರವರೆಗೆ ಗ್ರಾಮ ವಾರು ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವೀತಿಯ ದರ್ಜೆ ಲೆಕ್ಕ ಸಹಾಯಕರು, ಕರವಸೂಲಿಗರರು, ನೀರಗಂಟಿಗಳು, ಗಣಕಯಂತ್ರ ನಿರ್ವಾಹಕರು, ಸ್ವಚ್ಛತಾಧೂತರು, ಇತರೇ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಹ ಮನೆ ಭೇಟಿ ಮೂಲಕ ಆಧಾರ ಸಂಗ್ರಹಣೆ ಕೈಗೊಳ್ಳುವರು. ಅಲ್ಲದೇ ಕೂಲಿಕಾರರ ಅನುಕೂಲಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ, ಕಾಮಗಾರಿಗಳ ಸ್ಥಳದಲ್ಲಿ ಶಿಬಿರಗಳನ್ನು ಸಹ ಏರ್ಪಡಿಸಿದ್ದು, ಶಿಬಿರಗಳಿಗೆ ಬ್ಯಾಂಕ್ ಸಿಬ್ಬಂದಿಗಳು ಹಾಜರಿರುತ್ತಾರೆ.
ಶಿಬಿರದ ಮಾಹಿತಿಯನ್ನು ತಲುಪಲು ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಡಂಗುರ, ತಮಟೆ ಮೂಲಕ ಪ್ರಚಾರ ಕೈಗೊಂಡು ಶಿಬಿರಗಳನ್ನು ಯಶಸ್ವಿಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ಈಗಾಗಲೇ ನೀಡಲಾಗಿದೆ. ಆಧಾರ ಸಂಗ್ರಹಣೆ ಸಂಬಂಧಿಸಿದ ಶಿಬಿರಗಳು ಜರುಗದಿದ್ದಲ್ಲಿ ತಾಲೂಕ ಪಂಚಾಯತಿಯ ಕಾರ್ಯಾಲಯದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ವಿಭಾಗದ ದೂರವಾಣಿ ಸಂಖ್ಯೆ 08539-220175 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಜೋಡಣೆ: ಗ್ರಾ.ಪಂ. ಮಟ್ಟದಲ್ಲಿ ಶಿಬಿರ
ಎಲ್ಲಾ ಲೇಖನಗಳು ಆಗಿದೆ ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಜೋಡಣೆ: ಗ್ರಾ.ಪಂ. ಮಟ್ಟದಲ್ಲಿ ಶಿಬಿರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಜೋಡಣೆ: ಗ್ರಾ.ಪಂ. ಮಟ್ಟದಲ್ಲಿ ಶಿಬಿರ ಲಿಂಕ್ ವಿಳಾಸ https://dekalungi.blogspot.com/2017/07/blog-post_569.html
0 Response to "ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಜೋಡಣೆ: ಗ್ರಾ.ಪಂ. ಮಟ್ಟದಲ್ಲಿ ಶಿಬಿರ"
ಕಾಮೆಂಟ್ ಪೋಸ್ಟ್ ಮಾಡಿ