ಶೀರ್ಷಿಕೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಮಾಹಿತಿ ಕೇಂದ್ರಗಳ ಪ್ರಾರಂಭ
ಲಿಂಕ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಮಾಹಿತಿ ಕೇಂದ್ರಗಳ ಪ್ರಾರಂಭ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಮಾಹಿತಿ ಕೇಂದ್ರಗಳ ಪ್ರಾರಂಭ
ಕೊಪ್ಪಳ, ಜೂ. 13 (ಕರ್ನಾಟಕ ವಾರ್ತೆ) : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಗಳ ಮಾಹಿತಿಯನ್ನು ಪಡೆಯಲು ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಗಂಗಾವತಿ ಹಾಗೂ ಕುಷ್ಟಗಿ ತಾಲೂಕುಗಳಲ್ಲಿ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹಿಮೂದ್ ಅವರು ತಿಳಿಸಿದ್ದಾರೆ.
ತಾಲೂಕ ಮಾಹಿತಿ ಕೇಂದ್ರಗಳ ವಿವರ ಇಂತಿದೆ, ಯಲಬುರ್ಗಾದಲ್ಲಿ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ತಹಶೀಲ್ದಾರ ಕಛೇರಿ ಹತ್ತಿರ, ಕೊಪ್ಪಳ ರೋಡ್, ಯಲಬುರ್ಗಾ. ಗಂಗಾವತಿಯಲ್ಲಿ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ಸಂಕಲ್ಪ ಕಾಲೇಜು ಹತ್ತಿರ ಗಂಗಾವತಿ. ಕುಷ್ಟಗಿಯಲ್ಲಿ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ಅಮರೇಶ್ವರ ಕಾಂಪ್ಲೆಕ್ಸ್ ಹಿಂದುಗಡೆ, ರೇಣುಕಾಚಾರ್ಯ ಕಲ್ಯಾಣ ಮಂಟಪದ ಹತ್ತಿರ ಕೊಪ್ಪಳ ರೋಡ್ ಕುಷ್ಟಗಿ ಯಲ್ಲಿ ಸ್ಥಾಪಿಸಲಾಗಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಗಳಾದ ಬಿದಾಯಿ, ಮೆಟ್ರಿಕ್ ಪೂರ್ವ/ ನಂತರದ ವಸತಿನಿಲಯಗಳ ಪ್ರವೇಶ, ವಿದ್ಯಾರ್ಥಿ ವೇತನ, ಹಾಗೂ ಅಲ್ಪಸಂಖ್ಯಾತರ ಸಮುದಾಯದ ಕಾರ್ಯಕ್ರಮಗಳ/ ಯೋಜನೆಗಳ ಮಾಹಿತಿ, ಅರ್ಜಿಗಳನ್ನು ಪಡೆದು ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್‍ಸೈಟ್ http://ift.tt/1r20upJ ಯಿಂದ ಮಾಹಿತಿಯನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಮಾಹಿತಿ ಕೇಂದ್ರಗಳ ಪ್ರಾರಂಭ
ಎಲ್ಲಾ ಲೇಖನಗಳು ಆಗಿದೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಮಾಹಿತಿ ಕೇಂದ್ರಗಳ ಪ್ರಾರಂಭ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಮಾಹಿತಿ ಕೇಂದ್ರಗಳ ಪ್ರಾರಂಭ ಲಿಂಕ್ ವಿಳಾಸ https://dekalungi.blogspot.com/2017/06/blog-post_84.html
0 Response to "ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಮಾಹಿತಿ ಕೇಂದ್ರಗಳ ಪ್ರಾರಂಭ"
ಕಾಮೆಂಟ್ ಪೋಸ್ಟ್ ಮಾಡಿ