ಶೀರ್ಷಿಕೆ : ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆ: ನಿರ್ವಹಣೆಗೆ ಸಲಹೆಗಳು
ಲಿಂಕ್ : ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆ: ನಿರ್ವಹಣೆಗೆ ಸಲಹೆಗಳು
ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆ: ನಿರ್ವಹಣೆಗೆ ಸಲಹೆಗಳು
ಕೊಪ್ಪಳ ಜೂ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆ ಹತ್ತಿಯನ್ನು ಬೆಳೆಯಲಾಗುತ್ತಿದ್ದು, ಬಿಸಿಲಿನ ತಾಪಕ್ಕೆ ಈಗಾಗಲೇ ತುತ್ತಾಗಿರುವ ಬೆಳೆಗೆ ಮುಂದಿನ ದಿನಗಳಲ್ಲಿ ಗುಲಾಬಿ ಕಾಯಿಕೊರಕ ಕೀಟದ ಬಾಧೆ ಕಂಡು ಬರುವ ಸಾಧ್ಯತೆಗಳಿವೆ. ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
ರೈತರು ಇದರ ನಿರ್ವಹಣೆಗಾಗಿ ಮೋಹಕ ಬಲೆಗಳನ್ನು ಬಳಸುವುದು ಮತ್ತು ಇದರೊಂದಿಗೆ ಆರ್ಥಿಕ ಹಾನಿಯ ಮಟ್ಟವನ್ನು ತಲುಪಿದೆ ಎಂದು ತಿಳಿದುಕೊಳ್ಳಲು ಪ್ರತಿ ಹೆಕ್ಟೇರಿಗೆ 5 ರಂತೆ ಲಿಂಗಾಕರ್ಷಕ ಬಲೆಗಳನ್ನು ನೆಡಬೇಕು. 20 ದಿನಗಳಿಗೊಮ್ಮೆ ಲೂರು ಗಳನ್ನು ಬದಲಿಸಬೇಕು, ಮೂರು ದಿನ ಸತತವಾಗಿ ಪ್ರತಿದಿನ 8 ಪತಂಗಗಳು ಮೋಹಕ ಬಲೆಗಳಲ್ಲಿ ಬಿದ್ದಿರುವುದು ಅಥವಾ ಅರವತ್ತು ಹೂಗಳಲ್ಲಿ ಆರು ಹೂಗಳು ಹಾನಿಯಾಗಿರುವುದು ಅಥವಾ 20 ಕಾಯಿಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಮರಿಹುಳುಗಳು ಇದ್ದರೆ ಆರ್ಥಿಕ ಹಾನಿಯ ಮಟ್ಟವನ್ನು ತಲುಪಿದೆ ಎಂದು ತಿಳಿದಾಗ, ಪೈರಿಥ್ರಾಯಿಡ್ ಕೀಟನಾಶಕಗಳಾದ 0.5 ಮಿ.ಲೀ. ಲ್ಯಾಮಡಾಸೈಲೋಥ್ರೀನ್ ಅಥವಾ 0.5 ಮಿ.ಲೀ. ಡೆಕಾಮೆತ್ರಿನ್ 2.8 ಇ.ಸಿ. ಅಥವಾ 0.5 ಮಿ.ಲೀ ಸೈಪರ್‍ಮೆಥ್ರಿನ್ 10 ಇ.ಸಿ. ಅಥವಾ 2 ಮಿ.ಲಿ. ಪ್ರೊಫೆನೋಫಾಸ್ 50ಇ.ಸಿ. ಅಥವಾ 1 ಗ್ರಾಂ ಥೈಯೋಡಿಕಾರ್ಬ್ 75 ಡಬ್ಲ್ಯೂ.ಪಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬಿತ್ತನೆಯಾದ 100 ದಿನಗಳ ನಂತರ ಅವಶ್ಯಕತೆಗನುಸಾರವಾಗಿ ಒಂದು ಅಥವಾ ಎರಡು ಸಲ ಮಾತ್ರ ಸಿಂಪಡಿಸಬೇಕು. ಸರಿಯಾಗಿ ಎಲ್ಲಾ ಭಾಗಗಳಿಗೆ ಮುಟ್ಟುವಂತೆ ಸಿಂಪರಣೆಯನ್ನು ಮಾಡಬೇಕು. ಪ್ರತಿ ಹೆಕ್ಟೇರಿಗೆ 1000-1250 ಲೀ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಟ್ರೈಕೋಕಾರ್ಡ (ಪರೋಪಜೀವಿಗಳನ್ನು) ಗಿಡಗಳಿಗೆ ಕಟ್ಟುವುದರಿಂದ ಕಾಯಿಕೊರಕ ಹುಳುಗಳ ಬಾಧೆಯನ್ನು ನಿರ್ವಹಣೆ ಮಾಡಬಹುದು. ಬಿಟಿ ಹತ್ತಿಯ ಜೊತೆ ದೇಸಿ ಹತ್ತಿ ಬೀಜವನ್ನು ಬಿತ್ತನೆ ಮಾಡುವುದು. ಬಲೆ ಬೆಳೆಯಾಗಿ ಬೆಂಡಿಯನ್ನು ಹೊಲದ ಸುತ್ತ ಬಿತ್ತನೆ ಮಾಡುವುದು. ರಸಹೀರುವ ಕೀಟಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿರುವಂತಹ ಹತ್ತಿ ಹೈಬ್ರಿಡ್‍ಗಳನ್ನು ಆಯ್ಕೆ ಮಾಡುವುದು. ಇದರಿಂದಾಗಿ ಕ್ರಿಮಿನಾಶಕಗಳಾದ ಅಸಿಫೇಟ್, ಇಮಿಡಾಕ್ಲೋಪ್ರಿಡ್, ಕ್ಲೊಥಿಯಾನಿಡಿನ್ ಬಳಕೆಯನ್ನು ತಪ್ಪಿಸಬಹುದು. ಬೆಳೆಯ ಆರಂಭಿಕ ಹಂತದಲ್ಲಿ ಈ ಕ್ರಿಮಿನಾಶಕಗಳನ್ನು ಬಳಸುವುದರಿಂದ ಗಿಡದಲ್ಲಿ ಹೂವಾಡುವುದು ಮತ್ತು ಕಾಯಿಕಟ್ಟುವುದು ತಡವಾಗುತ್ತದೆ. ಆರಂಭಿಕ ಹಂತದಲ್ಲಿ ಈ ಕ್ರಿಮಿನಾಶಕಗಳನ್ನು ಬಳಸದೆ ಇದ್ದರೆ, ಗಿಡಗಳಲ್ಲಿ ಏಕಕಾಲದಲ್ಲಿ ಕಾಯಿಕಟ್ಟಿ ಬೆಳೆಯು ಗುಲಾಬಿ ಕಾಯಿಕೊರಕ ಕೀಟದಿಂದ ತಪ್ಪಿಸಿಕೊಳ್ಳಬಹುದಾಗಿದೆ. ರೈತರು ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸೂಕ್ತ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಸ್ಯ ಕೀಟಶಾಸ್ತ್ರದ ವಿಜ್ಞಾನಿ ಶ್ವೇತ (8971398374) ಅವರು ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆ: ನಿರ್ವಹಣೆಗೆ ಸಲಹೆಗಳು
ಎಲ್ಲಾ ಲೇಖನಗಳು ಆಗಿದೆ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆ: ನಿರ್ವಹಣೆಗೆ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆ: ನಿರ್ವಹಣೆಗೆ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2017/06/blog-post_31.html
0 Response to "ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆ: ನಿರ್ವಹಣೆಗೆ ಸಲಹೆಗಳು"
ಕಾಮೆಂಟ್ ಪೋಸ್ಟ್ ಮಾಡಿ