ಶೀರ್ಷಿಕೆ : ಜೂ. 21 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ- ಡಾ. ರುದ್ರೇಶ್ ಘಾಳಿ
ಲಿಂಕ್ : ಜೂ. 21 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ- ಡಾ. ರುದ್ರೇಶ್ ಘಾಳಿ
ಜೂ. 21 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ- ಡಾ. ರುದ್ರೇಶ್ ಘಾಳಿ
ಕೊಪ್ಪಳ ಜೂ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜೂ. 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯುಷ್ ಇಲಾಖೆ ಹಾಗೂ ಆರ್ಟ್ ಆಫ್ ಲಿವಿಂಗ್ ಅವರ ಸಹಯೋಗದೊಂದಿಗೆ ವ್ಯವಸ್ಥಿತ ರೀತಿಯಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂ. 21 ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗುವುದು. ಅಂದು ಬೆಳಿಗ್ಗೆ 06 ಗಂಟೆಗೆ ಆರ್ಟ್ ಆಫ್ ಲಿವಿಂಗ್‍ನ ಕೊಪ್ಪಳದ ಡಾ. ಎಸ್.ಎಲ್. ಜುಕ್ತಿಮಠ ಅವರು ಯೋಗಭ್ಯಾಸ ಮಾಡಿಸುವರು. ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತಾಗಲು, ಆಯುಷ್ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಯೋಗಭ್ಯಾಸದ ನಂತರ ಪ್ರಜಾಪಿತ ಬ್ರಹ್ಮಕುಮಾರಿ ಅವರಿಂದ ಧ್ಯಾನದ ಮಹತ್ವ ಕುರಿತು ಉಪನ್ಯಾಸ ಇರಲಿದೆ. ಯೋಗ ದಿನಾಚರಣೆಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಲಘು ಉಪಹಾರದ ವ್ಯವಸ್ಥೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಜಿಲ್ಲಾ ಆಯುಷ್ ಅಧಿಕಾರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಬಸಪ್ಪ ವಾಲಿಕಾರ್, ಯುವಜನ ಸೇವಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ಆರ್ಟ್ ಆಫ್ ಲಿವಿಂಗ್‍ನ ಡಾ. ಎಸ್.ಎಲ್. ಜುಕ್ತಿಮಠ, ಶಿವಾನಂದ ಹೊದ್ಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಜೂ. 21 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ- ಡಾ. ರುದ್ರೇಶ್ ಘಾಳಿ
ಎಲ್ಲಾ ಲೇಖನಗಳು ಆಗಿದೆ ಜೂ. 21 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ- ಡಾ. ರುದ್ರೇಶ್ ಘಾಳಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜೂ. 21 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ- ಡಾ. ರುದ್ರೇಶ್ ಘಾಳಿ ಲಿಂಕ್ ವಿಳಾಸ https://dekalungi.blogspot.com/2017/06/21.html
0 Response to "ಜೂ. 21 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ- ಡಾ. ರುದ್ರೇಶ್ ಘಾಳಿ"
ಕಾಮೆಂಟ್ ಪೋಸ್ಟ್ ಮಾಡಿ